ಕಾನೂನು ಸಾಕ್ಷರತಾ ರಥ ಯಾತ್ರೆಗೆ ಚಾಲನೆ

Team Udayavani, Nov 12, 2019, 1:21 PM IST

ಕೊಪ್ಪಳ: ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾ ಧಿಕಾರದಿಂದ ತಾಲೂಕಿನಲ್ಲಿ ನಡೆಯಲಿರುವ ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾ ಧೀಶರಾದ ಸಂಜೀವ್‌ ವಿ. ಕುಲಕರ್ಣಿ ಅವರು ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಕಾನೂನು ಸಾಕ್ಷರತಾ ವಾಹನದ ಮೂಲಕ ಕಾನೂನು ಬಗ್ಗೆ ಸಾಮಾನ್ಯರಿಗೂ ಅರಿವು ಮೂಡಿಸಲು ಪ್ರತಿ ವರ್ಷ ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಕಾನೂನಿನ ಮೂಲಕ ಪಡೆಯಬಹುದಾದ ಸೇವೆಗಳು, ಹಕ್ಕುಗಳು ಸೇರಿದಂತೆ ಇನ್ನೂ ಅನೇಕ ಕಾನೂನುಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮೀಣ, ನಗರ ಪ್ರದೇಶದಲ್ಲಿ ಕಾನೂನು ರಥ ಸಂಚರಿಸಲಿದೆ.

ಇದರ ಜೊತೆ ನಮ್ಮ ಕಾನೂನು ತಂಡವು ಸಹ ಭಾಗವಹಿಸಿ ಕಾನೂನು ಸೇವೆಗಳ ಬಗ್ಗೆ ತಿಳಿಸಲಿದೆ. ಈ ಕಾರ್ಯಕ್ರಮವನ್ನು ಕೊಪ್ಪಳ ಜಿಲ್ಲಾದ್ಯಂತ ಆರಂಭಿಸಲಾಗಿದ್ದು, ಗಂಗಾವತಿ ಮತ್ತು ಕುಷ್ಟಗಿ ತಾಲೂಕಿನಲ್ಲಿ ಕಾರ್ಯಕ್ರಮ ಈಗಾಗಲೇ ನಡೆದಿದೆ.  ಈಗ ಕೊಪ್ಪಳ ತಾಲೂಕಿನಲ್ಲಿ ನಂತರ ಉಳಿದ ಎಲ್ಲ ತಾಲೂಕುಗಳಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಜಿಲ್ಲೆಯಸಾರ್ವಜನಿಕರು ಕಾನೂನು ಸಾಕ್ಷರತಾ ವಾಹನದ ಮೂಲಕ ಕಾನೂನು ಸೇವೆಗಳ ಬಗ್ಗೆ ಮಾಹಿತಿ ಪಡೆದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಟಿ. ಶ್ರೀನಿವಾಸ್‌, ಹಿರಿಯ ಸಿವಿಲ್‌ ನ್ಯಾಯಾಧೀಶ ಕುಮಾರ್‌ ಎಸ್‌., ಪ್ರಧಾನ ಸಿವಿಲ್‌ ನ್ಯಾಯಾಧಿಧೀಶರಾದ ಹರೀಶ ಪಾಟೀಲ, ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ಮನುಶರ್ಮಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಚ್‌.ಎಚ್‌. ಮುರಡಿ, ಜಿಲ್ಲಾ ಸರ್ಕಾರಿ ವಕೀಲ ಆಸೀಫ್‌ ಅಲಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

  • ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದ ಎಸ್‌ಬಿಐ ಬ್ಯಾಂಕ್‌ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹಣ ಕ್ರೋಢೀಕರಣ ಘಟಕವನ್ನು (ಕರೆನ್ಸಿ ಚಸ್ಟ್‌) ಸೇವೆ ಇದೇ ಡಿ....

  • ಗಂಗಾವತಿ: ನಗರದ ಮಹಾತ್ಮ ಗಾಂಧಿ  ವೃತ್ತ ಸೇರಿ ಪ್ರಮುಖ ವೃತ್ತಗಳಲ್ಲಿ ನಗರಸಭೆಯ ಫುಟ್‌ಪಾತ್‌ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಕರವೇ (ಪ್ರವೀಣ ಶೆಟ್ಟಿ)...

  • ಕೊಪ್ಪಳ: 2017-18ನೇ ಸಾಲಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಡಿಸೆಂಬರ್‌-2019ರ ಅಂತ್ಯದವರೆಗೆ ಕಾಲಮಿತಿ ನಿಗದಿ ಪಡಿಸಲಾಗಿತ್ತು. ಆದರೆ ಇಲ್ಲಿವರೆಗೂ ಬಹುತೇಕ ಕಾಮಗಾರಿಗಳು...

  • „ಕೆ.ನಿಂಗಜ್ಜ ಗಂಗಾವತಿ: ತುಂಗಭದ್ರಾ ಡ್ಯಾಂ ಎಡದಂಡೆ ಕಾಲುವೆ 27ನೇ ವಿತರಣಾ ಕಾಲುವೆ ವ್ಯಾಪ್ತಿಯ ಭತ್ತದ ಗದ್ದೆ ಕಟಾವು ಕಾರ್ಯ ನಡೆಯುತ್ತಿದ್ದರೂ,ಕಾಲುವೆ ಮೂಲಕ...

  • ತಾವರಗೇರಾ: ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿ ಕೋಶ ಹಾಗೂ ಸ್ಥಳಿಯ ಪಪಂ ಸಹಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಗಳನ್ನು ಸಾರುವುದಕ್ಕೆ...

ಹೊಸ ಸೇರ್ಪಡೆ