Udayavni Special

ಮಗನ ಗೆಲುವಿಗಾಗಿ ಸಿಎಂ ಕುತಂತ್ರ: ಸುಮಲತಾ


Team Udayavani, Apr 13, 2019, 5:33 PM IST

man1
ಕೆ.ಆರ್‌.ಪೇಟೆ: ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿರುವ ಕುಮಾರಸ್ವಾಮಿಯವರು ರಾಜ್ಯದ ಅಭಿವೃದ್ಧಿ ಅಥವಾ ಇತರೆ
ಕ್ಷೇತ್ರಗಳ ಚುನಾವಣಾ ಕೆಲಸ ಮಾಡುವುದನ್ನು ಬಿಟ್ಟು ಮಂಡ್ಯ ಜಿಲ್ಲೆಯಲ್ಲಿ ಮಗನ ಗೆಲುವಿಗಾಗಿ ಕುತಂತ್ರ ನಡೆಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ತಿಳಿಸಿದರು.
ತಾಲೂಕಿನ ಸಿಂಧುಘಟ್ಟ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿ, ಒಬ್ಬ ಹೆಣ್ಣು ಮಗಳಾದ ನನ್ನನ್ನು ಸೋಲಿಸಿ ತಮ್ಮ ಮಗನನ್ನು ಗೆಲಿಸಿಕೊಳ್ಳುವ ಏಕೈಕ ಉದ್ದೇಶದಿಂದ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಕೆಲಸಗಳನ್ನು ಬಿಟ್ಟು ಮಂಡ್ಯ ಜಿಲ್ಲೆಯಲ್ಲಿಯೆ ವಾಸ್ತವ್ಯ ಹೂಡಿ ಕುತಂತ್ರ ಹೆಣೆಯುತ್ತಿದ್ದಾರೆ. ಆದರೆ ಜನರು ಅವರಿಗೆ ತಕ್ಕಪಾಠ ಕಲಿಸಲು ಈಗಾಗಲೆ ನಿಶ್ಚಯ ಮಾಡಿದ್ದು, ಯಾರು ಏನೆ ಕುತಂತ್ರ ಮಾಡಿದರೂ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ಸಾವಿರ ರೂ.ಗಳಿಂದ ಮನೆ ಕಟ್ಟಲಾಗದು: ಚುನಾವಣೆಯ ಹಿಂದಿನ ದಿನ ಜಿಲ್ಲೆಯಲ್ಲಿ ಹಣದ ಹೊಳೆಯನ್ನೆ ಹರಿಸಲು ಜೆಡಿಎಸ್‌ ಪಕ್ಷದವರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆಂಬ ಮಾಹಿತಿ ಬಂದಿದೆ.
ಆದರೆ ಅವರು ನೀಡುವ 500 ಅಥವಾ 1000 ರೂ.ಗಳಿಂದ ಮತದಾರರು ಮಗಳ ಮದುವೆ ಮಾಡಲು ಸಾಧ್ಯವಾ ಅಥವಾ ಮನೆ ಕಟ್ಟಿಕೊಳ್ಳಲು ಆಗುತ್ತಾ, ಮತ್ತೆ ಏಕೆ ಚಿಲ್ಲರೆ ಕಾಸಿಗೆ ನಿಮ್ಮ ಸ್ವಾಭಿಮಾನ ಬಿಡಬೇಕು ಎಂದು ಸಾರ್ವಜನಿಕರನ್ನು ಪ್ರಶ್ನಿಸಿದ ಅವರು, ತಮ್ಮ ಅಮೂಲ್ಯ ಮತವನ್ನು ಮಾರಾಟ ಮಾಡಿ ಕೊಳ್ಳಬೇಡಿ. ಅವರು ನಿಮಗೆ 500 ರೂ. ಕೊಟ್ಟು ಚುನಾವಣೆಯಲ್ಲಿ ಗೆದ್ದರೆ ಐದು ಸಾವಿರ ಸಂಪಾದನೆ ಮಾಡಲು ಭ್ರಷ್ಟಾಚಾರ ಮಾಡುತ್ತಾರೆ. ಆಗ ನಿಮ್ಮದೆ ತೆರಿಗೆ ಹಣ ಕಳ್ಳರ ಪಾಲಾಗುತ್ತದೆ. ಆದ್ದರಿಂದ ಹಣ ಪಡೆದು ಮತ ನೀಡುವ ಬದಲು ಅಭಿವೃದ್ಧಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ವಾಭಿಮಾನದಿಂದ ಮತ ಚಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಯೋಧರ ಅಪಮಾನ ಕ್ಷಮಿಸಲಾಗದು: ನಮ್ಮ ದೇಶ ಹಾಗೂ ನಮ್ಮನ್ನು ರಕ್ಷಣೆ ಮಾಡಲು ತಮ್ಮ ಕುಟುಂಬಗಳನ್ನು ಬಿಟ್ಟು ಮಳೆ, ಗಾಳಿ, ಚಳಿ ಮತ್ತು ಸುಡು ಬಿಸಿಲಿನಲ್ಲಿ ನಮ್ಮ ದೇಶವನ್ನು ಕಾಯುತ್ತಿರುವ ವೀರ ಯೋಧರನ್ನು ಎರಡು ಹೊತ್ತಿನ ಊಟಕ್ಕೆ ಗತಿ ಇಲ್ಲದವರು ಸೈನ್ಯಕ್ಕೆ ಸೇರುತ್ತಾರೆ ಎಂದು ಹೇಳುವ ಮೂಲಕ ಯೋಧರಿಗೆ ಮುಖ್ಯಮಂತ್ರಿಗಳು ಅಪಮಾನ ಮಾಡಿದ್ದಾರೆ. ಇಂತಹವರಿಂದ ನಾವು ಯಾವ ನ್ಯಾಯಪರ ಕೆಲಸಗಳನ್ನು ಪಡೆದುಕೊಳ್ಳಲು ಸಾಧ್ಯ ಎಂದು ಕುಟುಕಿದರು.
8 ಸಾವಿರ ದೇಣಿಗೆ: ಚುನಾವಣಾ ಪ್ರಚಾರ ವೇಳೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಚುನಾವಣಾ ವೆಚ್ಚಕ್ಕಾಗಿ ಸಿಂಧುಘಟ್ಟ ಗ್ರಾಮಸ್ಥರು 8 ಸಾವಿರ ರೂ. ಹಣ ಸಂಗ್ರಹಿಸಿ ದೇಣಿಗೆ ನೀಡಿದರು.
ನಿಮ್ಮೊಂದಿಗೆ ನಾವಿದ್ದೇವೆ: ತಾಲೂಕಿನ ಮೈನಹಳ್ಳಿಯಲ್ಲಿ ಸುಮಲತಾ ಚುನಾವಣಾ ಪ್ರಚಾರ ಮಾಡುತ್ತಿದ್ದ ಸಮಯದಲ್ಲಿ ಮಾತನಾಡಿದ ಸಚಿವ ರೇವಣ್ಣ ಸುಮಲತಾ ಬಗ್ಗೆ ಮಾತನಾಡಿದ್ದಕ್ಕ ಪ್ರತಿಕ್ರಿಯಿಸಿರುವ ಲಕ್ಷ್ಮಮ್ಮ, ನಾನು ಗಂಡನನ್ನು ಕಳೆದುಕೊಂಡು ಗಂಡನಿಲ್ಲದ ನೋವನ್ನು ಅನುಭವಿಸುತ್ತಿರುವೆ. ನೀವೂ ಸಹ ನನ್ನಂತೆ ನೋವು ಅನುಭವಿಸುತ್ತಿರುವವರು. ನಿಮ್ಮೊಂದಿಗೆ ನಾವೆಲ್ಲಾ ಮಹಿಳೆಯರು ಇರುತ್ತೇವೆ. ಧೈರ್ಯದಿಂದ ಇರಿ. ಗೆಲುವು ನಿಮ್ಮದೇ ಎಂದು ಸುಮಲತಾ ಅವರಿಗೆ ಸಾಂತ್ವನ ಹೇಳಿ, ರೇವಣ್ಣ ರಾಜ್ಯದ ಮಹಿಳೆಯರಲ್ಲಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಮುಖಂಡರಾದ ರಾಜೇಗೌಡ, ಜಯರಾಮ್‌, ತಾಲೂಕು ಅಧ್ಯಕ್ಷ ಮರುವನಹಳ್ಳಿಶಂಕರ್‌, ಅಂಗಡಿನಾಗರಾಜ್‌, ಮನ್‌ಮುಲ್‌ ನಿರ್ದಶಕ ಅಂಬರೀಶ್‌, ಬಿಜೆಪಿ ಮುಖಂಡ ದಿನೇಶ್‌, ವಿನಯ್‌ಕುಮಾರ್‌, ಸಿಂಧುಘಟ್ಟ ಕುಮಾರ್‌ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಸಚಿವರು, ಶಾಸಕರ ವೇತನದಲ್ಲಿ ಶೇ.30ರಷ್ಟು ಕಡಿತ; ಸುಗ್ರಿವಾಜ್ಞೆ ಮೂಲಕ ಆದೇಶ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

