Udayavni Special

ರಂಗನತಿಟ್ಟಿನ ಐಲ್ಯಾಂಡ್‌ಗಳಿಗೆ ಹಾನಿ


Team Udayavani, Aug 26, 2019, 3:07 PM IST

mandya-tdy-1

ಶ್ರೀರಂಗಪಟ್ಟಣ ಪಕ್ಷಿಧಾಮದ ಹೋರ ನೋಟ

ಶ್ರೀರಂಗಪಟ್ಟಣ: ಕೆಆರ್‌ಎಸ್‌ ಜಲಾಶಯದಿಂದ ಕಾವೇರಿ ನದಿಗೆ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟ ಹಿನ್ನೆಲೆಯಲ್ಲಿ ಪ್ರವಾಹದಲ್ಲಿ ಶೇಕಡಾ ಅರ್ಧದಷ್ಟು ರಂಗನತಿಟ್ಟು ಪಕ್ಷಿಧಾಮ ಹಾನಿಗೊಳಗಾಗಿದೆ.

ಸುಮಾರು 1.80 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಕಾವೇರಿ ನದಿ ಮೂಲಕ ಜಲಾಶಯದಿಂದ ಹೊರಬಿಡಲಾಯಿತು. ಇದರಿಂದ ಪಕ್ಷಿಧಾಮದ ಪ್ರವಾಸಿಗರ ದೋಣಿವಿಹಾರ ಹಾಗೂ ಪ್ರವೇಶವನ್ನು ನಿಷೇಧಿಸಲಾಯಿತು. ಈ ಬಾರಿ 20 ದಿನಗಳಿಗೂ ಹೆಚ್ಚು ದಿನ ಕಾವೇರಿ ನದಿ ಕಣಿವೆಯಲ್ಲಿ ಪ್ರವಾಹದ ಭೀತಿ ಎದುರಾದ ಪರಿಣಾಮ ಹಿಂದೆ ಎಂದು ಕಾಣದಷ್ಟು ಪಕ್ಷಿಧಾಮದ ಐಲ್ಯಾಂಡ್‌ಗಳು ಸಂಪೂರ್ಣ ಜಲಾವೃತವಾಗಿದ್ದವು.

ಕಾವೇರಿ ನದಿ ಮಧ್ಯೆಯಿರುವ ಒಟ್ಟು ಪಕ್ಷಿಧಾಮದಲ್ಲಿ 40ಕ್ಕೂ ಹೆಚ್ಚು ತಿಟ್ಟುಗಳಿದ್ದು ಇವುಗಳ ಕೆಲವು ಅತಿ ಎತ್ತರದ ಐ ಲ್ಯಾಂಡ್‌ ಮುಳುಗಡೆಯಾಗಲಿಲ್ಲ ಇನ್ನು ನದಿ ಮಟ್ಟದಲ್ಲಿದ್ದ ಐಲ್ಯಾಂಡ್‌ಗಳು ನೀರಿನಲ್ಲಿ ಮುಳುಗಡೆಯಾಗಿದ್ದವು. ಅಲ್ಲಿ ವಾಸ ಮಾಡುವ ಪಕ್ಷಿಗಳು ಇತರ ಎತ್ತರ ಪ್ರದೇಶವನ್ನು ಹುಡುಕಿ ವಾಸ ಮಾಡಿರುವುದು ಕಂಡು ಬಂದಿವೆ. ಕೆಲವು ಕಲ್ಲು ಬಂಡೆಯಿಂದ ರಕ್ಷಣೆ ಮದ್ಯೆ ಇರುವ ತಿಟ್ಟುಗಳು ಹೆಚ್ಚಿನದಾಗಿ ಹಾನಿ ಕಂಡು ಬಂದಿಲ್ಲ ಉಳಿದ ಕೆಲವು ಐ ಲ್ಯಾಂಡ್‌ಗಳನ್ನು ಪ್ರವಾಹದ ನೀರು ಕೊರೆದು ಹಾಕಿದೆ. ಸಣ್ಣ ಪುಟ್ಟ ಪಕ್ಷಿಗಳ ಗೂಡುಗಳು ಕೊಚ್ಚಿ ಹೋಗಿವೆ. ಇತರ ಜಲಚರಗಳು ಸಹ ನೀರಲ್ಲಿಕೊಚ್ಚಿಹೋಗಿವೆ. ಈ ಬಾರಿ ಬಂದ ಪ್ರವಾಹದ ತೀವ್ರತೆ ರಂಗನ ತಿಟ್ಟು ಪಕ್ಷಿಧಾಮ ಈ ಬಾರಿ ಸಂಪೂರ್ಣ ಮುಳುಗಡೆಯಾಗಿತ್ತು.

