ರೈತರಿಂದ ಕೊನೆಗೂ ಕೃಷಿ ಕಾರ್ಯ ಆರಂಭ

ವಾರದೊಳಗೆ ಜಲಾಶಯ ಭರ್ತಿಯಾಗುವ ಆಶಾಭಾವ

Team Udayavani, Jul 20, 2019, 3:44 PM IST

20-July-35

ಕುರುಗೋಡು: ಪಟ್ಟಣದ ಸುತ್ತಮುತ್ತ ಭಾಗದಲ್ಲಿ ರೈತರು ಸಸಿಮಡಿ ಹಾಕಲು ಮುಂದಾಗಿರುವುದು.

ಕುರುಗೋಡು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ರೈತರು ಜಮೀನನ್ನು ಹದಗೊಳಿಸಿ ಸಸಿಮಡಿ ಹಾಕಲು ಮುಂದಾಗಿದ್ದಾರೆ.

ಈಗಾಗಲೇ ಮೇಲ್ಭಾಗದಲ್ಲಿ ಅಲ್ಪಮಳೆ ಸುರಿದು ಕಳೆದ ನಾಲ್ಕು-ಐದು ದಿನಗಳಿಂದ ರೈತರ ಜೀವನಾಡಿಯಾದ ತುಂಗಭದ್ರಾ ಡ್ಯಾಂಗೆ ನೀರು ಬರುವುದರಿಂದ, ಮುಂದಿನ ತಿಂಗಳ ಮೊದಲ ವಾರದೊಳಗೆ ಜಲಾಶಯ ಭರ್ತಿಗೊಂಡು ನದಿಗೆ ನೀರು ಬಿಡುವ ಅಶಾಭಾವ ಹೊಂದಿ ರೈತರು ತಮ್ಮ ಜಮೀನನ್ನು ಹದಗೊಳಿಸಿ ಭತ್ತದ ಸೋನಾ ಬೀಜ ಸೇರಿದಂತೆ ವಿವಿಧ ರೀತಿಯ ಬೀಜಗಳ ಸಸಿಮಾಡಿ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಈ ಭಾಗದಲ್ಲಿ ಹಳ್ಳ ಮತ್ತು ಬೋರ್‌ವೆಲ್ ಹೊಲಗದ್ದೆಗಳಿಗೆ ಬಾರಿ ಬೇಡಿಕೆ ಹೆಚ್ಚಿದ್ದು, ಬೋರ್‌ವೆಲ್ ಹಾಗೂ ಹಳ್ಳದ ಪ್ರದೇಶದಲ್ಲಿ ಹಾಕಿರುವ ಸಸಿಗಳನ್ನು ಖರೀದಿ ಮಾಡಲು ನಾನಾ ಭಾಗದ ರೈತರು ಮುಂಗಡವಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಹಲವು ಬೇರೆ ಕಡೆ ರೈತರು ತಮ್ಮ ಹೊಲಗಳಲ್ಲಿ ಸಸಿ ಮಡಿ ಹಾಕಲು ನೀರಿನ ವ್ಯವಸ್ಥೆ ಇಲ್ಲದ ಕಾರಣ ಬೋರ್‌ವೆಲ್ ಪ್ರದೇಶದ ಹೊಲಗದ್ದೆಗಳ ಜಮೀನಿನಲ್ಲಿ ಸೋನಮಸೂರಿ ಬೀಜ ಹಾಕಲು ಚೀಲಕ್ಕೆ (75 ಕೆಜಿ) 3ರಿಂದ 4 ಸಾವಿರವರೆಗೆ ಬೇಡಿಕೆಯಿದೆ. ಪೂರ್ವವಾಗಿ ಸಸಿಮಾಡಿ ಬೀಜ ಹಾಕುವುದರಿಂದ ಸರಿಯಾದ ಸಮಯಕ್ಕೆ ಮುಂದಿನ ತಿಂಗಳ ನಂತರ ಹೊಲಗಳಲ್ಲಿ ಭತ್ತದ ಸಸಿ ನಾಟಿ ಮಾಡಲು ಅನುಕೂಲವಾಗುತ್ತದೆ ಎಂದು ಗ್ರಾಮದ ಪ್ರಗತಿಪರ ರೈತರ ಆಶಯವಾಗಿದೆ.

