ಶಾಲೆಯಿಂದ ದೂರವುಳಿದು ಪ್ರತಿಭಟನೆ

ಹೆದ್ದಾರಿಯಲ್ಲಿ ಅಂಡರ್‌ ಪಾಸ್‌ ನೀಡುವಂತೆ ಒತ್ತಾಯ •3 ದಿನಗಳಿಂದ ಶಾಲೆಗೆ ತೆರಳದೇ ಹೋರಾಟದ ಸಂದೇಶ

Team Udayavani, Aug 9, 2019, 1:39 PM IST

ಕೂಡ್ಲಿಗಿ: ಮೇಲ್ಸೇತುವೆ ಕೆಳಗಡೆ ಅಂಡರ್‌ ಪಾಸ್‌ ನೀಡುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು

ಕೂಡ್ಲಿಗಿ: ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶಾಲೆಯ ಸಮೀಪ ಅಂಡರ್‌ ಪಾಸ್‌ ನೀಡದಿದ್ದರಿಂದ ಬೇಸತ್ತ ಪೋಷಕರು ತಮ್ಮ ಮಕ್ಕಳನ್ನು ಮೂರು ದಿನಗಳಿಂದ ಶಾಲೆಗೆ ಹೋಗದಂತೆ ತಡೆ ಹಿಡಿಯುವ ಮೂಲಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.

ಶಿವಪುರ ಗ್ರಾಮದಲ್ಲಿ ಈಗಾಗಲೇ ಹಗರಿಬೊಮ್ಮನಹಳ್ಳಿ ಹಾಗೂ ಬಂಡೇಬಸಾಪುರ ತಾಂಡದ ಕಡೆ ಹೋಗುವ ಎರಡು ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ ಪಾಸ್‌ ನಿರ್ಮಿಸಿದ್ದು, ಈ ಎರಡು ಅಂಡರ್‌ ಪಾಸ್‌ಗಳ ಮಧ್ಯೆ ಮತ್ತೂಂದು ಅಂಡರ್‌ ಪಾಸ್‌ ಮಾಡುವ ಮೂಲಕ ಶಾಲೆಯ ಮಕ್ಕಳಿಗೆ ಗ್ರಾಮದ 2 ಕಡೆಗೂ ಸಂಚರಿಸಲು ಅನುಕೂಲವಾಗುತ್ತದೆ ಎಂಬುದು ಇಲ್ಲಿಯ ಪೋಷಕರ ಒತ್ತಾಯವಾಗಿದೆ.

ಈ ಬಗ್ಗೆ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚಿತ್ರದುರ್ಗ ಕೇಂದ್ರದ ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಪೋಷಕರ ದೂರಾಗಿದೆ. ಹೆದ್ದಾರಿಯಲ್ಲಿ ಈಗ ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಸಂದರ್ಭದಲ್ಲಿ ಅಂಡರ್‌ ಪಾಸ್‌ ಮಾಡಿಸದಿದ್ದರೆ ನಮ್ಮ ಮಕ್ಕಳು ಶಾಲೆಗೆ ಹೋಗಲು ಸುತ್ತುವರಿದು ಹೋಗಬೇಕಾದ ಅನಿವಾರ್ಯತೆ ಎಂಬುದು ಪೋಷಕರದ್ದಾಗಿದೆ.

ಸ್ಥಳಕ್ಕೆ ತಹಶೀಲ್ದಾರ್‌ ಭೇಟಿ: ಮೂರು ದಿನಗಳಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಇರುವುದರಿಂದ ಶಾಲೆಯ ಕೋಣೆಗಳೆಲ್ಲವೂ ಖಾಲಿ ಖಾಲಿಯಾಗಿತ್ತು. ಹೀಗಾಗಿ ಗುರುವಾರ ಪೋಷಕರ ಮನವೊಲಿಸಲು ಕೂಡ್ಲಿಗಿ ತಹಶೀಲ್ದಾರ್‌ ಮಹಾಬಲೇಶ್ವರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪೋಷಕರು ಶಾಲಾ ಮಕ್ಕಳಿಗಾಗಿ ಚಿಕ್ಕದಾಗಿಯಾದರೂ ಅಂಡರ್‌ ಪಾಸ್‌ ನೀಡಬೇಕೆಂದು ಪಟ್ಟು ಹಿಡಿದು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೇ ಪ್ರತಿಭಟನೆ ಮಾಡುತ್ತಿದ್ದಾರೆ.

ಮುಖಂಡರಾದ ಜಯನಂದಸ್ವಾಮಿ, ಹುಲುಗಪ್ಪ, ಭೀಮಪ್ಪ, ತಳವಾರ ಬಸವರಾಜ, ಟಿ.ಕೆಂಚಪ್ಪ, ಬಾಗಳಿ ಚಿನ್ನಾಪ್ರಪ್ಪ, ಗ್ರಾಮದ ಮುಖಂಡರು, ಪೋಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