ತುಂಗಭದ್ರಾ ಒಳ ಹರಿವು ಹೆಚ್ಚಳ: ಬೆಳೆ ಜಲಾವೃತ

Team Udayavani, Aug 11, 2019, 8:34 PM IST

ಕೊಪ್ಪಳ: ತುಂಗಭದ್ರಾ ಜಲಾಶಯದ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹಿನ್ನೀರು ಪ್ರದೇಶದ ಹಲವು ಗ್ರಾಮಗಳಲ್ಲಿ ಬೆಳೆಯು ಸಂಪೂರ್ಣ ಜಲಾವೃತವಾಗಿದೆ. ಕೊಪ್ಪಳ ತಾಲೂಕಿನ ಹ್ಯಾಟಿ, ಮುಂಡರಗಿ, ಬಗನಾಳ, ಗೊಂಡಬಾಳ ಸೇರಿದಂತೆ ಡ್ಯಾಂನ ಮುಂಭಾಗದಲ್ಲೂ ನೀರು ಬಿಡುಗಡೆ ಮಾಡಿದ್ದರಿಂದ ಬೆಳೆ ಹಾನಿಯಾಗಿದೆ.

ಪ್ರತಿ ವರ್ಷ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರೈತರು ಮುಂಗಾರು ಹಂಗಾಮಿನ ಮಳೆಗೆ ಬಿತ್ತನೆ ಮಾಡುತ್ತಾರೆ. ಹಿನ್ನೀರು ಪ್ರದೇಶಕ್ಕೆ ನೀರು ಹರಿದು ಬರುತ್ತದ್ದಂತೆ ಬೆಳೆ ಕಟಾವು ಮಾಡಿ ಒಕ್ಕಲು ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಜಲಾಶಯದ ಒಳ ಹರಿವು ದಿಡೀರ್ ೨ ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹೆಚ್ಚಾಗಿದ್ದರಿಂದ ಬೆಳೆಗೆ ನೀರು ನುಗ್ಗಿದೆ. ಹೀಗಾಗಿ ಲಕ್ಷಾಂತರ ರೂ. ಬೆಳೆಯು ಸಂಪೂರ್ಣ ಜಲಾವೃತವಾಗಿದೆ.

ದುಬಾರಿ ಬೆಲೆಯ ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗೆ ಮಾಡಿದ್ದ ವೆಚ್ಚವೆಲ್ಲ ನದಿಯಲ್ಲಿ ಕೊಚ್ಚಿ ಹೋದಂತಾಗಿದೆ. ಹೀಗಾಗಿ ರೈತ ಚಿಂತೆ ಮಾಡುತ್ತಿದ್ದಾನೆ. ಇರುವ ಬೆಳೆ ಕಟಾವು ಮಾಡಿ ಜಾನುವಾರುಗಳಿಗೆ ಹಾಕಲು ಸಾಧ್ಯವಾಗುತ್ತಿಲ್ಲ. ಹಿನ್ನೀರು ಯಾವ ಪ್ರಮಾಣದಲ್ಲಿ ಅಪಾಯ ತಂದೊಡ್ಡಲಿದೆಯೋ ಎಂದು ಚಿಂತೆ ಮಾಡುತ್ತಿದ್ದಾರೆ. ಡ್ಯಾಂ ಮುಂಭಾಗದ ಎತ್ತರ ಪ್ರದೇಶದಲ್ಲಿ ಮೇವು ಸಂಗ್ರಹಿಸಿಟ್ಟಿದ್ದ ರೈತರು ನದಿಗೆ ನೀರು ಬಿಟ್ಟಿದ್ದರಿಂದ ಮೇವು ನೀರಿನಲ್ಲಿ ಸಂಪೂರ್ಣ ನೆನೆದು ಹೋಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