ಅಕ್ರಮ ಮರಳು ಸಾಗಿಸುವ ಟ್ರಾಕ್ಟರ್ ಡಿಕ್ಕಿ ಶಾಲಾ ಬಾಲಕನಿಗೆ ಗಂಭೀರ ಗಾಯ
Team Udayavani, Nov 7, 2019, 4:18 PM IST
ಗಂಗಾವತಿ: ಅಕ್ರಮ ಮರಳು ಸಾಗಿಸುವ ಟ್ರಾಕ್ಟರ್ ಗುದ್ದಿದ ಪರಿಣಾಮ ಶಾಲಾ ಬಾಲಕನೊರ್ವನ ತಲೆ ಎದೆ ಕಾಲಿಗೆ ತೀವ್ರವಾಗಿ ಗಾಯಗಳಾದ ಘಟನೆ ಢಣಾಪೂರದಲ್ಲಿ ಜರುಗಿದೆ.
ಮಾರುತಿ ತಂದೆ ನಿಂಗಪ್ಪ (11) ಎಂಬ ವಿದ್ಯಾರ್ಥಿ ಮಧ್ಯಾನ್ಹ ಊಟ ಬಿಡುವಿನ ವೇಳೆ ರಸ್ತೆಯಲ್ಲಿ ಸೈಕಲ್ ಮೇಲೆ ತೆರಳುವಾಗ ಹಿಂದಿನಿಂದ ಬಂದ ಮರಳು ತುಂಬಿದ ಟ್ರ್ಯಾಕ್ಟರ್ ಗುದ್ದಿದೆ. ಈ ಟ್ರಾಕ್ಟರ್ ಹೆಬ್ಬಾಳ ದಲ್ಲಿ ಅಕ್ರಮ ಮರಳು ಭರ್ತಿ ಮಾಡಿಕೊಂಡು ಗಂಗಾವತಿಗೆ ತೆರಳುತ್ತಿತ್ತು. ಇಲ್ಲಿ ಹಗಲು ರಾತ್ರಿ ಎನ್ನದೇ ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಿಸಲಾಗುತ್ತಿದೆ.ಇದರಿಂದ ಢಣಾಪೂರ, ಕಲ್ಗುಡಿ,ಹೆಬ್ಬಾಳ ಸೇರಿ ಸುತ್ತಲಿನ ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದೆ. ಹಲವು ಭಾರಿ ಕಂದಾಯ, ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಸಿಂಗನಗುಂಡು ಬಳಿ ಅಕ್ರಮ ಮರಳು ಸಂಗ್ರಹ: ತಾಲೂಕಿನ ಸಿಂಗನಗುಂಡು ಬಳಿ 100ಕ್ಕೂ ಅಧಿಕ ಟ್ರಿಪ್ ಮರಳು ಅಕ್ರಮವಾಗಿ ಗುಡ್ಡದ ಹತ್ತಿರ ಸಂಗ್ರಹ ಮಾಡಲಾಗಿದ್ದು ಕಂದಾಯ,ಅರಣ್ಯ ಇಲಾಖೆ ಅಧಿಕಾರಿಗಳು ನೋಡಿಯೂ ನಿರ್ಲಕ್ಷ್ಯ ವಹಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿಜಯಪುರ ಜಿಲ್ಲೆಯಲ್ಲಿ ಮಳೆ ಅವಾಂತರ : 25 ಮನೆಗಳಿಗೆ ಹಾನಿ, 3 ಜಾನುವಾರು ಬಲಿ
ಅಕ್ಬರ್,ಟಿಪ್ಪು,ಅಲೆಗ್ಸಾಂಡರನ್ನು ಮಾತ್ರ ಮಹಾನ್ ಎಂದು ಚಿತ್ರಿಸಿದ್ದೇಕೆ?:ಬಿಜೆಪಿ ಪ್ರಶ್ನೆ
ಎಂಟು ವಾರದಲ್ಲಿ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ಮುಗಿಸಲು ಸುಪ್ರೀಂ ನಿರ್ದೇಶನ
ಬೆಂಗಳೂರು; ಕೆರೆ ಪ್ರದೇಶದಲ್ಲಿ ಮನೆ ಕಟ್ಟಲು ಅವಕಾಶವಿಲ್ಲ : ಸಿಎಂ ಬೊಮ್ಮಾಯಿ
ಮಳೆಯ ಆರ್ಭಟ : ತೀರ್ಥಹಳ್ಳಿ ಗದ್ದೆಯ ಹೊಂಡದಲ್ಲಿ ಬಿದ್ದು ವ್ಯಕ್ತಿ ಸಾವು