Udayavni Special

ಜೆಸಿಬಿ ಚಾಲಕನನ್ನು ಥಳಿಸಿದ ಮಾಜಿ ಶಾಸಕ


Team Udayavani, Jul 10, 2020, 5:41 AM IST

jcb drive

ಶ್ರೀರಂಗಪಟ್ಟಣ: ಮಹಿಳೆಯೊಬ್ಬರು ಅಂಗಡಿಯೊಳಗೆ ಕುಳಿತಿದ್ದಾಗಲೇ ಜೆಸಿಬಿ ಚಾಲಕ ಅಂಗಡಿ ತೆರವುಗೊಳಿಸಲು ಯತ್ನಿಸಿದ ಎಂಬ ಕಾರಣಕ್ಕೆ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಜೆಸಿಬಿ ಚಾಲಕನನ್ನು ಥಳಿಸಿದ ಘಟನೆ  ಗುರುವಾರ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮುಖ್ಯ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ರಸ್ತೆಗೆ ಬದಿಯ ಪ್ರಯಾಣಿಕರ ತಂಗುದಾಣ ಮತ್ತು ಗ್ರಾಪಂಗೆ ಸೇರಿದ ಅಂಗಡಿ ಮಳಿಗೆಗಳನ್ನು ತೆರವು ಮಾಡಿಸುವ ವೇಳೆ ಈ  ಘಟನೆ ನಡೆಯಿತು.

ವಿರೋಧವನ್ನೂ ಲೆಕ್ಕಿಸದ ಚಾಲಕ: ಗ್ರಾಪಂನಿಂದ ಮಳಿಗೆಯನ್ನು ಬಾಡಿಗೆಗೆ ಪಡೆದು ಟೈಲರಿಂಗ್‌ ಅಂಗಡಿ ನಡೆಸುತ್ತಿದ್ದ ಎ.ಎನ್‌. ಸುಮಾ ಅವರ ವಿರೋಧವನ್ನೂ ಲೆಕ್ಕಿಸದೆ ಜೆಸಿಬಿ ಚಾಲಕ ನಾಗಚಂದ್ರ ಅಂಗಡಿ ತೆರವಿಗೆ  ಮುಂದಾಗಿದ್ದಾರೆ. ಮಹಿಳೆ ಇದ್ದರೂ ಜೆಸಿಬಿ ಕಾರ್ಯ ನಡೆಸಿದ್ದರಿಂದ ತಾಳ್ಮೆ ಕಳೆದುಕೊಂಡ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಚಾಲಕ ನಾಗಚಂದ್ರ ಅವರಿಗೆ ಥಳಿಸಿದ್ದಾರೆ. ತಂಗುದಾಣ ತೆರವಿಗೆ ಮಾಜಿ ಶಾಸಕರು ವಿರೋಧ  ವ್ಯಕ್ತಪಡಿಸಿದರು.

ಮನವೊಲಿಸುವ ಯತ್ನ: ತಹಶೀಲ್ದಾರ್‌ ಎಂ.ವಿ. ರೂಪಾ, ಎಎಸ್‌ಪಿ ಶೋಭಾರಾಣಿ, ಲೋಕೋಪಯೋಗಿ ಇಲಾಖೆ ಎಇಇ ಮಹೇಶ್‌, ತಾಪಂ ಇಒ ನಾಗವೇಣಿ ಜನರ ಮನವೊಲಿಸುವ ಯತ್ನ ನಡೆಸಿದರು. ಪೊಲೀಸರ ರಕ್ಷಣೆಯಿಂದ ರಸ್ತೆ  ಬದಿಯ ಕೆಲವು ಅಂಗಡಿ ತೆರವು ಮಾಡಲಾಯಿತು. ಆದರೆ, ಗ್ರಾಪಂಗೆ ಸೇರಿದ ಮಳಿಗೆ ತೆರವಿಗೆ ವಿರೋಧಿಸಿದರು. ಶಾಸಕ ರವೀಂದ್ರ ಶ್ರೀಕಂಠಯ್ಯ ರಸ್ತೆ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜನರ ಹಿತ ಮರೆತು ಬಡವರನ್ನು  ಬೀದಿಗೆ ತಳ್ಳಿ ರಸ್ತೆ ಮಾಡಿದರೆ ಏನು ಪ್ರಯೋಜನ? ಇದು ಜನವಿರೋಧಿಯಾಗಿದೆ ಎಂದು ತಾಪಂ ಸದಸ್ಯ ಸಂತೋಷ್‌, ಗ್ರಾಪಂ ಅಧ್ಯಕ್ಷೆ ಜಯಂತಿ ಕೃಷ್ಣೇಗೌಡ ಪ್ರಶ್ನಿಸಿದರು.

