ಹೈಕೋರ್ಟ್ ಸೂಚನೆಯಂತೆ ವಿರೂಪಾಪೂರಗಡ್ಡಿ ಹಳೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ
Team Udayavani, Jul 6, 2022, 6:39 PM IST
ಗಂಗಾವತಿ: ತಾಲೂಕಿನ ವಿರೂಪಾಪೂರಗಡ್ಡಿಯಲ್ಲಿ ಹಳೆಯ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದನ್ನು ತಹಶೀಲ್ದಾರ್ ಯು.ನಾಗರಾಜ ನೇತೃತ್ವದಲ್ಲಿ ತಾಲೂಕು ಆಡಳಿತ ಕಾರ್ಯಾಚರಣೆ ಮೂಲಕ ತೆರವುಗೊಳಿಸಿತು.
ವಿರೂಪಾಪೂರಗಡ್ಡಿ ನಿವಾಸಿ ಪ್ರಸಾದ ಎನ್ನುವವರು ಧಾರವಾಡದ ಹೈಕೋರ್ಟ್ ನಲ್ಲಿ ದಾವೆ ಹೂಡಿ ತಮ್ಮ ಗದ್ದೆಯಲ್ಲಿ ರಸ್ತೆ ನಿರ್ಮಿಸಲಾಗಿದೆ. ಗ್ರಾಮ ನಕ್ಷೆಯ ಪ್ರಕಾರ ಇರುವ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ಕೂಡಲೇ ತೆರವು ಮಾಡಿ ತಮ್ಮ ಒಡೆತನದ ಭೂಮಿಯಲ್ಲಿರುವ ರಸ್ತೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು.
ಮನವಿಯನ್ನು ಆಲಿಸಿದ ಧಾರವಾಡ ಹೈಕೋರ್ಟ್ ಹಳೆಯ ರಸ್ತೆ ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ, ಗ್ರಾಮೀಣಾಭಿವೃದ್ಧಿ, ಅರಣ್ಯ ಮತ್ತು ಸರ್ವೇ ಇಲಾಖೆ ಮತ್ತು ಗ್ರಾ.ಪಂ ಪಿಡಿಒಗೆ ಸೂಚನೆ ನೀಡಿತ್ತು. ಬುಧವಾರ ಬೆಳ್ಳಂಬೆಳ್ಳಿಗ್ಗೆ ಜೆಸಿಬಿಗಳ ಸಮೇತ ತಾಲೂಕು ಮಟ್ಟದ ಅಧಿಕಾರಿಗಳು ವಿರೂಪಾಪೂರ ಗಡ್ಡಿಗೆ ತೆರಳಿ ಗ್ರಾಮ ನಕ್ಷೆಯಂತೆ ಹಳೆಯ ರಸ್ತೆಯನ್ನು ಒತ್ತುವರಿ ಮಾಡಿದ್ದ ಸರ್ವೇ ನಂಬರ್ 40, 41,42,43, 45 ರಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಯು.ನಾಗರಾಜ, ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ, ತಾ.ಪಂ.ಇಒ ಮಹಾಂತೇಶ ಗೌಡ ಪಾಟೀಲ್ ಸೇರಿ ಅರಣ್ಯ, ಆರ್‌ದಿಪಿಆರ್ ಇಲಾಖೆಯ ಅಧಿಕಾರಿಗಳಿದ್ದರು.
ವಿರೂಪಾಪೂರಗಡ್ಡಿಯಲ್ಲಿದ್ದ ಹಳೆಯ ರಸ್ತೆಯನ್ನು ಒತ್ತುವರಿ ಮಾಡಲಾಗಿದ್ದು ಸ್ವಂತ ಗದ್ದೆಯಲ್ಲಿ ಪ್ರಸ್ತುತ ರಸ್ತೆ ಇದ್ದು ಗ್ರಾಮ ನಕ್ಷೆಯಂತೆ ಹಳೆಯ ರಸ್ತೆ ತೆರವುಗೊಳಿಸುವಂತೆ ಧಾರವಾಡ ಹೈಕೋರ್ಟ್ ಸೂಚನೆಯಂತೆ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಸುಮಾರು 2 ಕಿ.ಮೀ.ನಷ್ಟು ಹಳೆಯ ರಸ್ತೆ ಒತ್ತುವರಿಯನ್ನು ಐದಾರು ರೈತರು ಮಾಡಿದ್ದು ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ. ಸಂಬಂಧಪಟ್ಟ ಇಲಾಖೆಯಿಂದ ಹಳೆಯ ರಸ್ತೆ ನಿರ್ಮಿಸಲಾಗುತ್ತದೆ ಎಂದು ತಹಶೀಲ್ದಾರ್ ಯು. ನಾಗರಾಜ ಉದಯವಾಣಿಗೆ ತಿಳಿಸಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ಮಾರಾಮಾರಿ; ಇಬ್ಬರ ಸಾವು
ದೋಟಿಹಾಳ: ನಿಯಂತ್ರಣ ತಪ್ಪಿ ರಸ್ತೆ ಬದಿ ವಾಲಿದ ಬಸ್; ತಪ್ಪಿದ ಭಾರೀ ಅನಾಹುತ
ಕುಷ್ಟಗಿ: ತ್ರಿವರ್ಣ ಧ್ವಜಾ ಇರುವ ಕಂಬದ ಮೇಲೆ ಭಗವಧ್ವಜಾ; ಬಿಜೆಪಿ ವಿರುದ್ಧ ಕೈ ಆಕ್ರೋಶ
ದೋಟಿಹಾಳ: ಕಣ್ಮರೆಯಾಗುತ್ತಿದೆ ಹಳೆ ಕಾಲದ ಮೊಹರಂ ಹೆಜ್ಜೆ ಕುಣಿತ
ಕುಷ್ಟಗಿ: ಮುಸ್ಲಿಂ ಸಮುದಾಯವೇ ಇಲ್ಲದ ಊರಲ್ಲೂ ಮೋಹರಂ ಆಚರಣೆ ..!