ಅಕ್ರಮ ಗಣಿಗಾರಿಕೆ ತಡೆಯಲು ರೈತ ಸಂಘ ಆಗ್ರಹ

ನಿಷೇಧಾಜ್ಞೆ ನಡುವೆಯೂ ನಡೆಸುತ್ತಿರುವ ಗಣಿಗಾರಿಕೆ • ತಹಶೀಲ್ದಾರ್‌ ನಾಗೇಶ್‌ರನ್ನು ಭೇಟಿ ಮಾಡಿ ತಡೆಯುವಂತೆ ಮನವಿ

Team Udayavani, Jul 26, 2019, 3:52 PM IST

mandya-tdy-3

ಶ್ರೀರಂಗಪಟ್ಟಣ: ತಾಲೂಕಿನ ಚನ್ನನಕೆರೆ, ಮುಂಡಗದೊರೆ ಸೇರಿ ಇತರೆಡೆ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಕಲ್ಲು ಅಕ್ರಮ ಗಣಿಕಾರಿಕೆ ಮತ್ತು ಜಲ್ಲಿ ಕ್ರಷರ್‌ ಉದ್ಯಮ ನಡೆಯುತ್ತಿದ್ದು ಅದನ್ನು ನಿಲ್ಲಿಸಬೇಕು ಎಂದು ರೈತ ಸಂಘದ ಮುಖಂಡರು, ಕಾರ್ಯಕರ್ತರು ಆಗ್ರಹಿಸಿದರು.

ತಾಲೂಕು ಕಚೇರಿಯಲ್ಲಿ ತಹಶಿಲ್ದಾರ್‌ ಡಿ.ನಾಗೇಶ್‌ ಅವರನ್ನು ಭೇಟಿ ಮಾಡಿ ಈಗಾಗಲೇ ಹಲವಾರು ಬಾರಿ ದೂರು ನೀಡಿದ್ದರೂ ಇದು ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ರೈತ ಮುಖಂಡರು, ಕೂಡಲೇ ಅಕ್ರಮ ಗಣಿಗಾರಿಕೆ, ಜಲ್ಲಿ ಕ್ರಷರ್‌ ಉದ್ಯಮ ನಿಲ್ಲಿಸದಿದ್ದರೆ ನಿರಂತರ ಹೋರಾಟಕ್ಕೆ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬಂಡೆಗಳ ಸ್ಫೋಟಕ ನಿಂತಿಲ್ಲ: ತಾಲೂಕಿನ ಮುಂಡುಗದೊರೆ, ಹಂಗರಹಳ್ಳಿ, ಟಿ.ಎಂ.ಹೊಸೂರು, ಶ್ರೀರಾಂಪುರ ಬಳಿ ಅಕ್ರಮ ಗಣಿಗಾರಿಕೆ ಪ್ರತಿದಿನ ನಡೆಯುತ್ತಲೇ ಇದೆ. ರಾತ್ರಿ ವೇಳೆ ದೊಡ್ಡ ಪ್ರಮಾಣದಲ್ಲಿ ಕಲ್ಲು ಬಂಡೆಗಳನ್ನು ಸ್ಫೋಟಿಸಲಾಗುತ್ತಿದೆ. ಸರ್ಕಾರಕ್ಕೆ ಸೇರಿದ ಅರಣ್ಯ ಭೂಮಿ ಮತ್ತು ಗೋಮಾಳದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಗಣಿಕಾರಿಕೆ ನಡೆಯುತ್ತಿದೆ. ಇದರಿಂದ ಅರಣ್ಯ ನಾಶ, ಸರ್ಕರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಮಂಜೇಶ್‌ ಗೌಡ ಆಗ್ರಹಿಸಿದರು.

6 ಕ್ರಷರ್‌ ಬಂದ್‌ಗೆ ಆದೇಶ: ತಹಶೀಲ್ದಾರ್‌ ನಾಗೇಶ್‌ ಮಾತನಾಡಿ, ನಾನು ನಿಮ್ಮ ಹೋರಾಟಕ್ಕೆ ಸ್ಪಂದಿಸಿ ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ನೀಡಿದ್ದೇನೆ. ಆ ಹಿನ್ನೆಲೆಯಲ್ಲಿ ಅವರ ಆದೇಶದ ಮೇರೆಗೆ ತಾಲೂಕಿನ 6 ಜಲ್ಲಿ ಕ್ರಷರ್‌ಗಳನ್ನು ನಿಲ್ಲಿಸಲಾಗಿದೆ. ಒಂದೆರಡು ದಿನದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್‌ಗಳ ಸ್ಥಳ ಪರಿಶೀಲಿಸಿ ನಿಲ್ಲಿಸ ಲಾಗುವುದು. ಅಕ್ರಮಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ನಾಗೇಂದ್ರಸ್ವಾಮಿ, ಮುಂಡಗದೊರೆ ಮೋಹನ, ಮಲ್ಲೇಶ್‌, ರವೀಂದ್ರ, ತೇಜಸ್‌ ರೈತರು, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

astrology today uv

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ಮಾರ್ಚ್‌: 12-14ರ ಮಕ್ಕಳಿಗೆ ಲಸಿಕೆ?

