
ಡ್ರಗ್ಸ್ ದಂಧೆಯಲ್ಲಿ ರಾಜ್ಯದ 32 ರಾಜಕಾರಣಿಗಳು ಶಾಮೀಲು: ಪ್ರಮೋದ್ ಮುತಾಲಿಕ್ ಸ್ಪೋಟಕ ಮಾಹಿತಿ
ಆಧಾರಸಹಿತವಾಗಿ ವಾರದೊಳಗೆ ಗೃಹ ಸಚಿವ, ಪೊಲೀಸರಿಗೆ ಸಲ್ಲಿಕೆ: ಪ್ರಮೋದ್ ಮುತಾಲಿಕ್
Team Udayavani, Sep 12, 2020, 12:58 PM IST

ಮಂಡ್ಯ: ರಾಜ್ಯದ ಡ್ರಗ್ಸ್ ಪ್ರಕರಣದಲ್ಲಿ 32 ರಾಜಕಾರಣಿಗಳು ಶಾಮೀಲಾಗಿದ್ದಾರೆ. ಒಂದು ವಾರದೊಳಗೆ ಆಧಾರ ಸಹಿತವಾಗಿ ಎಲ್ಲಾ 32 ರಾಜಕಾರಣಿಗಳ ಪಟ್ಟಿಯನ್ನು ಗೃಹ ಸಚಿವರಿಗೆ ಹಾಗೂ ಸಿಸಿಬಿ ಪೊಲೀಸರಿಗೆ ನೀಡಲಿದ್ದೇನೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ನಗರದ ಭಜರಂಗಸೇನೆಯ ಕಚೇರಿಗೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಡ್ರಗ್ಸ್ ದಂಧೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಇದ್ದಾರೆ. ಕೇವಲ ನಟಿಯರನ್ನು ಗುರಿ ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ರಾಜಕಾರಣಿಗಳೇ ಚುನಾವಣೆ ಪ್ರಚಾರಕ್ಕೆ ನಟ-ನಟಿಯರನ್ನು ಕರೆಸುತ್ತಾರೆ. ಯಾಕೆ ಕರೆಸಬೇಕು ಎಂದು ಪ್ರಶ್ನಿಸಿದರು.
ರಾಜಕಾರಣಿಗಳ ಪ್ರಭಾವ
ರಾಜ್ಯದಲ್ಲಿ ರಾಜಕಾರಣಿಗಳು ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ರಾಜಕಾರಣಿಗಳದ್ದೇ ಪಬ್, ಕ್ಲಬ್, ಬಾರ್ ಎಲ್ಲ ಇವೆ. ರಾಜಕಾರಣಿಗಳಿಗೆ ಡ್ರಗ್ ನಿಂದ ಸಾವಿರಾರು ಕೋಟಿ ವ್ಯವಹಾರ ನಡೆಸುತ್ತಿದ್ದಾರೆ. ವೈನ್ ಹಾಗೂ ಡ್ರಗ್ಸ್ ಲಾಬಿ ರಾಜಕೀಯವನ್ನು ಹಿಡಿದಿಟ್ಟುಕೊಂಡಿದೆ ಎಂದರು.
ಇದನ್ನೂ ಓದಿ: ಜಮೀರ್ ಒಬ್ಬ ಗುಜರಿ ಗಿರಾಕಿ, ಗಳಿಸಿದ್ದೆಲ್ಲಾ ಅನೈತಿಕವಾಗಿಯೇ: ರೇಣುಕಾಚಾರ್ಯ ವಾಗ್ದಾಳಿ
ಜಮೀರ್ ಅಹಮದ್ ಖಾನ್ ಇದ್ದಾರೆ
ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಶಾಮೀಲಾಗಿದ್ದಾರೆ. ಅವರನ್ನು ಕೂಡಲೇ ಬಂಧಿಸಬೇಕು. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಜಮೀರ್ ಅಹಮದ್ ಖಾನ್‌ರನ್ನು ಸರ್ಕಾರ ಬಂಧಿಸುತ್ತಿಲ್ಲ ಎಂದು ಕಿಡಿಕಾರಿದರು.
ಲವ್ ಜಿಹಾದ್-ಡ್ರಗ್ಸ್ ಗೂ ಸಂಬಂಧ
ನಟಿ ಸಂಜನಾ ಗಂಡ ಡಾ.ಅಜೀಜ್ ಕೂಡ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ಲವ್ ಜಿಹಾದ್ ಮತ್ತು ಡ್ರಗ್ಸ್ ಎರಡಕ್ಕೂ ನೇರ ಸಂಬಂಧವಿದೆ. ಇದಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದಕ್ಕೆ ಮೂಲ ಪುರುಷ. ಅಜೀಮ್ ಅಸ್ತಾನ ಎಂಬ ದೇಶದ್ರೋಹಿ ಸೇರಿದಂತೆ ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ಬಾಲಿವುಡ್ ನಶೆ ಜಾಲದಲ್ಲಿ ಸಾರಾ ಆಲಿಖಾನ್, ರಾಕುಲ್ ಪ್ರೀತ್, ಮುಖೇಶ್ ಚಾಬ್ರಾ!ಬಾಯ್ಬಿಟ್ಟ ರಿಯಾ
ಬಿಜೆಪಿ ಧಮ್ ತೋರಿಸಬೇಕು
ಬಿಜೆಪಿ ಸರ್ಕಾರ ಧಮ್ ತೋರಿಸಬೇಕು. ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ರಾಜಕಾರಣಿಗಳು ಸೇರಿದಂತೆ ಎಲ್ಲರನ್ನು ಬಂಧಿಸಬೇಕು. ಪಾದರಾಯನಪುರ, ಕೆ.ಜೆ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಾಟೆಯಲ್ಲಿ ಡ್ರಗ್ಸ್, ಗಾಂಜಾ ಕಾರಣವಾಗಿದೆ. ಕೂಡಲೇ ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
ಹೊಸ ಸೇರ್ಪಡೆ

ಸಿ.ಟಿ ರವಿ ವಿರುದ್ಧ ಸ್ಪರ್ಧಿಸಿದರೆ ಅಡಿಕೆ ತೋಟ ಮಾರಿ 1 ಕೋಟಿ ರೂ ಕೊಡುತ್ತೇನೆ: ಸಿದ್ದರಾಮಯ್ಯಗೆ ಆಹ್ವಾನ

‘ಟಿಪ್ಪು ನಿಜ ಕನಸು’ ನಾಟಕದ ವಿರುದ್ದದ ದೂರು ಹಿಂಪಡೆದ ಅರ್ಜಿದಾರ: ಅಡ್ಡಂಡ ಸಂತಸ

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

ಪ್ರತಿಭಾವಂತ ಕ್ರಿಕೆಟ್ ಪಟುಗಳ ತವರು ಕರ್ನಾಟಕ: ಕೆ.ವೈ.ವೆಂಕಟೇಶ್

ಎರಡು ಅದ್ಭುತ ಕ್ಯಾಚ್ ಗಳಿಂದ ಬೆರಗು ಮೂಡಿಸಿದ ಸೂರ್ಯಕುಮಾರ್; ವಿಡಿಯೋ ನೋಡಿ