ಪೌರಸೇವಾ ಕಾರ್ಮಿಕರಿಗೆ ಕ್ಯಾಂಟಿನ್‌ನಿಂದ ವಿಶೇಷ ಸೇವೆ

Team Udayavani, Jan 20, 2020, 4:12 PM IST

ಕೊಪ್ಪಳ: ನಗರದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಸ್ವಚ್ಛತಾ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಜಾತ್ರಾ ಆವರಣದಲ್ಲಿರುವ ಅಪ್ಪಾಜಿ ಕ್ಯಾಂಟೀನ್‌ ಮಾಲೀಕರು ವಿಶೇಷ ಸೇವೆ ಮಾಡಿ ಗಮನ ಸೆಳೆದಿದ್ದಾರೆ.

ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸ್ವಾಮೀಜಿಗಳು ಪೌರ ಕಾರ್ಮಿಕರ ಬಗ್ಗೆ ಪ್ರೀತಿ ತೋರುತ್ತಿದ್ದಾರೆ. ಪೌರ ಸೇವಾ ಕಾರ್ಮಿಕರ ಸೇವೆಯಿಂದಾಗಿಜಾತ್ರಾ ಆವರಣದಲ್ಲಿ ಧೂಳು ಇಲ್ಲದೇಆರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಇವರ ಸೇವೆಯನ್ನು ಮನಗೊಂಡು ಅಪ್ಪಾಜಿ ಕ್ಯಾಂಟೀನ್‌ ಮಾಲೀಕರಾದ ಸತೀಶ ಸರನಾಡಗೌಡರ್‌ ಸುಮಾರು 90 ಪೌರ ಕಾರ್ಮಿಕರಿಗೆ ಹೆಸರು ಬೇಳೆ ಪಾಯಸ ಹಾಗೂ ಬೆಣ್ಣೆದೋಸೆ, ಕಾಫಿ ಒದಗಿಸಿದರು. ಅಲ್ಲದೇ ಮಹಿಳಾ ಕಾರ್ಮಿಕರಿಗೆ ಸೀರೆ ಮತ್ತು ಕುಪ್ಪಸ, ಪುರುಷ ಕಾರ್ಮಿಕರಿಗೆ ಅಂಗಿಯನ್ನು ಉಡುಗೊರೆಯಾಗಿ ನೀಡಿದರು. ಪ್ರತಿವರ್ಷದಂತೆ ಈ ವರ್ಷವು ಅಪ್ಪಾಜಿ ಕ್ಯಾಂಟೀನ್‌ಮಾಲೀಕ ಸತೀಶ ಸೇವೆಗೈದಿರುವುದು ಶ್ಲಾಘನೀಯ.

ಜ. 20ರಂದೂ ಉಪಹಾರ ಸೇವೆ: ಪೌರ ಕಾರ್ಮಿಕರಿಗೆ ಜ. 20ರಂದು ಕೊಪ್ಪಳ ಕಾ ರಾಜಾ ಗಣಪತಿ ಮಿತ್ರಮಂಡಳಿಯಿಂದ ಉಪಹಾರದ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿದಿನವೂಒಂದಿಲ್ಲೊಂದು ಸಂಘ-ಸಂಸ್ಥೆಗಳು ಪೌರಕಾರ್ಮಿಕರ ಬಗೆಗೆ ಕಾಳಜಿ ತೋರುತ್ತಿದೆ.

ಭಕ್ತಸಾಗರ: ರವಿವಾರ ರಜಾ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ್ದರು. ನಗರ ಹಾಗೂ ಹಳ್ಳಿಗಳಿಂದ ಆಗಮಿಸಿದ ಭಕ್ತರು ಶ್ರೀಮಠಕ್ಕೆಬಂದು ಕತೃì ಗದ್ದುಗೆಯ ದರ್ಶನ ಹಾಗೂ ಶ್ರೀಗಳ ಆಶೀರ್ವಾದ ಪಡೆದರು. ಸುತ್ತಲೂ ಹಳ್ಳಿಗಳಿಂದ ಎತ್ತಿನ ಬಂಡಿ,  ಟ್ರ್ಯಾಕ್ಟರ್‌, ಲಘು ವಾಹನದೊಂದಿಗೆ ಮಕ್ಕಳ ಸಮೇತ ಜಾತ್ರೆಗೆ ಆಗಮಿಸಿ ಜಾತ್ರೆಯಲ್ಲಿ ಸುತ್ತಾಡಿದರು.

ನಗರದ ಭಕ್ತರು ಸಹ ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ವಿಶೇಷ. ಜಾತ್ರಾ ಆವರಣದಲ್ಲಿ ಮಕ್ಕಳು ಮನರಂಜನೆಯ ಆಟೋಟಗಳಲ್ಲಿ ತೊಡಗಿ, ಮಹಿಳೆಯರು ಬಳೆ ಅಂಗಡಿ, ಇನ್ನಿತರ ಗೃಹೋಪಯೋಗಿ ವಸ್ತು ಖರೀದಿಯಲ್ಲಿ ತೊಡಗಿದ್ದರು. ಬಳಿಕಮಹಾದಾಸೋದಲ್ಲಿ ಗೋ ಧಿ ಹುಗ್ಗಿ, ರೊಟ್ಟಿ, ದಾಲ್‌, ಕುಂಬಳಕಾಯಿ, ಅನ್ನ, ಸಾಂಬಾರ, ಕಡ್ಲಿಚಟ್ನಿ, ಉಪ್ಪಿನ ಕಾಯಿ ಸವಿದರು.

ದಾಸೋಹಕ್ಕೆ ಹರಿದು ಬಂದ ಧಾನ್ಯ: ಗವಿಮಠದ ಮಹಾದಾಸೋಹಕ್ಕೆ ರವಿವಾರ ಕಿನ್ನಾಳ್‌ ಗ್ರಾಮದ ಭಕ್ತರು 40 ಚೀಲ ನೆಲ್ಲು, 4 ಪ್ಯಾಕೆಟ್‌ ಬೆಲ್ಲ, 60 ಕುಂಬಳಕಾಯಿ ಅರ್ಪಿಸಿದರು. ಕವಲೂರ ಗ್ರಾಮದ ಸದ್ಭಕ್ತರು 30 ಕ್ವಿಂಟಲ್‌ ಗೋಧಿ  ಹುಗ್ಗಿ ಹಾಗೂ 5 ಕ್ವಿಂಟಲ್‌ ಸಜ್ಜಕವನ್ನು ತಯಾರಿಸಿ ಪ್ರಸಾದ ಸೇವೆಗೈದರು. ಮಾರುತಿ ಸೇವಾ ಸಮಿತಿ ಹುಡ್ಕೊà ಕಾಲನಿ ಕೊಪ್ಪಳ ಹಾಗೂ ಸತ್ಸಂಗ ಯುವಕ ಸಂಘ ಕಾರಟಗಿ ಹಾಗೂ ಇನ್ನಿತರ ಸಂಘಟನೆಗಳು, ಸ್ವಯಂ ಸೇವಕರು ಪ್ರಸಾದ ವಿತರಿಸುವ ಸೇವೆಗೈದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