ಟಿಬಿ ಡ್ಯಾಂ ನೀರು ಆಂಧ್ರ-ತೆಲಂಗಾಣ ಪಾಲು

| ಅಚ್ಚುಕಟ್ಟು ಪ್ರದೇಶದ ಅನ್ನದಾತರು ಕಂಗಾಲು | 15 ದಿನಗಳಿಂದ 3.7 ಟಿಎಂಸಿ ಅಡಿ ನೀರು ಹರಿ ಬಿಟ್ಟ ಅಧಿಕಾರಿಗಳು

Team Udayavani, Mar 23, 2021, 1:06 PM IST

ಟಿಬಿ ಡ್ಯಾಂ ನೀರು ಆಂಧ್ರ-ತೆಲಂಗಾಣ ಪಾಲು

ಗಂಗಾವತಿ: ಪ್ರತಿ ಬಾರಿಯಂತೆ ಈ ಬಾರಿಯೂ ತುಂಗಭದ್ರಾ ಡ್ಯಾಂ ನೀರು ಬಿಡುವ ವಿಷಯದಲ್ಲಿ ಯಡವಟ್ಟು ನಡೆದಿದೆ. ನೀರಿನ ಸಂಗ್ರಹ ಪ್ರಮಾಣ ಕಡಿಮೆಇದ್ದರೂ ಆಂಧ್ರ ಮತ್ತು ತೆಲಂಗಾಣಕ್ಕೆ ನೀರು ಹರಿಸಲಾಗಿದೆ.

ತುಂಗಭದ್ರಾ ಡ್ಯಾಂನಲ್ಲಿ ಹೆಚ್ಚುವರಿ ನೀರು ಸಂಗ್ರಹವಾಗಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ಕಾಲುವೆ ಮತ್ತು ನದಿ ಮೂಲಕ ನೀರು ಈಗಾಗಲೇ ಆಂಧ್ರಪ್ರದೇಶ-ತೆಲಂಗಾಣ ರಾಜ್ಯದ ಡ್ಯಾಂಗಳಿಗೆ ನೀರು ಹರಿಸಲಾಗಿದೆ.ಬೇಸಿಗೆ ಹಂಗಾಮಿನಲ್ಲಿ ನಾಟಿ ಮಾಡಿದ ಭತ್ತದ ಬೆಳೆ ರೈತರ ಕೈ ಸೇರಲು ಏ.30ರವರೆಗೆ ಕಡ್ಡಾಯವಾಗಿ ಕಾಲುವೆಗಳಿಗೆ ನೀರು ಹರಿಸಲೇ ಬೇಕಿದ್ದು ಸದ್ಯ ಡ್ಯಾಂನಲ್ಲಿ ಕೇವಲ 16 ಟಿಎಂಸಿ ನೀರು ಸಂಗ್ರಹವಿದೆ. ಪರಿಸ್ಥಿತಿ ಹೀಗಿದ್ದರೂ ಆಂಧ್ರ ಮತ್ತುತೆಲಂಗಾಣ ಕೋಟಾದ ನೀರನ್ನು ಕಳೆದ 15ದಿನಗಳಿಂದ ಹಗಲು-ರಾತ್ರಿ ನದಿ ಮೂಲಕಬಿಡಲಾಗುತ್ತಿದೆ. ಡ್ಯಾಂನಲ್ಲಿ ಬೇಗ ನೀರು ಖಾಲಿ ಮಾಡುವ ದುರುದ್ದೇಶ ಅಧಿಕಾರಿ ವಲಯದಲ್ಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡ್ಯಾಂನಲ್ಲಿ ನೀರಿನ ಕೊರತೆ ಇದ್ದು ಭದ್ರಾ ಡ್ಯಾಂನಿಂದ ಕನಿಷ್ಟ 10 ಟಿಎಂಸಿ ನೀರು ಪಡೆಯುವಂತೆ ಅಚ್ಚುಕಟ್ಟು ರೈತರುಸಚಿವರು, ಶಾಸಕರು, ಸಂಸದರು ಸೇರಿದಂತೆಇತ್ತೀಚೆಗೆ ಸಿಂಧನೂರಿಗೆ ಭೇಟಿ ನೀಡಿದ್ದಸಿಎಂ ಯಡಿಯೂರಪ್ಪ ಅವರಲ್ಲೂ ಮನವಿಮಾಡಿದ್ದಾರೆ. ಈ ಮಧ್ಯೆ ಜಲಸಂಪನ್ಮೂಲಇಲಾಖೆ ಮತ್ತು ತುಂಗಭದ್ರಾಡ್ಯಾಂನಲ್ಲಿರುವ ಅಧಿಕಾರಿಗಳು ತುಂಗಭದ್ರಾ ಬೋರ್ಡ್‌ ಜತೆ ಸೇರಿ ಏಪ್ರಿಲ್‌ ನಂತರ ನದಿ ಮೂಲಕ ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಕೋಟಾದ ನೀರನ್ನು ಈಗಲೇಹರಿಸುವ ಮೂಲಕ ರಾಜ್ಯದ ಅಚ್ಚುಕಟ್ಟುಪ್ರದೇಶ ರೈತರಿಗೆ ಅನ್ಯಾಯವೆಸಗುತ್ತಿದ್ದಾರೆ.

