Udayavni Special

ಎಚ್ಚೆತ್ತುಕೊಳ್ಳದಿದ್ದರೆ ಅವಳಿ ಜಿಲ್ಲೆಗೂ ಕಂಟಕ


Team Udayavani, May 5, 2021, 5:26 PM IST

covid effect

ಮಂಡ್ಯ: ಜಿಲ್ಲೆಯಲ್ಲಿ ಸೋಂಕಿನ 2ನೇ ಅಲೆ ಹೆಚ್ಚುತ್ತಿದ್ದು, ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣಭಾಗಗಳಲ್ಲೇ ಹೆಚ್ಚು ಸೋಂಕು ಹರಡುತ್ತಿದೆ. ಇದರಿಂದಗ್ರಾಮಗಳು ಸೀಲ್‌ಡೌನ್‌ ಮಾಡುವತ್ತ ಗ್ರಾಮಸ್ಥರುಮುಂದಾಗುತ್ತಿದ್ದಾರೆ.ಪ್ರತಿನಿತ್ಯ ಒಂದು ಸಾವಿರಕ್ಕೂ ಹೆಚ್ಚು ಸೋಂಕಿನಪ್ರಕರಣ ದಾಖಲಾಗುತ್ತಿರುವುದು ಆತಂಕ ತಂದೊಡ್ಡಿದೆ.

ಇದು ಗ್ರಾಮೀಣ ಪ್ರದೇಶದಲ್ಲೇ ಹೆಚ್ಚಾಗಿದೆ.ಗ್ರಾಮಗಳಲ್ಲಿ ಸುಮಾರು 30ರಿಂದ 40 ಮಂದಿಗೆಸೋಂಕು ಆವರಿಸುತ್ತಿದ್ದು, ನಿಧಾನವಾಗಿಗ್ರಾಮಗಳಿಗೆ ವ್ಯಾಪಿಸುತ್ತಿದೆ.ಮಂಡ್ಯ ತಾಲೂಕಿನ 10 ಗ್ರಾಮ, ಕೆ.ಆರ್‌.ಪೇಟೆ 3,ಶ್ರೀರಂಗಪಟ್ಟಣ 12, ಮದ್ದೂರು 4 ಹಾಗೂ ಪಾಂಡವಪುರ 22, ನಾಗಮಂಗಲ 1 ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಮಳವಳ್ಳಿ ತಾಲೂಕಿನ 7 ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ.

ಈ ಗ್ರಾಮಗಳಲ್ಲಿ 20ಕ್ಕೂ ಹೆಚ್ಚು ಸೋಂಕಿತರುಕಂಡು ಬಂದ ಹಿನ್ನೆಲೆ ಗ್ರಾಮಗಳನ್ನು ಕಂಟೈನ್ಮೆಂಟ್‌ವಲಯಗಳನ್ನಾಗಿ ಮಾಡಿ ಸೀಲ್‌ಡೌನ್‌ ಮಾಡಲಾಗಿದೆ.ಗ್ರಾಮಗಳಲ್ಲಿ ರಸಾಯನಿಕ ದ್ರಾವಣ ಸಿಂಪಡಿಸಲಾಗುತ್ತಿದ್ದು ಗ್ರಾಮಕ್ಕೆ ಹೊರಗಿನಿಂದ ಯಾರೂ ಬರದಂತೆರಸ್ತೆಗಳನ್ನು ಮುಚ್ಚುತ್ತಿದ್ದಾರೆ.

ವಲಸಿಗರಿಂದಲೂ ಸೋಂಕು ಹೆಚ್ಚಳ: ಕೆ.ಆರ್‌.ಪೇಟೆ,ನಾಗಮಂಗಲ ಹಾಗೂ ಪಾಂಡವಪುರ ತಾಲೂಕುಗಳಿಗೆಹೆಚ್ಚಾಗಿ ಕಳೆದ ವರ್ಷ ಹಾಗೂ ಈ ಬಾರಿ ಸಾಕಷ್ಟುಮಂದಿ ವಲಸಿಗರು ಬಂದಿದ್ದಾರೆ. ಇದರಿಂದಸೋಂಕಿನ ಪ್ರಮಾಣ ಹೆಚ್ಚಲು ಕಾರಣವಾಗುತ್ತಿದೆ.ಬಹು ತೇಕ ಗ್ರಾಮಗಳು ಕೋವಿಡ್‌-19 ನೆಗೆಟಿವ್‌ವರದಿ ಇದ್ದರೆ ಮಾತ್ರ ಗ್ರಾಮಪ್ರವೇಶಕ್ಕೆ ಅವಕಾಶ ನೀಡಲಾಗು ತ್ತಿದೆ. ಇದರಿಂದ ಗ್ರಾಮಸ್ಥರು ಎಚ್ಚೆತ್ತುಕೊಂಡಿದ್ದಾರೆ.

