ಪ್ರಚಾರಕ್ಕೆ ದರ್ಶನ್‌ ಕರೆತರಲು ಕೆಸಿಎನ್‌ ಪ್ರಯತ್ನ

ಮುನಿರತ್ನರಿಂದ ಪ್ರಚಾರಕ್ಕೆ ಕರೆತರುವ ಭರವಸೆ „ ಬೆಂಬಲಿಗರಿಂದ ನಟನ ಭೇಟಿ; ಇನ್ನೂ ಒಪ್ಪಿಗೆ ಸಿಕ್ಕಿಲ್ಲ

Team Udayavani, Nov 21, 2019, 6:14 PM IST

Udayavani Kannada Newspaper

● ಮಂಡ್ಯ ಮಂಜುನಾಥ್‌

ಮಂಡ್ಯ: ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ತಮ್ಮ ಪರ ಪ್ರಚಾರಕ್ಕೆ ನಟ ದರ್ಶನ್‌ ಕರೆತರುವುದಕ್ಕೆ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರು ತೆರೆ-ಮರೆಯ ಪ್ರಯತ್ನ ನಡೆಸಿದ್ದಾರೆ. ಬೆಂಬಲಿಗರ ಮೂಲಕ ದರ್ಶನ್‌ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದು, ಪ್ರಚಾರಕ್ಕೆ ಬರುವ ಬಗ್ಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.

ಕಳೆದ ಲೋಕಸಭಾ ಚುನಾವಣೆ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಪರ ಪ್ರಚಾರದ ಅಖಾಡ ಪ್ರವೇಶಿಸಿ ಎಲ್ಲೆಡೆ ಧೂಳೆಬ್ಬಿಸಿದ್ದ ದರ್ಶನ್‌ ಹಾಗೂ ಯಶ್‌ ಜೋಡೆತ್ತುಗಳಂತೆ ಒಂದು ವಾರ ನಿರಂತರ ಪ್ರಚಾರ ನಡೆಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದೇ ಮಾದರಿಯಲ್ಲಿ ದರ್ಶನ್‌ ಅವರನ್ನು ಸ್ಟಾರ್‌ ಪ್ರಚಾರಕರಾಗಿ ಕ್ಷೇತ್ರಕ್ಕೆ ಕರೆತಂದು ಯುವ ಮತದಾರರನ್ನು ಸೆಳೆಯುವ ತಂತ್ರಗಾರಿಕೆ ರಾಜಕಾರಣಕ್ಕೆ ನಾರಾಯಣಗೌಡರು ಮುಂದಾಗಿದ್ದಾರೆ.

ಶೀಳನೆರೆ ಅಂಬರೀಶ್‌ರಿಂದಲೂ ಪ್ರಯತ್ನ: ಉಪ ಚುನಾವಣೆ ಎದುರಾಗಿರುವ ಈ ಸಮಯದಲ್ಲಿ ಕಾಂಗ್ರೆಸ್‌ನಿಂದ ಸಿಡಿದುಬಂದ ಶೀಳನೆರೆ ಅಂಬರೀಶ್‌ ಅವರನ್ನು ಕೆ.ಸಿ.ನಾರಾಯಣಗೌಡರು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೂಲಕವೇ ದರ್ಶನ್‌ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆ. ಅದರಂತೆ ಶೀಳ ನೆರೆ ಅಂಬರೀಶ್‌ ಸೇರಿದಂತೆ ಹಲವು ಪ್ರಮುಖರು ಬೆಂಗಳೂರಿನಲ್ಲಿ ನಟ ದರ್ಶನ್‌ರನ್ನು ಭೇಟಿಯಾಗಿ ನಾರಾಯಣಗೌಡರ ಪರ ಚುನಾವಣಾ ಪ್ರಚಾರಕ್ಕೆ ಬರು ವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

ಐಟಿ ದಾಳಿ ಎಚ್ಚರಿಕೆ ನೀಡಿದವರ ಬಗ್ಗೆ ಪ್ರಚಾರ: ಇದಕ್ಕೆ ಪ್ರತಿಕ್ರಿಯಿಸಿರುವ ದರ್ಶನ್‌, ಕಳೆದ ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಸರ್ಕಾರವಿದ್ದು, ಸಿನಿಮಾ ನಟರ ಮೇಲೆ ಐಟಿ ದಾಳಿ ನಡೆಸುವ ಎಚ್ಚರಿಕೆ ನೀಡಿದವರ ಪರವಾಗಿ ಪ್ರಚಾರ ನಡೆಸುವುದಾದರೂ ಹೇಗೆ. ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಎಂತಹ ಭಾವನೆ ಮೂಡಬಹುದು ಎಂಬ ಬಗ್ಗೆ ಸ್ವಲ್ಪ ಆಲೋಚಿಸಿ ಎಂದು ಮೃದುವಾಗಿಯೇ ಮುಟ್ಟಿನೋಡಿಕೊಳ್ಳುವಂಥ ಉತ್ತರ ನೀಡಿದ್ದಾರೆ ಎಂದೂತಿಳಿದು ಬಂದಿದೆ.

