ಸಂಸ್ಕೃತಿ-ಪರಂಪರೆಗೆ ಉಜ್ವಲ ಭವಿಷ್ಯ
Team Udayavani, Jun 10, 2020, 5:18 AM IST
ಮಂಡ್ಯ: ಭಾರತೀಯ ಸಂಸ್ಕೃತಿ ಪರಂಪರೆಗೆ ಉಜ್ವಲವಾದ ಭವಿಷ್ಯವಿದೆ. ಅದನ್ನು ಮುನ್ನಡೆಸುವ, ಪ್ರೀತಿ ಸುವ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ತಿಳಿಸಿದರು. ಪಾಮ್ ಫೌಂಡೇಷನ್‌ನಿಂದ ನಗರದಲ್ಲಿ ಪತ್ರ ಕರ್ತರಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿ, ಭಾರತಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಭಾವೈಕ್ಯತೆಯಿಂದ ಕೂಡಿರುವ ವಿಭಿನ್ನ ಸಂಪ್ರದಾಯದ ದೇಶವಾಗಿ ಹೊರಹೊಮಿದೆ.
ಇಲ್ಲಿ ಜಾತಿ, ಧರ್ಮದ ಸಂಕೋಲೆಗಳ ನಡುವೆ ಸಿಕ್ಕಿ ನರಳುವುದನ್ನು ಬಿಟ್ಟು ಎಲ್ಲರನ್ನೂ ಪ್ರೀತಿ ಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ದೇವರು ಒಬ್ಬನೇ, ಇಲ್ಲಿ ಯಾವ ಬೇಧ ಭಾವವಿಲ್ಲ. ಸಮಾಜದಲ್ಲಿ ಒಳ್ಳೆಯ ಮನುಷ್ಯನಾಗಿ ಧರ್ಮನಿಷ್ಠ ನಾಗಿ ಬದುಕಬೇಕು. ನನ್ನನ್ನು ದೇವರು ಪೋಸ್ಟ್‌ಮನ್ ಆಗಿ ನೇಮಕ ಮಾಡಿದ್ದಾನೆ.
ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ದೇವರ ಭಾವನೆಯಲ್ಲಿ ನನ್ನ ಕೆಲಸ ಇಷ್ಟವಾಗದಿದ್ದರೆ ನನ್ನನ್ನು ತೆಗೆದುಹಾಕಿ ಆ ಜಾಗ ದಲ್ಲಿ ಬೇರೊಬ್ಬರನ್ನು ಕೂರಿಸಿ ಸಮಾಜ ಸೇವೆ ಮಾಡಿಸು ತ್ತಾನೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಉಳ್ಳವರು ಇತರರಿಗೆ ದಾನ ಮಾಡುವ ಮೂಲಕ ಭಗವಂತನ ಸೇವೆ ಮಾಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ. ಮಂಜುನಾಥ, ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ, ನಿರ್ದೇಶಕರಾದ ಸೋಮಶೇಖರ್, ಲಿಂಗರಾಜು, ಮಾಜಿ ಅಧ್ಯಕ್ಷ ಕೆ.ಎನ್. ರವಿ, ಪ್ರಧಾನ ಕಾರ್ಯದರ್ಶಿ ಮೋಹನ್‌ರಾಜ್, ನಿರ್ದೇಶಕ ಕೆ.ಎನ್. ನವೀನ್‌ಕುಮಾರ್, ಸಂಪಾದಕರ ಸಂಘದ ಅಧ್ಯಕ್ಷ ಬಿ. ಪಿ. ಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷೆ ನಸ್ರಿನ್‌ತಾಜ್, ಮಾಜಿ ಸದಸ್ಯ ಅಫೂಜ್‌ಖಾನ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
4 ದಿನಗಳಲ್ಲಿ 12 ಉಗ್ರರ ಸಂಹಾರ; ಕಾಶ್ಮೀರದಲ್ಲಿ ಮತ್ತಿಬ್ಬರು ಉಗ್ರರ ಹತ್ಯೆ
ಜೂ. 5ರಂದು ಕರಾವಳಿಗೆ ಮುಂಗಾರು ಪ್ರವೇಶ ಸಾಧ್ಯತೆ
ಫೈನಲ್ ಮೊದಲು ಸಮಾರೋಪ ಸಮಾರಂಭ; ರಣವೀರ್ ಸಿಂಗ್, ಎ.ಆರ್, ರೆಹಮಾನ್ರಿಂದ ಕಾರ್ಯಕ್ರಮ
ಬಿಹಾರದಲ್ಲಿ ಅತಿದೊಡ್ಡ ಚಿನ್ನದ ನಿಕ್ಷೇಪ : ಚಿನ್ನದ ಗಣಿಗಾರಿಕೆಗೆ ಅವಕಾಶ ನೀಡಲು ತಯಾರಿ
ತಿರುಪತಿಯಲ್ಲಿ ಭಕ್ತ ಜನ ಸಾಗರ : “ಕೆಲ ದಿನಗಳ ಕಾಲ ತಿರುಪತಿಗೆ ಬರಬೇಡಿ’