Udayavni Special

ಎಲ್ಲ ಸಾರ್ವಜನಿಕರಿಗೂ ಕೋವಿಡ್ ಲಸಿಕೆ


Team Udayavani, Mar 2, 2021, 3:59 PM IST

ಎಲ್ಲ ಸಾರ್ವಜನಿಕರಿಗೂ ಕೋವಿಡ್ ಲಸಿಕೆ

ಮಂಡ್ಯ: ಕೋವಿಡ್ ಲಸಿಕೆ ಸಾರ್ವಜನಿಕರಿಗೂ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್‌.ಅಶ್ವಥಿ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ, ಎರಡನೇ ಹಂತದಲ್ಲಿ ಫ್ರಂಟ್‌ಲೈನ್‌ ವಾರಿಯರ್ ಕಂದಾಯಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನೌಕರರಿಗೆನೀಡಲಾಗಿದೆ. ಮಾ.1ರಿಂದ ನಾಲ್ಕು ದಿನಗಳ ಕಾಲ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷದಿಂದ 59ವರ್ಷದೊಳಗಿನವರಿಗೆ ಲಸಿಕೆ ನೀಡಲಾಗುತ್ತಿದೆ. ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನೋಂದಣಿಗೆ ಮನವಿ: ಲಸಿಕೆ ಪಡೆಯುವವರು ನೋಂದಣಿ ಮಾಡಿಸಬೇಕು. ಆರೋಗ್ಯ ಸೇತು, ಕೋವಿಡ್‌ ಹಾಗೂ ಕೋವಿಡ್‌ ಪೋರ್ಟಲ್‌ನ ಆನ್‌ ಲೈನ್‌ ಮುಖಾಂತರ ನೋಂದಣಿ ಮಾಡಿಸಬಹು ದಾಗಿದೆ. ಆನ್‌ಲೈನ್‌ನಲ್ಲಿ ಆಗದಿದ್ದರೆ ನೇರವಾಗಿಆಸ್ಪತ್ರೆಗಳಿಗೆ ತೆರಳಿ ಸ್ಥಳದಲ್ಲಿಯೇ ನೋಂದಣಿ ಮಾಡಿಸಿ ಲಸಿಕೆ ಪಡೆಯಬಹುದು. ನೋಂದಣಿ ಮಾಡಿಸಲು ಮೊಬೈಲ್‌ ನಂಬರ್‌ ಹಾಕಬೇಕು. ಒಂದು ಮೊಬೈಲ್‌ ನಂಬರ್‌ನಿಂದ ನಾಲ್ಕು ಮಂದಿ ನೋಂದಣಿ ಮಾಡಬಹುದಾಗಿದೆ. ಇಲ್ಲದಿದ್ದರೆ ಆಧಾರ್‌ ಕಾರ್ಡ್‌, ಗುರುತಿನ ಚೀಟಿ, ಚಾಲನಾ ಪರವಾನಗಿ, ರೇಷನ್‌ ಕಾರ್ಡ್‌, ಪಿಂಚಣಿ ಚೀಟಿ ಸೇರಿದಂತೆ ಭಾವಚಿತ್ರವಿರುವ ಯಾವುದಾದರೂ ಒಂದು ದಾಖಲಾತಿ ಒದಗಿಸಬೇಕು. ನೋಂದಣಿ ಮಾಡುವಾಗ ಲಸಿಕೆಪಡೆಯುವ ದಿನ, ಸಮಯ ನಿಗದಿಪಡಿಸಬಹುದು ಎಂದು ತಿಳಿಸಿದರು.

ಎರಡು ಹಂತದ ಲಸಿಕೆ: ಮೊದಲು ಲಸಿಕೆ ಪಡೆದ 28ದಿನಗಳ ನಂತರ ಎರಡನೇ ಲಸಿಕೆ ಪಡೆಯಬೇಕು. 29 ದಿನದಿಂದ 42 ದಿನಗಳವರೆಗೆ ಇರಬೇಕು. ಆದ್ದರಿಂದ ಸಾರ್ವಜನಿಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಂಡು ಕೊರೊನಾದಿಂದ ಮುಕ್ತರಾಗಬೇಕು ಎಂದು ಮನವಿ ಮಾಡಿದರು.

1.48 ಲಕ್ಷ ಮಂದಿ ಗುರಿ: ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ ಮಾತನಾಡಿ, ಜಿಲ್ಲೆಯಲ್ಲಿ 1.48 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮುಂದಿನ ವಾರದಿಂದ ಎಲ್ಲಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ನೀಡಲುಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ 350 ರೂ. ನೀಡಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದರು.

