ಬಿರುಸುಗೊಂಡ ಜಿಲ್ಲಾ ಕಸಾಪ ಚುನಾವಣೆ
ರಾಜಕೀಯ ಚುನಾವಣೆಯಂತೆಯೇ ರಂಗು ಹೆಚ್ಚು , ಮತ ಹೊಂದಿರುವ ಮೂರನೇ ಜಿಲ್ಲೆ ಮಂಡ್ಯ
Team Udayavani, Feb 13, 2021, 3:27 PM IST
ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್‌ಗೆ ಚುನಾವಣೆ ದಿನಾಂಕ ಘೋಷಣೆಯಾಗಿರುವುದರಿಂದ ಜಿಲ್ಲಾ ಸಾಹಿತ್ಯ ಕ್ಷೇತ್ರದಲ್ಲಿ ಚುನಾವಣೆ ಬಿರುಸುಗೊಂಡಿದ್ದು, ಚಟು ವಟಿಕೆಗಳು ಗರಿಗೆದರಿವೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದ್ದು, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಹಲವು ಸಾಹಿತ್ಯ ಪರಿಷತ್‌ನ ಸದಸ್ಯರನ್ನು ಭೇಟಿ ಮಾಡುತ್ತಿದ್ದು, ಬೆಂಬಲ ಕೋರುತ್ತಿದ್ದಾರೆ.
24 ಸಾವಿರ ಮತದಾರರು: ಜಿಲ್ಲೆಯಾ ದ್ಯಂತ 24,400 ಮತದಾರರಿದ್ದು, ರಾಜ್ಯ ದಲ್ಲಿಯೇ ಅತಿ ಹೆಚ್ಚು ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಹೊಂದಿ ರುವ ಮೂರನೇ ಜಿಲ್ಲೆಯಾಗಿದೆ. 6 ಸಾವಿರವಿದ್ದ ಸದಸ್ಯರ ಸಂಖ್ಯೆ ಕಳೆದ 10 ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಬೆಂಗಳೂರು, ಬೆಳಗಾವಿಬಿಟ್ಟರೆ ಮಂಡ್ಯ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತದಾರರಿದ್ದಾರೆ.
ಮಾ.29ರಿಂದ ನಾಮಪತ್ರ ಸಲ್ಲಿಕೆ: ಮುಂದಿನ ಮಾಚ್ 29ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಏಪ್ರಿಲ್7ರವರೆಗೂ ಜಿಲ್ಲಾ ಕೇಂದ್ರದ ತಹಶೀಲ್ದಾರ್ ಕಚೇರಿಯಲ್ಲಿಉಮೇದುವಾರಿಕೆ ಸಲ್ಲಿಸಬಹುದಾಗಿದೆ. ಮೇ 9ರಂದುಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶಪ್ರಕಟವಾಗಲಿದೆ.
ಆಕಾಂಕ್ಷಿತರಿಂದ ಪ್ರಣಾಳಿಕೆ: ಈಗಾಗಲೇ ಕೆಲವು ಸ್ಪರ್ಧೆ ಬಯಸುವ ಆಕಾಂಕ್ಷಿತರು ಕನ್ನಡ ಕೆಲಸ ಮಾಡುವ ಬಗ್ಗೆ, ಸಾಹಿತ್ಯ ಕ್ಷೇತ್ರದಲ್ಲಿ ತಾವು ಮಾಡಿರುವ ಸೇವೆ ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಪ್ರಣಾಳಿಕೆತಯಾರಿಸಿ ತಾಲೂಕುಗಳಲ್ಲಿ ಪ್ರವಾಸ ಕೈಗೊಂಡಿದ್ದು, ಸದಸ್ಯರ ಮನೆಗಳಿಗೆಎಡತಾಕುತ್ತಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಸಹ ಈ ಬಾರಿ ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ. ಸಾಹಿತಿ ಎಸ್.ಕೃಷ್ಣಸ್ವರ್ಣಸಂದ್ರ, ಸತೀಶ್ ಜವರೇಗೌಡ, ಚಿಕ್ಕಹಾರೋ ಹಳ್ಳಿ ಪುಟ್ಟಸ್ವಾಮಿ, ಲೋಕೇಶ್ ಚಂದಗಾಲು, ಕೀಲಾರ ಕೃಷ್ಣೇಗೌಡ ಸೇರಿದಂತೆ ಮತ್ತಿತರರು ಆಕಾಂಕ್ಷಿ ಗಳಾಗಿದ್ದಾರೆ.
