ಕುಷ್ಟಗಿಯಲ್ಲಿ ಹೆಚ್ಚುತ್ತಿದೆ ಕಬ್ಬಿನ ಕ್ಷೇತ್ರ
100 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲೂ ಇಲ್ಲ ಸಕ್ಕರೆ ಕಾರ್ಖಾನೆ! 200 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ
Team Udayavani, Feb 15, 2021, 5:03 PM IST
ಕುಷ್ಟಗಿ: ತಾಲೂಕಿನಿಂದ ನೂರು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಆದರೂ ಈ ಭಾಗದ ರೈತರು ವಾಣಿಜ್ಯ ಬೆಳೆ ಕಬ್ಬು ಬೇಸಾಯಕ್ಕೆ ಮನಸ್ಸು ಮಾಡಿರುವುದು ಗಮನಾರ್ಹ ಎನಿಸಿದೆ.
ತಾಲೂಕಿನಲ್ಲಿ 50ರಿಂದ 60 ಹೆಕ್ಟೇರ್‌ಗೆ ಸೀಮಿತವಾಗಿದ್ದ ಕಬ್ಬು ಬೆಳೆ ಕಳೆದ ವರ್ಷ 200 ಹೆಕ್ಟೇರ್‌ಗೆ ವಿಸ್ತರಿಸಿದೆ. ಕಳೆದ ವರ್ಷ ಉತ್ತಮ ಮಳೆಯಿಂದ ಅಂತರ್ಜಲ ಖಾತ್ರಿಯಾಗುತ್ತಿದ್ದಂತೆ ಅಂತರ್ಜಲ ಲಭ್ಯತೆಯನ್ನಾಧರಿಸಿ 1 ಎಕರೆಯಿಂದ 5 ಎಕರೆಯವರೆಗೆ ಕಬ್ಬು ಬೆಳೆದಿದ್ದಾರೆ. ಸದ್ಯ ಕಬ್ಬು ಕಟಾವು ಸಂದರ್ಭವಾಗಿದ್ದು, ಈ ಪ್ರದೇಶದಲ್ಲಿ ಪ್ರತಿ ಎಕರೆಗೆ ಸರಾಸರಿ 40 ಟನ್ ಹಾಗೂ ಉತ್ತಮ ನಿರ್ವಹಣೆಯಿಂದ 50 ಟನ್ ವರೆಗೂ ಇಳುವರಿ ನಿರೀಕ್ಷಿಸಬಹುದಾಗಿದೆ.
ತಾಲೂಕಿನ ತಳವಗೇರಾ, ಕಡೇಕೊಪ್ಪ, ಹಿರೇಬನ್ನಿಗೋಳ, ಗುಮಗೇರಿ, ಹಿರೇಮನ್ನಾಪುರ, ಹುಲಿಯಾಪುರ ಇತರೆಡೆಗಳಲ್ಲಿ ಕಬ್ಬು ಬೆಳೆಯಲಾಗುತ್ತಿದೆ. ತಳವಗೇರಾ ವ್ಯಾಪ್ತಿಯಲ್ಲಿ ವೀರಭದ್ರಯ್ಯ ಹಿರೇಮಠ ಅವರು, ತಮ್ಮ ಒಂದೂವರೆ ಎಕರೆಯಲ್ಲಿ 86,032 ತಳಿಯ ಕಬ್ಬನ್ನು ಬೆಳೆದಿದ್ದು, ಈ ಬೆಳೆ ಎರಡನೇ ಬೆಳೆಯಾಗಿದೆ. ನಾಟಿ ಮಾಡಿದ ವರ್ಷದಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ 15 ಸಾವಿರ ರೂ. ಕೊಟ್ಟಿಗೆ ಗೊಬ್ಬರ, 10 ಸಾವಿರ ರೂ. ಅಂಗಾಂಶ ಕೃಷಿಯ ಕಬ್ಬು 2.25 ಪ್ರತಿ ಸಸಿಗೆ ಖರೀ ದಿಸಿದ ಖರ್ಚು ಸೇರಿದಂತೆ 60 ಸಾವಿರ ರೂ. ಖರ್ಚಾಗಿದೆ. ಈ ಭಾಗದಲ್ಲಿ ಬಿಸಿಲು ಹೆಚ್ಚಿದ್ದರಿಂದ ಸಕ್ಕರೆ ಅಂಶ ಜಾಸ್ತಿ ಇರುತ್ತದೆ. ಪ್ರತಿ ಎಕರೆಗೆ 50 ಟನ್ ಇಳುವರಿ ಬಂದಿದ್ದು, ಪ್ರತಿ ಟನ್ ಗೆ 2,300 ರೂ. ಲಭಿಸಿತ್ತು. ಪ್ರಸಕ್ತ ವರ್ಷದಲ್ಲಿ ಎಕರೆಗೆ 40 ಟನ್ ನಿರೀಕ್ಷಿಸಿದ್ದು, ಟನ್‌ಗೆ 2,380 ರೂ. ಸಿಗಲಿದೆ ಎಂದರು.
