ಪಂಪಾವನ ದುರಸ್ತಿಗೆ ಬಂದಿಲ್ಲ ಅನುದಾನ

Team Udayavani, Nov 13, 2019, 2:37 PM IST

ಕೊಪ್ಪಳ: ತುಂಗಭದ್ರಾ ಡ್ಯಾಂನ ಎಡದಂಡೆ ಮೇಲ್ಮಟ್ಟದ ಗೇಟ್‌ ಮುರಿದು ಅಪಾರ ಪ್ರಮಾಣದ ನೀರು ಪಂಪಾವನಕ್ಕೆ ನುಗ್ಗಿ ಜಲಾವೃತಗೊಂಡಿದ್ದ ವೇಳೆ ಹಾನಿಗೀಡಾದ ಕಟ್ಟಡಗಳು, ವಿದ್ಯುತ್‌ ಲೈನ್‌ ಸೇರಿ ಸೇತುವೆಗಳ ಪುನರ್‌ ನಿರ್ಮಾಣಕ್ಕೆ ಈ ವರೆಗೂ ಯಾವುದೇ ಇಲಾಖೆಯು ಹಣ ಬಿಡುಗಡೆ ಮಾಡಿಲ್ಲ. ಅನುದಾನ ಕೊಡುವುದೇ ಡೌಟು ಎನ್ನುವ ಮಾತು ಸಹ ಇಲಾಖೆಯಿಂದಲೇ ಕೇಳಿ ಬಂದಿದೆ.

ತೋಟಗಾರಿಕೆ ಇಲಾಖೆಯು ಇದರ ಬಗ್ಗೆ ಚಿಂತೆ ಮಾಡಲಾರಂಭಿಸಿದೆ. ಕರ್ನಾಟ ನೀರಾವರಿ ನಿಗಮವೇ ಅನುದಾನ ಕೊಡುವ ನಿರೀಕ್ಷೆಯಲ್ಲೇ ಕಾಲ ದೂಡುತ್ತಿದೆ. ಆದರೆ ನಿಗಮವು ಇನ್ನೂ ಪಂಪಾವನದಲ್ಲಿ ಜಲಾವೃತದಿಂದ ಹಾನಿಯಾದ ಬಗ್ಗೆ ಪರಿಪೂರ್ಣ ಸರ್ವೆಯನ್ನೇ ಮಾಡಿಲ್ಲ. ಗೇಟ್‌ ಮುರಿದು ತಿಂಗಳುಗಟ್ಟಲೆ ಕಳೆದರೂ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ.

ಪಂಪಾವನ ತುಂಗಭದ್ರಾ ತಟದಲ್ಲಿಯೇ ಇದೆ. ಸುಮಾರು 70 ಎಕರೆಯಷ್ಟು ವಿಸ್ತಾರವನ್ನು ಒಳಗೊಂಡಿದೆ. ಇಲ್ಲಿ ಈ ಮೊದಲು ಸಾವಿರಾರು ಸಸಿಗಳನ್ನು ಬೆಳೆಸಲಾಗಿತ್ತು. ವಿವಿಧ ಬಗೆಯ ಹೂವಿನ ಗಿಡಗಳಿದ್ದವು. ವಿಶೇಷ ಗಮನ ಸೆಳೆಯುವ ಸಸ್ಯ ಮಾದರಿಯನ್ನು ತಯಾರಿಸಲಾಗಿತ್ತು ಆದರೆ ಗೇಟ್‌ ಮುರಿದು ನೀರು ನುಗ್ಗಿದ ಪರಿಣಾಮ ಎಲ್ಲವೂ ಹಾನಿಯಾಗಿದೆ.

ಎನ್‌ಡಿಆರ್‌ಎಫ್‌ ನಿಯಮಾವಳಿಯಡಿಪಂಪಾವನಕ್ಕೆ ಅನುದಾನ ಬರಲಿದೆ ಎಂಬ ನಿರೀಕ್ಷೆ ಇಟ್ಟಿದ್ದರೆ ಅದೂ ಹುಸಿಯಾಗುತ್ತಿದೆ. ಏಕೆಂದರೆ ಪಂಪಾವನಕ್ಕೆ ಪ್ರಕೃತಿ ವಿಕೋಪದಿಂದ ನೀರು ನುಗ್ಗಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ  ವಹಿಸಿದ್ದರಿಂದಲೇ ಗೇಟ್‌ ಮುರಿದು ಅಪಾರ ಪ್ರಮಾಣದಲ್ಲಿ ನೀರು ಉದ್ಯಾನವನಕ್ಕೆ ನುಗ್ಗಿ 70 ಎಕರೆಯಷ್ಟು ಆವರಿಸಿ ವಾರಗಟ್ಟಲೆ ನೀರು ಸಂಗ್ರಹವಾಗಿತ್ತು. ಇದರಿಂದ ಉದ್ಯಾನವನದಲ್ಲಿದ್ದ ಹಲವಾರು ಕಟ್ಟಡಗಳು, ಸೇತುವೆಗಳು, ವಿದ್ಯುತ್‌ ಲೈನ್‌ಗಳು ರಸ್ತೆಗಳು ಬಹುಪಾಲು ಹಾನಿಗೀಡಾಗಿವೆ.

