Udayavni Special

ತಾಲೂಕು ಕಚೇರಿ ಆವರಣ ಕೋವಿಡ್ ತ್ಯಾಜ್ಯದ ತೊಟ್ಟಿ!

ನಾಗಮಂಗಲ ತಾಲೂಕು ಕಚೇರಿಯಲ್ಲಿ ಕೋವಿಡ್‌ ಪರೀಕ್ಷೆ ತ್ಯಾಜ್ಯ

Team Udayavani, Nov 3, 2020, 5:24 PM IST

mandya-tdy-2

ನಾಗಮಂಗಲ: ಕೋವಿಡ್ ಪರೀಕ್ಷೆಗೆ ಬಳಕೆ ಮಾಡಲಾಗುವ ಪರಿಕರಗಳು ಸೇರಿದಂತೆ ಇನ್ನಿತರೆ ತ್ಯಾಜ್ಯ ವಸ್ತುಗಳನ್ನು ತಾಲೂಕಿನ ಆಡಳಿತ ಶಕ್ತಿ ಕೇಂದ್ರ ಮಿನಿವಿಧಾನಸೌಧದ ಆವರಣದಲ್ಲಿ ಬಿಸಾಡಿರುವುದು ತಾಲೂಕು ಆಡಳಿತದಬೇಜವಾಬ್ದಾರಿಯನ್ನು ಸಾಕ್ಷೀಕರಿಸುತ್ತಿದೆ. ಮಿನಿ ವಿಧಾನಸೌಧಕ್ಕೆ ತಾಲೂಕಿನನೂರಾರು ಸಾರ್ವಜನಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಆಗಮಿಸುತ್ತಾರೆ. ಆರ್‌ಟಿಸಿ, ಎಂಆರ್‌, ವಿಧವಾ ವೇತನ ಸೇರಿದಂತೆ ಇನ್ನೂ ಅನೇಕ ಕಾರ್ಯ ನಿರ್ವಹಿಸುವ ಕೊಠಡಿಗಳು ಇವೆ. ಇದರ ಪಕ್ಕದಲ್ಲೇ ಕೊರೊನಾ ತಪಾಸಣೆ ತ್ಯಾಜ್ಯ ಬಿಸಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲೂಕು ಕಚೇರಿ ಸಿಬ್ಬಂದಿ ಹಾಗೂ ತಾಲೂಕು ಕಚೇರಿಗೆ ಆಗಮಿಸುವ ಎಲ್ಲಾ ಸಾರ್ವಜನಿಕರಿಗೆ ಕಳೆದ ಕೆಲವು ದಿನಗಳ ಹಿಂದೆ ಕೋವಿಡ್‌ ಟೆಸ್ಟ್‌ ಮಾಡಿಸಲಾಗಿತ್ತು. ಕಳೆದ 10 ದಿನಗಳಿಗೂ ಹೆಚ್ಚು ದಿನಗಳಿಂದ ಈ ತ್ಯಾಜ್ಯ ಇಲ್ಲೇ ಬಿದ್ದಿದ್ದರೂ ಅದನ್ನು ವಿಲೇವಾರಿ ಮಾಡುವ ಗೋಜಿಗೆ ಹೋಗಿಲ್ಲ. ವಯೋವೃದ್ಧರು, ಮಹಿಳೆಯರು ಸೇರಿದಂತೆ ಮುಂತಾದ ಸಾರ್ವಜನಿಕರು ಈ ತ್ಯಾಜ್ಯದ ಪಕ್ಕದಲ್ಲಿಯೇಕೆಲಸ ಕಾರ್ಯ ಮಾಡಿಸಿಕೊಳ್ಳಬೇಕಾಗಿದೆ.

ದಿನನಿತ್ಯ ಆತಂಕದಲ್ಲಿಯೇ ಕಚೇರಿಗೆ ಆಗಮಿಸುತ್ತಿದ್ದಾರೆ. ಕೋವಿಡ್‌ ನಿಯಮ ಪಾಲನೆ ಮಾಡದ ಸಾರ್ವಜನಿಕರಿಗೆ ದಂಡ ವಿಧಿಸುವ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕೋವಿಡ್‌ ನಿಯಮ ಪಾಲನೆ ಬಗ್ಗೆ ದಿನಪ್ರತಿ ಭಾಷಣ ಬಿಗಿಯುವ ಅಧಿಕಾರಿಗಳಿಂದಲೇ ಈ ರೀತಿಯ ನಿಯಮ ಉಲ್ಲಂಘನೆಯಾಗಿರುವುದು ಅಧಿಕಾರಿಗಳ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ.

