115 ಗ್ರಾಪಂಗಳಿಗೆ ತ್ಯಾಜ್ಯ ಘಟಕ

Team Udayavani, Apr 7, 2021, 4:25 PM IST

115 ಗ್ರಾಪಂಗಳಿಗೆ ತ್ಯಾಜ್ಯ ಘಟಕ

ಕೊಪ್ಪಳ: ತ್ಯಾಜ್ಯ ಮುಕ್ತ ಗ್ರಾಮಗಳನ್ನಾಗಿಸಲು ಜಿಲ್ಲಾಡಳಿತವು ಸ್ವಚ್ಛ ಭಾರತ್‌ ಮಿಷನ್‌ನಡಿ 115 ಗ್ರಾಪಂನಲ್ಲಿ ಮೊದಲ ಬಾರಿಗೆ ಘನತ್ಯಾಜ್ಯ ನಿರ್ವಹಣಾ ಘಟಕಗಳ ಆರಂಭಕ್ಕೆಮುಂದಾಗಿದೆ. ಈಗಾಗಲೇ ಹೊಸಳ್ಳಿ ಬಳಿಯ ಬಹುಗ್ರಾಮ ತ್ಯಾಜ್ಯ ವಿಲೇವಾರಿ ಘಟಕದ ಮಾದರಿಯಲ್ಲೇ ಸಣ್ಣ ಪ್ರಮಾಣದಲ್ಲಾದರೂ ಘಟಕ ಆರಂಭಿಸಿ ಮನೆ ಮನೆ ಕಸ ಸಂಗ್ರಹಣೆಗೂ ಯೋಜಿಸಲಾಗಿದೆ.

ಹೌದು.. ಕೇಂದ್ರ ಹಾಗೂ ರಾಜ್ಯ ಸರ್ಕಾರವು ಇತ್ತೀಚಿಗೆ ತ್ಯಾಜ್ಯ ಮುಕ್ತ ನಗರಗಳನ್ನಾಗಿಮಾಡಲು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ನಗರಗಳು ಸ್ವತ್ಛಂದವಾಗಿದ್ದರೆ ನೈರ್ಮಲಿಕರಣ, ಆರೋಗ್ಯ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜನರಲ್ಲಿಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ನಗರಸಭೆ,ಪುರಸಭೆ, ಪಪಂಗಳ ವ್ಯಾಪ್ತಿಯಲ್ಲಿ ಈಗಾಗಲೇ ಘನತ್ಯಾಜ್ಯ ವಿಲೇವಾರಿ ಘಟಕಗಳುಕಾರ್ಯ ನಿರ್ವಹಿಸುತ್ತಿವೆ. ನಗರದಿಂದ ಉತ್ಪತ್ತಿಯಾಗುವ ಕಸಗಳನ್ನು ಬೇರ್ಪಡಿಸುವ ಕೆಲಸವೂ ನಡೆಯುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇಂತಹ ವ್ಯವಸ್ಥೆ ಇಲ್ಲ. ತಾಲೂಕಿನ ಹೊಸಳ್ಳಿ ಬಳಿಯ ಬಹುಗ್ರಾಮ ಘನ ತ್ಯಾಜ್ಯವಿಲೇವಾರಿ ಘಟಕ ಹೊರತುಪಡಿಸಿದರೆ ಯಾವುದೇ ಗ್ರಾಪಂನಲ್ಲಿ ಘಟಕ ಇಲ್ಲ.

ಹಾಗಾಗಿ ಗ್ರಾಮೀಣ ಜನತೆ ಎಲ್ಲೆಂದರಲ್ಲಿ ಕಸ ಹಾಕುವುದು, ತ್ಯಾಜ್ಯ ಬಿಸಾಡುವುದು.ಮನೆ ಮುಂದೆ ತಿಪ್ಪೆ ಹಾಕಿಕೊಳ್ಳುತ್ತಾರೆ. ಇದರಿಂದಲೇ ಗ್ರಾಮದ ನೈರ್ಮಲ್ಯ ಹಾಳಾಗಿ ರೋಗ ರುಜಿನಕ್ಕೂ ಕಾರಣವಾಗುತ್ತಿದೆ.ಇದನ್ನು ತಪ್ಪಿಸಲು ಹಾಗೂ ಜನರಲ್ಲಿ ಕಸದಿಂದ ಭವಿಷ್ಯದಲ್ಲಾಗುವ ದುಷ್ಪರಿಣಾಮಗಳಕುರಿತು ಜಾಗೃತಿ ಮೂಡಿಸಲು ಪ್ರತಿಗ್ರಾಮ ಪಂಚಾಯಿತಿಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಿಸಲು ಯೋಜನೆರೂಪಿಸಿದೆ. ಜಿಲ್ಲೆಯಲ್ಲಿ 153 ಗ್ರಾಮ ಪಂಚಾಯತಿಗಳಿದ್ದು, ಈ ಪೈಕಿ 115 ಗ್ರಾಮಪಂಚಾಯಿತಿಗಳಲ್ಲಿ ಘಟಕ ಆರಂಭಕ್ಕೆ ಜಿಲ್ಲಾಡಳಿತ ಅಸ್ತು ಎಂದಿದೆ.

