ಮಾದರಿ ಶಾಲಾ-ಕಾಲೇಜು ಅಭಿವೃದ್ಧಿಗೆ ಕ್ರಮ
ಶೌಚಾಲಯ,ಕೊಠಡಿಗಳಕಾಮಗಾರಿ ಆರಂಭ , ಸರ್ಕಾರಿ ಅನುದಾನದೊಂದಿಗೆ ದಾನಿಗಳಿಂದ ಅಭಿವೃದ್ಧಿ
Team Udayavani, Dec 11, 2020, 4:27 PM IST
ಮಂಡ್ಯ: ಮಾದರಿ ಶಾಲೆ ಹಾಗೂ ಕಾಲೇಜು ಅಭಿವೃದ್ಧಿಪಡಿಸಲು ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಹೈಟೆಕ್ ಶೌಚಾಲಯ, ಕೊಠಡಿಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದೆ.
ಹೌದು, ಪಾಂಡವಪುರ ತಾಲೂಕಿನ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆ(ಫ್ರೆಂಚ್ ರಾಕ್ಸ್), ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಶಾಲೆಯನ್ನು ಅಭಿವೃದ್ಧಿಪಡಿಸಲು ಶಾಸಕ ಸಿ.ಎಸ್.ಪುಟ್ಟರಾಜು ಅವರು 2020-21ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ದತ್ತು ಪಡೆದಿದ್ದು, ಸರ್ಕಾರದ ಅನುದಾನದ ಜೊತೆಗೆ ದಾನಿಗಳಿಂದ ಅಭಿವೃದ್ಧಿಪಡಿಸಲು ಮುಂದಡಿ ಇಟ್ಟಿದ್ದಾರೆ. ಮೂರು ಶಾಲೆಗಳು ಅಕ್ಕಪಕ್ಕದಲ್ಲಿಯೇ ಇದ್ದು, ಒಂದಾದ ಮೇಲೊಂದರಂತೆ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳ ಲಾಗಿದೆ. ಅದಕ್ಕಾಗಿ ಈಗಾಗಲೇ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.
931 ವಿದ್ಯಾರ್ಥಿಗಳು: ಮೂರು ಶಾಲೆಗಳಿಂದ 931 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ, ದ್ವಿತೀಯ ಪಿಯುಸಿವರೆಗೆ 405, ಪ್ರೌಢಶಾಲಾವಿಭಾಗದಲ್ಲಿ 8ರಿಂದ 10ನೇ ತರಗತಿವರೆಗೆ 226 ಹಾಗೂಸರ್ಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆ(ಫ್ರೆಂಚ್ ರಾಕ್ಸ್)ಯಲ್ಲಿ ಎಲ್‌ಕೆಜಿಯಿಂದ 7ನೇ ತರಗತಿವರೆಗೆ 300 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಪ್ರಸ್ತುತ ದಾಖಲಾತಿ ಮುಂದುವರಿದಿದೆ.
ಕಟ್ಟಡಗಳ ದುರಸ್ತಿ: ಕಾಲೇಜಿನ ಕಟ್ಟಡ ಉತ್ತಮವಾಗಿದ್ದು, ಸುಣ್ಣ ಬಣ್ಣದ ಕಾಮಗಾರಿ ನಡೆಯುತ್ತಿದೆ. ಕಾಲೇಜಿಗೆ ಒಂದು ಸಭಾಂಗಣ ಅಗತ್ಯವಿದೆ. ಪ್ರೌಢಶಾಲೆ ಹಾಗೂ ಫ್ರೆಂಚ್ ರಾಕ್ಸ್ ಶಾಲೆಯ ಕಟ್ಟಡಗಳು ಹಳೆಯದಾಗಿದ್ದು, ಶಿಥಿಲಗೊಂಡಿವೆ. ಆದ್ದರಿಂದ ದುರಸಿ ಯಾಗಬೇಕಿದೆ. ಶಾಲೆಗಳ ಕೊಠಡಿಗಳು, ಲ್ಯಾಬ್, ಕಿಟಿಕಿಗಳು, ರಸ್ತೆ ಕಾಮಗಾರಿ ಸಂಪೂರ್ಣ ಹಾಳಾಗಿದೆ. ಅವುಗಳ ದುರಸ್ತಿ ಕಾರ್ಯ ನಡೆಯುತ್ತಿದೆ. ಜತೆಗೆ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ. ಪ್ರೌಢ ಶಾಲೆಗೆ ಸುಮಾರು 15ರಿಂದ 20 ಕೊಠಡಿಗಳ ಅಗತ್ಯವಿದ್ದು, ನಿರ್ಮಾಣ ಕಾರ್ಯವೂ ಸಾಗುತ್ತಿದೆ.
ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಶೌಚಾಲಯವಿದೆ. ಅದುಶಿಥಿಲಗೊಂಡಿದೆ. ಅಲ್ಲದೆ, ಬಾಲಕ-ಬಾಲಕಿಯರಿಗಾಗಿ ಪ್ರತ್ಯೇಕಶೌಚಾಲಯವಿಲ್ಲ. ಫ್ರೆಂಚ್ ರಾಕ್ಸ್ ಶಾಲೆಯಲ್ಲಿ ಶೌಚಾಲಯವಿಲ್ಲ. ಮೂರು ಕಡೆ ಉತ್ತಮ ಸುಸಜ್ಜಿತ ಶೌಚಾಲಯಗಳ ನಿರ್ಮಾಣ ಅಗತ್ಯವಾಗಿದೆ.
ಶಿಕ್ಷಕರ ಕೊರತೆ ಇಲ್ಲ: ಕಾಲೇಜು ಹಾಗೂ ಎರಡು ಶಾಲೆಗೆ ಯಾವುದೇ ಶಿಕ್ಷಕರ ಕೊರತೆ ಇಲ್ಲ.ಕಾಲೇಜಿಗೆ10 ಉಪನ್ಯಾಸಕರಿದ್ದರೆ, ಪ್ರೌಢಶಾಲೆಯಲ್ಲಿ 14 ಶಿಕ್ಷಕರಿದ್ದಾರೆ. ಇನ್ನೂ ಫ್ರೆಂಚ್ ರಾಕ್ಸ್ ಶಾಲೆಯಲ್ಲಿ 6 ಶಿಕ್ಷಕರಿದ್ದಾರೆ. ಇದರ ಜೊತೆಗೆ ಕಾಲೇಜಿಗೆ ಅತಿಥಿ ಉಪನ್ಯಾಸಕರು, ಎಲ್‌ಕೆಜಿ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಗುಣಮಟ್ಟದ ಶಿಕ್ಷಣ: ಕಾಲೇಜು ಹಾಗೂ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಫ್ರೆಂಚ್ ರಾಕ್ಸ್ ಶಾಲೆಯಲ್ಲಿ ದಾಖಲಾತಿ ಹೆಚ್ಚಳಗೊಂಡಿದ್ದು, ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತಿದೆ. ಪ್ರೌಢಶಾಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮವಾಗಿದೆ.
ಕ್ರೀಡಾಂಗಣ ಅಭಿವೃದ್ಧಿ ಅಗತ್ಯ: ಕಾಲೇಜು ಹಾಗೂ ಪ್ರೌಢಶಾಲೆಗೆ
ಕ್ರೀಡಾಂಗಣವಿದೆ. ಆದರೆ, ಫ್ರೆಂಚ್ ರಾಕ್ಸ್ ಶಾಲೆಗೆ ಕ್ರೀಡಾಂಗಣ ಚಿಕ್ಕದಾಗಿದೆ. ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸುವ ಮೂಲಕ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಬೇಕಿದೆ. ಎಲ್ಲ ಶಾಲೆಯಲ್ಲೂ ದೈಹಿಕ ಶಿಕ್ಷಕರಿದ್ದು, ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆಉತ್ತಮವಾಗಿದೆ. ಕಾಲೇಜು ಹಾಗೂ ಪ್ರೌಢಶಾಲೆಗೆ ಗ್ರಂಥಾಲಯವಿದೆ. ಆದರೆ, ಕಟ್ಟಡ ಶಿಥಿಲಗೊಂಡಿದ್ದು, ಅದನ್ನು ದುರಸ್ತಿ ಮಾಡ ಬೇಕಾಗಿದೆ. ಫ್ರೆಂಚ್ ರಾಕ್ಸ್ ಶಾಲೆಗೆ ಯಾವುದೇ ಗ್ರಂಥಾಲಯವಿಲ್ಲ.