ಠಾಣೆಯಲ್ಲಿ ದೂರು: ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ತಾಪಂ ಸದಸ್ಯ ಸಂತೋಷ್‌, ಕಾಂಗ್ರೆಸ್‌ ಮುಖಂಡ ಶಶಾಂಕ್‌ ವಿರುದ ಲೋಕೋಪಯೋಗಿ ಇಲಾಖೆ ಎಇಇ ಮಹೇಶ್‌ ಅರಕೆರೆ ಠಾಣೆಗೆ ದೂರು ನೀಡಿದ್ದಾರೆ. ಸರ್ಕಾರಿ  ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪಿಗಳ ವಿರುದಟಛಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಪ್ರತಿ ದೂರು: ಅಂಗಡಿ ಬಾಡಿಗೆ ಪಡೆದಿದ್ದ ಸುಮಾ ಅವರು ಲೋಕೋಪಯೋಗಿ ಇಲಾಖೆ ಎಇಇ ಮಹೇಶ್‌, ಎಇ ರೇವಣ್ಣ ಮತ್ತು ಜೆಸಿಬಿ ಚಾಲಕನ ವಿರುದಟಛಿ ಪ್ರತಿ ದೂರು ನೀಡಿದ್ದಾರೆ.

ಮಾಜಿ ಶಾಸಕ ಬಂಧನ, ಬಿಡುಗಡೆ: ಶ್ರೀರಂಗಪಟ್ಟಣದ ಅರಕೆರೆ ಗ್ರಾಮದಲ್ಲಿ ಜೆಸಿಬಿ ಚಾಲಕನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಮೇಶ್‌ ಬಂಡಿಸಿದ್ದೇಗೌರರ ವಿರುದಟಛಿ ಪಿಡಬ್ಲೂಡಿ ಎಇಇ ಮಹೇಶ್‌ ದೂರು  ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು, ರಮೇಶ್‌ ಬಂಡಿ ಸಿದ್ದೇಗೌಡರನ್ನು ಬಂಧಿಸಿದ ಪೊಲೀಸರು, ಪಟ್ಟಣದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

000

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

ಹಾವೇರಿ ಜಿಲ್ಲೆಯಲ್ಲಿ 28 ಜನರಿಗೆ ಕೋವಿಡ್ ಸೋಂಕು; 25 ಜನರು ಗುಣಮುಖ

ಹಾವೇರಿ ಜಿಲ್ಲೆಯಲ್ಲಿ 28 ಜನರಿಗೆ ಕೋವಿಡ್ ಸೋಂಕು; 25 ಜನರು ಗುಣಮುಖ

ಉಚಿತ ಲಸಿಕೆ ಘೋಷಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ : ಚುನಾವಣಾ ಆಯೋಗ ಸ್ಪಷ್ಟನೆ

