Udayavni Special

ವನ ಮಹೋತ್ಸವ; ಒಂದು ಗಿಡ ಬೆಳೆಸಿದರೆ 100 ರೂ.


Team Udayavani, Jul 1, 2019, 11:48 AM IST

mandya-tdy-3..

ಶ್ರೀರಂಗಪಟ್ಟಣದ ಮೈಸೂರು ವ್ಯಾಪ್ತಿಯ 8 ಕಾಲೇಜುಗಳ ಎನ್‌ಎಸ್‌ಎಸ್‌ ಘಟಕದ ವಿದ್ಯಾರ್ಥಿಗಳು ಕರಿಘಟ್ಟದಲ್ಲಿ ಗಿಡ ನೆಟ್ಟು ನೀರು ಹಾಕಿದರು.

ಶ್ರೀರಂಗಪಟ್ಟಣ: ರೈತರು ತಮ್ಮ ಜಮೀನು ಬಳಿ ಒಂದು ಗಿಡ ನೆಟ್ಟು ಬೆಳೆಸಿ ಸರ್ಕಾರದಿಂದ 100 ರೂ.ಗಳನ್ನು ಪಡೆಯಿರಿ ಜೊತೆಗೆ ಪ್ರೋತ್ಸಾಹ ಧನವನ್ನಾಗಿ ಪ್ರತಿ ಗಿಡಕ್ಕೆ 5 ರೂ. ಪಡೆಯಬಹುದು ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜು ಹೇಳಿದರು.

ಶ್ರೀರಂಗಪಟ್ಟಣ ತಾಲೂಕಿನ ಕರಿಘಟ್ಟ ಪ್ರಕೃತಿ ತಾಣದಲ್ಲಿ ಅರಣ್ಯ ಇಲಾಖೆ, ಮೈಸೂರು ವಿವಿಯ ಎನ್‌ಎಸ್‌ಎಸ್‌ ಘಟಕ ಹಾಗೂ ಯೂತ್‌ ಹಾಸ್ಟೆಲ್ಸ್ ಅಸೋಸಿಯೇಷನ್‌ ಮೈಸೂರು ಘಟಕದಿಂದ ಏರ್ಪಡಿಸಿದ್ದ ವನಮಹೋತ್ಸವದಲ್ಲಿ ಮಾತನಾಡಿದರು.

ಕಳವಳ: ಭೂಮಿಯ ವಿಸ್ತೀರ್ಣದ ಶೇ. 33 ಅರಣ್ಯ ಎಲ್ಲೆಡೆ ಇರಬೇಕು. ಆದರೆ ಸದ್ಯ ಶೇ 10ರಷ್ಟೂ ಅರಣ್ಯ ಭೂಮಿ ಇಲ್ಲದೆ ಜೀವರಾಶಿಗಳಿಗೆ ಆಮ್ಲಜನಕ ಕೊರತೆ, ಹಾಗೂ ಮರುಭೂಮೀಕರಣ ಉಂಟಾಗುತ್ತಿದೆ. ಇದಲ್ಲದೆ ಎಲ್ಲಾ ಜೀವರಾಶಿಗಳಿಗೂ ಆಹಾರದ ಕೊರತೆಗೆ ಕಾರಣವಾಗಿದೆ. ಜೀವ ವೈವಿಧ್ಯದ ಅಸ್ತಿತ್ವಕ್ಕೆ ಧಕ್ಕೆ ಎದುರಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಎಲ್ಲೂ ಮರಗಳನ್ನು ಕಡಿಯಬಾರದು ಎಂಬ ನಿಯಮ ಇದೆ. ಆದರೆ ರಸ್ತೆ, ಸೇತುವೆ ಇತರ ಅಭಿವೃದ್ಧಿ ಕಾರ್ಯಗಳ ಉದ್ದೇಶಕ್ಕೆ ಮರಗಳನ್ನು ಕಡಿಯುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳು ತಲೆಗೊಂದು ಮರ ಬೆಳೆಸುವಂತೆ ಶಿಕ್ಷಣ ಸಂಸ್ಥೆಗಳು ತಾಕೀತು ಮಾಡಬೇಕು. ಪದ ಪ್ರಮಾಣ ಪತ್ರ ಪಡೆಯಬೇಕಾದರೆ ಮರ ಬೆಳೆಸುವುದನ್ನು ಕಡ್ಡಾಯ ಮಾಡಬೇಕು ಎಂದರು.

ಪರಿಸರ ಕಾರ್ಯ: ಮೈಸೂರು ಉಪ ಕುಲಪತಿ ಪ್ರೊ.ಜೆ. ಹೇಮಂತಕುಮಾರ್‌ ಮಾತನಾಡಿ, ಎನ್‌ಎಸ್‌ಎಸ್‌ ಘಟಕಗಳು ಉತ್ತಮ ಕೆಲಸ ಮಾಡುತ್ತಿವೆ. ಮೈಸೂರು ಘಟಕಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆಯುತ್ತಿವೆ. ಈ ಘಟಕಗಳು ಪರಿಸರ ಸಂಬಂಧಿತ ಕಾರ್ಯಗಳನ್ನು ಮತ್ತಷ್ಟು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು. ಕ್ರಿಯಾ ಸಮಿತಿಯ ಮುಖ್ಯಸ್ಥ ಪ್ರಸನ್ನಕುಮಾರ್‌ ಪ್ರಾಸಾವ್ತಿಕ ಮಾತನಾಡಿದರು. ಮೈಸೂರು ಎನ್‌ಎಸ್‌ಎಸ್‌ ನಿರ್ದೇಶಕ ಡಾ.ಚಂದ್ರಶೇಖರ್‌, ಪರಿಸರ ರಮೇಶ್‌, ಭಾಗ್ಯ, ಡಾ.ಕೆ.ವೈ. ಶ್ರೀನಿವಾಸ್‌, ಕುಂತಿಬೆಟ್ಟ ಚಂದ್ರಶೇಖರ್‌ ಉಪಸ್ಥಿತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಕ್ರಮ ಯಾಕಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರು. ಮೈಸೂರು ವ್ಯಾಪ್ತಿಯ 8 ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಕರಿಘಟ್ಟ ಅರಣ್ಯದಲ್ಲಿ ಗಿಡಗಳನ್ನು ನೆಟ್ಟು ನೀರು ಹಾಕಿದರು. ಆಲ, ಬಸರಿ, ಗೋಣಿ, ನೇರಳೆ, ಸಂಪಿಗೆ ಇತರ ಸಸಿಗಳನ್ನು ನೆಡಲಾಯಿತು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

