79 ಅಡಿಗೆ ಕುಸಿದ ಕೆಆರ್‌ಎಸ್‌ ನೀರಿನ ಮಟ್ಟ

Team Udayavani, Jun 25, 2019, 11:54 AM IST

ಕೆಆರ್‌ಎಸ್‌ ಜಲಾಶಯದ ನೀರಿನ ನೋಟ.

ಶ್ರೀರಂಗಪಟ್ಟಣ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗದೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದ್ದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಬರದ ನಡುವೆಯೇ ಕೆಆರ್‌ಎಸ್‌ ಜಲಾಶಯದ ನೀರು ಬಿಸಿಲಿನ ಝಳಕ್ಕೆ ಕಡಿಮೆಯಾಗುತ್ತಿದ್ದು ಪ್ರಸ್ತುತ ನೀರಿನ ಮಟ್ಟ 79 ಅಡಿಗೆ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ.

ಮುಂಗಾರು ಆರಂಭವಾದರೂ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್‌ಗೆ ಇನ್ನು ಜೀವಕಳೆ ಬಂದಿಲ್ಲ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಮಳೆ ಆರಂಭವಾಗಬೇಕಿತ್ತಾದರೂ, ಜಲಾಶಯದ ಒಳ ಹರಿವು ಹೆಚ್ಚಿಸುವ ಮಟ್ಟದ ಮಳೆ ಬೀಳುವ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಆದ್ದರಿಂದ ಕೆಆರ್‌ಎಸ್‌ ಒಡಲು ಬರಿದಾಗುತ್ತಿದೆ.

ಹೀಗೆ ಮಳೆ ಹಿನ್ನಡೆಯಾದರೆ ನೀರಿನ ಕೊರತೆ ಮತ್ತಷ್ಟು ಎದುರಾಗುವ ಆತಂಕ ಹೆಚ್ಚಾಗಬಹುದು. ಜಲಾಶಯದಲ್ಲಿ ಈಗಿರುವ ಸದ್ಯ ಜಲಾಶಯದಲ್ಲಿ ಈಗಿರುವ ನೀರು ಕುಡಿಯಲಿಕ್ಕೆ ಮಾತ್ರ ಸಾಕಾಗಬಹುದು. ಮುಂದಿನ ದಿನಗಳಲ್ಲಿ ಕಾವೇರಿ ಕೊಳ್ಳದಲ್ಲಿ ಜನರಿಗೆ ಕುಡಿಯುವ ನೀರಿಗೂ ಬರ ಎದುರಾಗಬಹುದು ಎನ್ನತ್ತಾರೆ ನೀರಾವರಿ ತಜ್ಞರು.

ಕ್ಷೀಣಿಸಿದ ಅಂತರ್ಜಲ ಮಟ್ಟ: ಮುಂಗಾರು ಮಳೆಯ ವಾತಾವರಣ ಕಡಿಮೆಯಾಗಿ ಮಾರ್ಚ್‌ ಮತ್ತು ಏಪ್ರಿಲ್ನಲ್ಲಿ ಮಳೆಯಾಗದೆ ಪ್ರಸ್ತುತ ಮೇ ಎರಡನೇ ವಾರದಲ್ಲಿ ಸಣ್ಣ ಮಳೆ ಬಂದಿತ್ತು. ಆದರೆ ಬಿಸಿಲಿನ ತಾಪಕ್ಕೆ ಅದು ಪ್ರಯೋಜನವಾಗದೆ ಕುಡಿಯುವ ನೀರಿಗೆ ಬರ ಬರುವುದು ಖಚಿತವಾದಂತಿದೆ. ಇನ್ನು ಜಲಾಶಯದಿಂದ ಯಾವುದೇ ನಾಲೆಗಳಿಗೆ ನೀರು ಹರಿಸುವುದು ನಿಲ್ಲಿಸಿದ ಬಳಿಕ ಕೊಳೆವೆ ಬಾವಿಗಳಲ್ಲೂ ನೀರು ಬತ್ತಿ ಹೋಗುತ್ತಿದೆ. ಇದಕ್ಕೆ ಅಂತರ್ಜಲ ಮಟ್ಟ ಕ್ಷೀಣಿಸಿರುವುದೇ ಕಾರಣ. ಮಳೆ ಬರದಿದ್ದರೆ ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ ಜಿಲ್ಲೆಗಳಿಗೆ ಕುಡಿವ ನೀರಿಗೂ ಹಾಹಾಕಾರ ಹೆಚ್ಚುವ ಸಾಧ್ಯತೆ ಇದೆ.

 

● ಗಂಜಾಂ ಮಂಜು

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಕೆ.ಆರ್‌.ಪೇಟೆ: ಪುರಾಣ ಪ್ರಸಿದ್ಧ ಗೋವುಗಳ ರಕ್ಷಕ ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ...

  • ಮಂಡ್ಯ: ಸಮೃದ್ಧ ಮಳೆ ಸುರಿದ ವೇಳೆ ಜಲಪಾತದಲ್ಲಿ ಜಲಧಾರೆ ಉಕ್ಕಿ ಹರಿಯುವ ಸೊಬಗನ್ನು ನೋಡುವುದೇ ನಯನ ಮನೋಹರ. ಆದರೆ, ಜಲಾಶಯದಲ್ಲಿ ಸಂಗ್ರಹವಾಗಿರುವ ನೀರನ್ನು ಹರಿಸಿ...

  • ಶ್ರೀರಂಗಪಟ್ಟಣ: ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ ರೈತರ ಸಹಾಯಧನ, ವ್ಯದ್ಧಾಪ್ಯ, ವಿಧವಾ ವೇತನಗಳನ್ನೂ ಬ್ಯಾಂಕುಗಳಲ್ಲಿ ರೈತರು ಪಡೆದ ಸಾಲಕ್ಕೆ ಜಮೆ ಮಾಡಿಕೊಳ್ಳುವ...

  • ಮಂಡ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ದಿನಗೂಲಿ ನೌಕರರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಒಂದು ದಿನದ ಧರಣಿ ನಡೆಸಿ ಜಿಲ್ಲಾಧಿಕಾರಿಗಳ...

  • ಮದ್ದೂರು: ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳಿಸಬೇಕೆಂಬ ಸದುದ್ದೇಶದಿಂದ ಇಂತಹ ಅಧ್ಯಯನ ತರಗತಿಗಳನ್ನು ಆಯೋಜಿಸುತ್ತಿರುವುದಾಗಿ ಮಾನಸ ಎಜುಕೇಷನ್‌ ಟ್ರಸ್ಟ್‌...

ಹೊಸ ಸೇರ್ಪಡೆ