ಸೆಳೆತಕ್ಕೆ ಸಿಕ್ಕ ಐಲ್ಯಾಂಡ್‌: ಪ್ರವಾಹದ ನೀರಿನ ಸೆಳೆತ ಅಧಿಕವಾಗಿದ್ದರಿಂದ ಸುಮಾರು 23 ಐಲ್ಯಾಂಡ್‌ ಗಳಲ್ಲಿ, 10 ಐಲ್ಯಾಂಡ್‌ಗಳು ಸಂಪೂರ್ಣ ಹಾಳಾಗಿದ್ದು, ಇವುಗಳಲ್ಲಿ ಕಾಡು ಉಣಸೆ ಮರದ ಐಲ್ಯಾಂಡ್‌, ಸ್ಟೋನ್‌ ಬಿಲ್ ಐಲ್ಯಾಂಡ್‌, ಸ್ಟೊನ್‌ ಫ್ಲವರ್‌ ಐಲ್ಯಾಂಡ್‌, ನೀರಂಜಿ ಐಲ್ಯಾಂಡ್‌, ಹತ್ತಿಮರ ಐಲ್ಯಾಂಡ್‌, ಪರ್ಪಲ್ ಹೆರಾನ್‌ ಐಲ್ಯಾಂಡ್‌, ಕಾವೇರಿ ನದಿ ಮಧ್ಯ ನಿರ್ಮಿಸಲಾದ ಮರಳು ಮೂಟೆ ಕಟ್ಟಿದ್ದ ಐಲ್ಯಾಂಡ್‌, ಬಿದುರಿನ ಐಲ್ಯಾಂಡ್‌ ಸಂಪೂರ್ಣ ನೀರಲ್ಲಿ ಕೊಚ್ಚಿಹೋಗಿವೆ.

ಪುನರ್‌ ನಿರ್ಮಾಣ ಕಾರ್ಯ ಶೀಘ್ರ: ಪಕ್ಷಿಧಾಮದಲ್ಲಿನ 10ಕ್ಕೂ ಐಲ್ಯಾಂಡ್‌ಗಳು ಸಂಪೂರ್ಣವಾಗಿ ಹಾನಿಯಾಗಿದ್ದು ಅವುಗಳ ಪುನರ್‌ ನಿರ್ಮಾಣ ಕಾರ್ಯ ಮಾಡಲಾಗುತ್ತದೆ. ನದಿ ಮಧ್ಯೆ ಉಳಿದಿರುವ ಐಲ್ಯಾಂಡ್‌ಗಳ ಅವಶೇಷಗಳನ್ನು ಗುರುತಿಸಿ, ಸುತ್ತಲೂ ಕಲ್ಲುಗಳ ಜೋಡಣೆ ಮಾಡಿ, ಪ್ಲಾಸ್ಟಿಕ್‌ ಚೀಲಗಳಲ್ಲಿ ಮರಳು, ಮಣ್ಣು ಮೂಟೆಗಳನ್ನು ಜೋಡಿಸಿ ಮಣ್ಣು ಸುರಿದು ಐಲ್ಯಾಂಡ್‌ಗಳ ಪುನರ್‌ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ವನ್ಯ ಜೀವಿ ವಲಯ ಅರಣ್ಯ ಇಲಾಖೆಯ ರಂಗನತಿಟ್ಟು ಸಹಾಯಕ ಅಧಿಕಾರಿ ಪುಟ್ಟ ಮಾದೇಗೌಡ ಹೇಳಿದರು.