rcb

ಬೆಂಗಳೂರು-ಹೈದರಾಬಾದ್ ಬಿಗ್ ಫೈಟ್: ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ

ಕೊಲ್ಹಾಪುರ ಏರ್‌ಪೋರ್ಟ್‌ ವಿಸ್ತರಣೆಗೆ 10 ಕೋಟಿ ರೂ. ಅನುದಾನ

ಕೊಲ್ಹಾಪುರ ಏರ್‌ಪೋರ್ಟ್‌ ವಿಸ್ತರಣೆಗೆ 10 ಕೋಟಿ ರೂ. ಅನುದಾನ

ಚಾಮರಾಜನಗರ: 22 ಹೊಸ ಕೋವಿಡ್ ಪ್ರಕರಣ ದೃಢ: 28 ಮಂದಿ ಗುಣಮುಖ

ಚಾಮರಾಜನಗರ: 22 ಹೊಸ ಕೋವಿಡ್ ಪ್ರಕರಣ ದೃಢ: 28 ಮಂದಿ ಗುಣಮುಖ

ಪಿರಿಯಾಪಟ್ಟಣ ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

ಪಿರಿಯಾಪಟ್ಟಣ ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ಅನುಮಾನಾಸ್ಪದ ಸಾವು: ಕೊಲೆ ಶಂಕೆ

mullayanagiri-main

ಕೈಬೀಸಿ ಕರೆಯೋ ಮಂಜಿನ ಶೃಂಗಾರ ಸೌಂದರ್ಯದ ಮುಳ್ಳಯ್ಯನಗಿರಿ ಬೆಟ್ಟ!

ಅಂಧೇರಿ: ಕ್ರೇನ್‌ ಕುಸಿದು ಮಹಿಳೆಯ ಸಾವು, ಇಬ್ಬರಿಗೆ ಗಾಯ

ಅಂಧೇರಿ: ಕ್ರೇನ್‌ ಕುಸಿದು ಮಹಿಳೆ ಸಾವು, ಇಬ್ಬರಿಗೆ ಗಾಯ

tk-tdy-1

ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಿದ್ದೇ ನಾನು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿ ಪ್ರತ್ಯಕ್ಷ: ಮರಿಗಳ ಜೊತೆ ಗ್ರಾಮಸ್ಥರ ಸೆಲ್ಫಿ!

ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿ ಪತ್ತೆ: ಮರಿಗಳ ಜೊತೆ ಗ್ರಾಮಸ್ಥರ ಸೆಲ್ಫಿ!

Mandya-tdy-2

ಉದ್ಯಾನವನದಲ್ಲಿ ಅಕ್ರಮ ಬಿದಿರು ಸಾಗಣೆ

mandya-tdy-1

ಮೈಷುಗರ್‌ ಆಸ್ತಿ ಮಾರಾಟಕ್ಕೆ ಬಿಡಲ್ಲ

.01

ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಬರ್ಬರ ಹತ್ಯೆ

mandya-tdy-1

ವಲಸಿಗರ ಕೈಹಿಡಿದ ನರೇಗಾ

MUST WATCH

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

ಹೊಸ ಸೇರ್ಪಡೆ

cm-tdy-1

ಗ್ರಾಮಠಾಣಾ ಜಾಗ ಗುರುತಿಸಲು ಒತ್ತಾಯ

rcb

ಬೆಂಗಳೂರು-ಹೈದರಾಬಾದ್ ಬಿಗ್ ಫೈಟ್: ಟಾಸ್ ಗೆದ್ದ ವಾರ್ನರ್ ಪಡೆ ಬೌಲಿಂಗ್ ಆಯ್ಕೆ

ಕೊಲ್ಹಾಪುರ ಏರ್‌ಪೋರ್ಟ್‌ ವಿಸ್ತರಣೆಗೆ 10 ಕೋಟಿ ರೂ. ಅನುದಾನ

ಕೊಲ್ಹಾಪುರ ಏರ್‌ಪೋರ್ಟ್‌ ವಿಸ್ತರಣೆಗೆ 10 ಕೋಟಿ ರೂ. ಅನುದಾನ

ಚಾಮರಾಜನಗರ: 22 ಹೊಸ ಕೋವಿಡ್ ಪ್ರಕರಣ ದೃಢ: 28 ಮಂದಿ ಗುಣಮುಖ

ಚಾಮರಾಜನಗರ: 22 ಹೊಸ ಕೋವಿಡ್ ಪ್ರಕರಣ ದೃಢ: 28 ಮಂದಿ ಗುಣಮುಖ

Ballary-tdy-1

ಭತ್ತ ಖರೀದಿ ಕೇಂದ್ರ ತೆರೆಯಲು ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.