ಮಾನಸಿಕ ರೋಗದ ಜಾಗೃತಿ ಅವಶ್ಯ

ಮಾನಸಿಕ ರೋಗಿಗಳಿಗೆ ಮಾಟ-ಮಂತ್ರದ ಹೆಸರಲ್ಲಿ ಹಿಂಸೆ: ಎಸ್ಪಿ ಶಿವಪ್ರಕಾಶ್‌

Team Udayavani, May 25, 2019, 4:42 PM IST

ಮಂಡ್ಯದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮನೋರೋಗ ವಿಭಾಗ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಸ್ಕಿಜೋಫ್ರಿನಿಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಪಿ ಡಿ.ಶಿವಪ್ರಕಾಶ್‌ ದೇವರಾಜು ಮಾತನಾಡಿದರು.

ಮಂಡ್ಯ: ಮಾನಸಿಕ ರೋಗದ ಬಗ್ಗೆ ಗ್ರಾಮೀಣರಿಗೆ ಜಾಗೃತಿ ಅವಶ್ಯ ಎಂದು ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಿ.ಶಿವಪ್ರಕಾಶ್‌ ದೇವರಾಜು ತಿಳಿಸಿದರು.

ನಗರದ ಮಿಮ್ಸ್‌ನ ಸಭಾಂಗಣದಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮನೋರೋಗ ವಿಭಾಗ, ಸಮುದಾಯ ವೈದ್ಯಕೀಯ ಶಾಸ್ತ್ರ ವಿಭಾಗದ ಸಹಯೋಗದಲ್ಲಿ ವಿಶ್ವ ಸ್ಕಿಜೋಫ್ರಿನಿಯಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣರಿಗೆ ಮಾನಸಿಕ ರೋಗದ ಬಗ್ಗೆ ಅರಿವಿನ ಕೊರತೆ ಇದೆ. ಚಿಕಿತ್ಸೆಯ ತಿಳಿವಳಿಕೆಯಿಲ್ಲದೆ ಮಾಟ- ಮಂತ್ರದ ಹೆಸರಿನಲ್ಲಿ ತೀವ್ರ ಹಿಂಸೆಗೆ ಗುರಿಪಡಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮಾನಸಿಕ ಖನ್ನತೆಗೆ ಒಳಗಾದವರನ್ನು ದೂರ ಮಾಡುತ್ತಾರೆ. ಅವರ ಸಹಾಯಕ್ಕೆ ಯಾರೂ ಮುಂದಾಗುವುದಿಲ್ಲ. ಮಾನಸಿಕ ಖನ್ನತೆಗೆ ಒಳಗಾದವರಿಗೆ ಅವಶ್ಯಕ ಸಹಾಯವನ್ನು ಪೊಲೀಸ್‌ ಇಲಾಖೆ ನೀಡಲು ಸಿದ್ಧವಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಚೇಗೌಡ ಮಾತನಾಡಿ, ಸ್ಕಿಜೋಫ್ರಿನಿಯಾ ಮಾನಸಿಕ ಕಾಯಿಲೆಯಾಗಿದ್ದು, ಇದಕ್ಕೆ ಗುರಿಯಾದ ವ್ಯಕ್ತಿ ಮಾನಸಿಕ ಖನ್ನತೆಗೆ ಒಳಗಾಗುತ್ತಾನೆ. ಇದರಿಂದ ಭ್ರಮನಿರಸನಕ್ಕೆ ಒಳಗಾಗುತ್ತಾರೆ. ಮೆದುಳಿನಲ್ಲಿ ನಡೆಯುವ ರಾಸಾಯನಿಕ ವ್ಯತ್ಯಾಸಗಳಿಂದ ಈ ಕಾಯಿಲೆ ಬರುತ್ತದೆ. ರಕ್ತದೊತ್ತತ್ತಡ, ಆಘಾತ, ಪರಿಸರ, ಮದ್ಯ ಸೇವನೆಯಿಂದ ಈ ಕಾಯಿಲೆ ಬರುತ್ತದೆ. ಅಂತಹವರು ಅವರಷ್ಟಕ್ಕೆ ಅವರೇ ಮಾತನಾಡುತ್ತಾರೆ. ಗಲಾಟೆ ಮಾಡುತ್ತಾರೆ. ಸ್ವಚ್ಛತೆ ಇರುವುದಿಲ್ಲ. ಅಂತಹವರನ್ನು ಗುರುತಿಸಿ ಸರಿಯಾದ ಚಿಕಿತ್ಸೆ ಕೊಡಿಸಿದರೆ ಗುಣಮುಖರಾಗುತ್ತಾರೆ ಎಂದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಕೆ.ಪಿ.ಅಶ್ವಥ್‌, ಮಿಮ್ಸ್‌ ನಿರ್ದೇಶಕ ಡಾ.ತ್ರಿನೇಶ್‌ಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಂ. ನಾಗರಾಜು, ಡಾ.ಅಶೋಕ್‌ಕುಮಾರ್‌, ಡಾ.ಶಶಾಂಕ್‌, ಚಿಕ್ಕರಸೇ ಗೌಡ, ಮಹಮದ್‌ಕುಟ್ಟಿ, ಗೋವಿಂದರಾಜು ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ನಗರದ ಚಾಮುಂಡೇಶ್ವರಿ ಬಡಾವಣೆಯಲ್ಲಿರುವ ಸಂಸದೆ ಸುಮಲತಾ ಅವರ ಗೃಹಕಚೇರಿಯಲ್ಲಿ ಅರ್ಹ ಫ‌ಲಾನುಭವಿಗಳಿಗೆ ಆಯುಷ್ಮಾನ್‌ ಆರೋಗ್ಯ ಚೀಟಿ ವಿತರಣೆ ಮಾಡಲಾಯಿತು. ಗುರುತಿನ...