ಎಸ್‌ಡಿಎಂಸಿ ಸಕ್ರಿಯ: ಕಾಲೇಜು ಮತ್ತು ಪ್ರೌಢಶಾಲೆಗೆ ಎಸ್‌ಡಿಎಂಸಿ ಇದೆ. ಫ್ರೆಂಚ್ ರಾಕ್ಸ್ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ರಚಿಸಿಕೊಂಡು ದಾನಿಗಳಿಂದ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಾಲೆ ಹಾಗೂ ಕಾಲೇಜುಗಳ ಶಿಕ್ಷಣ, ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎಸ್‌ಡಿಎಂಸಿ ಹಾಗೂ ಸಮಿತಿಗಳು ತೊಡಗಿಸಿಕೊಂಡಿವೆ.
ಬಿಸಿಯೂಟಕ್ಕೆ ಕೊಠಡಿ ಅಗತ್ಯ: ಪ್ರೌಢಶಾಲೆ ಹಾಗೂ ಫ್ರೆಂಚ್ ರಾಕ್ಸ್‌ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆ ಉತ್ತಮವಾಗಿದೆ. ಅದಕ್ಕಾಗಿಪ್ರತ್ಯೇಕ ಅಡುಗೆ ಕೊಠಡಿಗಳಿದ್ದು, ಪ್ರತಿ ದಿನ ಮಕ್ಕಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆ.
ಪುಂಡರ ಹಾವಳಿಗೆ ಕಡಿವಾಣ ಅಗತ್ಯ : ಫ್ರೆಂಚ್ ರಾಕ್ಸ್ ಶಾಲೆ ಹಾಗೂ ಕಾಲೇಜಿಗೆ ಕಾಂಪೌಂಡ್ ಇದೆ. ಆದರೆ, ರಾತ್ರಿ ವೇಳೆ ಪುಂಡರ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಸಾರ್ವಜನಿಕಕಾಂಪೌಂಡ್ ಅಗತ್ಯವಿದೆ. ರಾತ್ರಿ ವೇಳೆ ಪುಂಡರು ಅನೈತಿಕ ಚಟುವಟಿಕೆ ನಡೆಸಲು ಫ್ರೆಂಚ್ ರಾಕ್ಸ್ ಶಾಲೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಜತೆಗೆಶಾಲೆಯಲ್ಲಿರುವ ಪೈಪ್‌ಲೈನ್, ನಲ್ಲಿಗಳನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ಒಂದು ಕಾಲೇಜು ಹಾಗೂ ಎರಡು ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ. ಸರ್ಕಾರದ ಅನುದಾನ, ಸ್ನೇಹಿತರ ಸಹಕಾರ ಹಾಗೂ ದಾನಿ ಗಳಿಂದಲೂ ಅಭಿವೃದ್ಧಿಗೆ ಮುಂದಾಗಿ ದ್ದೇವೆ. ಈಗಾಗಲೇಕಾಮಗಾರಿ ಆರಂಭಿಸಲಾಗಿದ್ದು, ಎಲ್ಲ ರೀತಿಯ ಮೂಲಭೂತ ಸೌಕರ್ಯ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆಕ್ರಮ ವಹಿಸಲಾಗಿದೆ. – ಸಿ.ಎಸ್.ಪುಟ್ಟರಾಜು, ಶಾಸಕರು, ಪಾಂಡವಪುರ ವಿಧಾನಸಭಾ ಕ್ಷೇತ್ರ
– ಎಚ್.ಶಿವರಾಜು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444