ಉಚಿತ ಲಸಿಕೆ ಘೋಷಣೆ ನೀತಿ ಸಂಹಿತೆ ಉಲ್ಲಂಘನೆಯಲ್ಲ : ಚುನಾವಣಾ ಆಯೋಗ ಸ್ಪಷ್ಟನೆ

jamess-bond

ಜೇಮ್ಸ್‌ ಬಾಂಡ್‌ ಖ್ಯಾತಿಯ ನಟ ಸೀನ್ ಕಾನೆರಿ ನಿಧನ

IPHONE

Flipkart, Amazon Diwali Sale: ಯಾವೆಲ್ಲ ಫೋನ್ ಗಳಿಗಿವೆ ಡಿಸ್ಕೌಂಟ್? ಇಲ್ಲಿದೆ ಮಾಹಿತಿ

ಚಿಕ್ಕಮಗಳೂರು : ಶಾಮಿಯಾನ ಸಾಗಾಟದ ವಾಹನ ಪಲ್ಟಿ! ಚಾಲಕ ಪ್ರಾಣಾಪಾಯದಿಂದ ಪಾರು

ಚಿಕ್ಕಮಗಳೂರು : ಶಾಮಿಯಾನ ಸಾಗಾಟದ ವಾಹನ ಪಲ್ಟಿ! ಚಾಲಕ ಪ್ರಾಣಾಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿ ಪ್ರತ್ಯಕ್ಷ: ಮರಿಗಳ ಜೊತೆ ಗ್ರಾಮಸ್ಥರ ಸೆಲ್ಫಿ!

ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿ ಪತ್ತೆ: ಮರಿಗಳ ಜೊತೆ ಗ್ರಾಮಸ್ಥರ ಸೆಲ್ಫಿ!

Mandya-tdy-2

ಉದ್ಯಾನವನದಲ್ಲಿ ಅಕ್ರಮ ಬಿದಿರು ಸಾಗಣೆ

mandya-tdy-1

ಮೈಷುಗರ್‌ ಆಸ್ತಿ ಮಾರಾಟಕ್ಕೆ ಬಿಡಲ್ಲ

.01

ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಬರ್ಬರ ಹತ್ಯೆ

mandya-tdy-1

ವಲಸಿಗರ ಕೈಹಿಡಿದ ನರೇಗಾ

MUST WATCH

udayavani youtube

ಈ ಮತ್ಸ್ಯಪ್ರೇಮಿಗೆ ಮನೆಯ ಬಾವಿಯೇ ಅಕ್ವೇರಿಯಂ

udayavani youtube

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಎರಡು ತಿಂಗಳ ಆನೆ ಮರಿ

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

ಹೊಸ ಸೇರ್ಪಡೆ

ಬಸ್ರೂರು: ಕುಸಿದ ಮೋರಿಯಿಂದ ಸಂಚಾರ ದುಸ್ತರ

ಬಸ್ರೂರು: ಕುಸಿದ ಮೋರಿಯಿಂದ ಸಂಚಾರ ದುಸ್ತರ

ಮುಂಡ್ಕೂರಿನಲ್ಲಿ ಇನ್ನೂ ಆಗದ ಹೊಸ ಮೀನು ಮಾರುಕಟ್ಟೆ

ಮುಂಡ್ಕೂರಿನಲ್ಲಿ ಇನ್ನೂ ಆಗದ ಹೊಸ ಮೀನು ಮಾರುಕಟ್ಟೆ

000

77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ : ಬೆಂಗಳೂರು ತರಕಾರಿ ವ್ಯಾಪಾರಿಗೆ 42,000 ಸಾವಿರ ದಂಡ.!

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

“ಕಾಂಪಿಟ್‌ ವಿತ್‌ ಚೀನ” ನನ್ನ ಯೋಜನೆ ಹೈಜಾಕ್‌ ಮಾಡಿದ ಪ್ರಧಾನಿ : ಹೆಚ್ ಡಿಕೆ ಆರೋಪ

Mumbai-tdy-1

ಸಮಾಜ ಸೇವೆಯಲ್ಲಿ ಜಯ ಸುವರ್ಣರಿಂದ ಇತಿಹಾಸ ನಿರ್ಮಾಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.