  • ಮಂಡ್ಯ: ಮುಂಬರುವ ಉಪ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್‌ ಆಪರೇಷನ್‌ ಕಮಲದಿಂದ ಕಳೆದುಕೊಂಡಿರುವ ಮೂರು ಕ್ಷೇತ್ರಗಳಲ್ಲೂ...

  • ಶ್ರೀರಂಗಪಟ್ಟಣ: ಲೋಕೋಪಯೋಗಿ ಇಲಾಖೆ ನಡೆಸಿರುವ ಬಹುತೇಕ ಕಾಮಗಾರಿಗಳು ಕಳಪೆಯಿಂದ ಕೂಡಿವೆ. ಶ್ರೀರಂಗಪಟ್ಟಣ- ರಾಂಪುರ ಸಂಪರ್ಕ ರಸ್ತೆ ಅತಿಕ್ರಮವಾಗಿರುವ ಬಗ್ಗೆ...

  • ಮಂಡ್ಯ: ಬ್ಯಾಂಕ್‌ ಆಫ್‌ ಬರೋಡ ಮತ್ತು ಇತರೆ ಸಾರ್ವಜನಿಕ ವಲಯದ ಬ್ಯಾಂಕುಗಳ ವತಿಯಿಂದ ಅ. 22 ಮತ್ತು 23ರಂದು ನಗರದ ಪಾಂಡುರಂಗ ಸಮುದಾಯ ಭವನದಲ್ಲಿ ಗ್ರಾಹಕ ಸಂಪರ್ಕ ಮೇಳ...

  • ಮಂಡ್ಯ: ಅಕ್ರಮ ಕಟ್ಟಡ ನಿರ್ಮಾಣ ಮಾಡಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಉಂಟು ಮಾಡುತ್ತಿದ್ದು, ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಶ್ರೀರಂಗ ಪಟ್ಟಣ ತಾಲೂಕು...

ಹೊಸ ಸೇರ್ಪಡೆ

  • ಹೊಸದಿಲ್ಲಿ: ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಅರ್ಜಿದಾರರಿಗೆ ಲಿಖೀತ ದಾಖಲೆ ಸಲ್ಲಿಕೆಗೆ ಸುಪ್ರೀಂಕೋರ್ಟ್‌ ಅವಕಾಶ ನೀಡಿದೆ. ಮುಖ್ಯ ನ್ಯಾಯಮೂರ್ತಿ...

  • ಹೊಸದಿಲ್ಲಿ: ಪ್ರಸಕ್ತ ವರ್ಷ ಶೇ.3 ರಷ್ಟು ಕುಸಿತ ಕಂಡಿರುವ ವಿಶ್ವದ ಒಟ್ಟಾರೆ ಉತ್ಪನ್ನವು (ವಿಶ್ವ ಜಿಡಿಪಿ), 2024ರ ಹೊತ್ತಿಗೆ ಮತ್ತಷ್ಟು ಕುಸಿತ ಕಾಣಲಿದೆ. ಆ ಸಂದರ್ಭದಲ್ಲಿ...

  • ಹೊಸದಿಲ್ಲಿ: ಸಂಸತ್‌ನ ಚಳಿಗಾಲದ ಅಧಿವೇಶನವು ನವೆಂಬರ್‌ 18ರಿಂದ ಡಿಸೆಂಬರ್‌ 13ರವರೆಗೆ ನಡೆಯಲಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಸಂಸದೀಯ ವ್ಯವಹಾರಗಳ...

  • ಬೀಜಿಂಗ್‌: ವಾಣಿಜ್ಯ ಉದ್ದೇಶಗಳಿಗಾಗಿ ಹಾರಿಬಿಡುವ ಉಪಗ್ರಹಗಳ ಉಡಾವಣೆಯು ಹೊಸ ಮಾರುಕಟ್ಟೆಯನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ, ಚೀನ, ಹೊಸ ತಲೆಮಾರಿನ ರಾಕೆಟ್‌ಗಳ...

  • ಗಡಿಯಾಚೆಗಿನಿಂದ ಸತತವಾಗಿ ಕದನ ವಿರಾಮ ಉಲ್ಲಂ ಸುತ್ತಾ ನಾಗರಿಕರನ್ನು ಮತ್ತು ಯೋಧರನ್ನು ಗುರಿ ಮಾಡಿಕೊಂಡು ಶೆಲ್‌ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದ ಪಾಕಿಸ್ಥಾನಕ್ಕೆ...