ಭಯ, ಆತಂಕ ಬೇಡ: ಲಸಿಕೆ ಪಡೆಯಲುಯಾವುದೇ ಭಯ, ಆತಂಕ ಬೇಡ. ಲಸಿಕೆಯಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದುವರೆಗೂ ರಾಜ್ಯದಲ್ಲಿ ನಾಲ್ಕು ಸಾವು ಸಂಭವಿಸಿರುವುದುಲಸಿಕೆಯಿಂದ ಅಲ್ಲ ಎಂಬುದು ಪರೀಕ್ಷೆಯವರದಿಯಿಂದ ಬಂದಿದೆ. ಲಸಿಕೆಯಿಂದ ಜ್ವರ, ಲಸಿಕೆ ಪಡೆದ ಜಾಗದಲ್ಲಿ ಊತ ಕಂಡು ಬರಲಿವೆ. ಅದುಬಿಟ್ಟರೆ ಇನ್ಯಾವುದೇ ತೊಂದರೆ ಆಗಿಲ್ಲ. ಪ್ರತಿದಿನ ಲಸಿಕೆ ನೀಡಲಾಗುತ್ತಿದೆ. ಮಕ್ಕಳಿಗೆ ಗುರುವಾರ ಲಸಿಕೆ ನೀಡಲಾಗುತ್ತಿದೆ. ಅದಕ್ಕೆ ತೊಂದರೆಯಾಗದಂತೆ ಸೋಮವಾರ, ಮಂಗಳವಾರ, ಗುರುವಾರ, ಶುಕ್ರವಾರ ನಾಲ್ಕು ದಿನ ಲಸಿಕೆ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿ‌ನಿ, ಜಿಪಂ ಸಿಇಒ ಎಸ್‌.ಎಂ.ಜುಲ್‌ಫಿಖಾರ್‌ ಉಲ್ಲಾ, ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌.ಹರೀಶ್‌ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

jhgfdew

ಬೆಂಗಳೂರಿಗೆ ಲಾಕ್ ಡೌನ್ ಅನಿವಾರ್ಯವಿದೆ : ಸರ್ವ ಪಕ್ಷ ಸಭೆಯಲ್ಲಿ ಕುಮಾರಸ್ವಾಮಿ

,ಮನಬಗವ್ದ್

ಕೋವಿಡ್ ಪರಿಣಾಮ : ಮೇ 2 ರಿಂದ ನಡೆಯಬೇಕಿದ್ದ NET ಪರೀಕ್ಷೆ ಮುಂದೂಡಿಕೆ!

20-14

ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಒಪ್ಪೊ ಎ 74 5ಜಿ ಸ್ಮಾರ್ಟ್ ಫೋನ್..! ವಿಶೇಷತೆಗಳೆನು..?

ಕೋವಿಡ್ ಎಫೆಕ್ಟ್:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ, ಹೂಡಿಕೆದಾರರಿಗೆ ನಷ್ಟ

ಕೋವಿಡ್ ಎಫೆಕ್ಟ್:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ, ಹೂಡಿಕೆದಾರರಿಗೆ ನಷ್ಟ

ಉಡುಪಿಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ಉಡುಪಿಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ದೆಹಲಿ ಬಳಿಕ ಜಾರ್ಖಂಡ್ ನಲ್ಲೂ ಏಪ್ರಿಲ್ 22ರಿಂದ 29ರವರೆಗೆ ಲಾಕ್ ಡೌನ್ ಘೋಷಣೆ

ದೆಹಲಿ ಬಳಿಕ ಜಾರ್ಖಂಡ್ ನಲ್ಲೂ ಏಪ್ರಿಲ್ 22ರಿಂದ 29ರವರೆಗೆ ಲಾಕ್ ಡೌನ್ ಘೋಷಣೆ

gbfgrd

ತಪ್ಪದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವಿರಾಟ್ ಕೊಹ್ಲಿ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bondeshaneswara Swamy Jatra Mahotsav

ಬಂಡೆಶನೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

19 cases registered, Rs 2,200 Fine

19 ಕೇಸ್‌ ದಾಖಲು, 2,200 ರೂ. ದಂಡ

ಮಂಡ್ಯ : ಒಂದೇ ದಿನ ಮುನ್ನೂರರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಓರ್ವ ಸಾವು

ಮಂಡ್ಯ : ಒಂದೇ ದಿನ 300ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ, ಓರ್ವ ಸಾವು

Follow fire safety measures

ಅಗ್ನಿ ಸುರಕ್ಷಾ ಕ್ರಮ ಅನುಸರಿಸಿ: ಶಿವಕುಮಾರ್‌

Temple Band

ಮೇ 15ರವರೆಗೆ ಪ್ರವಾಸಿ ತಾಣ, ದೇವಾಲಯ ಬಂದ್‌

MUST WATCH

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

udayavani youtube

ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !

udayavani youtube

ಕನಸು ನನಸಾಗುವ ಮುನ್ನವೇ ಮರೆಯದ ಬಾಡಿ ಬಿಲ್ಡರ್..!

ಹೊಸ ಸೇರ್ಪಡೆ

20-19

13ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

20-18

ಔಷಧ ದರ ಹೆಚ್ಚಿಸಿದರೆ ಕ್ರಮ ಕೈಗೊಳ್ಳಿ

20-17

ಹಂಪಿ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ

jhgfdew

ಬೆಂಗಳೂರಿಗೆ ಲಾಕ್ ಡೌನ್ ಅನಿವಾರ್ಯವಿದೆ : ಸರ್ವ ಪಕ್ಷ ಸಭೆಯಲ್ಲಿ ಕುಮಾರಸ್ವಾಮಿ

20-16

ಜೀವನದಲ್ಲಿ ನೋವಿದ್ದರೂ ನಗಿಸುತ್ತಿದ್ದ ಚಾರ್ಲಿ ಚಾಪ್ಲಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.