ಭೂ ಕಾಯ್ದೆ ತಿದ್ದುಪಡಿಗೆ ಖಂಡನೆ
Team Udayavani, Jun 17, 2020, 5:27 AM IST
ಮಂಡ್ಯ: ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಡೀಸಿ ಕಚೇರಿ ಬಳಿ ಜಮಾಯಿಸಿದ ಪ್ರತಿಭಟ ನಾಕಾರರು, ಡೀಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.
ಸ್ವತಂತ್ರ ಪೂರ್ವದಲ್ಲಿಯೇ ಮೈಸೂರಿನ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಉಳುವವನೇ ಭೂಮಿ ಒಡೆಯ ಎಂದು ಘೋಷಿಸಿದ ಉದಾತ್ತ ಮನಸಿತಿಯ ನಡುವೆಯೂ ಪುರೋಹಿತ ಶಾಹಿ, ಅಧಿಕಾರ ಶಾಹಿ ಮತ್ತು ಬಂಡವಾಳಶಾಹಿ ಕಪಿಮುಷ್ಠಿಯಿಂದ ಭೂ ಒಡೆತನ ಬಿಡಿಸಲಾಗದೆ, ನಿಜವಾದ ಗೇಣಿದಾರರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದನ್ನು ವಿರೋಧಿಸಿದರು.
ರೈತರಿಗೆ ದ್ರೋಹ: ಭೂ ಸುಧಾರಣಾ ನಿಯಮ 1961 ಮತ್ತು ನಿಯಮ 1974 ಜಾರಿ ಇದ್ದರೂ, ಸಮರ್ಪಕವಾಗಿ ಅನುಷ್ಠಾನಗೊಳಿಸುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದ ಸರ್ಕಾರಗಳು, ಈ ಕಾಯ್ದೆ ಯನ್ನು ಕೃಷಿಕರಲ್ಲದ ರಾಜಕಾರಣಿಗಳು, ಅಧಿಕಾರಿ ಗಳು ಹಾಗೂ ಬಂಡವಾಳಿಗರ ಅನುಕೂಲಕ್ಕೆ ತಕ್ಕಂತೆ ತಿದ್ದುಪಡಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿರುವು ದು ಈ ರಾಜ್ಯದ ಕೃಷಿ ಕೂಲಿಕಾರ್ಮಿಕರಿಗೆ ಮತ್ತು ರೈತರಿಗೆ ಮಾಡಿರುವ ದ್ರೋಹವಾಗಿದೆ.
ತಕ್ಷಣ ಈ ಕಾಯ್ದಿ ವಾಪಸ್ಸು ಪಡೆಯುವ ಮೂಲಕ ಯಾವುದೇ ಕಾರಣಕ್ಕೂ ಜಾರಿಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ವೆಂಕಟಗಿರಿಯಯ್ಯ, ಶಿವರಾಜ್ ಮರಳಿಗ, ಆಟೋ ಶಿವಣ್ಣ, ಸೋಮಶೇಖರ್