ಗ್ರಾಪಂ ವ್ಯಾಪ್ತಿಯ ಎರಡ್ಮೂರು ಹಳ್ಳಿಗಳ ಮಧ್ಯೆ ಬರುವ ಸರ್ಕಾರಿ ಜಮೀನು,ಕಂದಾಯ, ಗಾಯರಾಣ, ಗಾವಠಾಣ ಜಾಗದಲ್ಲಿ ಘಟಕ ಆರಂಭಿಸಲು ಮುಂದಾಗಿಈಗಾಗಲೇ ಸ್ಥಳ ಗುರುತು ಮಾಡಿದೆ. ಅಲ್ಲಿ ಸ್ವಚ್ಛ ಭಾರತ ಮಿಷನ್‌ನಡಿ ಗ್ರಾಪಂ ವ್ಯಾಪ್ತಿಯ ಜನಸಂಖ್ಯೆಯ ಆಧಾರದ ಮೇಲೆ ಅನುದಾನ ಬಿಡುಗಡೆ ಮಾಡಿ ಘಟಕಕ್ಕೆ ಬೇಕಾದ ಸೌಲಭ್ಯ ಒದಗಿಸಲು ಜಿಪಂ ಮುಂದಾಗಿದೆ.

ಉಳಿಕೆ ಅನುದಾನವನ್ನು ಉದ್ಯೋಗ ಖಾತ್ರಿಯೋಜನೆಯಡಿ ಕಸ ಬೇರ್ಪಡಿಸುವ ತೊಟ್ಟಿನಿರ್ಮಾಣಕ್ಕೆ, ಶೆಡ್‌ಗಳ ನಿರ್ಮಾಣ ಸೇರಿ ಇತರೆ ಘಟಕಕ್ಕೆ ಬೇಕಾದ ವ್ಯವಸ್ಥೆ ಕೈಗೊಳ್ಳಲೂ 115 ಗ್ರಾಪಂಗಳ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.

ಟ್ರ್ಯಾಕ್ಟರ್, ಮಿನಿ ಟಿಪ್ಪರ್ ಖರೀದಿ:

ಎಸ್‌ಬಿಎಂನ ಅನುದಾನ ಹಾಗೂ ಗ್ರಾಪಂ ಸ್ಥಳೀಯ ಅನುದಾನದಲ್ಲಿ ಮನೆ ಮನೆಗೆಕಸ ಸಂಗ್ರಹಿಸುವ ವಾಹನ ಖರೀದಿಸಲು ಜಿಪಂ ಯೋಜನೆ ರೂಪಿಸಿದೆ. ಅತಿ ಹೆಚ್ಚು ಜನಸಂಖ್ಯೆ ಇರುವ ಗ್ರಾಪಂನಲ್ಲಿ ಟ್ರ್ಯಾಕ್ಟರ್‌ ಕಡಿಮೆ ಜನಸಂಖ್ಯೆ ಇರುವ ಗ್ರಾಪಂನಲ್ಲಿ ಮಿನಿ ಟಿಪ್ಪರ್‌ ಸೇರಿ ಹೀಗೆ ಅಗತ್ಯಕ್ಕೆ ತಕ್ಕಂತೆ ವಾಹನ ಖರೀದಿಸಿ ಕಸ ಸಂಗ್ರಹಣೆ ಮಾಡಿ ತ್ಯಾಜ್ಯ ಘಟಕದಲ್ಲಿ ಕಸವನ್ನು ಇರಿಸಿಅದನ್ನು ಬೇರ್ಪಡಿಸಿ ಅದರಿಂದ ಬರುವಗೊಬ್ಬರವನ್ನು ಸ್ಥಳೀಯವಾಗಿಯೇ ರೈತರಿಗೆಪೂರೈಕೆ ಮಾಡಿ ಆಯಾ ಗ್ರಾಪಂಗಳೇ ಘಟಕದ ನಿರ್ವಹಣೆಯ ಜವಾಬ್ದಾರಿ ನೋಡಿಕೊಳ್ಳುವ ಹೊಣೆ ನೀಡಲಾಗಿದೆ.