ಇರೊಟ್ಟಿಗೆ ಸೇತುವೆ ನಿರ್ಮಾಣದ ಅವ ಯಲ್ಲಿಯೇ ನಿರ್ಮಿಸಿದ್ದ ಟವರ್‌ಗಳು ಹಾನಿಗೀಡಾಗಿವೆ. ಅಲ್ಲದೇ, ವಿವಿಧ ತಳಿಯ ಸಸ್ಯಗಳು, ಹೂವಿನ ಕುಂಡಗಳು ನೀರಿನಲ್ಲಿ ಕೊಳೆತು ಹೋಗಿವೆ. 15 ಲಕ್ಷ ರೂ.ನಷ್ಟು ಸಸ್ಯಗಳೇ ಕೊಳೆತು ಹೋಗಿವೆ. ಹಾಗಾಗಿ ಎನ್‌ಡಿಆರ್‌ಎಫ್‌ ನಿಯಮಾವಳಿ ಉದ್ಯಾನವನಕ್ಕೆ ಹಣ ಬರುವುದಿಲ್ಲ ಎನ್ನುವುದು ಅಧಿಕಾರಿಗಳ ವೇದನೆ. ಈ ಹಿಂದೆ ಸಚಿವ ಸಿ.ಸಿ. ಪಾಟೀಲ್‌ ಅವರು ಪಂಪಾವನಕ್ಕೆ ಭೇಟಿ ನೀಡಿದ್ದ ವೇಳೆ ಇದು ಪ್ರಕೃತಿ ವಿಕೋಪದಿಂದ ಹಾನಿಗೀಡಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಪಂಪಾವನ ಹಾನಿಯಾಗಿದೆ. ಇದಕ್ಕೆ ಕರ್ನಾಟಕ ನೀರಾವರಿ ನಿಗಮವೇ ಅನುದಾನ ಕೊಡಬೇಕು ಎನ್ನುವ ಮಾತನ್ನಾಡಿದ್ದಾರೆ. ಆದರೆ ನಿಗಮವೂ ಈ ವರೆಗೂ ಹಣವನ್ನೇ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಕೇಳಿದರೆ ಇನ್ನೂ ಸರ್ವೇ ಕಾರ್ಯ ನಡೆದಿದೆ. ರಸ್ತೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ಹೇಳಿದ್ದೇವೆ.

ವಿದ್ಯುತ್‌ ಲೈನ್‌ಗೆ ಜೆಸ್ಕಾಂ ಹಾಗೂ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಗೆ ಹೇಳಿದ್ದೇವೆ. ಸ್ವಲ್ಪ ಹಾನಿಯ ಕುರಿತಂತೆ ಸರ್ವೇ ನಡೆಸಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ ಎನ್ನುತ್ತಿದ್ದಾರೆ ಡ್ಯಾಂ ಅಧಿಕಾರಿಗಳು. ಡ್ಯಾಂ ಗೇಟ್‌ ಮುರಿದು ಹಾನಿಯಾಗಿ ತಿಂಗಳುಗಟ್ಟಲೆ ಕಳೆದರೂ ಇನ್ನೂ ಹಾನಿ ಸಮೀಕ್ಷೆಯನ್ನೇ ಮಾಡದೇ ಇರುವುದು ಬೇಸರದ ಸಂಗತಿ.

ಸಾರ್ವಜನಿಕರ ಉದ್ದೇಶಕ್ಕಾಗಿ ನಿರ್ಮಿಸಿರುವ ಉದ್ಯಾನವನದ ಬಗ್ಗೆ ಇಷ್ಟೊಂದು ತಾತ್ಸಾರದ ಭಾವನೆ ತಾಳುತ್ತಿರುವುದು ನಿಜಕ್ಕೂ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಿ ಹಾನಿಯಾದ ಸ್ಥಳಗಳ ಪುನರ್‌ ನಿರ್ಮಾಣ ಮಾಡುವ ಕಾರ್ಯವಾಗಬೇಕಿದೆ.

 

-ದತ್ತು ಕಮ್ಮಾರ


ಈ ವಿಭಾಗದಿಂದ ಇನ್ನಷ್ಟು

  • ಕೊಪ್ಪಳ: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರಮಹಾ ಪರಿನಿರ್ವಾಣ ದಿನಾಚರಣೆ  ಅಂಗವಾಗಿ ಉಪ ವಿಭಾಗಾಧಿಕಾರಿ ಸಿ.ಡಿ....

