ಕುರುಗೋಡಿನಲ್ಲಿ ತಾಲೂಕು ಕ್ರೀಡಾಂಗಣ!

ತಾಲೂಕಾಗಿ ವರ್ಷಗಳೇ ಗತಿಸಿದರೂ ಮೈದಾನ ಕೊರತೆಕ್ರೀಡಾಳುಗಳಿಗಿಲ್ಲ ಸೌಲಭ್ಯ

Team Udayavani, Dec 7, 2019, 12:25 PM IST

„ಸುಧಾಕರ್‌ ಮಣ್ಣೂರು
ಕುರುಗೋಡು:
ತಾಲೂಕಾಗಿ ವರ್ಷಗಳೇ ಕಳೆದರೂ ಪಟ್ಟಣದಲ್ಲಿ ಕ್ರೀಡಾಪಟುಗಳ ಅಭ್ಯಾಸಕ್ಕೆ ಸೌಕರ್ಯದ ಕೊರತೆ ಕಾಡುತ್ತಿದೆ. ತಾಲೂಕಿನಲ್ಲಿ ಕ್ರೀಡಾಂಗಣ ಇಲ್ಲದ ಕಾರಣ ಕ್ರೀಡಾ ಚಟುವಟಿಕೆಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.

ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಕ್ರೀಡಾಂಗಣದ ಕೊರತೆಯಿಂದ ಕ್ರೀಡಾ ಅಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೆ ಕ್ರೀಡಾ ಪಟುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.

ಪಟ್ಟಣದ ವಿಶಾಲವಾದ ಹೈಸ್ಕೂಲ್‌ ಮೈದಾನದಲ್ಲಿ ಪ್ರತಿ ವರ್ಷ ತಾಲೂಕು ಮಟ್ಟದ ಕ್ರೀಡಾಕೂಟಗಳು ನಡೆಯುತ್ತವೆ. ಅದರೆ ಅವುಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇಲ್ಲಿಗೆ ಬರುವ ಕ್ರೀಡಾಪಟುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯವಿಲ್ಲ. ಪಕ್ಕದ ವಸತಿ ನಿಲಯಗಳಿಗೆ ಹಾಗೂ ಶಾಲಾ-
ಕಾಲೇಜುಗಳಲ್ಲಿ ಹೋಗಿ ನೀರು ಮತ್ತು ಶೌಚ ಮಾಡಿಕೊಳ್ಳಬೇಕಾಗಿದೆ.

ಹೈಸ್ಕೂಲ್‌ ಮೈದಾನದಲ್ಲಿ ವೀಕ್ಷಣೆ ಮಾಡಲು ಹೊರತುಪಡಿಸಿದರೆ ಬೇರೆ ಯಾವುದೇ ಸೌಲಭ್ಯಗಳಿಲ್ಲ. ಕ್ರೀಡಾಕೂಟ ನೋಡಲು ಬರುವ ಸಾರ್ವಜನಿಕರು ನಿಂತುಕೊಂಡು ನೋಡಬೇಕಾಗಿದೆ. ಪಟ್ಟಣದಲ್ಲಿ ಕ್ರೀಡಾಂಗಣವಿಲ್ಲದ ಇರುವುದರಿಂದ ಮೈದಾನದಲ್ಲಿ ಸಂಜೆ ವೇಳೆ ಕೆಲ ಮಂದಿ ಕ್ರಿಕೆಟ್‌ ಆಟವಾಡುತ್ತಾರೆ. ಅದನ್ನು ಬಿಟ್ಟರೆ ಬೇರೆ ಯಾವ ಕ್ರೀಡೆಗಳು ನಡೆಯದೆ ಪರಿಣಾಮ ಕ್ರೀಡಾ ಪಟುಗಳು ತಾಲೂಕು ಕ್ರೀಡಾಂಗಣದ ವ್ಯವಸ್ಥೆಯ ನೀರಿಕ್ಷೆಯಲ್ಲಿ ತೊಡಗಿದ್ದಾರೆ.

