ವಿದ್ಯಾಗಮಕ್ಕೆ 10 ಕಿಮೀ ನಡೆಯುವ ಮಕ್ಕಳು!

ಮೋರನಾಳ ವಿದ್ಯಾರ್ಥಿಗಳ ರೋದನೆ-ವೇದನೆ,ಶಾಲಾ ಸಮಯಕ್ಕೆ ಸಾರಿಗೆ ವ್ಯವಸ್ಥೆಯಿಲ್ಲದೇ ತೊಂದರೆ

Team Udayavani, Jan 6, 2021, 3:21 PM IST

ವಿದ್ಯಾಗಮಕ್ಕೆ 10 ಕಿಮೀ ನಡೆಯುವ ಮಕ್ಕಳು!

ಕೊಪ್ಪಳ: ವಿದ್ಯಾಗಮ ಶಿಕ್ಷಣ ಪಡೆಯಲು ಅಳವಂಡಿಗೆ ನಡೆದುಕೊಂಡೆ ಹೋಗುವ ತಾಲೂಕಿನ ಮೋರನಾಳ ಗ್ರಾಮದ ವಿದ್ಯಾರ್ಥಿನಿಯರು.

ಕೊಪ್ಪಳ: ಶಿಕ್ಷಣ ಇಲಾಖೆಯೇನೋ ಹಲವುಅಡೆ-ತಡೆಗಳ ಮಧ್ಯೆಯೂ ಶಾಲೆಗಳನ್ನುಆರಂಭ ಮಾಡಿದೆ. ಆದರೆ ಇಲ್ಲೊಂದು ಶಾಲೆಯವಿದ್ಯಾರ್ಥಿಗಳು ವಿದ್ಯಾಗಮ ತರಗತಿಗೆ ಆಗಮಿಸಲುನಿತ್ಯವೂ ಶಾಲೆಗೆ 10 ಕಿಮೀ ಕಾಲ್ನಡಿಗೆಯಲ್ಲೇ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಶಾಲಾಸಮಯಕ್ಕೆ ಬಸ್‌ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿನಿಯರು ವೇದನೆ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನ ಮೋರನಾಳ ಗ್ರಾಮದಲ್ಲಿನ 40ಕ್ಕೂಹೆಚ್ಚು ವಿದ್ಯಾರ್ಥಿಗಳು ಇಂತಹ ಸಮಸ್ಯೆಯನ್ನುಎದುರಿಸುತ್ತಿದ್ದಾರೆ. ಅಳವಂಡಿ ಸರ್ಕಾರಿ ಪ್ರೌಢಶಾಲೆಗೆ ತೆರಳಲು ಸಕಾಲಕ್ಕೆ ಬಸ್‌ ಸೌಕರ್ಯ ಇಲ್ಲದೇಕಾಲ ನಡಿಗೆ ನಮಗೆ ಗತಿ ಎಂದು ಪಾದಯಾತ್ರೆ ಆರಂಭಿಸುತ್ತಿದ್ದಾರೆ.