ಬಂಡವಾಳಶಾಹಿಗಳ ಹಿಡಿತಕ್ಕೆ ಕಸಾಪ?: ಜಿಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬಂಡವಾಳಶಾಹಿ ಗಳ ಹಿಡಿತಕ್ಕೆ ಸಿಲುಕುತ್ತಿದೆ. ಪ್ರಸ್ತುತ ನಡೆಯುತ್ತಿ ರುವ ಚುನಾವಣೆಯೂ ಖರ್ಚು ಮಾಡುವವರಿಗೆ ಮಣೆ ಎಂಬಂತಾಗಿದೆ. ಸಾಹಿತ್ಯ ಕೃಷಿ ಮಾಡಿದ ಸಾಹಿತಿಗಳು ಚುನಾವಣೆಯಿಂದ ದೂರ ಉಳಿಯುವಂತಾಗಿದೆ. ನಿಧಾನವಾಗಿ ಸಾಹಿತಿ, ಸಂಘ ಟಕರಿಂದ ಕಸಾಪ ಕೈ ಜಾರುತ್ತಿದೆಯೇ ಎಂಬ ಆತಂಕ ಸಾಹಿತ್ಯಾಭಿಮಾನಿ ಗಳಲ್ಲಿ ಮೂಡಿದೆ. ಕಸಾಪ ಚುನಾವಣೆ ಯಾವ ರಾಜಕೀಯ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆಸಲು ಸಿದ್ಧತೆ ಆರಂಭಗೊಂಡಿದ್ದು, ಸಾಹಿತ್ಯಕ್ಕಿಂತ ಪ್ಲೆಕ್ಸ್ ರಾಜ ಕಾರಣ ಜೋರಾಗಿ ನಡೆಯುತ್ತಿದೆ. ಓಟ್ ಬ್ಯಾಂಕ್, ಓಲೈಕೆ ರಾಜಕಾರಣವೂ ಸೇರಿದೆ. ಇಂಥವರ ಮಧ್ಯೆ ಸ್ಪರ್ಧೆ ಮಾಡುವುದು ಕಷ್ಟಕರ ಎಂದು ಹಿರಿಯ ಸಾಹಿತಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಎರಡನೇ ಅವಧಿ ಸ್ಪರ್ಧೆಗೆ ವಿರೋಧ:
ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಎರ ಡನೇ ಬಾರಿ ಸ್ಪರ್ಧಿಸಿ ಗೆದ್ದ ಇತಿಹಾಸವಿಲ್ಲ. ಕನ್ನಡ ಹಾಗೂ ಸಾಹಿತ್ಯಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗಬೇಕು ಎಂಬ ನಿಟ್ಟಿನಲ್ಲಿ ಹಿರಿಯ ಸಾಹಿತಿಗಳು ಅಲಿಖೀತ ನಿಯಮ ಮಾಡಿದ್ದಾರೆ. ಆ ನಿಯಮಕ್ಕೆ ವಿರುದ್ಧ ವಾಗಿ ಸ್ಫರ್ಧಿಸಿದವರು ಸೋತಿದ್ದಾರೆ. ಹಿರಿಯರ ಒಮ್ಮತದ ಅಭ್ಯರ್ಥಿಯಾಗಿ ನಿಂತವರು ಗೆಲುವು ಸಾಧಿಸುತ್ತಾ ಬಂದಿದ್ದಾರೆ.
ಪರ್ಯಾಯಅಭ್ಯರ್ಥಿ ಆಯ್ಕೆಗೆ ಸಿದ್ಧತೆ :
ಹಾಲಿ ಜಿಲ್ಲಾಧ್ಯಕ್ಷ ಸಿ.ಕೆ. ರವಿಕುಮಾರ್ ಚಾಮಲಾಪುರ ಎರಡನೇ ಬಾರಿಗೆ ಸ್ಪ ರ್ಧಿಸಲು ಮುಂದಾಗಿದ್ದಾರೆ. ಹಿರಿಯರು ಎರಡನೇ ಅವಧಿಗೆ ನಿಲ್ಲುವುದು ಬೇಡ ಎಂದು ಹೇಳಿದ್ದರೂ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಪರ್ಯಾಯವಾಗಿ ಒಮ್ಮತದ ಅಭ್ಯರ್ಥಿ ನಿಲ್ಲಿಸಲು ಎಲ್ಲ ರೀತಿಯ ತಯಾರಿ ನಡೆಯುತ್ತಿದೆ.ಚುನಾವಣೆ ಎದುರಿಸಲು ಎಲ್ಲ ರೀತಿಯಿಂದಲೂ ಶಕ್ತರಾಗಿರುವ ಒಬ್ಬ ಪ್ರಬಲ ಸಂಘಟಕರೊಬ್ಬರ ಹೆಸರುಕೇಳಿ ಬರುತ್ತಿದೆ.
-ಎಚ್.ಶಿವರಾಜು