  • ಕೊಪ್ಪಳ: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಸೇರಿದಂತೆ ಕಲ್ಲುಕ್ವಾರಿಗಳ ಉದ್ಯಮದಿಂದ 70 ಗ್ರಾಮಗಳು ಬಾಧಿತ ಪ್ರದೇಶ ವ್ಯಾಪ್ತಿಯಲ್ಲಿ ಬರುವುದನ್ನು ಗಣಿ ಮತ್ತು...

  • ಕೊಪ್ಪಳ: ಜಿಲ್ಲೆಯಲ್ಲಿ ಮಳೆ ಆರ್ಭಟ ಹಾಗೂ ವಾಹನ ಸಂಚಾರದಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದ 275 ರಸ್ತೆಗಳು ಹಾಳಾಗಿವೆ. ಇವುಗಳ ದುರಸ್ತಿಗಾಗಿ...

  • ದತ್ತು ಕಮ್ಮಾರ ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ವರ್ಷ ಮಳೆ ಕೊರತೆಯಿಂದ ಬರದ ಪರಿಸ್ಥಿತಿಯಲ್ಲಿ ಬೆಳೆ ವಿಮೆಯಾದರೂ ಕೈ ಹಿಡಿಯಲಿದೆ ಎಂಬ ಭರವಸೆಯಿಂದ ರೈತರು ವಿಮೆ...

  • ಕೊಪ್ಪಳ: ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 277 ಮುಖ್ಯ ಶಿಕ್ಷಕರ ಹುದ್ದೆಗಳಿಗೆ ನಡೆದ ಎರಡು ದಿನದ...

ಹೊಸ ಸೇರ್ಪಡೆ

  • ಕರಿಬೇವಿನ ಎಲೆಯಲ್ಲಿರುವ ಗಂಧಕಯುಕ್ತ ಎಣ್ಣೆಯ ಅಂಶವೇ "ಘಮ…' ಎನ್ನುವ ಸುವಾಸನೆಗೆ ಕಾರಣ. ಇದನ್ನು ಅಡುಗೆ ಮನೆಯಲ್ಲಿ ಮಾತ್ರವೇ ಅಲ್ಲದೆ, ಆಯುರ್ವೇದ ಔಷಧಗಳ ತಯಾರಿಕೆಗೂ...

  • "ಬಲೆ ಬೆಳೆ' ಎಂದರೆ ಮುಖ್ಯಬೆಳೆಯನ್ನು ಕೀಟಬಾಧೆಯಿಂದ ರಕ್ಷಿಸುವುದು. ಬಲೆ ಬೆಳೆಯಾಗಿ ಕೆಲವಾರು ಬೆಳೆಗಳನ್ನು ಬೆಳೆಯುತ್ತಾರೆ. ಈ ಎಲ್ಲ ಬೆಳೆಯನ್ನೂ ಒಟ್ಟಿಗೆ ಬೆಳೆಯುವ...

  • ಆ್ಯಂಡ್ರೋಕ್ಲಿಫ್ ಎಂಬ ರೈತನಿದ್ದ. ಅವನು ಶ್ರಮಪಟ್ಟು ದುಡಿದು ಬಂಜರು ಭೂಮಿಯಲ್ಲಿ ಕೃಷಿ ಮಾಡಿದ್ದ. ಹಲವಾರು ಹಣ್ಣುಗಳ ಮರಗಳನ್ನು ಬೆಳೆಸಿ ಕೈತುಂಬ ಫ‌ಸಲು ಕೊಯ್ಯುತ್ತಿದ್ದ....

  • ಆಕಾಶ ವೀಕ್ಷಕರಿಗೆ, ಪ್ರಕೃತಿಪ್ರಿಯರಿಗೆ ಸಂತಸದ ಸುದ್ದಿ. ಇದೇ ಡಿಸೆಂಬರ್‌ 26 ರಂದು ಬಲು ಅಪರೂಪದ ಸೂರ್ಯ ಗ್ರಹಣ! ಇದು ಕಂಕಣ ಸೂರ್ಯಗ್ರಹಣ. ದಕ್ಷಿಣಭಾರತದವರಿಗೆ...

  • ನಗರದ ಕೇಂದ್ರ ಭಾಗವಾದ ಖಾಸಗಿ ಸರ್ವಿಸ್‌ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಬಸ್‌ ನಿಲುಗಡೆಗೆ ಜಾಗವಿಲ್ಲದೆ ಎಲ್ಲೆಂದರಲ್ಲಿ ಬಸ್‌ಗಳನ್ನು ನಿಲುಗಡೆ ಮಾಡಲಾಗುತ್ತದೆ....