ಲಗಾಣಿ ಹೊರೆ: ಕಬ್ಬು ಕಟಾವಿಗೆ ಸಕ್ಕರೆ ಕಾರ್ಖಾನೆ ಒಪ್ಪಂದದನ್ವಯ ಮಹಾರಾಷ್ಟ್ರದ ಕಾರ್ಮಿಕರಿಗೆ 1 ಟನ್‌ಗೆ 250 ರೂ. ಲಗಾಣಿ ರೈತರೇ ಕೊಡಬೇಕು. ಕಬ್ಬು ಕಟಾವು ವಿಳಂಬವಾಗುತ್ತಿದ್ದಂತೆ ಲಗಾಣಿ ಹೆಚ್ಚು ಕೇಳುತ್ತಿದ್ದು, ರೈತರಿಗೆ ಇದು ಹೊರೆ ಎನಿಸಿದೆ. ಈ ಅಂಶ ಹೊರತುಪಡಿಸಿದರೆ ಬೆಳೆ ನಿರ್ವಹಣೆ ವೆಚ್ಚ ಕಡಿಮೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ಶಿಕ್ಷಣ ನೀತಿ ಜಾರಿಗೆ ವಿ.ವಿ. ಹೆಬ್ಟಾಗಿಲು ತೆರೆದಿದೆ’ : ಪ್ರೊ| ವೈ.ಎಸ್.ಸಿದ್ದೇಗೌಡ
ಅಂಕದೊಂದಿಗೆ ಅಂತಃಕರಣದ ಉನ್ನತಿಯೂ ಅಗತ್ಯ: ಸುರೇಶ್ ಕುಮಾರ್
“ಕಂಬಳ ಕ್ರೀಡೆಗೆ ದೈವ -ದೇವರ ಸಂಬಂಧವಿದೆ’ : ಮಿಯ್ಯಾರು ಲವಕುಶ ಜೋಡುಕರೆ ಕಂಬಳ ಉದ್ಘಾಟನೆ
ಬೆಳಗಾವಿ ಉಪ ಚುನಾವಣೆಯಲ್ಲಿ ನಾನು ಬಿಜೆಪಿ ಟಿಕೇಟ್ ಆಕಾಂಕ್ಷಿ : ಮುತಾಲಿಕ್
ಸಾರಿಗೆ ಸಂಸ್ಥೆ ಬಸ್ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಸವದಿ
MUST WATCH
ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ
ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್
CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani
ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3
ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು
ಹೊಸ ಸೇರ್ಪಡೆ
ಅಂಬಾನಿ ನಿವಾಸದ ಬಳಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್
ಭಾರತದಲ್ಲಿ ಉದ್ಯೋಗಿಗಳಿಗೆ ಗರಿಷ್ಠ ದುಡಿಮೆ,ಕನಿಷ್ಠ ವೇತನ! 2020-21ರ ILO ವರದಿಯಲ್ಲಿ ಮಾಹಿತಿ
ಪೊಲೀಸಪ್ಪನ ಅಮಾನತ್ತಿಗೆ ಕಾರಣವಾಯ್ತು ‘ಮೇಕೆ’…!
“ಶಿಕ್ಷಣ ನೀತಿ ಜಾರಿಗೆ ವಿ.ವಿ. ಹೆಬ್ಟಾಗಿಲು ತೆರೆದಿದೆ’ : ಪ್ರೊ| ವೈ.ಎಸ್.ಸಿದ್ದೇಗೌಡ
ಅಂಕದೊಂದಿಗೆ ಅಂತಃಕರಣದ ಉನ್ನತಿಯೂ ಅಗತ್ಯ: ಸುರೇಶ್ ಕುಮಾರ್