ಅಧಿಕಾರದ ವ್ಯಾಮೋಹವಿಲ: ಅನ್ನದಾನಿ
Team Udayavani, Apr 10, 2021, 1:31 PM IST
ಮಳವಳ್ಳಿ: ಚುನವಾಣೆಯ ಖರ್ಚಿಗೆ ಹಣವಿಲ್ಲದಿದ್ದಾಗ ಕ್ಷೇತ್ರದ ಜನರೇ ಹಣ ಹಾಕಿ ನನ್ನನ್ನು ಗೆಲ್ಲಿಸಿದ್ದು, ನನಗೆ ಹಣ, ಆಸ್ತಿ, ಅಧಿಕಾರದ ವ್ಯಾಮೋಹವಿಲ್ಲ. ಅಭಿವೃದ್ಧಿಗಷ್ಟೇ ಆದ್ಯತೆ ನೀಡುವೆ ಎಂದು ಶಾಸಕ ಕೆ.ಅನ್ನದಾನಿ ಹೇಳಿದರು.
ತಾಲೂಕಿನ ಬಂಡೂರು ಗ್ರಾಮದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದಅಕ್ರಮ ಸಕ್ರಮ ಯೋಜನೆಯಡಿ ಜೇಷ್ಠತೆ ಮೇರೆಗೆ 2016ರಿಂದ 2020-21ನೇ ಸಾಲಿನ ರೈತರ ಕೃಷಿಪಂಪ್‌ಸೆಟ್‌ಗಳಿಗೆ ವಿದ್ಯುತ್ ಮೂಲ ಸೌಕರ್ಯಕಲ್ಪಿಸುವ 32.03 ಕೋಟಿ ರೂ. ವೆಚ್ಚದ ಅಭಿವೃದ್ಧಿಕಾಮಗಾರಿಗಳಿಗೆ ಚಾಲನೆ ನೀಡಿ ಅವರುಮಾತನಾಡಿದರು. 2006ರಲ್ಲಿ ಕುಮಾರಸ್ವಾಮಿ ಅವರ 20 ತಿಂಗಳ ಮುಖ್ಯಮಂತ್ರಿ ಅವಧಿಯಲ್ಲಿ 20 ವರ್ಷಕ್ಕೆ ಸಮವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು, ಈಗ ಎರಡೂವರೆ ವರ್ಷಗಳಲ್ಲಿ ಸಾಕಷ್ಟು ಅನುದಾನ ತಂದಿರುವೆ ಎಂದರು.
ವರದಾನ: ರೈತರಿಗೆ ವಿದ್ಯುತ್ ಮತ್ತು ನೀರು ಕೊಟ್ಟರೆ ಸಾಕು ಕೃಷಿ ಮೂಲಕ ಬದುಕು ಕಟ್ಟಿಕೊಳ್ಳುತ್ತಾರೆ.ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಜಿಲ್ಲೆಯ ರೈತರ ಮೇಲಿನ ವಿಶೇಷ ಕಾಳಜಿಯಿಂದವಿದ್ಯುತ್ ಸಮಸ್ಯೆ ನೀಗಿಸಲು ಅಕ್ರಮ ಸಕ್ರಮಯೋಜನೆ ಜಾರಿಗೊಳಿಸಿ ಎರಡು ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್ ಅವಳಡಿಸಿ ವಿದ್ಯುತ್ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಿದ್ದರು. ಯೋಜನೆಯು ರೈತರಿಗೆ ವರದಾನವಾಗಲಿದೆ ಎಂದರು.
ಸೆಸ್ಕ್ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಸ್ವಾಮಿಗೌಡ, ಗ್ರಾಪಂ ಅಧ್ಯಕ್ಷೆ ಮುತ್ತಮ್ಮ, ಮಂಗಳಗೌರಮ್ಮ, ನಾಗೇಂದ್ರ, ತಾಪಂ ಸದಸ್ಯರಾದ ದೊಡ್ಡಯ್ಯ, ಪುಟ್ಟಸ್ವಾಮಿ, ಸೋಮಶೇಖರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಮಲ್ಲಪ್ಪ, ನಿರ್ದೇಶಕ ಬುಲೆಟ್ ನಿಂಗಣ್ಣ, ಮುಖಂಡರಾದ ಮಲ್ಲೇಗೌಡ, ಶಿವಕುಮಾರ್, ನಾಗರಾಜು, ಸಹಾಯಕ ಎಂಜಿನಿಯರ್ ಮಂಜುನಾಥ್, ಪಿಡಿಒ ಕುಮಾರ್ ಇದ್ದರು.
ಕ್ಷೇತ್ರವನ್ನು ನಾನೊಬ್ಬನೇ ಅಭಿವೃದ್ಧಿಪಡಿಸಿದ್ದು, ಹಿಂದಿನವರು ಯಾರೂ ಅಭಿವೃದ್ಧಿ ಮಾಡಿಲ್ಲ. ಹೀಗಾಗಿನನ್ನ ಹೆಸರನ್ನು ಮಾತ್ರ ಹೇಳಬೇಕು ಎಂದುಮಾಜಿ ಶಾಸಕರು ಹೇಳುತ್ತಾರೆ. ಈಭಾಗದಲ್ಲಿ ಅವರಿಗೆ ಮತ ನೀಡಲಿಲ್ಲಎಂಬ ಕಾರಣಕ್ಕೆ ರಸ್ತೆಯನ್ನು ಅಭಿವೃದ್ಧಿಪಡಿಸಿರಲಿಲ್ಲ. – ಕೆ.ಅನ್ನದಾನಿ, ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಂಟ್ವಾಳ: ಶೆಡ್ ಮೇಲೆ ಗುಡ್ಡ ಕುಸಿದು ಗಾಯಗೊಂಡಿದ್ದ ಮತ್ತಿಬ್ಬರು ಸಾವು
ತನ್ನದೇ ದೇಶದ ಬಿಗ್ ಬಾಶ್ ತ್ಯಜಿಸುತ್ತಾರಾ ಡೇವಿಡ್ ವಾರ್ನರ್?
ಮುಂದುವರಿದ ಮಳೆ: ಶಿವಮೊಗ್ಗ ಜಿಲ್ಲೆಯ ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ರಜೆ ಘೋಷಣೆ
ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?
10 ಲಕ್ಷ ಮಕ್ಕಳಿಗಿಲ್ಲ ಶಿಕ್ಷಣ: ಕೋವಿಡ್ ತಂದಿಟ್ಟ ಆಘಾತ ಸಮೀಕ್ಷೆ ವಿವರ ಹೈಕೋರ್ಟ್ಗೆ