ಹೆಚ್ಚುತ್ತಿದೆ ನೀರಿನ ಬವಣೆ

ಕುಡಿವ ನೀರಿಗೆ ಪರದಾಟದುರಸ್ತಿಗೊಳಗಾದ ಪಂಪ್‌ನೀರು ಸರಬರಾಜು ಸ್ಥಗಿತ

Team Udayavani, Apr 18, 2019, 5:38 PM IST

ಲಕ್ಷ್ಮೇಶ್ವರ:ಟ್ಯಾಂಕರ್‌ ನೀರಿಗೆ ಮೊರೆ ಹೋಗಿರುವ ಹೋಗಿರುವ ಜನತೆ

ಲಕ್ಷ್ಮೇಶ್ವರ: ಒಂದೆಡೆ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದರೆ, ಮತ್ತೂಂದೆಡೆ ತಾಲೂಕಿನಾದ್ಯಂತ ನೀರಿನ ಸಮಸ್ಯೆ ಉಲ್ಬಣವಾಗಿ ಜನತೆ ಕುಡಿಯುವ ನೀರಿಗಾಗಿ ಪರಿತಪಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣಕ್ಕೆ ಸಮೀಪದ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಸರಬರಾಜಾಗುತ್ತಿದೆ. ಅದಕ್ಕಾಗಿ ನದಿ ತಟದ ಮೇವುಂಡಿಯ ಜಾಕ್ವೆಲ್‌ನಿಂದ ನೀರನ್ನು ಮೇಲೆತ್ತಿ ಸೂರಣಗಿಯ ಶುದ್ಧೀಕರಣ ಘಟಕಕ್ಕೆ ಪೂರೈಸಲಾಗುತ್ತದೆ. ಇಲ್ಲಿ ನೀರು ಶುದ್ಧೀಕರಣಗೊಂಡ ಬಳಿಕ ಮಾರ್ಗದ 9 ಹಳ್ಳಿಗಳ ಮೂಲಕ ಪಟ್ಟಣಕ್ಕೆ ಸರಬರಾಜಾಗುತ್ತದೆ.

ಆದರೆ ಕಳೆದ ಒಂದು ವಾರದಿಂದ ಶುದ್ಧೀಕರಣ ಘಟಕದಲ್ಲಿನ ನೀರೆತ್ತುವ ಪಂಪ್‌ಗ್ಳು ದುರಸ್ತಿಗೊಳಗಾಗಿದ್ದರಿಂದ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಪಟ್ಟಣದ ಹೊಸ ಬಡಾವಣೆಗಳಾದ ಲಕ್ಷ್ಮೀ ನಗರ, ಈಶ್ವರ ನಗರ, ಸೋಮೇಶ್ವರ ನಗರ, ರಂಭಾಪುರಿ ನಗರ ಮತ್ತಿತರ ಕಡೆ ಸಾರ್ವಜನಿಕ ನಳಗಳೂ ಇಲ್ಲ ಮತ್ತು ತುಂಗಭದ್ರಾ ನದಿ ನೀರಿನ ಪೈಪ್‌ಲೈನ್‌ ಇಲ್ಲದ್ದರಿಂದ ಪ್ರತಿ ವರ್ಷ ಬೇಸಿಗೆಯಲ್ಲಿ ಈ ಪ್ರದೇಶಗಳ ನಿವಾಸಿಗರು ಸಾಕಷ್ಟು ಪರಿತಪಿಸುತ್ತಿದ್ದಾರೆ. ಪಟ್ಟಣದ
ಹಳ್ಳದಕೇರಿ, ಸೊಪ್ಪಿನಕೇರಿ, ಬಸ್ತಿಬಣ, ಬಸಾಪುರ ಓಣಿ, ಮ್ಯಾಗೇರಿ
ಓಣಿಗಳು ಬಹುತೇಕ ರೈತಾಪಿ ಕುಟುಂಬಗಳಿಂದ ಕೂಡಿದ್ದು,
ಜಾನುವಾರುಗಳಿಗೆ ನೀರು ಪೂರೈಸುವುದು ರೈತ ಸಮುದಾಯಕ್ಕೆ
ಒಂದು ಸವಾಲಾಗಿದೆ. ಪಟ್ಟಣದ ಸುತ್ತಮುತ್ತಲು ಕೆರೆಗಳಿದ್ದರೂ ಹನಿ ನೀರು ಇಲ್ಲದ್ದರಿಂದ ರೈತಾಪಿ ಜನರ ಗೋಳಂತೂ ಹೇಳತೀರದು.

ಸ್ಥಳೀಯ ಪುರಸಭೆ ಅಧಿಕಾರಿಗಳು ಕುಡಿಯುವ ನೀರಿಗ ಸಂಬಂಧಪಟ್ಟಂತೆ ಮೋಟರ್‌, ಪೈಪ್‌ಲೈನ್‌ ಖರೀದಿ ಮತ್ತು ದುರಸ್ತಿಗೆ ಸಂಬಂಧಪಟ್ಟ ಬಿಲ್‌ಗ‌ಳ ಮಂಜೂರಾತಿಗಾಗಿ ಆಡಳಿತಾಧಿಕಾರಿಗಳಿಗೆ ಸಲ್ಲಿಸಿದರೂ ಅದಕ್ಕೆ ಮಂಜೂರಾತಿ ಸಿಗುತ್ತಿಲ್ಲ. ಮೋಟರ್‌ ದುರಸ್ತಿ ಮಾಡುವ ಗುತ್ತಿಗೆದಾರ ಲಕ್ಷಾಂತರ ರೂ. ಬಿಲ್‌ ಬಾಕಿ ಉಳಿಸಿಕೊಂಡಿರುವುದರಿಂದ ಗುತ್ತಿಗೆದಾರರು ದುರಸ್ತಿಗೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಪ್ರತಿವರ್ಷ ಬೇಸಿಗೆ ಸಂದರ್ಭದಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಮರಳಿನ ಚೀಲಗಳಿಂದ ತಡೆಗೋಡೆ ನಿರ್ಮಿಸಲಾಗುತ್ತಿತ್ತು.

ಆದರೆ ಈ ವರ್ಷ ಅದಕ್ಕೂ ಆಡಳಿತಾಧಿಕಾರಿಗಳು ಅನುಮೋದನೆ ನೀಡಿಲ್ಲ. ಸಿವಿಲ್‌ ವಿಷಯಕ್ಕೆ ಸಂಬಂಧಿಸಿದ ಎಲ್ಲ ಬಿಲ್‌ಗ‌ಳಿಗೂ ಮಂಜೂರಾತಿ ನೀಡುವ ಆಡಳಿತಾಧಿಕಾರಿಗಳು ನೀರಿನ ವಿಷಯಕ್ಕೆ ಹಿಂದೇಟು ಹಾಕುತ್ತಿರುವುದೇ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಕುಡಿಯುವ ನೀರಿಗಾಗಿ ಸರ್ಕಾರದ ಯಾವುದೇ ಆದೇಶಕ್ಕೂ ಕಾಯದೇ ತ್ವರಿತ ಕ್ರಮ ಕೈಗೊಳ್ಳುವಂತೆ ಸರ್ಕಾರವೇ ಹೇಳುತ್ತಿದ್ದರೂ ಅಧಿಕಾರಿಗಳ ಉದಾಸೀನತೆ ಅರ್ಥವಾಗುತ್ತಿಲ್ಲ ಎನ್ನುತ್ತಿದ್ದಾರೆ ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