ನೀರಿಗಾಗಿ ಹಟ್ಟಿ ಬಂದ್‌

ಮೂರು ದಿನದಲ್ಲಿ ನೀರು ಪೂರೈಕೆ •ನಿರ್ವಹಣೆ ಚಿನ್ನದ ಗಣಿ ಕಂಪನಿಗೆ: ಅಧಿಕಾರಿಗಳ ಭರವಸೆ

Team Udayavani, Sep 19, 2019, 6:22 PM IST

ಲಿಂಗಸುಗೂರು: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಹಟ್ಟಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಧರಣಿ ನಡೆಸಿದರು.

ಲಿಂಗಸುಗೂರು: ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಹಟ್ಟಿ ನಾಗರಿಕರ ಹೋರಾಟ ಸಮಿತಿ, ದಲಿತ ಮತ್ತು ಕನ್ನಡ ಪರ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಹಟ್ಟಿ ಪಟ್ಟಣ ಬಂದ್‌ ಯಶಸ್ವಿಯಾಗಿದೆ.

ಬಂದ್‌ ಹಿನ್ನಲೆಯಲ್ಲಿ ಹಟ್ಟಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟು, ಹೊಟೇಲ್ಗಳನ್ನು ಮುಚ್ಚಲಾಗಿತ್ತು. ಸಾರಿಗೆ ಸಂಸ್ಥೆ ಕೂಡ ಬಸ್‌ ಸಂಚಾರ ಸ್ಥಗಿತಗೊಸಿ ಬಂದ್‌ಗೆ ಬೆಂಬಲ ಸೂಚಿಸಿತ್ತು. ಹಳೆ ಬಸ್‌ ನಿಲ್ದಾಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕಾಕಾ ನಗರ, ಕೋಠಾ ಕ್ರಾಸ್‌ ಮುಖಾಂತರ ಅಂಬೇಡ್ಕರ್‌ ಸರ್ಕಲ್ಗೆ ಆಗಮಿಸಿ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು. ಬಳಿಕ ವಾಲ್ಮೀಕಿ ಸರ್ಕಲ್ನಲ್ಲಿ ಪ್ರತಿಭಟನಾ ನಿರತರು ಬಹಿರಂಗ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡ ಮಹ್ಮದ್‌ ಅಮೀರಲಿ, ಕಳೆದ ಆರು ವರ್ಷಗಳ ಹಿಂದೆ 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಫಲಗೊಂಡಿದೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಗುತ್ತಿಗೆದಾರರು ಕೈಗೊಂಡ ಕಳಪೆ ಕಾಮಗಾರಿಯೇ ಕಾರಣವಾಗಿದೆ. ಕೂಡಲೇ ಅವ್ಯವಸ್ಥೆ ಸರಿಪಡಿಸಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಬೇಕೆಂದು ಆಗ್ರಹಿಸಿದರು.

ತಹಶೀಲ್ದಾರ್‌ ಚಾಮರಾಜ ಪಾಟೀಲ ಹಾಗೂ ಜಿಪಂ ಎಇಇ ಶ್ರೀಮಂತ ಮಿಣಜಗಿ, ಸ್ಥಳಕ್ಕೆ ಭೇಟಿ ನೀಡಿ, ಪಟ್ಟಣಕ್ಕೆ ಮೂರು ದಿನಗಳ ಒಳಗೆ ನೀರು ಪೂರೈಸಲು ಕ್ರಮ ವಹಿಸಲಾಗುವುದು. ಬಲದಂಡೆ ನಾಲೆಗೆ ಮೋಟಾರ್‌ ಪಂಪ್‌ ಅಳವಡಿಸಿ ನೀರು ಪೂರೈಸಲಾಗುವುದು. ಮತ್ತು ಕೃಷ್ಣಾನದಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ದುರಸ್ತಿ ಕಾಮಗಾರಿ ತಕ್ಷಣ ಮುಗಿಸಲಾಗುವುದು. ಮತ್ತು ಕುಡಿಯುವ ನೀರು ಪೂರೈಕೆ ಯೋಜನೆ ನಿರ್ವಹಣೆಯನ್ನು ಹಟ್ಟಿ ಚಿನ್ನದ ಗಣಿಗೆ ವಹಿಸುವ ಕುರಿತು ಕಂಪನಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ. ಪಟ್ಟಣದ ಮುಖಂಡರ ನಿಯೋಗ ಕರೆದುಕೊಂಡು ಹೋಗಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದರು.

