Udayavni Special

ನ್ಯಾಯಾಲಯದ ತೀರ್ಪಿನಿಂದ ಪುರಪಿತೃಗಳಿಗೆ ಆತಂಕ

ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ನುಂಗಲಾರದ ತುತ್ತಾದ ತೀರ್ಪು

Team Udayavani, Nov 21, 2020, 3:26 PM IST

ನ್ಯಾಯಾಲಯದ ತೀರ್ಪಿನಿಂದ ಪುರಪಿತೃಗಳಿಗೆ ಆತಂಕ

ಮಂಡ್ಯ: ರಾಜ್ಯದ ಉತ್ಛ ನ್ಯಾಯಾಲಯವುಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆಮೀಸಲಾತಿ ಪ್ರಕಟಿಸಿದ್ದ ರಾಜ್ಯ ಸರ್ಕಾರದಅಧಿಸೂಚನೆಯನ್ನು ರದ್ದುಪಡಿಸಿ, ಆದೇಶ ನೀಡಿರುವುದರಿಂದ ಕಳೆದ ಎರಡು ವರ್ಷಗಳಿಂದ ಅಧಿಕಾರವಿಲ್ಲದೆ ಮೌನವಾಗಿದ್ದ ಪುರಪಿತೃಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

ಈಗಾಗಲೇ ಜಿಲ್ಲೆಯ 1 ನಗರಸಭೆ, 6 ಪುರಸಭೆ ಹಾಗೂ 1 ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರದ ಅಧಿಸೂಚನೆಯಂತೆ ಚುನಾವಣೆ ನಡೆದು ನೂತನ ಅಧ್ಯಕ್ಷಹಾಗೂ ಉಪಾಧ್ಯಕ್ಷರಾಗಿಆಯ್ಕೆಯಾಗಿದ್ದರು. ಆದರೆ, ತೀರ್ಪಿನಿಂದಕೈಕೈ ಹಿಸುಕಿಕೊಳ್ಳುವಂತಾಗಿದೆ.

ಮೀಸಲಾತಿ ತರಲು ದೊಡ್ಡ ರಾಜಕೀಯವೇ ನಡೆದಿತ್ತು. ಸರ್ಕಾರದ ಮೊದಲನೇ ಅಧಿಸೂಚನೆ ವಿರುದ್ಧ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಎರಡು ವರ್ಷಗಳ ಕಾಲ ವಿಚಾರಣೆ ನಡೆದು ಕಳೆದು ತಿಂಗಳು ಹೊಸದಾಗಿ ಅಧಿಸೂಚನೆ ಹೊರಡಿಸಿ, ನ.5ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಅದರಂತೆ ಜಿಲ್ಲೆಯಲ್ಲೂ ಚುನಾವಣೆ ನಡೆಸಲಾಗಿತ್ತು. ಅದರ ವಿರುದ್ಧ ರಾಜ್ಯಾದ್ಯಂತ ಸುಮಾರು 25ಕ್ಕೂ ರಿಟ್‌ಅರ್ಜಿಗಳು ಸಲ್ಲಿಕೆಯಾದಕಾರಣಹೈಕೋರ್ಟ್‌ ಎರಡನೇ ಮೀಸಲಾತಿ ಅಧಿಸೂಚನೆಯನ್ನುರದ್ದುಪಡಿಸಿ, ರೊಟೇಷನ್‌ ಆಧಾರದ ಮೇಲೆ ಹೊಸ  ಮೀಸಲಾತಿ ಅಧಿಸೂಚನೆ ಹೊರಡಿಸುವಂತೆಸೂಚಿಸಿರುವುದು ಪುರಪಿತೃಗಳಿಗೆ ನುಂಗಲಾರದ ತುತ್ತಾಗಿದೆ.

ಅಧಿಕಾರ ಹಿಡಿಯಲು ಕಸರತ್ತು: ಮಂಡ್ಯ ನಗರಸಭೆ, ಮದ್ದೂರು, ಶ್ರೀರಂಗಪಟ್ಟಣ, ನಾಗ ಮಂಗಲ, ಮಳವಳ್ಳಿ, ಕೆ.ಆರ್‌.ಪೇಟೆ, ಪಾಂಡಪವುರ ಪುರಸಭೆ ಹಾಗೂ ಬೆಳ್ಳೂರು ಪಟ್ಟಣ ಪಂಚಾಯ್ತಿ ಅಧಿಕಾರ ಹಿಡಿಯಲು ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸಿದ್ದವು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಲಾಬಿ ನಡೆಸಿಪ್ರವಾಸ, ಗೌಪ್ಯ ಸ್ಥಳಗಳಿಗೆ ತೆರಳಿದ್ದರು. ಅಲ್ಲದೆ, ಕೆಲವು ಕಡೆ ಸದಸ್ಯರ ಪಕ್ಷಾಂತರ ನಡೆದಿದ್ದರೆ, ಕೆಲವು ಕಡೆ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಹಿಡಿದಿದ್ದರು.

ಅಧಿಕಾರ ಸ್ವೀಕರಿಸಿದ್ದ ಅಧ್ಯಕ್ಷ-ಉಪಾಧ್ಯಕ್ಷರು: ಜಿಲ್ಲೆಯ ಆರುಕಡೆ ಜೆಡಿಎಸ್‌ ಅಧಿಕಾರ ಹಿಡಿದಿದ್ದರೆ, ಬೆಳ್ಳೂರು ಪಟ್ಟಣ ಪಂಚಾಯ್ತಿ ಕಾಂಗ್ರೆಸ್‌ ವಶವಾಗಿತ್ತು. ಕೆ.ಆರ್‌.ಪೇಟೆ ಪುರಸಭೆಯ ಫ‌ಲಿತಾಂಶ ಇನ್ನೂ ಪ್ರಕಟವಾಗದೆ ಉಳಿದಿತ್ತು. ಈಗಾಗಲೇ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಪುರಪಿತೃಗಳು ಅಧಿಕಾರ ಸ್ವೀಕರಿಸಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಸಾಮಾನ್ಯ ಸಭೆ ಕರೆದು ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ತಯಾರಿಗಳು ಜೋರಾಗಿಯೇ ನಡೆದಿದ್ದವು. ಅಲ್ಲದೆ, ಅಧಿಕಾರಿಗಳ ಸಭೆ ನಡೆಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಯತ್ನದಲ್ಲಿದ್ದರು. ಈಗ ಬಂದಿರುವ ತೀರ್ಪಿನಿಂದ ಮತ್ತೆ ನಾಲ್ಕು ವಾರಗಳ ಕಾಲ ಕಾಯಬೇಕಾಗಿದ್ದು, ಸರ್ಕಾರದ ಮುಂದಿನ ಕ್ರಮದ ಮೇಲೆ ನಿರ್ಧಾರ ಕೈಗೊಳ್ಳಲು ನೂತನ ಅಧ್ಯಕ್ಷ-ಉಪಾಧ್ಯಕ್ಷರು ಮುಂದಾಗಿದ್ದಾರೆ.

ರಾಜ್ಯ ಉತ್ಛ ನ್ಯಾಯಾಲಯ ಸರ್ಕಾರದ ಮೀಸಲಾತಿ ಅಧಿಸೂಚನೆಯನ್ನು ರದ್ದುಪಡಿಸಿ ಹೊಸ ಮೀಸಲಾತಿ ಪಟ್ಟಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ರಾಜ್ಯ ಸರ್ಕಾರಏನು ನಿರ್ದೇಶನ ನೀಡಲಿದೆ ಎಂಬುದನ್ನು ಕಾದು ನೋಡಿ, ನಂತರ ಸರ್ಕಾರದ ನಿರ್ದೇಶನದಂತೆ ಮುಂದಿನಕ್ರಮ ವಹಿಸಲಾಗುವುದು. ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾಧಿಕಾರಿ, ಮಂಡ್ಯ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಆನೆಗೊಂದಿ ಬೈಪಾಸ್ ರಸ್ತೆಯಲ್ಲಿ ಚಿರತೆ ಮರಿ‌ ಪ್ರತ್ಯಕ್ಷ: ಭಯಭೀತರಾದ ಜನ

ಆನೆಗೊಂದಿ ಬೈಪಾಸ್ ರಸ್ತೆಯಲ್ಲಿ ಚಿರತೆ ಮರಿ‌ ಪ್ರತ್ಯಕ್ಷ: ಭಯಭೀತರಾದ ಜನ

ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್

ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್

ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ

ಭಾರತ-ಆಸ್ಟ್ರೇಲಿಯ ಮೊದಲ ಟಿ20: ತಿರುಗೇಟು ನೀಡಲು ಕೊಹ್ಲಿ ಪಡೆಗೊಂದು ಅವಕಾಶ

ಹೈದರಾಬಾದ್ ನಗರ ಪಾಲಿಕೆ ಚುನಾವಣೆ: ಇಂದು ಮತ ಎಣಿಕೆ, ಬಿಜೆಪಿ- ಟಿಆರ್ ಎಸ್ ಪ್ರತಿಷ್ಠೆ

ಹೈದರಾಬಾದ್ ನಗರ ಪಾಲಿಕೆ ಚುನಾವಣೆ: ಇಂದು ಮತ ಎಣಿಕೆ, ಬಿಜೆಪಿ- ಟಿಆರ್ ಎಸ್ ಪ್ರತಿಷ್ಠೆ

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

ಮರಡೋನಾಗೆ ಗೌರವ ಸಲ್ಲಿಸಿ ದಂಡ ತೆತ್ತ ಲಿಯೋನೆಲ್‌ ಮೆಸ್ಸಿ

ಮರಡೋನಾಗೆ ಗೌರವ ಸಲ್ಲಿಸಿ ದಂಡ ತೆತ್ತ ಲಿಯೋನೆಲ್‌ ಮೆಸ್ಸಿ

ಮಾಸ್ಕ್ ಹಾಕದೆ ನಿಯಮ ಉಲ್ಲಂಘನೆ: ಐದೂವರೆ ಕೋಟಿ ದಂಡ ಸಂಗ್ರಹ

ಮಾಸ್ಕ್ ಹಾಕದೆ ನಿಯಮ ಉಲ್ಲಂಘನೆ: ಐದೂವರೆ ಕೋಟಿ ದಂಡ ಸಂಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