ಮಾರ್ಚ್ ನಲ್ಲಿ 12-14ರ ವಯಸ್ಸಿನ ಮಕ್ಕಳಿಗೆ ಲಸಿಕೆ?

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಪಿಯು ಪರೀಕ್ಷೆ ಸಿದ್ಧತೆಗೆ 10 ನಿಮಿಷದ ವೀಡಿಯೋ

ಪಿಯು ಪರೀಕ್ಷೆ ಸಿದ್ಧತೆಗೆ 10 ನಿಮಿಷದ ವೀಡಿಯೋ

ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನ

ಭಾರತದಲ್ಲಿ ಹೂಡಿಕೆ ಮಾಡಿ: ದಾವೋಸ್‌ ಶೃಂಗ ಸಭೆಯಲ್ಲಿ ಉದ್ಯಮಿಗಳಿಗೆ ಪ್ರಧಾನಿ ಆಹ್ವಾನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೋಂಕು ಲಕ್ಷಣ ಇಲ್ಲದವರೇ ಹೆಚ್ಚು; ಎಲ್ಲೆಂದರಲ್ಲಿ ಅಲೆದಾಟ

ಸೋಂಕು ಲಕ್ಷಣ ಇಲ್ಲದವರೇ ಹೆಚ್ಚು; ಎಲ್ಲೆಂದರಲ್ಲಿ ಅಲೆದಾಟ

ಕೊರೊನಾ ನಡುವೆ ಕಿಚ್ಚು ಹಾಯಿಸಿ ಸಂಭ್ರಮ

ಕೊರೊನಾ ನಡುವೆ ಕಿಚ್ಚು ಹಾಯಿಸಿ ಸಂಭ್ರಮ

ಪತ್ನಿಯೇ ಸಾವಿಗೆ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಮಗನೊಂದಿಗೆ ನದಿಗೆ ಹಾರಿದ ತಂದೆ

ಪತ್ನಿಯೇ ಸಾವಿಗೆ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಮಗನೊಂದಿಗೆ ನದಿಗೆ ಹಾರಿದ ತಂದೆ

ಎರತಯುಇಒಇಉಯತರೆಸ

ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸಿ

ಸದ್ಗಹುಜಕಜಹಗ್ದಸ

ದುರಸ್ಥಿ ಕಾರ್ಯದಲ್ಲಿ ಹಣ ದುರ್ಬಳಕೆ: ತರಾಟೆ

MUST WATCH

udayavani youtube

ಉಡುಪಿ : ಇಂದು (ಜ.17) ರಾತ್ರಿ 10 ಗಂಟೆ ಒಳಗೆ ಅಂಗಡಿ ಮುಂಗಟ್ಟು ಮುಚ್ಚಲು ನಗರ ಸಭೆ ಆದೇಶ

udayavani youtube

ಅಬುಧಾಬಿಯಲ್ಲಿ ಡ್ರೋನ್ ದಾಳಿ : ಇಬ್ಬರು ಭಾರತೀಯರು ಸೇರಿ ಮೂವರು ಸಾವು

udayavani youtube

ಕೃಷ್ಣಾಪುರ ಸ್ವಾಮೀಜಿಗಳ ಹಿನ್ನೆಲೆ

udayavani youtube

ವಾಹನ ನಿಲುಗಡೆ ಜಗಳ ತರಕಾರಿ ಮಾರುತ್ತಿದ್ದ ಮಹಿಳೆಗೆ ‘ ಡಾಕ್ಟರ್’ ನಿಂದ ಥಳಿತ

udayavani youtube

ಜನರ ಕಲ್ಯಾಣವಾಗಬೇಕು, ಉಪದ್ರವವಾಗಬಾರದು :ಕೃಷ್ಣಾಪುರ ಮಠದ ಶ್ರೀಪಾದರ ಸಂದೇಶ

ಹೊಸ ಸೇರ್ಪಡೆ

astrology today uv

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ಮಾರ್ಚ್‌: 12-14ರ ಮಕ್ಕಳಿಗೆ ಲಸಿಕೆ?

ಮಾರ್ಚ್ ನಲ್ಲಿ 12-14ರ ವಯಸ್ಸಿನ ಮಕ್ಕಳಿಗೆ ಲಸಿಕೆ?

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಕೃತಕ ಚಂದ್ರನ ಸೃಷ್ಟಿಸಿದ ಚೀನ

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಎಚ್‌ಐವಿ ನಿವಾರಣೆಗೆ “ಭರ್ಜರಿ ಬೇಟೆ’ ತಂತ್ರ!

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

ಏಕದಿನ ಅಭ್ಯಾಸ ಆರಂಭಿಸಿದ ಟೀಮ್‌ ಇಂಡಿಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.