ಈಜು ಕೊಳ ಸೌಲಭ್ಯ ಮರೀಚಿಕೆ: ಬಹುತೇಕ ಕ್ರೀಡಾಕೂಟಗಳು ಹೈಸ್ಕೂಲ್‌ ಮೈದಾನದಲ್ಲಿ ನಡೆಯುತ್ತಿದ್ದು, ಇಲ್ಲಿಗೆ ಬರುವ ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಮತ್ತು ರಜೆ ದಿನಗಳಲ್ಲಿ ಮಕ್ಕಳು ದೇಹ ತಂಪಾಗಿರಿಸಲು ಈಜುಕೊಳದ ವ್ಯವಸ್ಥೆ ಇಲ್ಲದಾಗಿದೆ.

ವ್ಯಾಯಾಮ ಶಾಲೆಯಿಲ್ಲ: ತಾಲೂಕಿನಲ್ಲಿ ವ್ಯಾಯಾಮ ಶಾಲೆ ನಿರ್ಮಾಣಗೊಂಡಿಲ್ಲ. ಇದರಿಂದ ಕ್ರೀಡಾ ಪಟುಗಳಿಗೆ ತೊಂದರೆ ಅಗುತ್ತಿದೆ. ಹಲವಾರು ಸೌಲಭ್ಯಗಳು ವಂಚಿತಗೊಳ್ಳುತ್ತವೆ. ಈ ನಿಟ್ಟಿನಲ್ಲಿ ವ್ಯಾಯಾಮ ಶಾಲೆಯನ್ನು ನೋಡೆ ಇಲ್ಲ ಎನ್ನುತ್ತಾರೆ ಕ್ರೀಡಾಪಟುಗಳು. ಮೈದಾನದ ಪಕ್ಕದಲ್ಲಿ 10 ಲಕ್ಷ ವೆಚ್ಚದಲ್ಲಿ ವ್ಯಾಯಾಮ ಶಾಲೆ ಮಂಜೂರು ಮಾಡಿಸಲಾಗಿದೆ. ಟೆಂಡರ್‌ ಕೂಡ ಕರೆಯಲಾಗಿದೆ ಶೀಘ್ರದಲ್ಲೇ ಕಾಮಗಾರಿ ನಡೆಯುತ್ತದೆ ಎಂದು ಜನಪ್ರತಿನಿಧಿ ಗಳು ಹೇಳುತ್ತಾರೆ.

ಕುಡುಕರ ಹಾವಳಿ: ತಾಲೂಕಿನಲ್ಲಿ ಕ್ರೀಡಾಂಗಣ ಬದಲು ಕ್ರೀಡಾಪಟುಗಳಿಗೆ ಹೈಸ್ಕೂಲ್‌ ಮೈದಾನ ಒಂದೇ ಆಸರೆಯಾಗಿದ್ದು, ಮೈದಾನದಲ್ಲಿ ವಿದ್ಯುತ್‌ ದೀಪಗಳು ಇಲ್ಲದಾಗಿದೆ. ಇದರ ಪರಿಣಾಮ ರಾತ್ರಿಯಾದರೆ ಸಾಕು ಕುಡುಕರ ಹಾವಳಿ ಮಿತಿ ಮೀರಿದೆ.

ಕ್ರೀಡಾಂಗಣಕ್ಕೆ ಒತ್ತಾಯ: ನೂತನ ತಾಲೂಕಿಗೆ ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಬೇಕು. ಕುರುಗೋಡಿನಲ್ಲಿ ಕ್ರೀಡಾಪಟುಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಕ್ರೀಡಾಕೂಟಗಳು ನಿರೀಕ್ಷೆ ಮಟ್ಟದಲ್ಲಿ ನಡೆಯುತ್ತಿಲ್ಲ. ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಈಗಾಗಲೇ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಜಿಲ್ಲಾ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ದೊಡ್ಡಬಸವೇಶ್ವರ ಯುವ ಕ್ರೀಡಾ ಸಂಘದ ಪದಾಧಿಕಾರಿಗಳು ಹಾಗೂ ಯುವ ಕ್ರೀಡಾ ಸಮಿತಿಯವರು ಅನೇಕ ಬಾರಿ ಮನವಿ ನೀಡಿ ಕ್ರೀಡಾಂಗಣ ನಿರ್ಮಿಸಲು ಒತ್ತಾಯಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