baalaki

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ 61ರ ವೃದ್ಧ; ಬಾಲಕಿ ಗರ್ಭಿಣಿಯಾದಾಗ ವಿಚಾರ ಬೆಳಕಿಗೆ

2023ರಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ತರಲು ಶ್ರಮ

2023ರಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ತರಲು ಶ್ರಮ

ಅತ್ಯಾಚಾರಕ್ಕೆ ಒಪ್ಪದ ಅಪ್ರಾಪ್ತ ಬಾಲಕಿಯನ್ನು ಕುಡುಗೋಲಿನಿಂದ ಕತ್ತು ಕುಯ್ದು ಹತ್ಯೆ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕುಡುಗೋಲಿನಿಂದ ಕತ್ತು ಕುಯ್ದು ಹತ್ಯೆ

ಸಕಾಲ ಸಪ್ತಾಹ: ರಾಜ್ಯಕ್ಕೆ ಮಂಡ್ಯ ಪ್ರಥಮ

ಸಕಾಲ ಸಪ್ತಾಹ: ರಾಜ್ಯಕ್ಕೆ ಮಂಡ್ಯ ಪ್ರಥಮ

ಜಾಗೃತಿಯಿಂದ ಏಡ್ಸ್‌ ನಿಯಂತ್ರಣ ಸಾಧ್ಯ

ಜಾಗೃತಿಯಿಂದ ಏಡ್ಸ್‌ ನಿಯಂತ್ರಣ ಸಾಧ್ಯ

MUST WATCH

udayavani youtube

ಉಗ್ರಪರ ಗೋಡೆ ಬರಹ ಪ್ರಕರಣದ ಆರೋಪಿಗಳ ಶೀಘ್ರ ಬಂಧನ: ಗೃಹ ಸಚಿವ ಬೊಮ್ಮಾಯಿ

udayavani youtube

Meal of Bakasur | ತುಳುನಾಡಿನ 14ಖಾದ್ಯಗಳನ್ನು ಉಣಬಡಿಸುವ ಬಕಾಸುರನ ಬಾಡೂಟ | FishCampus

udayavani youtube

ಸ್ವಂತ ಉದ್ಯಮ ಪ್ರಾರಂಭಿಸುವ ಮುನ್ನ ಇಲ್ಲೊಮ್ಮೆ ನೋಡಿ

udayavani youtube

ಸರಕಾರ ನಿಮ್ಮ ಜೊತೆಯಿದೆ: ಮೀನುಗಾರರ ಕುಟುಂಬಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

udayavani youtube

ಮಂಗಳೂರು ಬೋಟ್ ದುರಂತ: ಮತ್ತೋರ್ವ ಮೀನುಗಾರನ ಮೃತದೇಹ ಪತ್ತೆ

ಹೊಸ ಸೇರ್ಪಡೆ

ಸಮಾನತೆ ಸಾರುವ ಮಕ್ಕಳ ಚಿತ್ರ : ಸಾಹಿತಿ

ಸಮಾನತೆ ಸಾರುವ ಮಕ್ಕಳ ಚಿತ್ರ : ಸಾಹಿತಿ

ಆನೆಗೊಂದಿ ಬೈಪಾಸ್ ರಸ್ತೆಯಲ್ಲಿ ಚಿರತೆ ಮರಿ‌ ಪ್ರತ್ಯಕ್ಷ: ಭಯಭೀತರಾದ ಜನ

ಆನೆಗೊಂದಿ ಬೈಪಾಸ್ ರಸ್ತೆಯಲ್ಲಿ ಚಿರತೆ ಮರಿ‌ ಪ್ರತ್ಯಕ್ಷ: ಭಯಭೀತರಾದ ಜನ

ಯುವ ಮತದಾರರ ನೋಂದಣಿಗೆ ಕ್ರಮ ಕೈಗೊಳ್ಳಿ

ಯುವ ಮತದಾರರ ನೋಂದಣಿಗೆ ಕ್ರಮ ಕೈಗೊಳ್ಳಿ

ಲಾಕೌಟ್‌ ವಾಪಸ್‌ಗೆ ಕಾರ್ಮಿಕರ ಆಗ್ರಹ

ಲಾಕೌಟ್‌ ವಾಪಸ್‌ಗೆ ಕಾರ್ಮಿಕರ ಆಗ್ರಹ

ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್

ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.