ಭಾನುವಾರದ ಲಾಕ್ ಡೌನ್: ಕೊಪ್ಪಳ ಸಂಪೂರ್ಣ ಬಂದ್
Team Udayavani, May 24, 2020, 10:47 AM IST
ಕೊಪ್ಪಳ: ಕೋವಿಡ್-19 ನಿಯಂತ್ರಣಕ್ಕಾಗಿ ಸರ್ಕಾರವು ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡುವ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯು ಸಂಪೂರ್ಣ ಲಾಕ್ ಡೌನ್ ಅಗಿದೆ.
ನಗರದ ಅಂಗಡಿ, ವ್ಯಾಪಾರ ವಹಿವಾಟು ಬಂದ್ ಆಗಿವೆ. ಸಾರಿಗೆ, ಆಟೋ ಸಂಚಾರವೂ ಸ್ಥಗಿತ ಮಾಡಲಾಗಿದೆ. ಪ್ರಮುಖ ರಸ್ತೆಗಳೆಲ್ಲವೂ ಖಾಲಿಯಾಗಿದ್ದು ಎಲ್ಲೆಡೆ ಪೊಲೀಸ್ ಇಲಾಖೆ ಬ್ಯಾರೆಕೇಡ್ ನಿರ್ಮಿಸಿ ರಸ್ತೆ ಸಂಚಾರವನ್ನೂ ಬಂದ್ ಮಾಡಿದೆ.
ರವಿವಾರದ ಲಾಕ್ ಡೌನ್ ಗೆ ಜಿಲ್ಲೆಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ತುರ್ತು ಸೇವೆ ಹೊರತುಪಡಿಸಿ ಇನ್ನೆಲ್ಲ ಸೇವೆ ಬಂದ್ ಆಗಿವೆ. ಈ ಮೊದಲು ಸರ್ಕಾರ ಲಾಕ್ ಡೌನ್ ನಿಂದ ಕೆಲ ವಿನಾಯತಿ ನೀಡಿದ ಬಳಿಕ ನಗರದಲ್ಲಿ ಜನ ಸಂಚಾರ ಕಾಣುತ್ತಿತ್ತು. ಸರ್ಕಾರ ಸಂಡೆ ಲಾಕ್ ಡೌನ್ ಘೋಷಣೆಯಿಂದ ಯಾರೊಬ್ಬರೂ ಮನೆಯಿಂದ ಹೊರಗೆ ಬಂದಿಲ್ಲ. ಉತ್ತಮ ಸ್ಪಂದನೆ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಂಗಾವತಿ: ನೇಮಕಾತಿ ಪರೀಕ್ಷೆಗೆ ವೆಬ್ ಕಾಸ್ಟಿಂಗ್ ಜಾರಿಯಾಗಲಿ
Dr.G. Parameshwara ಅವರ ಜಾತಿ ನಿಂದನೆ; ಬೀದರ್ ವ್ಯಕ್ತಿ ವಿರುದ್ಧ ಕೇಸ್
Rain; ಬೀದರ್,ಕೊಪ್ಪಳದಲ್ಲಿ ಸಿಡಿಲಿನ ಆರ್ಭಟಕ್ಕೆ ಇಬ್ಬರು ಮೃತ್ಯು
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Gangavathi; ಪರಾರಿಯಾಯ್ತು ಮೇಕೆ ಹಿಡಿಯಲು ಬಂದು ಸೆರೆಯಾಗಿದ್ದ ಚಿರತೆ