ಪರೀಕ್ಷೆಗೆ ಮುಂದಾದಗ್ರಾಮೀಣ ಜನತೆ: ನಗರ ಹಾಗೂ ಪಟ್ಟಣ ಪ್ರದೇಶಗಳಪರೀûಾ ಕೇಂದ್ರಗಳ ಮುಂದೆ ನಗರಕ್ಕಿಂತ ಗ್ರಾಮೀಣಜನರೇ ಹೆಚ್ಚು ಸಾಲುಗಟ್ಟಿ ನಿಲ್ಲುತ್ತಿ ದ್ದಾರೆ. ಅಲ್ಲದೆ,ವೈದ್ಯಾ ಧಿಕಾರಿ ಗಳ ಮೇಲೆ ಒತ್ತಡ ಹಾಕಿ ಗ್ರಾಮಕ್ಕೆಬಂದು ಪರೀಕ್ಷೆ ಮಾಡು ವಂತೆ ಮನವಿಮಾಡುತ್ತಿದ್ದಾರೆ.

ಕಳೆದ 15 ದಿನಕ್ಕೆ 10 ಸಾವಿರ ಪ್ರಕರಣ: ಕಳೆದ 15ದಿನ ಗಳಿಂದ 10274 ಪ್ರಕರಣ ದಾಖಲಾಗಿದ್ದು, ಪರೀಕ್ಷೆಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚು ತ್ತಿದೆ.ಶೇಕಡವಾರು ಪ್ರಕರಣಗಳ ಸಂಖ್ಯೆ ದಾಖಲಾಗು ತ್ತಿದೆ.ಏ.17ರಂದು 224, ಏ.18ರಂದು 338, ಏ.19 ರಂದು279, ಏ.20ರಂದು 413, 21ರಂದು 492, 22ರಂದು385, 23ರಂದು 520, 24ರಂದು 688, 25ರಂದು812, 26ರಂದು 929, 27ರಂದು 737, 28ರಂದು935, 29ರಂದು 939, 30ರಂದು 1348, ಮೇ1ರಂದು 1235 ಪ್ರಕರಣ ದಾಖಲಾಗಿವೆ.

ಅದ ರಂತೆಇದೇ ಅವ ಧಿಯಲ್ಲಿ 4946 ಮಂದಿಚೇತರಿಸಿಕೊಂಡಿದ್ದಾರೆ.ಕ್ಷೇತ್ರದಲ್ಲಿ ಶಾಸಕ ಸಿ.ಎಸ್‌.ಪುಟ್ಟರಾಜು ಮೊಕ್ಕಾಂಕೊರೊನಾ 2ನೇ ಅಲೆಯ ಸೋಂಕಿಗೆ ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಾಂಡವಪುರದಲ್ಲಿ ಗ್ರಾಮಗಳು ಸೀಲ್‌ಡೌನ್‌ ಮಾಡಲಾಯಿತು. ಎಚ್ಚೆತ್ತ ಶಾಸಕ ಸಿ.ಎಸ್‌.ಪುಟ್ಟರಾಜು, ಕ್ಷೇತ್ರದಲ್ಲಿಯೇ ಮೊಕ್ಕಾಂ ಹೂಡಿ ಸ್ವತಃಗ್ರಾಮಗಳಿಗೆ ತೆರಳಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಕೊರೊನಾದಿಂದ ಮೃತಪಟ್ಟವರಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ತಾಲೂಕಿನಲ್ಲಿ ಸೋಂಕುನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದು, ಅ ಧಿಕಾರಿಗಳ ಸಭೆ ನಡೆಸುತ್ತಾ, ಹೆಚ್ಚು ಸೋಂಕು ಕಂಡು ಬರುವಗ್ರಾಮಗಳ ಸೀಲ್‌ಡೌನ್‌ ಮಾಡಿ, ರಸಾಯನಿಕ ದ್ರಾವಣ ಸಿಂಪಡಿಸಿ, ಮನೆಯಿಂದ ಯಾರೂ ಹೊರಗೆಬರದಂತೆ ಜಾಗೃತಿ ಮೂಡಿಸುತ್ತಿದ್ದಾರೆ.

ಹಿಮ್ಸ್‌ ನಲ್ಲಿ 13000 ಲೀಟರ್‌ ಆಕ್ಸಿಜನ್‌ ಪ್ಲಾಂಟ್‌ ಹಾಸನ: ಕೊರೊನಾ ರೋಗಿಗಳ ಚಿಕಿತ್ಸೆಗೆ ಮೀಸಲಿರಿಸಿ ರುವ ಹಾಸನ ವೈದ್ಯಕೀಯ ಕಾಲೇಜು (ಹಿಮ್ಸ್‌)ಆಸ್ಪತ್ರೆಯಲ್ಲಿ 13,000 ಲೀಟರ್‌ (13 ಕೆ.ಎಲ್‌)ಸ್ವಾಮರ್ಥ್ಯದ ಆಕ್ಸಿಜನ್‌ ಘಟಕವಿದ್ದು, ಪ್ರಸ್ತುತ ಪ್ರತಿದಿನ ರೋಗಿಗಳಿಗೆ 8000 ಲೀಟರ್‌ ಆಕ್ಸಿಜನ್‌ಬಳಕೆಯಾಗುತ್ತಿದೆ.ಒಂದು ವಾರಕ್ಕೆ 57,000 ಲೀಟರ್‌ ಆಕ್ಸಿಜನ್‌ಹಿಮ್ಸ್‌ ಆಸ್ಪತ್ರೆಗೆ ಬೇಕಾಗುತ್ತದೆ.