ಯಾರಿಗೆ, ಎಷ್ಟು ನೀರು?: ಡ್ಯಾಂನಲ್ಲಿ ಸಂಗ್ರಹವಾಗುವ ನೀರಿನಲ್ಲಿ ರಾಜ್ಯದ ಪಾಲು ಶೇ.65, ಆಂಧ್ರಪ್ರದೇಶ-ತೆಲಂಗಾಣರಾಜ್ಯಗಳ ಪಾಲು ಶೇ.35ರಷ್ಟಿದ್ದು, ಆದ್ಯತೆಮೇರೆಗೆ ಆಂಧ್ರಪ್ರದೇಶದ ಪಾಲಿನ ನೀರನ್ನು ಬಿಡಬೇಕಾಗುತ್ತದೆ. ಪ್ರತಿ ವರ್ಷ ಏಪ್ರಿಲ್‌ ನಂತರ ಬೇಸಿಗೆಯ ಕೋಟಾವನ್ನುಬಿಡಲಾಗುತ್ತಿತ್ತು. ಈಗ ರಾಯಚೂರು,ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ 8 ಲಕ್ಷಎಕರೆ ಭೂಮಿಯಲ್ಲಿ ಭತ್ತ, ಮೆಣಸಿನಕಾಯಿ, ಹತ್ತಿ ಸೇರಿ ಇತರೆ ಬೆಳೆ ಬೆಳೆಯಲಾಗಿದೆ.ಪ್ರಸ್ತುತ ಬೆಳೆದು ನಿಂತ ಬೆಳೆಗಳು ರೈತರಕೈಸೇರಲು ಕನಿಷ್ಟ ಏ.30ರವರೆಗೆ ನೀರು ಬೇಕಾಗುತ್ತದೆ. ಸದ್ಯ ನೀರಿನ ಕೊರತೆಯಮಧ್ಯೆ ಆಂಧ್ರಪ್ರದೇಶಕ್ಕೆ ಹರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಭದ್ರಾದಿಂದ ನೀರು: ಸದ್ಯ ತುಂಗಭದ್ರಾ ಡ್ಯಾಂನಲ್ಲಿ 16 ಟಿಎಂಸಿ ನೀರು ಸಂಗ್ರಹವಿದ್ದು,ಬೆಳೆದು ನಿಂತ ಬೆಳೆಗೆ ಮತ್ತು ಮೂರೂಜಿಲ್ಲೆಗಳಿಗೆ ಬೇಸಿಗೆಯಲ್ಲಿ ಕುಡಿಯಲುನೀರು ಬೇಕಾಗುತ್ತದೆ. ಇದನ್ನು ಪರಿಗಣಿಸಿಮೂರು ಜಿಲ್ಲೆಯ ಸಂಸದರು, ಶಾಸಕರು,ಸಚಿವರು ಸಿಎಂಗೆ ಮನವಿ ಮಾಡಿದ್ದರಿಂದಯಡಿಯೂರಪ್ಪ ಅವರು ಭದ್ರಾದಿಂದನೀರು ಹರಿಸಲು ಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ

ತುಂಗಭದ್ರಾ ಡ್ಯಾಂನಲ್ಲಿ ಸದ್ಯ 16 ಟಿಎಂಸಿ ಅಡಿ ನೀರಿದ್ದು ಬೆಳೆದು ನಿಂತ ಬೆಳೆ ರೈತರ ಕೈಸೇರಲು ಈ ನೀರು ಸಾಕಾಗಲ್ಲ. ಆದರೂ ಡ್ಯಾಂ ನಿಂದ ಆಂಧ್ರಪ್ರದೇಶ ಕೋಟಾಎಂದು ನದಿಯ ಮೂಲಕ ಕಳೆದ 15 ದಿನಗಳಿಂದ ನಿತ್ಯ 10 ಸಾವಿರ ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಇದರಿಂದ ಅಚ್ಚುಕಟ್ಟು ರೈತರು ಆತಂಕಗೊಂಡಿದ್ದಾರೆ. ಕೂಡಲೇ ನದಿಗೆಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು. ಜತೆಗೆ ಭದ್ರಾದಿಂದ 10 ಟಿಎಂಸಿ ಅಡಿ ನೀರನ್ನು ತುಂಗಭದ್ರಾ ಡ್ಯಾಂಗೆ ಹರಿಸಬೇಕು. ಆಂಧ್ರಪ್ರದೇಶ ತೆಲಂಗಾಣದ ನೀರಿನ ಕೋಟಾವನ್ನು ಏ.10ರ ನಂತರ ಹರಿಸಬೇಕು. –ರೆಡ್ಡಿ ಶ್ರೀನಿವಾಸ, ಎಪಿಎಂಸಿ ನಿರ್ದೇಶಕ, ಅಧ್ಯಕ್ಷರು ಕನಕಗಿರಿ ಬ್ಲಾಕ್‌ ಕಾಂಗ್ರೆಸ್‌

ತುಂಗಭದ್ರಾ ಬೋರ್ಡ್‌ ಅಧಿಕಾರಿಗಳ ಒತ್ತಡದಿಂದ ಸದ್ಯ ಆಂಧ್ರಪ್ರದೇಶದಕೋಟಾ 3.7 ಟಿಎಂಸಿ ಅಡಿ ನೀರನ್ನು ನದಿಯ ಮೂಲಕ ಹರಿಸಲಾಗುತ್ತಿದ್ದು, ತಕ್ಷಣವೇ ನಿಲ್ಲಿಸುವಂತೆ ಸೂಚಿಸಲಾಗಿದೆ. ಏ.10 ನಂತರ ಆಂಧ್ರ ಕೋಟಾವನ್ನುನದಿಯ ಮೂಲಕ ಹರಿಸುವಂತೆ ಸೂಚನೆ ನೀಡಲಾಗಿದೆ. ಇದುವರೆಗೂ ಹರಿಸಿದ ನೀರಿನ ಲೆಕ್ಕ ಹಿಡಿದುಕೊಂಡು ಮುಂದಿನ ಏಪ್ರಿಲ್‌ನಲ್ಲಿ ಉಳಿದ ಆಂಧ್ರ ಕೋಟಾವನ್ನು ಹರಿಸಲಾಗುತ್ತದೆ. ರೈತರು ಆತಂಕ ಪಡಬಾರದು. – ತಿಪ್ಪೇರುದ್ರಸ್ವಾಮಿ, ಅಧ್ಯಕ್ಷರು, ತುಂಗಭದ್ರಾ ಕಾಡಾ ಯೋಜನೆ

 

ಕೆ.ನಿಂಗಜ್ಜ

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Amit Shah

Modi 3.0 ಅವಧಿಯಲ್ಲಿ ನಕ್ಸಲ್‌ ಮುಕ್ತ ದೇಶ: ಅಮಿತ್‌ ಶಾ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.