15.86 ಕೋಟಿ ರೂ. ಕಾಮಗಾರಿಗೆ ಚಾಲನೆ

Team Udayavani, Nov 12, 2019, 4:48 PM IST

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶಾಸಕ ಎಂ . ಶ್ರೀನಿವಾಸ್‌ 15.86 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.

ನಗರದ ಹಳೇ ಎಂ.ಸಿ.ರಸ್ತೆಯ ಕಿರಗಂದೂರು, ಕಲ್ಲಹಳ್ಳಿ, ಹೊಳಲು ಸರ್ಕಲ್‌ ನಿಂದ 7.60 ಕಿ.ಮೀ.ವರೆಗೆ ಲೋಕೋ ಪಯೋಗಿ ಇಲಾಖೆ ಅನುದಾನ 9 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ  ಗೊಳ್ಳುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ, ಕಾವೇರಿ ನೀರಾವರಿ ನಿಗಮದ ವತಿಯಿಂದ ತಾಲ್ಲೂಕಿನ ಎಚ್‌.ಕೋಡಿಹಳ್ಳಿ ಗ್ರಾಮದಲ್ಲಿ 48 ಲಕ್ಷ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ, ತಾಲ್ಲೂಕಿನ ಡಣಾಯಕನಪುರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅನುದಾನ 6.38 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡಿದರು.

ಹಳೇನಗರದ ರಸ್ತೆ ಅಭಿವೃದ್ಧಿಪಡಿಸುವುದು ಬಹುದಿನದ ಕನಸಾಗಿತ್ತು. ಹಿಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಒತ್ತಡ ಹೇರಿ 10 ಕೋಟಿ ರೂ.ಗೆ ಮನವಿ ಮಾಡಿದೆವು. ಆ ಅನುದಾನ ಬಿಡುಗಡೆಯಾಗಿದ್ದು ಹೊಳಲು ರಸ್ತೆಯಿಂದ ಕಲ್ಲಹಳ್ಳಿ-ಕಿರ ಗಂದೂರು ವೃತ್ತದವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಮೊದಲು ಈ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗುತ್ತಿರಲಿಲ್ಲ. ರಸ್ತೆಯನ್ನು ಅಭಿವೃದ್ಧಿಪಡಿಸುತ್ತಿರುವುದರಿಂದ ಸಂಚಾರಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ನಗರಸಭಾ ಸದಸ್ಯರಾದ ರವಿ, ಶಿವಲಿಂಗು, ಮುಖಂಡರಾದ ತ್ಯಾಗ ರಾಜು, ಬಸವರಾಜ್‌, ರಾಜು, ನಾಗ ರಾಜು, ಶಿವರಾಜ್‌, ಚಂದ್ರೇಗೌಡ, ರಾಮಕೃಷ್ಣ, ಶಿವಣ್ಣ, ಕೆ.ಎಂ.ಶಂಕರೇ ಗೌಡ, ಕೃಷ್ಣಪ್ಪ, ರಮೇಶ್‌, ಶ್ರೀನಿವಾಸ್‌, ನವೀನ್‌, ರಾಜು, ಬಸವೇಗೌಡ, ಎಂಜಿನಿಯರ್‌ ಚಿನ್ನ ಮಾರೇಗೌಡ, ಗುತ್ತಿಗೆದಾರ ಪಿ.ಬಿ.ಕರಿಗೌಡ ಇತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