Udayavni Special

11 ಸಾವಿರ ಶಾಲಾ ಮಕ್ಕಳಿಗೆ ಸ್ವಚ್ಛತಾ ಸಾಮಗ್ರಿಗಳ ವಿತರಣೆ

ಲೋಹಿಯಾ ವೇದಿಕೆಯಿಂದ 270 ಸರ್ಕಾರಿ ಶಾಲೆಗಳಲ್ಲಿ ವಿನೂತನ ಕಾರ್ಯಕ್ರಮ

Team Udayavani, Jun 10, 2019, 11:51 AM IST

mandya-tdy-2..

ಮಂಡ್ಯ: ಶೌಚಮುಕ್ತ, ಹೊಗೆ ಮುಕ್ತ ಗ್ರಾಮ, ವಿದ್ಯಾರ್ಥಿಗಳಿಗೆ ಉಚಿತ ಪಾಸ್‌ ನೀಡುವ ಮೂಲಕ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳೊಂದಿಗೆ ಗ್ರಾಮೀಣರ ಗಮನ ಸೆಳೆದಿರುವ ಮಳವಳ್ಳಿಯ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ನೈಲ್ ಕಟರ್‌ ಸೇರಿದಂತೆ ಚಿತ ಸ್ವಚ್ಛತಾ ಸಾಮಗ್ರಿ ವಿತರಿಸುವ ಮೂಲಕ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಡಾ.ಬಿ.ಎಸ್‌.ಶಿವಣ್ಣ ಮಳವಳ್ಳಿ ತಾಲೂಕು ಬಂಡೂರು ಪಂಚಾಯಿತಿಗೆ ಸೇರಿದ ಬಂಡೂರು, ಕಲ್ಲಾರೆಪುರ, ಗಟ್ಟಿಕೊಪ್ಪಲು, ಸಸಿಲಾರಪುರ, ದಡದಪುರ, ಗಾಣಿಗನಪುರ, ಅಚ್ಚಮ್ಮನ ಕೊಪ್ಪಲು ವಿನಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ನೈಲ್ಕಟರ್‌, ಟೂತ್‌ಪೇಸ್ಟ್‌, ಬ್ರಶ್‌, ಕೊಬ್ಬರಿ ಎಣ್ಣೆ, ಬಡ್ಸ್‌ಗಳನ್ನು ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ್ದಾರೆ.

ಶುಚಿತ್ವ ಮಕ್ಕಳಿಂದಲೇ ಆರಂಭಿಸಿ: ಜೂ.11 ಮತ್ತು 12ರಂದು ಹಲಗೂರು ಹಾಗೂ ಬಿ.ಜಿ.ಪುರ ಹೋಬಳಿಯ 270 ಶಾಲೆಗಳಲ್ಲಿರುವ 11 ಸಾವಿರ ಮಕ್ಕಳಿಗೆ ಈ ಸ್ವಚ್ಛತಾ ಸಾಮಗ್ರಿಗಳನ್ನು ನೀಡಲು ನಿರ್ಧರಿಸಲಾಗಿದೆ. ಶುಚಿತ್ವ ಎನ್ನುವುದು ಮಕ್ಕಳಿಂದಲೇ ಆರಂಭವಾಗಬೇಕು. ಅವರಿಂದಲೇ ಅದು ಬೆಳವಣಿಗೆ ಕಂಡಾಗ ಸ್ವಚ್ಛ ಹಾಗೂ ಆರೋಗ್ಯಕರ ನಿರ್ಮಾಣ ಸಾಧ್ಯ ಎಂಬ ಉದ್ದೇಶದೊಂದಿಗೆ ಶಾಲಾ ಹಂತದಲ್ಲೇ ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸಲು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಮಾಡುತ್ತಿ ರುವುದು ಉತ್ತಮವಾದ ಕೆಲಸ ಎಂದು ಪ್ರಶಂಸಿದರು.