ದರ್ಶನ್‌ ಪ್ರತಿಕ್ರಿಯೆಗೆ ಬೆಂಬಲಿಗರು ಮೌನ: ದರ್ಶನ್‌ ನೀಡಿರುವ ಪ್ರತಿಕ್ರಿಯೆಯಿಂದ ಮುಂದಕ್ಕೆ ಮಾತನಾಡಲಾಗದೆ ನಾರಾಯಣಗೌಡರ ಬೆಂಬಲಿ ಗರು ಮೌನ ವಹಿಸಿದರೆನ್ನಲಾಗಿದೆ. ಮತ್ತೆ ಬಂದು ತಮ್ಮನ್ನು ಭೇಟಿಯಾಗುವುದಾಗಿ ಹೇಳಿ ವಾಪಸಾಗಿದ್ದಾರೆ. ಆನಂತರ ನಾರಾಯಣ ಗೌಡರಿಗೆ  ಬಲಿಗರು ವಿಷಯ ಮುಟ್ಟಿಸಿದ ರೆನ್ನಲಾಗಿದ್ದು, ಬಳಿಕ ಅನರ್ಹ ಶಾಸಕರಲ್ಲಿ ಒಬ್ಬರಾಗಿರುವ ಮುನಿರತ್ನ ಅವರನ್ನು ನಾರಾಯಣ ಗೌಡರು ದೂರವಾಣಿ ಮುಖೇನ ಸಂಪರ್ಕಿಸಿ ಮಾತನಾಡಿದ್ದಾರೆ. ಬಳಿಕ ಕೆಸಿಎನ್‌ ಬೆಂಬಲಿಗರು ಮುನಿರತ್ನ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ನಡೆದ ವಿಚಾರವನ್ನೆಲ್ಲಾ ತಿಳಿಸಿದರೆಂದೂ ಗೊತ್ತಾಗಿದೆ.

ಈ ಸಮಯದಲ್ಲಿ ಚಿತ್ರ ನಿರ್ಮಾಪಕರೂ ಆಗಿರುವ ಮುನಿರತ್ನ ಚುನಾವಣಾ ಪ್ರಚಾರಕ್ಕೆ ದರ್ಶನ್‌ ಅವರನ್ನು ಕರೆತರುವ ಹೊಣೆ ಹೊತ್ತುಕೊಂಡಿದ್ದಾರೆ. ಅವರನ್ನು ಒಪ್ಪಿಸಿ ಪ್ರಚಾರಕ್ಕೆ ಕರೆತರುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಕ್‌ಲೈನ್‌ ಮೂಲಕವೂ ಪ್ರಯತ್ನ: ಸಂಸದೆ ಸುಮಲತಾ ಆಪ್ತರಾಗಿರುವ ರಾಕ್‌ಲೈನ್‌ ವೆಂಕಟೇಶ್‌ ಸಂಬಂಧದಲ್ಲಿ ಮುನಿರತ್ನ ಅವರಿಗೆ ಬೀಗರೂ ಆಗಿ
ದ್ದಾರೆ. ಅಲ್ಲದೆ, ದರ್ಶನ್‌ ಅಭಿನಯದ ಕುರುಕ್ಷೇತ್ರ ಚಿತ್ರದ ನಿರ್ಮಾಪಕರೂ ಆಗಿರುವ ಮುನಿರತ್ನ ವೈಯಕ್ತಿಕವಾಗಿ ಭೇಟಿ ಮಾಡಿ ದರ್ಶನ್‌ ಅವರ ಮನವೊಲಿಸುವ ಇಲ್ಲವೇ, ಸುಮಲತಾ ಹಾಗೂ ರಾಕ್‌ಲೈನ್‌ ವೆಂಕಟೇಶ್‌ ಮೂಲಕ ದರ್ಶನ್‌ ಮೇಲೆ ಒತ್ತಡ ತಂದು ನಾರಾಯಣಗೌಡರ ಪರ ಪ್ರಚಾರಕ್ಕೆ ಕರೆತರುವ ಆಲೋಚನೆ ನಡೆಸಿದ್ದಾರೆಂದು ಗೊತ್ತಾಗಿದೆ.

ಇದರ ಜೊತೆಗೆ ಮನ್‌ಮುಲ್‌ ಮಾಜಿ ನಿರ್ದೇಶಕ ಶೀಳನೆರೆ ಅಂಬರೀಶ್‌ ಚಿತ್ರ ನಿರ್ಮಾಪಕ ಸಂದೇಶ್‌ ನಾಗರಾಜು ಅವರ ಸಂಬಂಧಿಯೂ ಆಗಿದ್ದಾರೆ. ಅವರ ಮೂಲಕವೂ ದರ್ಶನ್‌ರನ್ನು ಸಂಪರ್ಕಿಸಿ ಪ್ರಚಾರಕ್ಕೆ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದೂ ಹೇಳಲಾಗಿದೆ.

ಟಾಪ್ ನ್ಯೂಸ್

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

Bengaluru: ಕಾರು ಹರಿದು ಒಂದೂವರೆ ವರ್ಷದ ಮಗು ದುರ್ಮರಣ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ 

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.