ಆವರಣ ಕಸದ ತೊಟ್ಟಿ: ಕೋವಿಡ್‌ ನಿಯಮದ ಪ್ರಕಾರ ಕೋವಿಡ್‌ ಟೆಸ್ಟ್‌ಗೆ ಬಳಕೆ ಮಾಡಲಾಗುವ ಪರಿಕರ ಹಾಗೂ ಪಿಪಿಇ ಕಿಟ್‌ ಸೇರಿದಂತೆ ಕೋವಿಡ್‌ ತ್ಯಾಜ್ಯಗಳನ್ನು ಬೆಂಕಿಯಲ್ಲಿ ಸುಟ್ಟುಹಾಕಬೇಕಿದೆ. ಆದರೆ, ಈ ಯಾವ ನಿಯಮಗಳನ್ನೂ ಪಾಲನೆ ಮಾಡದೆ ಕಳೆದ ಹಲವು ದಿನಗಳಿಂದ ಮಿನಿವಿಧಾನಸೌಧದ ಆವರಣದ ಒಂದು ಚರಂಡಿಯಲ್ಲಿ ಬಿಸಾಡಲಾಗಿದೆ. ಇಷ್ಟು ಮಾತ್ರವಲ್ಲದೆ, ಮಿನಿ ವಿಧಾನಸೌಧದ ಪಕ್ಕದಲ್ಲಿನ ಚರಂಡಿಯಲ್ಲಿ ಕಚೇರಿಯಲ್ಲಿನ ದಿನನಿತ್ಯದ ತ್ಯಾಜ್ಯ ಸುರಿಯುತ್ತಿದ್ದು, ಚರಂಡಿ ಗಬ್ಬೆದ್ದು ನಾರುತ್ತಿದೆ. ಕಳೆದ 2 ದಿನಗಳ ಹಿಂದೆ ತಾಲೂಕಿನಾದ್ಯಂತ ನಾಗಮಂಗಲ ನ್ಯಾಯಾಲಯದ ನ್ಯಾಯಾಧೀಶರ ನೇತೃತ್ವದಲ್ಲಿ ತಹಶೀಲ್ದಾರ್‌ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪಾಲ್ಗೊಂಡು ಎಲ್ಲಾ ಹೋಬಳಿ ಕೇಂದ್ರದಲ್ಲಿ ಕೋವಿಡ್ ನಿಯಂತ್ರಣ ಕುರಿತಾಗಿ ಜಾಗೃತಿ ಮೂಡಿಸಲಾಗಿತ್ತು. ಆದರೆ, ತಮ್ಮ ಕಚೇರಿ ಆವರಣದಲ್ಲಿಯೇ ಇರುವ ತ್ಯಾಜ್ಯವನ್ನು ನಿಯಮದಂತೆ ವಿಲೇವಾರಿ ಮಾಡದೆ ಜಾಗೃತಿ ಮೂಡಿಸಲು ಮುಂದಾಗಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ತೆರವುಗೊಳಿಸಲಾಗುತ್ತದೆ: ತಹಶೀಲ್ದಾರ್ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರ್ವಜನಿಕ ಆಸ್ಪತ್ರೆಯ ಸಹಯೋಗದಲ್ಲಿ ಕಚೇರಿಗೆ ಬರುವ ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗಿತ್ತು. ಆಸ್ಪತ್ರೆ ಸಿಬ್ಬಂದಿ ಕೋವಿಡ್‌ ಪರೀಕ್ಷೆಗೆ ಬಳಸಿದ್ದ ಪರಿಕರಗಳ ಕವರ್‌ ಮತ್ತು ಅದರ ತ್ಯಾಜ್ಯಗಳನ್ನು ಬಿಟ್ಟು ಹೋಗಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಈಗ, ಗಮನಕ್ಕೆ ಬಂದಿದ್ದು ತಕ್ಷಣ ತೆರವುಗೊಳಿಸಲಾಗುತ್ತದೆ ಎಂದು ತಹಶೀಲ್ದಾರ್‌ ಕುಂಞ ಅಹಮದ್‌ ತಿಳಿಸಿದ್ದಾರೆ.

