ವಿದ್ಯಾರ್ಥಿಗಳಿಗೆ ಬೋಧನೆ ಪರಿಣಾಮಕಾರಿಯಾಗಿರಲಿ
Team Udayavani, Jan 2, 2021, 2:52 PM IST
ಕೊಪ್ಪಳ: ಕೋವಿಡ್ ಕಾಲದ ಈ ಸಂದರ್ಭದಲ್ಲಿ ಶೈಕ್ಷಣಿಕ ವ್ಯವಸ್ಥೆ ಹಾಳಾಗಬಾರದು ಎಂದುಸುರಕ್ಷತಾ ಕ್ರಮಗಳೊಂದಿಗೆ ರಾಜ್ಯ ಸರ್ಕಾರಶಾಲೆಯನ್ನು ಪ್ರಾರಂಭಿಸಿದ್ದು ಸರಿಯಾಗಿದೆ. ಶಾಲಾ, ಕಾಲೇಜು ಶಿಕ್ಷಕರು ಕಡಿಮೆ ಅವಧಿಯಲ್ಲಿ ಪರಿಣಾಮಕಾರಿ ಬೋಧನೆ ಮಾಡಿ ವಿದ್ಯಾರ್ಥಿಗಳ ಕಲಿಕೆ ವೃದ್ಧಿಸಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರ ಸಮೀಪದ ಭಾಗ್ಯನಗರ ಸರ್ಕಾರಿಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಪ್ರೌಢಶಾಲೆ ಮತ್ತು ಕಾಲೇಜು ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕೋವಿಡ್ ಎನ್ನುವ ಮಹಾಮಾರಿಯಿಂದ ಕಳೆದ9 ತಿಂಗಳಿಂದ ಶಾಲೆಯನ್ನು ತೆರೆಯಲು ಆಗಿಲ್ಲ. ಈವರ್ಷದ ಶೈಕ್ಷಣಿಕ ವ್ಯವಸ್ಥೆಯೇ ಏರುಪೇರಾಗಿದೆ. ಆದರೂ ಈಗ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಸರ್ಕಾರ ಶಾಲಾ-ಕಾಲೇಜುಪ್ರಾರಂಭಿಸಿದೆ. ಹೀಗಾಗಿ, ಶಿಕ್ಷಕರು ಅತ್ಯಂತ ಜಾಗೂರಕರಾಗಿ ಪಾಠ ಮಾಡಬೇಕಾಗಿದೆ. ಅಲ್ಲದೆಮಕ್ಕಳ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರ ವಹಿಸಿಪಾಲಕರ ವಿಶ್ವಾಸ ಮೂಡಿಸಬೇಕಾಗಿದೆ ಎಂದರು. ಶಾಲೆ ಪ್ರಾರಂಭವಾದ ಮೇಲೆಯೂ ವಿದ್ಯಾರ್ಥಿಗಳಿಗೆ ಕೋವಿಡ್ ಹರಡದಂತೆಎಚ್ಚರ ವಹಿಸಬೇಕಾಗಿದೆ. ಇದರ ಜೊತೆಗೆಶಿಕ್ಷಕರು ವಿಶೇಷ ಪಾಠವನ್ನು ಹೆಚ್ಚು ತಯಾರಿಮಾಡಿಕೊಂಡು ಪರಿಣಾಮಕಾರಿಯಾಗಿ ಬೋಧನೆಮಾಡಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆಕಲಿಯಲು ಸಹಕಾರಿಯಾಗುತ್ತದೆ. ಪ್ರಸಕ್ತ ವರ್ಷದ ಶಿಕ್ಷಣ ಯಶಸ್ವಿಯಾಗಿ ಮಕ್ಕಳಿಗೆ ಉಣಬಡಿಸಿ,ಅದು ಜೀರ್ಣವಾಗುವಂತೆ ಮಾಡಬೇಕು. ಮಕ್ಕಳು ಹಾಗೂ ಶಿಕ್ಷಕರು ತಮ್ಮ ಪ್ರಾಣದ ಹಂಗು ತೊರೆದುನಿತ್ಯವೂ ಶಾಲೆಗೆ ಬರಬೇಕಾಗಿದೆ. ಹೀಗಾಗಿ ಶಿಕ್ಷಕರು ಮುನ್ನೆಚ್ಚರಿಕೆ ವಹಿಸಬೇಕು ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್‌ಮಾತನಾಡಿ, ಶಿಕ್ಷಕರ ಕಾರ್ಯ ನಿಜಕ್ಕೂಶ್ಲಾಘನೀಯ. ಕೋವಿಡ್ ಸನ್ನಿವೇಶದಲ್ಲಿಯೂತಮ್ಮ ಜೀವದ ಹಂಗು ತೊರೆದು ಪಾಠಮಾಡಿದ್ದಾರೆ. ಈಗ ಸುಮಾರು ದಿನಗಳಬಳಿಕ ಶಾಲೆ ಪ್ರಾರಂಭವಾಗಿದ್ದು, ಈಗಲೂಸಮಸ್ಯೆಯ ನಡುವೆಯೇ ವಿದ್ಯಾರ್ಥಿಗಳಿಗೆಪಾಠ ಮಾಡಬೇಕಾಗಿದೆ. ಹೀಗಾಗಿ ದೇಶನಿರ್ಮಾಣದಲ್ಲಿಯೇ ಪ್ರಮುಖ ಪಾತ್ರ ನಿರ್ವಹಿಸುವ ಶಿಕ್ಷಕರು ಇಂದು ದೇಶದಲ್ಲಿ ಗಡಿಕಾಯುವ ಸೈಕನಿಕರಂತೆ ಹೋರಾಟ ಮಾಡಬೇಕಾಗಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷಶರಣಬಸನಗೌಡ ಪಾಟೀಲ ಮಾತನಾಡಿ, ಸರ್ಕಾರಶಿಕ್ಷಕರ ಸುರಕ್ಷತೆಗೂ ಒತ್ತು ನೀಡಬೇಕಾಗಿದೆ.ಇಂಥ ಸಂದಿಗ್ಧ ಸನ್ನಿವೇಶದಲ್ಲಿಯೂ ಶಿಕ್ಷಕರುಅತ್ಯುತ್ತಮವಾಗಿ ಕೆಲಸ ಮಾಡುತ್ತಾರೆ.ಇನ್ನು ಪಾಲಕರ ತಮ್ಮ ಹೊಣೆಗಾರಿಕೆಯನ್ನುಅರಿತು, ಮಕ್ಕಳನ್ನು ಶಾಲೆಗೆ ಕಳುಹಿಸಬೇಕು.ಅಲ್ಲದೆ ಮಕ್ಕಳಿಗೆ ಸುರಕ್ಷತಾ ಮಾಹಿತಿ ನೀಡಿ ಕಳುಹಿಸಬೇಕು ಎಂದರು. ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ, ಪ್ರಾಚಾರ್ಯರಾಜಶೇಖರ ಪಾಟೀಲ್, ಉಪ ಪ್ರಾಚಾರ್ಯ ಮಾರ್ಕಸ್ ನ್ಯೂಟನ್ ಸೇರಿ ಇತರರು ಪಾಲ್ಗೊಂಡಿದ್ದರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೊಲೀಸ್ ಪಡೆಯಿಂದ ಹೆಲ್ಮೆಟ್ ಜಾಗೃತಿ
ದಸರಾ ಮಾದರಿ ಸರಳವಾಗಿ ಗವಿಸಿದ್ದೇಶ್ವರ ಜಾತ್ರೆ : ಅಜ್ಜನ ಜಾತ್ರೆ 3 ದಿನಕ್ಕೆ ಮಾತ್ರ ಸೀಮಿತ
ಗ್ರಾಪಂ ಸದಸ್ಯರು ಜನ ಸೇವಕರಾಗಿ ಕೆಲಸ ಮಾಡಲಿ : ರಾಜ್ಯದಲ್ಲಿ ಗೆದ್ದಿದ್ದಾರೆ 5,246 ಬೆಂಬಲಿತರು
ಗೋ ಹತ್ಯೆಗೆ ಪ್ರಚೋದನೆ ನೀಡಿದರೆ ಸಿದ್ದರಾಮಯ್ಯರನ್ನೇ ಜೈಲಿಗೆ ಹಾಕುತ್ತೇವೆ : ಪ್ರಭು ಚವ್ಹಾಣ್
ಸಂಪುಟ ವಿಸ್ತರಣೆ ವೇಳೆ ಅಸಮಾಧಾನ ಸಹಜ : ಸಚಿವ ಜಗದೀಶ ಶೆಟ್ಟರ್