ಹೈನುಗಾರಿಕೆಯಿಂದ ರೈತರಿಗೆ ಆರ್ಥಿಕ ಬಲ: ಅನ್ನದಾನಿ

ಮಳವಳ್ಳಿ ತಾಲೂಕಿನಲ್ಲಿ ಮತ್ತೂಮ್ಮೆ ಸಿಎಂ ಗ್ರಾಮವಾಸ್ತವ್ಯ

Team Udayavani, Jun 24, 2019, 1:16 PM IST

ಮಳವಳ್ಳಿ ಪಟ್ಟಣದ ಕೋಳಿ ಸಂವರ್ಧನಾ ಕೇಂದ್ರದ ಆವರಣದಲ್ಲಿ ಮೇವು ಕತ್ತರಿಸುವ ಯಂತ್ರವನ್ನು ಶಾಸಕ ಡಾ ಕೆ. ಅನ್ನದಾನಿ ಫಲಾನುಭವಿಗಳಿಗೆ ವಿತರಿಸಿದರು.

ಮಳವಳ್ಳಿ: ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆಯನ್ನು ರೈತರು ಅವಲಂಬಿಸಿದಾಗ ಆರ್ಥಿಕವಾಗಿ ಬೆಳವಣಿಗೆ ಸಾಧಿಸಬಹುದು ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

ಪಟ್ಟಣದ ಕೋಳಿ ಸಂವರ್ಧನಾ ಕೇಂದ್ರದ ಆವರಣದಲ್ಲಿ ಮೇವು ಕತ್ತರಿಸುವ ಯಂತ್ರ ವಿತರಣೆ ಹಾಗೂ ಪಶು ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮೇವು ಕತ್ತರಿಸುವ ಯಂತ್ರವನ್ನು ವಿತರಿಸಿ ಮಾತನಾಡಿ, ಕೃಷಿ ಚಟುವಟಿಕೆ ಒಂದರಿಂದಲೇ ರೈತರು ಆರ್ಥಿಕವಾಗಿ ಪ್ರವರ್ಧಮಾನಕ್ಕೆ ಬರಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಹೈನುಗಾರಿಕೆ, ಕುಕ್ಕುಟೋದ್ಯಮ, ಮೇಕೆ, ಕುರಿ ಸಾಕಣೆಯಂತಹ ಉಪಕಸುಬುಗಳನ್ನು ಅವಲಂಬಿಸಿದರೆ ಪ್ರಗತಿ ಕಾಣಬಹುದು ಎಂದರು.

ಸಿಎಂ ಮತ್ತೂಮ್ಮೆ ಗ್ರಾಮ ವಾಸ್ತವ್ಯ; ಹೈನುಗಾರಿಕೆ ರೈತರಿಗೆ ವರದಾನವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹಣ ಗಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಡಾ.ನಂಜುಂಡಪ್ಪ ವರದಿಯ ಪ್ರಕಾರ ಮಳವಳ್ಳಿ ತಾಲೂಕು ತೀವ್ರವಾಗಿ ಹಿಂದುಳಿದಿದ್ದು, ಸಿಎಂ ಕುಮಾರಸ್ವಾಮಿ ಮತ್ತೂಮ್ಮೆ ಗ್ರಾಮವಾಸ್ತವ್ಯ ಮಾಡಲಿದ್ದಾರೆ ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ನೀತಿ ಸಂಹಿತೆ ಜಾರಿ ಇದ್ದುದ್ದರಿಂದ ಹೆಚ್ಚು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಆಡಳಿತ ಯಂತ್ರವನ್ನು ಚುರುಕು ಮಾಡುವುದರ ಮೂಲಕ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಂದಾಯ ಆದಾಲತ್‌ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಲೂಕಿನ ಅಭಿವೃದ್ಧಿಗೆ 1300 ಕೋಟಿ ರೂ. ಅನುದಾನ ನೀಡಿದ್ದಾರೆ. ಕುಡಿಯುವ ನೀರು, ನಾಲೆ ಆಧುನೀಕರಣ, ಹನಿ ನೀರಾವರಿ, ಕೆರೆ ತುಂಬಿಸುವ ಯೋಜನೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳ ಲಾಗುವುದು ಎಂದರು.

ಸೌಲಭ್ಯ ಪಡೆಯಿತಿ: ರೈತರನ್ನು ಹೈನುಗಾರಿಕೆಯತ್ತ ಸೆಳೆಯಲು ಸರ್ಕಾರ ಪಶುಭಾಗ್ಯ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ರೈತರಿಗೆ ಹಸು, ಕುರಿಗಳನ್ನು ನೀಡಲಾಗುತ್ತಿದೆ, ಜಾನುವಾರುಗಳಿಗೆ ಮೇವು ಕತ್ತರಿಸಲು ಅನುಕೂಲವಾಗುವಂತೆ ಮೇವು ಕತ್ತರಿಸುವ ಯಂತ್ರವನ್ನೂ ವಿತರಿಸಲಾಗುತ್ತಿದೆ. ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದು ಪ್ರತಿಯೊಬ್ಬರೂ ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ತಿಳಿಸಿದರು.

ಪಶು ಆಹಾರ ವಿತರಣೆ: ಸರ್ಕಾರದಿಂದ ಸೌಲಭ್ಯ ಸಿಗಲಿಲ್ಲವೆಂದು ರೈತರು ಹತಾಶರಾಗುವುದು ಬೇಡ, ಮುಂದಿನ ವರ್ಷಗಳಲ್ಲಿ ಸೌಲಭ್ಯ ಸಿಗದ ಫಲಾನುಭವಿಗಳಿಗೆ ಸೌಲಭ್ಯ ಸಿಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಪಶು ಆಹಾರವನ್ನು ಶಾಸಕ ಡಾ ಕೆ,ಅನ್ನದಾನಿ ವಿತರಿಸಿದರು. ಪುರಸಭೆ ಸದಸ್ಯ ಸಿದ್ದರಾಜು, ಡಾ.ವಿವೇಕಾನಂದ ಇತರರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