ಯಶಸ್ಸಿನತ್ತ ದಾಪುಗಾಲು: ಶಾಲಾ ಮಕ್ಕಳಿಗೆ ಶೈಕ್ಷಣಿಕೆ ಪ್ರವಾಸ, ಶಾಲಾ ಕೊಠಡಿ ನಿರ್ಮಾಣ, ಗೌರವ ಶಿಕ್ಷಕರ ನೇಮಕ ಸೇರಿದಂತೆ ಸಮಾಜಮುಖೀ ಹಾಗೂ ಜನಪರ ಕಾರ್ಯಕ್ರಮಗಳೊಂದಿಗೆ ಲೋಹಿಯಾ ವಿಚಾರ ವೇದಿಕೆ ಯಶಸ್ಸಿನತ್ತ ದಾಪುಗಾಲಿರಿಸಿದೆ. ಗ್ರಾಮೀಣ ಜನರ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಿಗೆ ನೆರವಾಗುವ ಗುರಿಯನ್ನಿಟ್ಟುಕೊಂಡು ವಿಭಿನ್ನ ಯೋಜನೆಗಳನ್ನು ರೂಪಿಸುವುದು ವೇದಿಕೆಯ ಮೂಲ ಉದ್ದೇಶವಾಗಿದೆ ಎಂದು ಡಾ.ಬಿ.ಎಸ್‌.ಶಿವಣ್ಣ ತಿಳಿಸಿದರು.

ಬಯಲು ಶೌಚಮುಕ್ತ: ಬಂಡೂರು ಪಂಚಾಯಿತಿಯ ಹಲವು ಗ್ರಾಮಗಳು ಇದೀಗ ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮಗಳಾಗಿರುವುದಲ್ಲದೆ, ಹೊಗೆ ಮುಕ್ತ ಗ್ರಾಮಗಳನ್ನಾಗಿಯೂ ಪರಿವರ್ತಿಸಲಾಗಿದೆ. ಈ ಗ್ರಾಮಗಳಿಗೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಿತರಣೆ ಮಾಡುವ ಮೂಲಕ ಮಹಿಳೆಯರಿಗೆ ಅನುಕೂಲ ಮಾಡಿಕೊಡ ಲಾಗಿದೆ. ಗ್ರಾಮೀಣ ಶಾಲಾ- ಕಾಲೇಜು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಬಸ್‌ಪಾಸ್‌ಗಳನ್ನು ಉಚಿತವಾಗಿ ದೊರಕಿಸಿ ಕೊಡಲಾಗಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿ ದ್ದಾರೆ ಎಂದು ಹೇಳಿದರು.

ಮತ್ತಷ್ಟು ಯೋಜನೆ: ಮಕ್ಕಳ ಜ್ಞಾನ ವಿಕಾಸದ ಉದ್ದೇಶಕ್ಕಾಗಿ ಶಾಲಾ ಶೈಕ್ಷಣಿಕ ಪ್ರವಾಸವನ್ನು ಪ್ರತಿ ವರ್ಷ ಆಯೋಜನೆ ಮಾಡಲಾಗುತ್ತಿದೆ. ಶಿಕ್ಷಕರಿಲ್ಲದ ಕಡೆ ಗೌರವ ಶಿಕ್ಷಕರನ್ನು ನೇಮಕ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ.

ವೇದಿಕೆಯ ಹೊಸ ಹೊಸ ಕಾರ್ಯ ಕ್ರಮಗಳಿಗೆ ಗ್ರಾಮೀಣ ಜನರಿಂದ ಉತ್ತಮ ಸಹಕಾರ, ವಿದ್ಯಾರ್ಥಿಗಳಿಂದ ಸ್ಪಂದನೆ ವ್ಯಕ್ತವಾಗುತ್ತಿದೆ. ವೇದಿಕೆ ವತಿಯಿಂದ ಇನ್ನಷ್ಟು ಸಾಮಾಜಿಕ ಯೋಜನೆಗಳನ್ನು ರೂಪಿಸಿ ಜಾರಿಗೊಳಿ ಸಲು ಸಹಕಾರಿಯಾಗಿದೆ ಎಂದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಗಳೂರಿನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಕೊಲೆ

ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಕೊಲೆ

ಅಧಿಕಾರಿಗಳೇ ‘ಏನಿದು ಸಂಸ್ಕಾರ’ ಚಿತಾಗಾರದಲ್ಲಿ ಇಟ್ಟು ಹೋದ ಶವವನ್ನು ಎಳೆದಾಡಿದ ನಾಯಿಗಳು!

ಅಧಿಕಾರಿಗಳೇ ‘ಏನಿದು ಸಂಸ್ಕಾರ’ ಚಿತಾಗಾರದಲ್ಲಿ ಬಿಟ್ಟು ಹೋದ ಶವವನ್ನು ಎಳೆದಾಡಿದ ನಾಯಿಗಳು!