ಒಟ್ಟಾರೆಯಾಗಿ ಸರಿಯಾದ ಸಮಯಕ್ಕೆ ಮಳೆ ಅಗದೆ ಮತ್ತು ಜಲಾಶಯದಲ್ಲಿ ಸರಿಯಾಗಿ ನೀರಿಲ್ಲದ ಕಾರಣ ಇದನ್ನೇ ಅವಲಂಬಿಸಿರುವ ರೈತರು ಕೆಲಸವಿಲ್ಲದೆ ಕುಳಿತ್ತಿದ್ದು ಮೂರು ನಾಲ್ಕು ದಿನಗಳಿಂದ ಅಲ್ಪ ಮಳೆ ಆಸರೆಗೆ ಹಾಗೂ ಮೆಲ್ಭಾಗದ ಮಳೆಯಿಂದ ಜಲಶಾಲಯಕ್ಕೆ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಕೆಲ ರೈತರು ಸಸಿ ಮಡಿ ಹಾಕಲು ಮುಂದಾಗಿದ್ದಾರೆ. ಇನ್ನೂ ಹಲವು ರೈತರು ಭತ್ತ ನಾಟಿ ಮಾಡಲು ಮುಂದಾಗಿದ್ದಾರೆ. ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಬರುವ ಗುತ್ತಿಗನೂರು, ಗೆಣಿಕೆಹಾಳು, ನೆಲ್ಲೂಡಿ, ಎಚ್. ವೀರಾಪುರ, ನೆಲ್ಲೂಡಿ ಕೊಟ್ಟಾಲ್, ಮಣ್ಣೂರು, ಸುಗೂರು, ಸೋಮಲಾಪುರ, ಚೀಟಿಗಿನಹಾಳ್‌ನಲ್ಲಿ ಬೀಜ ಹಾಕುವುದು ಭರದಿಂದ ಸಾಗಿದೆ.

ಟಾಪ್ ನ್ಯೂಸ್

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲು

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ಪಬ್‌ಜಿ ಸೈಡ್‌ ಎಫೆಕ್ಟ್: ಕುಟುಂಬದ ನಾಲ್ವರನ್ನು ಕೊಂದ ಬಾಲಕ

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವು

ರಾಜ್ಯದಲ್ಲಿಂದು 31,198 ಮಂದಿಗೆ ಸೋಂಕು ದೃಢ: 50 ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dds

ಸೊರಬ ಪುರಸಭೆ : ಪುನಃ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ

chikkamagalore news

ಹುಲಿ ಗಣತಿಯಲ್ಲಿ ಕಾಫಿ ನಾಡಿಗೆ ಪ್ರಥಮ ಸ್ಥಾನ?

sagara news

ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಮನವಿ

chitradurga news

ಸುಶಿಕ್ಷಿತರಿಂದಲೇ ರಸ್ತೆ ಒತ್ತುವರಿ ಸರಿಯೇ?: ತಿಪ್ಪಾರೆಡ್ಡಿ

1-ddsfsdf

ನಾಗರ ಹಾವು ಮತ್ತು ನಾಯಿ ನಡುವೆ ಘೋರ ಕಾದಾಟ: ಎರಡೂ ಜೀವ ಅಂತ್ಯ

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ರಾಸಾಯನಿಕ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಏಶ್ಯ ಕಪ್‌ ಹಾಕಿ: ಭಾರತದ ವನಿತೆಯರಿಗೆ ಕಂಚಿನ ಪದಕ

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ಪ್ರೊ ಕಬಡ್ಡಿ ಲೀಗ್‌: ದ್ವಿತೀಯ ಸ್ಥಾನಕ್ಕೆ ನೆಗೆದ ಪಾಟ್ನಾ ಪೈರೆಟ್ಸ್‌

ನಟಿ ಶ್ವೇತಾ ತಿವಾರಿ ವಿರುದ್ಧ ದೂರು

ಕಿರುತೆರೆ ನಟಿ ಶ್ವೇತಾ ತಿವಾರಿ ವಿರುದ್ಧ ಎಫ್​ಐಆರ್​ ದಾಖಲು

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

ಭಾರ್ತಿ ಏರ್ಟೆಲ್‌ನಲ್ಲಿ ಗೂಗಲ್‌ ಹೂಡಿಕೆ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.