Leopard-climbs-tree

ವಿಡಿಯೋ: ಬೇಟೆಯೊಂದಿಗೆ ಅನಾಯಾಸವಾಗಿ ದೈತ್ಯಗಾತ್ರದ ಮರ ಏರಿದ ಚಿರತೆ, ನೆಟ್ಟಿಗರು ಫುಲ್ ಫಿದಾ

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್: ಮಂಗನ ಕಾಯಿಲೆ ತಡೆಗೆ ಮಲೆನಾಡಿನಲ್ಲಿ ಕ್ರಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mandya-tdy-1

ಒಂದೇ ದಿನ 3 ಕೋವಿಡ್ 19 ಸೋಂಕು ದೃಢ

mandya-tdy-1

ಮನೆ ಬಾಗಿಲಿಗೇ ಹಣ್ಣು, ತರಕಾರಿ: ಡಿಸಿ

mandya-tdy-1

ಮಳವಳ್ಳಿ, ನಾಗಮಂಗಲದಲ್ಲಿ ಕೋವಿಡ್ 19 ಶಂಕೆ

mandya-tdy-2

ದುಬಾರಿ ಬೆಲೆಗೆ ಪೆಟ್ರೋಲ್‌ ಮಾರಾಟ

mandya-tdy-1

ಪ್ರತಿದಿನ 100 ಕಾರ್ಡ್‌ಗೆ ಪಡಿತರ ವಿತರಣೆ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

“ಸ್ಮಾರ್ಟ್‌ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು

“ಸ್ಮಾರ್ಟ್‌ ಮಾರುಕಟ್ಟೆ’ ನಿರ್ಮಾಣಕ್ಕೆ ಸಜ್ಜು

09-April-18

ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ಆರ್ಥಿಕತೆ ಪುನಶ್ಚೇತನಕ್ಕೆ ಜರ್ಮನಿ ಚಿಂತನೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

ಏ.15ರ ನಂತರ ರೈಲು ಸಂಚಾರ ವರದಿ ಸತ್ಯಕ್ಕೆ ದೂರ: ಭಾರತೀಯ ರೈಲ್ವೆ ಇಲಾಖೆ

09-April-17

ನಗರದಲ್ಲೇ ಸಿದ್ಧಗೊಳ್ಳುತ್ತಿವೆ ವೈದ್ಯರಿಗೆ ಪಿಪಿಇ ಕಿಟ್‌