
ಗಂಗಾವತಿ: ವಾಲ್ಮೀಕಿ ಸಮುದಾಯದ ಯುವಕರು ಸಂಘಟನೆಯ ಜೊತೆಗೆ ಉನ್ನತ ಹುದ್ದೆಗೆ ಏರಬೇಕು
Team Udayavani, Nov 6, 2022, 4:27 PM IST

ಗಂಗಾವತಿ: ಅತ್ಯಂತ ಹಿಂದುಳಿದ ವಾಲ್ಮೀಕಿ ಸಮುದಾಯದ ಯುವಕರು ಸಂಘಟನೆಯ ಜೊತೆಗೆ ಉನ್ನತ ವಿದ್ಯಾಭ್ಯಾಸದೊಂದಿಗೆ ಉನ್ನತ ಹುದ್ದೆಯಲ್ಲಿ ಇರಬೇಕೆಂದು ಬಿಜೆಪಿ ಯುವ ಮುಖಂಡ ಚನ್ನಕೇಶವ ಹೇಳಿದರು.
ಅವರು ತಾಲೂಕಿನ ವಡ್ಡರಹಳ್ಳಿ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕೆಲವರು ಸಮುದಾಯದ ಯುವಕರನ್ನು ಬಳಕೆ ಮಾಡಿ, ಅವರಿಗೆ ರಾಜಕೀಯ ಹಾಗೂ ಆರ್ಥಿಕವಾಗಿ ನಿರ್ಲಕ್ಷ್ಯ ಮಾಡುತ್ತಾರೆ. ಇದನ್ನು ತಿಳಿದುಕೊಂಡು ಸಮುದಾಯದ ಯುವಕರು ಎಲ್ಲ ಸಮುದಾಯಗಳ ಪ್ರೀತಿ ಗಳಿಸುವ ಮೂಲಕ ಸಂಘಟಿತರಾಗಿ ಸಮಾಜದ ಬೆಳವಣಿಗೆಗೆ ಕೆಲಸ ಮಾಡುವಂತಾಗಬೇಕು ಎಂದರು.
ಜಯಂತ್ಯೋತ್ಸವದಲ್ಲಿ ಬಿಜೆಪಿ ಮುಖಂಡ ಸಿಂಗನಾಳ ವಿರುಪಾಕ್ಷಪ್ಪ, ಕಾಡ ಮಾಜಿ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಟಿ. ರಾಮಣ್ಣ ಗೌಡ, ಟಿ. ದುರ್ಗಪ್ಪ ನಾಯಕ, ಟಿ. ಬುಡ್ಡಪ್ಪ ನಾಯಕ, ಷಣ್ಮುಖ ಗೌಡ, ಚಿನ್ನಪ್ಪ ನಾಯಕ, ಚಂದ್ರು ನಾಯಕ, ಸಿದ್ಧಪ್ಪನಾಯಕ, ಸಂದೀಪ್ ನಾಯಕ, ಶಿವರಾಮ್ ನಾಯಕ, ಕಾಳಿಂಗ ನಾಯಕ, ರಾಜು ನಾಯಕ ಇದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಷ್ಟಗಿ: ಅಪಾಯದ ವಿದ್ಯುದ್ದಿಪದ ಕಂಬ ತೆರವುಗೊಳಿಸಿದ ಪುರಸಭೆ

ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಅಪಾಯವನ್ನು ಆಹ್ವಾನಿಸುತ್ತಿದೆ ವಿದ್ಯುತ್ ಕಂಬ

ಅಂಜನಾದ್ರಿ ಬೆಟ್ಟ ಹತ್ತುವ ವೇಳೆ ಹೃದಯಾಘಾತ: ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತ್ಯು

ಎರಡನೇ ಪಟ್ಟಿಯಲ್ಲಿ ಹೆಸರು ಖಂಡಿತ: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಚಿವ ಅನ್ಸಾರಿ ಆಡಿಯೋ ವೈರಲ್

ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗ ಕೈ ಬಿಡುವ ಭರವಸೆ ನೀಡಿದ ಗಾಲಿ ರೆಡ್ಡಿ