ವಿಂಡೀಸ್ ಬಿಗಿ ಹಿಡಿತದಲ್ಲಿ ಸೌಥಂಪ್ಟನ್ ಟೆಸ್ಟ್: 114 ರನ್ ಮುನ್ನಡೆ ಪಡೆದ ಹೋಲ್ಡರ್ ಪಡೆ

ವಿಂಡೀಸ್ ಬಿಗಿ ಹಿಡಿತದಲ್ಲಿ ಸೌಥಂಪ್ಟನ್ ಟೆಸ್ಟ್: 114 ರನ್ ಮುನ್ನಡೆ ಪಡೆದ ಹೋಲ್ಡರ್ ಪಡೆ

tiktok

ಟಿಕ್ ಟಾಕ್ ಬಳಸದಂತೆ ಉದ್ಯೋಗಿಗಳಿಗೆ ಅಮೇಜಾನ್ ಸೂಚನೆ,ಕೆಲವೇ ಗಂಟೆಗಳಲ್ಲಿ ನಿರ್ಧಾರ ಹಿಂತೆಗೆತ!

america

ಭಾರತ: 4 ದಿನದಲ್ಲಿ 1ಲಕ್ಷ ಜನರಿಗೆ ಕೋವಿಡ್ ಸೊಂಕು,ಅಮೆರಿಕಾದಲ್ಲಿ ಒಂದೇ ದಿನ 69ಸಾವಿರ ಪ್ರಕರಣ

ಹೈದರಾಬಾದ್‌ ಏರ್‌ಪೋರ್ಟ್‌ಗೆ ಕಾಂಟಾಕ್ಟ್ ಲೆಸ್‌ ಕಾರ್‌ ಪಾರ್ಕಿಂಗ್‌

ಹೈದರಾಬಾದ್‌ ಏರ್‌ಪೋರ್ಟ್‌ಗೆ ಕಾಂಟ್ಯಾಕ್ಟ್ ಲೆಸ್‌ ಕಾರ್‌ ಪಾರ್ಕಿಂಗ್‌

ಚೀನಕ್ಕೆ ಕಡಲ ಸಿಡಿಲು ; ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾಕ್ಕೆ ಆಹ್ವಾನ

ಚೀನಕ್ಕೆ ಕಡಲ ಸಿಡಿಲು ; ಮಲಬಾರ್‌ ನೌಕಾ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯಾಕ್ಕೆ ಆಹ್ವಾನ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mnd-death

ಮಂಡ್ಯ: ಕೋವಿಡ್‌ 19ನಿಂದ ಮತ್ತೊಬ್ಬ ಸಾವು

mnd raste

ಸಾರ್ವಜನಿಕ ರಸ್ತೆ ತೆರವು

nakali-sru

ನಕಲಿ ದಾಖಲೆ ಸೃಷ್ಟಿ: ಪ್ರತಿಭಟನೆ

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ‘ಆಧುನಿಕ ಭಗೀರಥ’ ಕಾಮೇಗೌಡರು

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ‘ಆಧುನಿಕ ಭಗೀರಥ’ ಕಾಮೇಗೌಡರು

jcb drive

ಜೆಸಿಬಿ ಚಾಲಕನನ್ನು ಥಳಿಸಿದ ಮಾಜಿ ಶಾಸಕ

MUST WATCH

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home


ಹೊಸ ಸೇರ್ಪಡೆ

ಮತ್ತೆ 51 ಜನರಿಗೆ ವಕ್ಕರಿಸಿದ ಸೋಂಕು

ಮತ್ತೆ 51 ಜನರಿಗೆ ವಕ್ಕರಿಸಿದ ಸೋಂಕು

ಮಂಗಳೂರಿನಲ್ಲಿ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಕೊಲೆ

ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಬಿಜೆಪಿ ಬೆಂಬಲಿತ ಪಂಚಾಯತ್ ಸದಸ್ಯ ಯಾಕೂಬ್ ಕೊಲೆ

ಮತ್ತೆ 25 ಹೊಸ ಪ್ರಕರಣ ಪತ್ತೆ

ಮತ್ತೆ 25 ಹೊಸ ಪ್ರಕರಣ ಪತ್ತೆ

ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಬಂಧ ವಾಪಸ್‌ ಮಾಡಿ

ವಿದೇಶಿ ವಿದ್ಯಾರ್ಥಿಗಳಿಗೆ ನಿರ್ಬಂಧ ವಾಪಸ್‌ ಮಾಡಿ

ಸಂಕಷ್ಟದಲ್ಲಿಯೂ ದೇಶದ ಅಭಿವೃದ್ಧಿಗೆ ಪ್ರಧಾನಿ ಒತ್ತು

ಸಂಕಷ್ಟದಲ್ಲಿಯೂ ದೇಶದ ಅಭಿವೃದ್ಧಿಗೆ ಪ್ರಧಾನಿ ಒತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.