ಕುಕನೂರಲ್ಲಿ ಬಿಂದಿಗೆ ಕುಡಿಯುವ ನೀರಿಗಾಗಿ ಅಲೆದಾಟ

Team Udayavani, Apr 29, 2019, 4:02 PM IST

ಕುಕನೂರು: ತಾಲೂಕಿನಲ್ಲಿ ದಿನೇ ದಿನೆ ಬರದ ಭೀಕರತೆ ತೀವ್ರಗೊಳ್ಳುತ್ತಿದ್ದು, ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ. ಪ್ರಾಣಿ-ಪಕ್ಷಿಗಳು ಗುಟುಕು ನೀರಿಗೂ ನರಕಯಾತನೆ ಅನುಭವಿಸುತ್ತಿವೆ.

ಪಟ್ಟಣ ಸೇರಿದಂತೆ ತಾಲೂಕಿನ ಉತ್ತಮುತ್ತಲಿನ ಗ್ರಾಮಗಳಲ್ಲೂ ಕೂಡ ಕುಡಿಯುವ ನೀರಿನ ತಾತ್ಪರ್ಯ ಶುರುವಾಗಿದೆ. ಕೊಡ ನೀರಿಗಾಗಿಯೂ ಅಲೆದಾಡುವ ಸ್ಥಿತಿ ಎದುರಾಗಿದೆ. ಟ್ಯಾಂಕರ್‌ ಮೂಲಕ ಕೆಲಭಾಗಗಳಲ್ಲಿ ನೀರು ಒದಗಿಸಲಾಗುತ್ತಿದ್ದರೂ ನೀರಿನ ಸಮಸ್ಯೆ ಮಾತ್ರ ತಿಳಿಗೊಳ್ಳದಷ್ಟು ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೆಲವು ಸಂಘ ಸಂಸ್ಥೆಗಳು ಟ್ಯಾಂಕರ್‌ ಮೂಲಕ ಉಚಿತವಾಗಿ ವಿವಿಧ ಕಾಲೋನಿಗಳಿಗೆ ನೀರು ಕಲ್ಪಿಸಲಾಗುತ್ತಿದ್ದರೆ. ಆ ಟ್ಯಾಂಕರ್‌ ನೀರಿನ ಹೆಸರಿನಲ್ಲಿ ವಾರ್ಡ್‌ನ ಸದಸ್ಯರು ಪಂಚಾಯಿತಿ ಹಣವನ್ನು ಕಬಳಿಸುವ ಹುನ್ನಾರ ಮಾಡುತ್ತಿದ್ದರೆ.ಇನ್ನೂ ಕೆಲವು ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರು ತಮ್ಮ ಕಾಲೋನಿಯಲ್ಲಿನ ನೀರಿನ ಸಮಸ್ಯೆಯನ್ನು ತೋರಿಸುವುದರ ಮೂಲಕ ಪಂಚಾಯತ್‌ ಅಭಿವೃದ್ಧಿ ಅನುದಾನದಲ್ಲಿ ಬೋರ್‌ವೆಲ್ ಕೊರೆಸುವ ಒಪ್ಪಿಗೆ ಪತ್ರ ಪಡೆದು. ಬೋರ್‌ವೆಲ್ ಏಜೆನ್ಸಿಯವರಿಗೆ ಕಮಿಷನ್‌ ನೀಡಿ 100ರಿಂದ 200 ಅಡಿವರೆಗೆ ಕೊರೆಸಿ 400ರಿಂದ 500 ಅಡಿ ಎಂಬ ಲೆಕ್ಕ ಪಡೆದು ಬೋಗಸ್‌ ಬಿಲ್ನ್ನು ತೋರಿಸಿ ಪಂಚಾಯಿತಿ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲವು ಗ್ರಾಪಂ, ಪಪಂ ಸದಸ್ಯರು ಆರೋಪಿಸುತ್ತಾರೆ. ಇದಲ್ಲದೆ ಟ್ಯಾಂಕರ್‌ ಮೂಲಕ ಕಾಲೋನಿಗಳಿಗೆ ನೀರು ಕಲ್ಪಿಸಲಾಗುತ್ತಿದೆ. ಇದು ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತಾಗಿದೆ.

ಇತ್ತೀಚಿನ ದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತದಿಂದ ಇರುವ ಅನುದಾನ ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರೆ. ಇನ್ನೊಂದೆಡೆ ಕುಡಿಯುವ ನೀರಿನ ಸಮಸ್ಯೆ ತಗ್ಗಿಸಲು ಸರಕಾರದಿಂದ ಬರಬೇಕಾದ ಸಮರ್ಪಕ ಅನುದಾನವೂ ಬಂದಿಲ್ಲ ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಸಾರ್ವಜನಿಕರಿಗೆ ಹೇಳುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕುಷ್ಟಗಿ: ಜನಸಾಮನ್ಯರ ಅಗತ್ಯ ವಸ್ತು ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಖಂಡಿಸಿ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದ ನೇತೃತ್ವದಲ್ಲಿ ಮಹಿಳೆಯರು, ಇಲ್ಲಿನ...

  • ಕೊಪ್ಪಳ: ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಯ ಬೆಳವಣಿಗೆಯಲ್ಲಿ ಅನುವಾದ ಸಾಹಿತ್ಯವು ಪ್ರಮುಖ ಪಾತ್ರ ವಹಿಸಿದೆ ಎಂದು ಹಿರಿಯ ಸಾಹಿತಿ, ಅನುವಾದಕ ಡಾ| ಕೆ.ಬಿ. ಬ್ಯಾಳಿ...

  • ಕೊಪ್ಪಳ: ನಗರ ಸಮೀಪದ 26 ಕಿಲೋ ಮೀಟರ್‌ ಹಳ್ಳ ಸ್ವಚ್ಛ ಮಾಡಿ ದೇಶದ ಗಮನ ಸೆಳೆದ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಾಲೂಕಿನ ಭೈರಾಪೂರ ಗ್ರಾಮ...

  • ಕುಷ್ಟಗಿ: ಮಾರುಕಟ್ಟೆಯಲ್ಲಿ ವಿವಿಧ ಕಂಪನಿ, ಬ್ರ್ಯಾಂಡ್‌ಗಳ ಪೊರಕೆಗಳ ಅಬ್ಬರಕ್ಕೆ ಈಚಲು ಗರಿಯಿಂದ ತಯಾರಿಸಿದ ಈಚಲು, ಹುಲ್ಲಿನ ಪೊರಕೆ ಬೇಡಿಕೆ ಕ್ರಮೇಣ ಮಂಕಾಗುತ್ತಿದೆ....

  • ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿ ದೊಡ್ಡ ಗ್ರಾಪಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹನುಮಸಾಗರ ಗ್ರಾಮದ ಪ್ರವಾಸಿ ಮಂದಿರ(ಐಬಿ) ಕುಡಿಯುವ ನೀರು ಹಾಗೂ ಸಿಬ್ಬಂದಿ...

ಹೊಸ ಸೇರ್ಪಡೆ