Udayavni Special

ನೀರು-ಖಾತ್ರಿ ಕಾಮಗಾರಿ ಪರಿಶೀಲನೆ

ಪ್ರತಿ ವಾರ ಕೂಲಿ ಪಾವತಿಸಲು ಕೂಲಿಕಾರರ ಮನವಿ•ಕೂಲಿಕಾರರಿಂದ ಮಾಹಿತಿ ಪಡೆದ ಸಿಇಒ

Team Udayavani, May 16, 2019, 12:16 PM IST

16-May-13

ಲಿಂಗಸುಗೂರು: ಸರ್ಜಾಪುರ ಗ್ರಾಮದ ಹಿರೇಹಳ್ಳದಲ್ಲಿ ಉದ್ಯೋಗ ಖಾತ್ರಿಯಡಿ ಕೈಗೊಂಡ ಕಾಮಗಾರಿ ವೀಕ್ಷಿಸಿದ ಜಿಪಂ ಸಿಇಒ ನಲಿನ್‌ ಅತುಲ್ ಕೂಲಿಕಾರರಿಂದ ಮಾಹಿತಿ ಪಡೆದರು.

ಲಿಂಗಸುಗೂರು: ತಾಲೂಕಿನ ಸರ್ಜಾಪುರ, ದೇವರಭೂಪುರ, ಗುರುಗುಂಟ ಸೇರಿದಂತೆ ನಾನಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರ ನಡೆಸಿದ ಜಿಪಂ ಸಿಇಒ ನಲಿನ್‌ ಅತುಲ್ ಕುಡಿಯುವ ನೀರು ಪೂರೈಕೆ ಮತ್ತು ಉದ್ಯೋಗ ಖಾತ್ರಿಯಡಿ ಕೈಗೊಂಡ ಕಾಮಗಾರಿ ಪರಿಶೀಲನೆ ನಡೆಸಿದರು.

ಮಂಗಳವಾರ ತಾಲೂಕಿನ ಸರ್ಜಾಪುರ ಗ್ರಾಮದ ಹಿರೇಹಳ್ಳದಲ್ಲಿ ನಡೆದ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಿಸಿದ ಜಿಪಂ ಸಿಇಒ ನಲಿನ್‌ ಅತುಲ್, ಕೂಲಿಕಾರರ ಉಭಯ ಕುಶಲೋಪರಿ ವಿಚಾರಿಸಿ ಖಾತ್ರಿ ಕೆಲಸ ನಿಮಗೆ ಸಂತೃಪ್ತಿ ತಂದಿದೆಯೇ ಎಂದು ಪ್ರಶ್ನಿಸಿದರು. ದಿನನಿತ್ಯ ದಿನಗೂಲಿ ಮಾಡಿ ಬದುಕು ಸಾಗಿಸುವ ನಮಗೆ ನಿತ್ಯವೂ ಹಣದ ಅವಶ್ಯಕತೆ ಇರುತ್ತದೆ. ಖಾತ್ರಿ ಯೋಜನೆಯಡಿ ಕೆಲಸ ಮಾಡಿದರೆ ತಿಂಗಳು ಗಟ್ಟಲೆ ಹಣ ಪಾವತಿಸುವವರೆಗೆ ಕಾಯಬೇಕಾಗುತ್ತದೆ. ಆದ್ದರಿಂದ ಪ್ರತಿ ವಾರ ಕೂಲಿ ಹಣ ಪಾವತಿಸುವ ವ್ಯವಸ್ಥೆಯಾಗಬೇಕೆಂದು ಕೂಲಿಕಾರರು ಮನವಿ ಮಾಡಿದರು.

ಸಿಇಒ ಆಗಮಿಸಿದ ಸುದ್ದಿ ತಿಳಿದ ಸರ್ಜಾಪುರ ಗ್ರಾಮಸ್ಥರು, ಗ್ರಾಮದಲ್ಲಿ ಕುಡಿಯುವ ನೀರು ತೊಂದರೆ ಎದುರಾಗಿದೆ. ಹೊನ್ನಳ್ಳಿ ಬಳಿಯ ರಾಜೀವಗಾಂಧಿ ಟೆಕ್ನಾಲಜಿ ಯೋಜನೆಯಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಭಗೀರಥ, ನಿಜಗುಣಿ, ಶ್ರೀಕಾಂತ, ಬಸವರಾಜ ಇತರರು ಮನವಿ ಮಾಡಿದರು. ಗ್ರಾಮಸ್ಥರ ಮನವಿ ಆಲಿಸಿದ ಸಿಇಒ, ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಗುಳೆ ತಪ್ಪಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ನಿರಂತರ ಕೆಲಸ ನೀಡಲು ಸೂಚಿಸಲಾಗಿದೆ ಎಂದು ಹೇಳಿದರು.