ಬೆಂಗಳೂರುಗ್ರಾಮಾಂತರ ಜಿಲ್ಲೆಯ ಡಾಬಸ್‌ಪೇಟೆಯಿಂದ ಪ್ರತಿದಿನ ಬರುವ ಟ್ಯಾಂಕರ್‌ ಆಕ್ಸಿಜನ್‌ ಅನ್ನು ತಂದುಹಿಮ್ಸ್‌ ಆಸ್ಪತ್ರೆಯ ಆಕ್ಸಿಜನ್‌ ಘಟಕಕ್ಕೆ ಪೂರೈಕೆಮಾಡುತ್ತದೆ.ಸದ್ಯಕ್ಕೆ ಹಿಮ್ಸ್‌ನಲ್ಲಿ ಆಕ್ಸಿಜನ್‌ ಕೊರತೆಯಿಲ್ಲ.ಹಿಮ್ಸ್‌ ಆಸ್ಪತ್ರೆಯಲ್ಲಿ ಈಗ 400 ಹಾಸಿಗೆಗಳಿಗೆಆಕ್ಸಿಜನ್‌ ಹರಿವಿನ ವ್ಯವಸ್ಥೆಯಿದೆ. ಪ್ರಸ್ತುತ 381ಮಂದಿ ಸೋಂಕಿತರು ಆಕ್ಸಿಜನ್‌ ಹಾಸಿಗೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ ಹೆಚ್ಚುವರಿ 50ಹಾಸಿಗೆಗಳ ವಾರ್ಡ್‌ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.ಕೊರೊನೇತರ ರೋಗಿಗಳ ಚಿಕಿತ್ಸೆಗಾಗಿ ಹಾಸನದ ಮಲಾ°ಡ್‌ ಗ್ಯಾಸ್‌ ಏಜೆನ್ಸಿಯಿಂದ 50 ಜಂಬೋಸಿಲಿಂ ಡರ್‌ ಪ್ರತಿದಿನ ಪಡೆಯಲಾಗುತ್ತಿದೆ ಎಂದುಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಮಾಹಿತಿನೀಡಿದ್ದಾರೆ.ಜಿಲ್ಲೆಯ 7 ತಾಲೂಕು ಆಸ್ಪತ್ರೆಗಳಿಗೆ ಪ್ರತಿದಿನ 24ಜಂಬೋ ಸಿಲಿಂಟರ್‌ಗಳನ್ನು ಪ್ರತಿದಿನ ಸರಬರಾಜುಮಾಡಲಾಗುತ್ತಿದೆ. ಸಮುದಾಯ ಆರೋಗ್ಯಕೇಂದ್ರಗಳಲ್ಲೂ ಐಸಿಯು ವ್ಯವಸ್ಥೆ ಕಲ್ಪಿಸಲು ಸಿದ್ಧತೆಪೂರ್ಣಗೊಂಡಿದ್ದು, ಪ್ರತಿ ಸಮುದಾಯ ಆರೋಗ್ಯಕೇಂದ್ರಕ್ಕೆ ತಲಾ 18 ಜಂಬೋ ಸಿಲಿಂಡರ್‌ಗಳಂತೆಒಟ್ಟು 270 ಜಂಬೋ ಸಿಲಿಂಡರ್‌ ಅಗತ್ಯವಿದೆಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ಸತೀಶ್‌ ಕುಮಾರ್‌ ಮಾಹಿತಿನೀಡಿದ್ದಾರೆ.

 

ಎಚ್‌.ಶಿವರಾಜು

ಟಾಪ್ ನ್ಯೂಸ್

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

Bhuvan Ponnanna And Harshika Poonaccha Interview in Udayavani

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

10

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

madya news

ನೆರೆ ಹಾವಳಿ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ

covid news

ಶೇ.5ರಷ್ಟು18 ವರ್ಷದೊಳಗಿನವರಿಗೆ ಕೊರೊನಾ?

covid vaccination

ಕೋವಿಡ್‌ ಲಸಿಕೆ ಪಡೆದು ಸೋಂಕಿನಿಂದ ಮುಕ್ತರಾಗಿ

covid vaccination

ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಯೋಜನೆ

madya news

ಸಿಎಂ ಬಳಿಗೆ ನಿಯೋಗ ತೆರಳಲು ನಿರ್ಣಯ

MUST WATCH

udayavani youtube

ಶೀಘ್ರದಲ್ಲೇ ಕಾಲೇಜು ಆರಂಭಕ್ಕೆ ಸಿದ್ಧತೆ : ಡಾ.ಸಿ.ಎಸ್.ಅಶ್ವತ್ಥನಾರಾಯಣ

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಹೊಸ ಸೇರ್ಪಡೆ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

Bhuvan Ponnanna And Harshika Poonaccha Interview in Udayavani

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.