ಅತಿವೃಷ್ಟಿ ಪರಿಣಾಮ: ಬೆಳೆಗಳಿಗೆ ಕೊಳೆಬಾಧೆ

Team Udayavani, Aug 29, 2019, 1:31 PM IST

ಲಕ್ಷ್ಮೇಶ್ವರ: ರೋಗಬಾಧೆಗೆ ತುತ್ತಾಗಿರುವ ಶೇಂಗಾ ಬೆಳೆಗೆ ರೈತರು ಕ್ರಿಮಿನಾಶಕ ಸಿಂಪಡಣೆ ಮಾಡಿದರು.

ಲಕ್ಷ್ಮೇಶ್ವರ: ಈ ವರ್ಷದ ಮುಂಗಾರು ಮಳೆ ಕೊಂಚ ತಡವಾದರೂ ಹದವರ್ತಿ ಮಳೆಯಾಗಿದ್ದರಿಂದ ಮುಂಗಾರಿನ ಬಹುತೇಕ ಬೆಳೆಗಳು ಉತ್ತಮವಾಗಿಯೇ ಬೆಳೆದಿದ್ದವು. ಆದರೆ ಆಗಸ್ಟನಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಎಲ್ಲ ಬೆಳೆಗಳೂ ಕೀಟಬಾಧೆ ಮತ್ತು ತೇವಾಂಶ ಹೆಚ್ಚಳದಿಂದ ಕೊಳೆಬಾಧೆಗೆ ತುತ್ತಾಗಿವೆ.

ಮುಖ್ಯವಾಗಿ ರೈತರ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಬೆಳೆಗೀಗ ರಸಹೀರುವ ಕೀಟಬಾಧೆ, ಎಲೆಚುಕ್ಕಿ ರೋಗ, ಸುರುಳಿಪೂಚಿ ಜೊತೆಗೆ ತೇವಾಂಶ ಹೆಚ್ಚಳದಿಂದ ಹಳದಿ ರೋಗದ ಬಾಧೆಯಿಂದ ಹೂವು ಬಿಡುವ ಹಂತದಲ್ಲಿರುವ ಶೇಂಗಾ ಬೆಳೆ ಹಾನಿಗೀಡಾಗಿದೆ. ಇದರಿಂದ ಬೆಳೆ ಉಳಿಸಿಕೊಳ್ಳಲು ರೈತರು ಕ್ರಿಮಿನಾಶಕ ಮತ್ತು ರಸಗೊಬ್ಬರಗಳ ಬಳಕೆ ಮಾಡುವ ಮೂಲಕ ಹೆಣಗಾಡುತ್ತಿದ್ದಾರೆ. ಸತತ ಬರಗಾಲದ ಸುಳಿಗೆ ಸಿಲುಕಿ ನಲುಗಿದ್ದ ರೈತ ಸಮುದಾಯ ಈ ವರ್ಷವಾದರೂ ಉತ್ತಮ ಮಳೆ ಬೆಳೆ ಬಂದು ಸಂಕಷ್ಟ ಪರಿಹಾರವಾದೀತು ಎಂದು ನಂಬಿದ್ದ ರೈತರಿಗೆ ಮತ್ತೇ ಬರ ಸಿಡಿಲಿನಂತೆ ಹಸಿಬರ ಬಂದೊದಗಿ ಬೆಳೆ ಕೈ ತಪ್ಪುವ ಆತಂಕಕ್ಕೆ ಸಿಲುಕಿದ್ದಾರೆ..

ಪ್ರಸಕ್ತ ಹಂಗಾಮಿಗೆ ತಾಲೂಕಿನಲ್ಲಿ ಒಟ್ಟು 58913 ಹೆಕ್ಟೇರ್‌ ಪ್ರದೇಶ ಬಿತ್ತನೆಯಾಗಿದ್ದು, ಅದರಲ್ಲಿ 18670 ಹೆಕ್ಟೇರ್‌ ಜಮೀನಿನಲ್ಲಿ ಶೇಂಗಾ ಬಿತ್ತನೆಯಾಗಿದೆ. ಈಗ ಹೂವು ಬಿಡುವ, ಕಾಯಿಬೇರು ಚುಚ್ಚುವ ಹಂತದಲ್ಲಿರುವಾಗ ಬೆಳೆಗೆ ಸುರಳಿಪುಚಿ, ರಸಹೀರುವ ಕಿಟಭಾದೆ, ಎಲೆಚುಕ್ಕಿ ಮತ್ತು ಹಳದಿ, ನಂಜಾಣು, ತಾಮ್ರದ ರೋಗ ಗಳು ಕಾಣಿಸಿಕೊಂಡಿದ್ದು, ರೈತರನ್ನು ಆತಂಕಕ್ಕೀಡು ಮಾಡಿದೆ. ತಾಲೂಕಿನ ಅಕ್ಕಿಗುಂದ, ಲಕ್ಷ್ಮೇಶ್ವರ, ರಾಮಗೇರಿ, ಬಸಾಪುರ, ಯಳವತ್ತಿ, ಯತ್ನಳ್ಳಿ, ಅಡರಕಟ್ಟಿ ಮತ್ತಿತರ ಕಡೆ ಶೇಂಗಾ ಬೆಳೆಗೆ ರೋಗಬಾಧೆ ಕಾಣಿಸಿಕೊಂಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