ದೇವರಭೂಪುರ ಗ್ರಾಪಂಗೆ ಭೇಟಿ ನೀಡಿದ ಬಳಿಕ ಅಮರೇಶ್ವರ ಸುಕ್ಷೇತ್ರದ ಕಪಿಲ ಮಹರ್ಷಿ ಗುಡ್ಡದ ಹಿಂದೆ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ 10 ದಿನಗಳಿಂದ 300ಕ್ಕೂ ಅಧಿಕ ಕೂಲಿಕಾರರಿಂದ ನಡೆದ ಕೆರೆ ನಿರ್ಮಾಣ ಕಾಮಗಾರಿ ವೀಕ್ಷಿಸಿದ ಸಿಇಒ, ಕೂಲಿಕಾರರಿಗೆ ಕುಡಿಯುವ ನೀರು, ನೆರಳು ವ್ಯವಸ್ಥೆ ಬಗ್ಗೆ ವಿಚಾರಿಸಿದರು. ದಿನನಿತ್ಯ ಹಾಜರಾತಿ ಮತ್ತು ಕೂಲಿ ಹಣ ನೀಡುವ ಬಗ್ಗೆ ಕೂಲಿಕಾರರಿಂದ ಮಾಹಿತಿ ಪಡೆದರು.

ನಂತರ ಗಲಗಿನದೊಡ್ಡಿಗೆ ಭೇಟಿ ನೀಡಿ, ಕಿರು ನೀರು ಸರಬರಾಜು ಘಟಕದಿಂದ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಬಗ್ಗೆ ನಿವಾಸಿಗಳಿಂದ ಮಾಹಿತಿ ಕೇಳಿದರು. ಯೋಜನೆಗೆ ಪಂಪ್‌ಸೆಟ್ ಮಾರ್ಗದ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ವಿದ್ಯುತ್‌ ವ್ಯತ್ಯಯದಿಂದ ಸಮರ್ಪಕ ನೀರು ದೊರೆಯುತ್ತಿಲ್ಲ. ನಿರಂತರ ಜ್ಯೋತಿ ಸಂಪರ್ಕ ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಆಗ ಸ್ಥಳದಲ್ಲಿದ್ದ ಜೆಸ್ಕಾಂ ಎಇಇ ಬನ್ನೆಪ್ಪ ಬರಗಂಟನಾಳರನ್ನು ವಿಚಾರಿಸಿದಾಗ, ಇಲ್ಲಿ 40 ಕುಟುಂಬಗಳು ವಾಸವಿದ್ದು, ಮೀಟರ್‌ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸೌಭಾಗ್ಯ ಯೋಜನೆಯಡಿ ಉಚಿತ ಮೀಟರ್‌ ಅಳವಡಿಸುವ ವ್ಯವಸ್ಥೆ ಕಲ್ಪಿಸುವುದಾಗಿ ಮಾಹಿತಿ ನೀಡಿದಾಗ, ತುರ್ತಾಗಿ ಕುಡಿಯುವ ನೀರಿನ ಘಟಕಕ್ಕೆ ತೊಂದರೆಯಾಗದಂತೆ ವಿದ್ಯುತ್‌ ಕಲ್ಪಿಸುವಂತೆ ಸೂಚಿಸಿದರು.

ತಾಪಂ ಇಒ ಪ್ರಕಾಶ ವಡ್ಡರ್‌, ಜಿಪಂ ಎಇಇ ಶ್ರೀಮಂತ ಮಿಣಜಗಿ, ಜೆಸ್ಕಾಂ ಎಇಇ ಬನ್ನೆಪ್ಪ ಬರಗಂಟನಾಳ ಇತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನನ್ನಿಷ್ಟದ ಸಿನೆಮಾ – ಯುವ ಜನರ ಆಯ್ಕೆ : ಬಹಳ ಕಾಡಿದ ಚಿತ್ರ ದಿಯಾ

ನನ್ನಿಷ್ಟದ ಸಿನೆಮಾ – ಯುವ ಜನರ ಆಯ್ಕೆ : ಬಹಳ ಕಾಡಿದ ಚಿತ್ರ ದಿಯಾ

Pattadakallu-1

ಐಹೊಳೆ ಪ್ರವಾಸಿ ತಾಣಗಳು ಪುನರಾರಂಭ ; ಮಕ್ಕಳಿಗೆ- ವೃದ್ದರಿಗೆ ಅವಕಾಶವಿಲ್ಲ

ಯಕ್ಷ ಸಂಘಟಕ, ಪ್ರಸಂಗಕರ್ತ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ

ಯಕ್ಷ ಸಂಘಟಕ, ಪ್ರಸಂಗಕರ್ತ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ

ಬೆಂಗಳೂರು ಬಿಡಬೇಡಿ: ಮುಖ್ಯಮಂತ್ರಿ ಮನವಿ

ಬೆಂಗಳೂರು ಬಿಡಬೇಡಿ: ಮುಖ್ಯಮಂತ್ರಿ ಮನವಿ

ಸಪ್ತಪದಿ ಸಾಮೂಹಿಕ ವಿವಾಹ ಮತ್ತೆ ಮುಂದಕ್ಕೆ ?

ಸಪ್ತಪದಿ ಸಾಮೂಹಿಕ ವಿವಾಹ ಮತ್ತೆ ಮುಂದಕ್ಕೆ ?