ಜಿಪಂ ಸದಸ್ಯೆ ಸಾಹೀರಾ ಬೇಗಂ, ಎನ್‌.ಸ್ವಾಮಿ, ಬಾಲಪ್ಪ ನಾಯಕ, ಕೆ.ವಿ. ಕಳ್ಳಿಮಠ, ಬಾಬು ಭೂಪುರ, ತಾಪಂ ಸದಸ್ಯ ಎಂ.ಲಿಂಗರಾಜ, ಮೌನೇಶ ಕಾಕಾನಗರ, ಮಲ್ಲಿಕಾರ್ಜುನ ಚಿತ್ರನಾಳ, ಹಿರಿಯ ಮುಖಂಡ ಗುಂಡಪ್ಪ ಗೌಡ, ಎಂ.ಸಿ ಚಂದ್ರಶೇಖರ, ಶ್ರೀನಿವಾಸ ಮಧು, ಚಿನ್ನಪ್ಪ, ನಿರ್ಮಲಾ, ಶಿವರಾಜಗೌಡ ಗುರಿಕಾರ, ಸಂಗಯ್ಯಸ್ವಾಮಿ, ಕನಕರಾಜ ಗುರಿಕಾರ, ವೀರನಗೌಡ, ಆನಂದಪ್ಪ, ರಾಜುಗೌಡ ಗುರಿಕಾರ, ವಿನೋದ ಕಮಲನ್ನಿ, ಇತರರು ಪಾಲ್ಗೊಂಡಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಯಲಬುರ್ಗಾ: ಪಟ್ಟಣದಲ್ಲಿರುವ ತಾಲೂಕು ಕೇಂದ್ರದ ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲ ಸೌಕರ್ಯ ಕೊರತೆಯಿಂದ ಓದುಗರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. 1984ರಲ್ಲಿ...

  • ಹಿರೇಕೆರೂರ: ಬೆಳೆನಷ್ಟ ಪರಿಹಾರ ಮತ್ತು ಕಿಸಾನ್‌ ಸಮ್ಮಾನ್‌ ಯೋಜನೆ ತಾರತಮ್ಯ ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು...

  • „ಜಯರಾಜ ದಾಬಶೆಟ್ಟಿ ಭಾಲ್ಕಿ: ಖಟಕ ಚಿಂಚೋಳಿ ಗ್ರಾಮದ ಹೊರ ವಲಯದಲ್ಲಿರುವ ಹುಲಿಕುಂಟಿ ಶ್ರೀ ಶಾಂತಲಿಂಗೇಶ್ವರ ಮಠವು ಐತಿಹಾಸಿಕ ಪರಂಪರೆಯುಳ್ಳ ಮಠವಾಗಿದೆ. ಮಠದ...

  • ಮುದ್ದೇಬಿಹಾಳ: ನಮ್ಮ ಸುತ್ತಲಿನ, ನಮ್ಮ ಕಣ್ಣಿಗೆ ಕಾಣುವ ಕಸವನ್ನು ಸ್ವಚ್ಛಗೊಳಿಸಲು ವಿದ್ಯಾರ್ಥಿಗಳೆಲ್ಲ ಮನಸ್ಸು ಮಾಡಬೇಕು ಎಂದು ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ...

  • ಹಾವೇರಿ: ನಗರದ ರೈಲ್ವೆ ಸ್ಟೇಷನ್‌ ಹಾಗೂ ಬಸ್‌ ನಿಲ್ದಾಣದಲ್ಲಿ ಪಾರ್ಕಿಂಗ್‌ ಶುಲ್ಕದ ಹೆಸರಿನಲ್ಲಿ ವಾಹನ ಸವಾರರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿರುವ ಬಗ್ಗೆ...

ಹೊಸ ಸೇರ್ಪಡೆ