ಈಗಾಗಲೇ ತಾಲೂಕಿನ ಹೊಸಳ್ಳಿ ಬಳಿ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿಘಟಕವು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದು,ಹಲವು ಜಿಲ್ಲೆಗಳ ಜಿಪಂ, ತಾಪಂ ಹಾಗೂಗ್ರಾಪಂ ಸದಸ್ಯರು ಈ ಘಟಕ್ಕೆ ಭೇಟಿ ನೀಡಿಇಲ್ಲಿನ ವ್ಯವಸ್ಥೆ, ನಿರ್ವಹಣೆಯ ವಿಧಾನ ಹಾಗೂ ಕಸ ಬೇರ್ಪಡಿಸುವ ವಿಧಾನವನ್ನು ಅರಿತು ತಮ್ಮ ತಮ್ಮ ಜಿಲ್ಲೆಗಳಲ್ಲಿ ಈ ಮಾದರಿಯನ್ನು ಅನುಕರಣೆ ಮಾಡುತ್ತಿದ್ದು,ಕೊಪ್ಪಳ ಜಿಲ್ಲೆಯೂ ಉಳಿದ ಗ್ರಾಪಂನಲ್ಲಿಇಂತಹ ಘನತ್ಯಾಜ್ಯ ವಿಲೇವಾರಿ ಘಟಕಆರಂಭಕ್ಕೆ ಅಸ್ತು ಎಂದಿರುವುದು ಗಮನಾರ್ಹ ವಿಷಯವಾಗಿದೆ.

ಪ್ರತಿ ಹಳ್ಳಿಗಳು ಸ್ವಚ್ಛವಾಗಿದ್ದರೆ ರೋಗರುಜಿನ ನಿಯಂತ್ರಣಕ್ಕೆ ಬರಲಿವೆ. ಜಿಪಂಅಂದುಕೊಂಡಂತೆ ಗ್ರಾಪಂನ ತ್ಯಾಜ್ಯನಿರ್ವಹಣಾ ಘಟಕದ ಮೇಲೆ ನಿಗಾಇರಿಸಿದರೆ ಮಾತ್ರ ಘಟಕಗಳು ತಲೆ ಎತ್ತಲಿವೆ.ಇಲ್ಲದಿದ್ದರೆ ಹಳ್ಳಿಗಳು ಮತ್ತೆ ಕಸದಿಂದ ಗಬ್ಬೆದ್ದು ನಾರಲಿವೆ.

ಜಿಲ್ಲೆಯ 115 ಗ್ರಾಪಂಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ಆರಂಭಕ್ಕೆ ಜಿಪಂನಿಂದ ಅನುಮತಿ ನೀಡಲಾಗಿದೆ. ಸರ್ಕಾರಿ ಜಮೀನಿನಲ್ಲಿ ಘಟಕ ಆರಂಭಿಸಲಾಗುವುದು.ಎಸ್‌ಬಿಎಂ ಅನುದಾನದಲ್ಲಿ ಘಟಕಕ್ಕೆ ಬೇಕಾದ ಸೌಲಭ್ಯ ಕಲ್ಪಿಸುವ ವ್ಯವಸ್ಥೆಮಾಡಲಾಗುವುದು. ಕಸ ಸಂಗ್ರಹಣೆಗೆ ಮಿನಿ ವಾಹನಖರೀದಿಸಲು ಸೂಚಿಸಲಾಗಿದೆ.ಉಳಿದ ಗ್ರಾಪಂನಲ್ಲಿ 2-3 ಗ್ರಾಪಂನಲ್ಲಿ ಕ್ಲಸ್ಟರ್‌ ಮಾಡಿ ಜಾಗದ ವ್ಯವಸ್ಥೆ ಮಾಡಿ ಘಟಕ ಆರಂಭಕ್ಕೆ ಒತ್ತು ನೀಡಲಾಗುವುದು.ಟಿ. ಕೃಷ್ಣಮೂರ್ತಿ, ಜಿಪಂ ಯೋಜನಾ ನಿರ್ದೇಶಕರು, ಕೊಪ್ಪಳ

ದತ್ತು ಕಮ್ಮಾರ

ಟಾಪ್ ನ್ಯೂಸ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ

Koppala: ಬೆಂಬಲಿಗರ ಜೊತೆ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಸಂಸದ ಸಂಗಣ್ಣ ಕರಡಿ…

Koppala: ಬೆಂಬಲಿಗರ ಜೊತೆ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಸಂಸದ ಸಂಗಣ್ಣ ಕರಡಿ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.