ಸರ್ಕಾರವು ಹೊಸ ವರ್ಷದಂದು 6 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಯೋಜನೆಆರಂಭಿಸಿ ಶಿಕ್ಷಣ ನೀಡಲು ಮುಂದಾಗಿದೆ. ಜೊತೆಗೆ10ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಮಾಡಿದೆ. 10 ತಿಂಗಳ ಬಳಿಕ ಕ್ರಮೇಣ ವಿದ್ಯಾರ್ಥಿಗಳುಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ ವಿದ್ಯಾಗಮ, ಶಾಲಾ ಅವಧಿ ಹೆಚ್ಚು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿನೂರೆಂಟು ತಾಪತ್ರೆಯ ಅನುಭವಿಸುವಂತಾಗಿದೆ. ಇಲ್ಲಿನ ಮೋರನಾಳ ಗ್ರಾಮ ಕೊಪ್ಪಳ ತಾಲೂಕಿನ ಕೊನೆಯ ಭಾಗದಲ್ಲಿದೆ. ಇಲ್ಲಿನ ನೂರಾರು ವಿದ್ಯಾರ್ಥಿಗಳು ಬಹುಪಾಲು ಅಳವಂಡಿ ಹಾಗೂ ಗದಗ ಜಿಲ್ಲೆಯ ಮುಂಡರಗಿ ಭಾಗದಲ್ಲಿಯೇ ಶಿಕ್ಷಣ ಪಡೆಯುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಲಾಕ್‌ಡೌನ್‌ ಮೊದಲು ಸ್ವಲ್ಪ ಮಟ್ಟಿಗೆ ಸಾರಿಗೆ ವ್ಯವಸ್ಥೆಯಿತ್ತು. ಲಾಕ್‌ಡೌನ್‌ ತೆರವು ಮಾಡಿದಬಳಿಕ ಗ್ರಾಮಕ್ಕೆ ಸರಿಯಾದ ಬಸ್‌ ವ್ಯವಸ್ಥೆ ಇಲ್ಲದೇವಿದ್ಯಾರ್ಥಿಗಳು, ಪಾಲಕರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ.

ಶಿಕ್ಷಣ ಇಲಾಖೆಯು ವಿದ್ಯಾಗಮ ಹಾಗೂ 10ನೇತರಗತಿ ಕ್ಲಾಸ್‌ಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ4ಗಂಟೆ ವರೆಗೂ ನಡೆಸುತ್ತಿಲ್ಲ. ಎರಡು ತಾಸಿನ ಅವ ಗೆಮುಗಿಸುತ್ತಿದ್ದಾರೆ. ಮೋರನಾಳ ಗ್ರಾಮದಲ್ಲಿನ 40ಕ್ಕೂಹೆಚ್ಚು ವಿದ್ಯಾರ್ಥಿಗಳು ಅಳವಂಡಿ ಕಾಲೇಜು-ಪ್ರೌಢ ಶಾಲೆಗೆ ತೆರಳುತ್ತಿದ್ದು, ಇವರಿಗೆ ಶಾಲೆ ಸಮಯಕ್ಕೆ ಸಾರಿಗೆ ವ್ಯವಸ್ಥೆ ಇಲ್ಲದೆ ಕಾಲ್ನಡಿಗೆ ಆರಂಭಿಸಿದ್ದಾರೆ.

10ನೇ ತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆ ವರೆಗೂ ತರಗತಿಗಳುನಡೆಯುತ್ತವೆ ಆದರೆ 6-8ನೇ ತರಗತಿ ವಿದ್ಯಾರ್ಥಿಗಳಿಗೆಮಧ್ಯಾಹ್ನ 2 ರಿಂದ 4.30ರ ವರೆಗೂ ವಿದ್ಯಾಗಮದಡಿಮಕ್ಕಳಿಗೆ ಬೋಧನೆ ಮಾಡಲಾಗುತ್ತದೆ. ಹಾಗಾಗಿ6-7-8-9ನೇ ತರಗತಿ ವಿದ್ಯಾರ್ಥಿಗಳು ಮಧ್ಯಾಹ್ನ1ಕ್ಕೆ ಮೋರನಾಳ ಗ್ರಾಮದಿಂದ ಅಳವಂಡಿ ಗ್ರಾಮಕ್ಕೆಕಾಲ್ನಡಿಗೆಯಲ್ಲಿ ತೆರಳಬೇಕಿದೆ. ಶಾಲೆ ಬಿಟ್ಟ ಬಳಿಕ ಸಂಜೆ4.30ರಿಂದ ಮತ್ತೆ ಕಾಲ್ನಡಿಗೆಯಲ್ಲೇ ಮೋರನಾಳಗ್ರಾಮಕ್ಕೆ ನಡೆದುಕೊಂಡು ಬರಬೇಕಿದೆ. 10ನೇತರಗತಿ ವಿದ್ಯಾರ್ಥಿಗಳಿಗೆ ಬೆಳಗ್ಗೆ 9.30ಕ್ಕೆ ಒಂದುಬಸ್‌ ಸಿಕ್ಕರೆ ಅವರಿಗೂ ಮಧ್ಯಾಹ್ನ 12ಕ್ಕೆ ಬಸ್‌ ಇಲ್ಲದೇ ಮನೆಗೆ ತೆರಳಲು ನಡೆದುಕೊಂಡೇ ಬರಬೇಕಿದೆ.