ವಿಶ್ವ ಪರಂಪರೆ ತಾಣ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

ವಿಶ್ವ ಪರಂಪರೆ ತಾಣ ಹಂಪಿ ವೀಕ್ಷಣೆಗೆ ಮುಕ್ತ ಅವಕಾಶ

ಇಂದು ಮತ್ತೆ ರಾಜ್ಯದಲ್ಲಿ 1843 ಪಾಸಿಟಿವ್ ಪ್ರಕರಣ ಪತ್ತೆ ; 30 ಸಾವು

ಇಂದು ಮತ್ತೆ ರಾಜ್ಯದಲ್ಲಿ 1843 ಪಾಸಿಟಿವ್ ಪ್ರಕರಣ ಪತ್ತೆ ; 30 ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷಿಣ ಕನ್ನಡ: ಕೋವಿಡ್‌ಗೆ ಮತ್ತೆ ಇಬ್ಬರು ಬಲಿ; 34 ಮಂದಿಗೆ ಸೋಂಕು

ದಕ್ಷಿಣ ಕನ್ನಡ: ಕೋವಿಡ್‌ಗೆ ಮತ್ತೆ ಇಬ್ಬರು ಬಲಿ; 34 ಮಂದಿಗೆ ಸೋಂಕು

Pattadakallu-1

ಐಹೊಳೆ ಪ್ರವಾಸಿ ತಾಣಗಳು ಪುನರಾರಂಭ ; ಮಕ್ಕಳಿಗೆ- ವೃದ್ದರಿಗೆ ಅವಕಾಶವಿಲ್ಲ

ಯಕ್ಷ ಸಂಘಟಕ, ಪ್ರಸಂಗಕರ್ತ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ

ಯಕ್ಷ ಸಂಘಟಕ, ಪ್ರಸಂಗಕರ್ತ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ

Covid-19-Positive-1

ಬಾಗಲಕೋಟೆ: ನ್ಯಾಯಾಧಿಶರ ತಾಯಿಗೂ ಸೇರಿದಂತೆ ಜಿಲ್ಲೆಯಲ್ಲಿ ಇಂದು 33 ಜನರಿಗೆ ಪಾಸಿಟಿವ್ ದೃಢ

ಕಲಬುರಗಿ: ಸೊನ್ನ ಬ್ಯಾರೇಜ್ ನಿಂದ 2,500 ಕ್ಯೂಸೆಕ್ಸ್ ನೀರು ಬಿಡುಗಡೆ ; ರೈತರಿಗೆ ಎಚ್ಚರಿಕೆ

ಕಲಬುರಗಿ: ಸೊನ್ನ ಬ್ಯಾರೇಜ್ ನಿಂದ 2,500 ಕ್ಯೂಸೆಕ್ಸ್ ನೀರು ಬಿಡುಗಡೆ ; ರೈತರಿಗೆ ಎಚ್ಚರಿಕೆ

MUST WATCH

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani

udayavani youtube

Manoj Kumar : Success story of Indigenous Dairy Farmer from Moodbidri

ಹೊಸ ಸೇರ್ಪಡೆ

ನನ್ನಿಷ್ಟದ ಸಿನೆಮಾ – ಯುವ ಜನರ ಆಯ್ಕೆ : ಬಹಳ ಕಾಡಿದ ಚಿತ್ರ ದಿಯಾ

ನನ್ನಿಷ್ಟದ ಸಿನೆಮಾ – ಯುವ ಜನರ ಆಯ್ಕೆ : ಬಹಳ ಕಾಡಿದ ಚಿತ್ರ ದಿಯಾ

ದಕ್ಷಿಣ ಕನ್ನಡ: ಕೋವಿಡ್‌ಗೆ ಮತ್ತೆ ಇಬ್ಬರು ಬಲಿ; 34 ಮಂದಿಗೆ ಸೋಂಕು

ದಕ್ಷಿಣ ಕನ್ನಡ: ಕೋವಿಡ್‌ಗೆ ಮತ್ತೆ ಇಬ್ಬರು ಬಲಿ; 34 ಮಂದಿಗೆ ಸೋಂಕು

Pattadakallu-1

ಐಹೊಳೆ ಪ್ರವಾಸಿ ತಾಣಗಳು ಪುನರಾರಂಭ ; ಮಕ್ಕಳಿಗೆ- ವೃದ್ದರಿಗೆ ಅವಕಾಶವಿಲ್ಲ

ಯಕ್ಷ ಸಂಘಟಕ, ಪ್ರಸಂಗಕರ್ತ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ

ಯಕ್ಷ ಸಂಘಟಕ, ಪ್ರಸಂಗಕರ್ತ ಮಣೂರು ವಾಸುದೇವ ಮಯ್ಯ ಆತ್ಮಹತ್ಯೆ

ಬೆಂಗಳೂರು ಬಿಡಬೇಡಿ: ಮುಖ್ಯಮಂತ್ರಿ ಮನವಿ

ಬೆಂಗಳೂರು ಬಿಡಬೇಡಿ: ಮುಖ್ಯಮಂತ್ರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.