 

● ಗಂಜಾಂ ಮಂಜು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ

ತಬ್ಲೀಘಿ ಮುಖ್ಯಸ್ಥ ಮೌಲಾನಾ ಸಾದ್ ಸುಳಿವು ಪತ್ತೆ

ಕೋವಿಡ್ ಸೋಂಕಿತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್ ಆರೋಗ್ಯ ಸ್ಥಿರ

ಕೋವಿಡ್ ಸೋಂಕಿತ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್ ಆರೋಗ್ಯ ಸ್ಥಿರ

ಸರಕು ಸಾಗಾಣೆ ಗುರಿ ತಲುಪುವಲ್ಲಿ ರೈಲ್ವೇಗೆ 2,129 ಕೋಟಿ ರೂ. ನಷ್ಟ

ಸರಕು ಸಾಗಾಣೆ ಗುರಿ ತಲುಪುವಲ್ಲಿ ರೈಲ್ವೇಗೆ 2,129 ಕೋಟಿ ರೂ. ನಷ್ಟ

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ  ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

ಕೋವಿಡ್ ಅಟ್ಟಹಾಸ ನಿಯಂತ್ರಣಕ್ಕೆ ರಾಜಸ್ಥಾನದ ಭಿಲ್ವಾರ ದೇಶಕ್ಕೇ ಮಾದರಿ

ಕೋವಿಡ್ ಎಫೆಕ್ಟ್: ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ರೋಬೋಗಳು!

ಕೋವಿಡ್ ಎಫೆಕ್ಟ್: ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದ ರೋಬೋಗಳು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mandya-tdy-1

ಒಂದೇ ದಿನ 3 ಕೋವಿಡ್ 19 ಸೋಂಕು ದೃಢ

mandya-tdy-1

ಮನೆ ಬಾಗಿಲಿಗೇ ಹಣ್ಣು, ತರಕಾರಿ: ಡಿಸಿ

mandya-tdy-1

ಮಳವಳ್ಳಿ, ನಾಗಮಂಗಲದಲ್ಲಿ ಕೋವಿಡ್ 19 ಶಂಕೆ

mandya-tdy-2

ದುಬಾರಿ ಬೆಲೆಗೆ ಪೆಟ್ರೋಲ್‌ ಮಾರಾಟ

mandya-tdy-1

ಪ್ರತಿದಿನ 100 ಕಾರ್ಡ್‌ಗೆ ಪಡಿತರ ವಿತರಣೆ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ಸರಕಾರಿ ನೌಕರರಿಗೆ ಮುಖ್ಯಮಂತ್ರಿ ಅಭಿನಂದನೆ

ಸರಕಾರಿ ನೌಕರರಿಗೆ ಮುಖ್ಯಮಂತ್ರಿ ಅಭಿನಂದನೆ

“ಗುಣಮುಖರಾದವರಿಂದ ಜಾಗೃತಿ’

“ಗುಣಮುಖರಾದವರಿಂದ ಜಾಗೃತಿ’

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಲಾಕ್‌ಡೌನ್‌ ಮುಂದುವರಿದರೆ ಪರೀಕ್ಷೆಗಳಿಗೆ ಕಂಟಕ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ಉಚಿತವಾಗಿ ಕೋವಿಡ್ 18 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್‌ ಆದೇಶ

ಸೌಲಭ್ಯಗಳ ಮಾಹಿತಿ ಕೊಡಿ: ಹೈಕೋರ್ಟ್‌

ಸೌಲಭ್ಯಗಳ ಮಾಹಿತಿ ಕೊಡಿ: ಹೈಕೋರ್ಟ್‌