ಮೋರನಾಳ ಗ್ರಾಮದಿಂದ ಅಳವಂಡಿಗೆ 5 ಕಿಮೀದೂರವಿದೆ. ಎರಡೂ ಕಡೆ ಸೇರಿ ಪ್ರತಿ ನಿತ್ಯ 10 ಕಿಮೀವಿದ್ಯಾರ್ಥಿಗಳು ನಡೆದುಕೊಂಡೇ ವಿದ್ಯಾಗಮದಡಿಶಿಕ್ಷಣ ಪಡೆಯುವಂತ ಪರಿಸ್ಥಿತಿ ಬಂದಿದೆ.ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿವಿದ್ಯಾರ್ಥಿನಿಯರನ್ನು ಹೈಸ್ಕೂಲ್‌ ಹಾಗೂ ಕಾಲೇಜಿಗೆಕಳಿಸುವುದೇ ಹೆಚ್ಚು ಆ ಮಧ್ಯೆ ಕಾಲ್ನಡಿಗೆಯಲ್ಲಿ ಶಾಲೆಗೆಮಕ್ಕಳನ್ನು ಕಳಿಸಬೇಕೆಂದರೆ ವಿದ್ಯಾರ್ಥಿ ಪಾಲಕರುನಿತ್ಯವೂ ಆತಂಕದಲ್ಲೇ ಶಾಲೆಗೆ ಕಳಿಸಬೇಕಾದ ಸ್ಥಿತಿಬಂದಿದೆ. ಇನ್ನು ಕಾಲೇಜು ವಿದ್ಯಾರ್ಥಿಗಳೂ ಇಂಥತೊಂದರೆ ಎದುರಿಸುತ್ತಿದ್ದಾರೆ. ಹೇಗೋ ಖಾಸಗಿ ವಾಹನ, ಇಲ್ಲವೇ ಬೈಕ್‌ಗಳಲ್ಲಿ ತೆರಳುತ್ತಿದ್ದಾರೆ.

ಆದರೆ ವಿದ್ಯಾರ್ಥಿನಿಯರ ಪರದಾಟ ನಿಜಕ್ಕೂ ಹೇಳತೀರದಂತಾಗಿದೆ. ಕೂಡಲೇ ಸರ್ಕಾರ, ಶಿಕ್ಷಣಇಲಾಖೆ, ಸಾರಿಗೆ ಇಲಾಖೆಯು ವಿದ್ಯಾರ್ಥಿಗಳಕಾಲ್ನಡಿಗೆ ತಪ್ಪಿಸಲು ಪರ್ಯಾಯ ವಿದ್ಯಾರ್ಥಿಗಳ ಶಾಲಾ ಸಮಯಕ್ಕೆ ಸಾರಿಗೆ ವ್ಯವಸ್ಥೆ ಮಾಡಬೇಕಿದೆ.