ಕಳೆದ 4-5 ದಿನಗಳಿಂದ ನನ್ನ ಜಮೀನಿಗೆ ಸಂಬಂಧಿಸಿದ ದಾಖಲೆಗಳಿಗಾಗಿ ತಾಲೂಕು ಕಚೇರಿಗೆ ಬರುತ್ತಿದ್ದೇನೆ. ಆಗಿನಿಂದಲೂ ಈ ಕಸ ಇಲ್ಲಿಯೇ ಇದೆ. ಕೋವಿಡ್ ನಿಯಮ ಪಾಲನೆಗೆ ಸೂಚಿಸುವ ಅಧಿಕಾರಿಗಳೇ ನಿಯಮ ಉಲ್ಲಂಘನೆ ಮಾಡಿದ್ದಾರೆ. ತೆರವುಗೊಳಿಸಲಾಗುತ್ತದೆ: –ರಾಮಕೃಷ್ಣ, ಸಾರ್ವಜನಿಕ

ಪಿ.ಜೆ.ಜಯರಾಂ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಾಮರಾಜನಗರದಲ್ಲಿ ಬಂದ್ ಸಂಪೂರ್ಣ ವಿಫಲ: ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್

ಚಾಮರಾಜನಗರದಲ್ಲಿ ಬಂದ್ ಸಂಪೂರ್ಣ ವಿಫಲ: ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್

ತೇರದಾಳ ಘಟನೆಯಲ್ಲಿ ಶಾಸಕರನ್ನು ರಕ್ಷಿಸುವ ಕೆಲಸವಾಗುತ್ತಿದೆ: ಡಿ ಕೆ ಶಿವಕುಮಾರ್

ತೇರದಾಳ ಘಟನೆಯಲ್ಲಿ ಶಾಸಕರನ್ನು ರಕ್ಷಿಸುವ ಕೆಲಸವಾಗುತ್ತಿದೆ: ಡಿ ಕೆ ಶಿವಕುಮಾರ್

ct-ravi

ಕುಮಾರಸ್ವಾಮಿಗೆ ಈಗ ಜ್ಞಾನೋದಯವಾಗಿದೆ, ಇನ್ನಾದರೂ ಕಾಂಗ್ರೆಸ್ ಸಹವಾಸ ಬಿಡಲಿ : ಸಿ ಟಿ ರವಿ

ಹೆಲ್ತ್‌ ಟಿಪ್ಸ್‌ : ಅಪಾಯದ ಕಾಲದಲ್ಲಿ ಮದ್ದಾಗುವ ಪಪ್ಪಾಯ

ಹೆಲ್ತ್‌ ಟಿಪ್ಸ್‌ : ಅಪಾಯದ ಕಾಲದಲ್ಲಿ ಮದ್ದಾಗುವ ಪಪ್ಪಾಯ

ಭ್ರಷ್ಟಾಚಾರ ಸಹಿಸಲ್ಲ: ಸಿಬಿಐನಿಂದ ಬಂಧಿಸಲ್ಪಟ್ಟ ಬಿಜೆಪಿ ಕೌನ್ಸಿಲರ್ ಪಕ್ಷದಿಂದ ಅಮಾನತು

ಭ್ರಷ್ಟಾಚಾರ ಸಹಿಸಲ್ಲ: ಸಿಬಿಐನಿಂದ ಬಂಧಿಸಲ್ಪಟ್ಟ ಬಿಜೆಪಿ ಕೌನ್ಸಿಲರ್ ಪಕ್ಷದಿಂದ ಅಮಾನತು

ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಗಾದ ಹರ್ಯಾಣ ಸಚಿವ ವಿಜ್ ಗೆ ಕೋವಿಡ್ ಸೋಂಕು

ಕೋವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಒಳಗಾದ ಹರ್ಯಾಣ ಸಚಿವ ವಿಜ್ ಗೆ ಕೋವಿಡ್ ಸೋಂಕು

ರೋಗ ನಿರೋಧಕ ಯೋಗ

ರೋಗ ನಿರೋಧಕ ಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾವಿಯಲ್ಲಿ ಮೀನು ಹಿಡಿದುಕೊಡುವ ಆಸೆ ತೋರಿಸಿ ಬಾಲಕಿಯ ಹತ್ಯೆ!