ಸಮಸ್ಯೆ ಟ್ವಿಟ್‌ ಮಾಡಿದ ರೈತ :

ಮೋರನಾಳದಿಂದ ಅಳವಂಡಿಗೆ ಕಾಲ್ನಡಿಗೆಯಲ್ಲಿಯೇ ನಿತ್ಯ ವಿದ್ಯಾರ್ಥಿಗಳುಶಾಲೆಗೆ ತೆರಳುತ್ತಿರುವುದನ್ನುಗಮನಿಸಿದ ಬೆಟಗೇರಿ ಗ್ರಾಮದ ರೈತಏಳುಕೋಟೇಶ್‌ ಕೋಮಲಾಪುರ ಅವರುವಿದ್ಯಾರ್ಥಿನಿಯರು ನಡೆದುಕೊಂಡುಹೋಗುವ ಫೋಟೋ ತೆಗೆದು, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಶಿಕ್ಷಣ ಸಚಿವ ಸೇರಿ ಇತರರಿಗೆ ಟ್ವಿಟ್‌ ಮಾಡಿ ವಿದ್ಯಾರ್ಥಿಗಳ ಸಮಸ್ಯೆ ಗಮನಸೆಳೆದಿದ್ದಾರೆ.

ವಿದ್ಯಾಗಮ ಹಾಗೂ ಶಾಲೆ ಆರಂಭವಾಗಿವೆ. ನಾವೂ ನಿತ್ಯವೂಮೋರನಾಳ ಗ್ರಾಮದಿಂದ ಅಳವಂಡಿಗೆ 5ಕಿಮೀ ನಡೆದುಕೊಂಡು ಹೋಗಬೇಕು. ಪುನಃ 5ಕಿಮೀ ನಡೆದುಕೊಂಡೇ ನಮ್ಮೂರಿಗೆ ಬರಬೇಕು.ಇದರಿಂದ ನಮಗೆ ತುಂಬ ತೊಂದರೆಯಾಗುತ್ತಿದೆ. ಸರಿಯಾದ ಬಸ್‌ ವ್ಯವಸ್ಥೆ ಇಲ್ಲ. ನಮಗೆ ಅಧಿ ಕಾರಿಗಳು ಕೂಡಲೇ ಶಾಲಾ ಸಮಯಕ್ಕೆ ಬಸ್‌ ವ್ಯವಸ್ಥೆ ಮಾಡಲಿ. – ವಾಣಿ ಕವಲೂರು, ರೇಖಾ ಚಿಲಗೋಡ, ಕವಿತಾ ಬಗನಾಳ, ಮೋರನಾಳ ವಿದ್ಯಾರ್ಥಿನಿಯರು.

ಮೋರನಾಳ ಗ್ರಾಮದ ಶಾಲಾ-ಕಾಲೇಜುವಿದ್ಯಾರ್ಥಿನಿಯರಿಗೆ ಸಾರಿಗೆ ವ್ಯವಸ್ಥೆಇಲ್ಲದಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ.ಕೂಡಲೇ ಸಂಬಂ ಧಿಸಿದ ಡಿಪೋ ಮ್ಯಾನೇಜರ್‌ ಗೆ ಹೇಳಿ ವಿದ್ಯಾರ್ಥಿಗಳಿಗೆ ತೊಂದರೆ ಆಗದರೀತಿಯಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಲಾಗುವುದು.ಲಾಕ್‌ಡೌನ್‌ ಮೊದಲು ಅಲ್ಲಿ ಬಸ್‌ಗಳ ಸಂಚಾರಇತ್ತೆಂದರೆ ತೊಂದರೆಯಿಲ್ಲ. ಲಾಕ್‌ಡೌನ್‌ ತೆರವುಬಳಿಕ ನಮಗೂ ಸ್ವಲ್ಪ ತೊಂದರೆಯಾಗುತ್ತಿದೆ. ಅದೆಲ್ಲವನ್ನೂ ಸರಿಪಡಿಸುತ್ತಿದ್ದೇವೆ.ಎ.ಎ.ಮುಲ್ಲಾ, ಕೆಎಸ್‌ಆರ್‌ಟಿಸಿ ಸಾರಿಗೆ ಜಿಲ್ಲಾ ನಿಯಂತ್ರಣಾಧಿಕಾರಿ.ಕೊಪ್ಪಳ

 

ದತ್ತು ಕಮ್ಮಾರ

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.