ಬಾವಿಯಲ್ಲಿ ಮೀನು ಹಿಡಿದುಕೊಡುವ ಆಸೆ ತೋರಿಸಿ ಬಾಲಕಿಯ ಹತ್ಯೆ!

prabhu-chwan

ಮಂಡ್ಯ: ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ನಡೆಸಿರುವುದು ಅಮಾನವೀಯ: ಚವ್ಹಾಣ್

ಅನೈತಿಕ ಸಂಬಂಧ: ‘ವಿಸ್ಮಯ’ ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ

ಅನೈತಿಕ ಸಂಬಂಧ: ‘ವಿಸ್ಮಯ’ ಸಿನಿಮಾ ಪ್ರೇರಣೆಯಿಂದ ಪ್ರಿಯಕರನ ಜತೆಗೂಡಿ ಪತಿಯನ್ನು ಕೊಂದ ಪತ್ನಿ

ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವಪತ್ತೆ: ಬೇರೆಡೆ ಕೊಲೆ ಮಾಡಿ ತಂದು ಸುಟ್ಟಿರುವ ಶಂಕೆ

ಅರೆಬೆಂದ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವಪತ್ತೆ: ಬೇರೆಡೆ ಕೊಲೆ ಮಾಡಿ ತಂದು ಸುಟ್ಟಿರುವ ಶಂಕೆ

ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ

ರೈತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ

MUST WATCH

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

udayavani youtube

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಹೊಸ ಸೇರ್ಪಡೆ

ಚಾಮರಾಜನಗರದಲ್ಲಿ ಬಂದ್ ಸಂಪೂರ್ಣ ವಿಫಲ: ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್

ಚಾಮರಾಜನಗರದಲ್ಲಿ ಬಂದ್ ಸಂಪೂರ್ಣ ವಿಫಲ: ಪ್ರತಿಭಟನೆಗಷ್ಟೇ ಸೀಮಿತವಾದ ಕರ್ನಾಟಕ ಬಂದ್

ಗೋ ಹತ್ಯೆ ನಿಷೇಧಕ್ಕೆ ಸರ್ಕಾರ ಬದ್ಧ , ಮತಾಂತರಿಗಳ ವಿರುದ್ಧ ಕಠಿಣ ಕ್ರಮ: ಬೊಮ್ಮಾಯಿ

ಗೋ ಹತ್ಯೆ ನಿಷೇಧಕ್ಕೆ ಸರ್ಕಾರ ಬದ್ಧ , ಮತಾಂತರಿಗಳ ವಿರುದ್ಧ ಕಠಿಣ ಕ್ರಮ: ಬೊಮ್ಮಾಯಿ

ಕೌರವನ ವಿರುದ್ಧ ಕೆರಳಿದ ಅನ್ನದಾತ : ರೈತ ಸಂಘಟನೆಯಿಂದ ಪ್ರತಿಕೃತಿ ದಹಿಸಿ ಪ್ರತಿಭಟನೆ

ಕೌರವನ ವಿರುದ್ಧ ಕೆರಳಿದ ಅನ್ನದಾತ : ರೈತ ಸಂಘಟನೆಯಿಂದ ಪ್ರತಿಕೃತಿ ದಹಿಸಿ ಪ್ರತಿಭಟನೆ

ತೇರದಾಳ ಘಟನೆಯಲ್ಲಿ ಶಾಸಕರನ್ನು ರಕ್ಷಿಸುವ ಕೆಲಸವಾಗುತ್ತಿದೆ: ಡಿ ಕೆ ಶಿವಕುಮಾರ್

ತೇರದಾಳ ಘಟನೆಯಲ್ಲಿ ಶಾಸಕರನ್ನು ರಕ್ಷಿಸುವ ಕೆಲಸವಾಗುತ್ತಿದೆ: ಡಿ ಕೆ ಶಿವಕುಮಾರ್

ಈ ಮನೆಯಲ್ಲಿ ಎರಡು ದಿನದಲ್ಲಿ ನಾಲ್ಕು ಹಾವು ಪ್ರತ್ಯಕ್ಷ: ಕುಟುಂಬಸ್ಥರ ಆತಂಕ

ಈ ಮನೆಯಲ್ಲಿ ಎರಡು ದಿನದಲ್ಲಿ ನಾಲ್ಕು ಹಾವು ಪ್ರತ್ಯಕ್ಷ: ಕುಟುಂಬಸ್ಥರ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.