Udayavni Special

ಉತ್ತಮ ಮಳೆಯಿಂದ ಭತ್ತದ ಬೆಳೆ ಸಮೃದ್ಧ

ಸರಿ ಸಮಯಕ್ಕೆ ನಾಲೆಗಳಿಗೆ ನೀರು , ಭತ್ತದಲ್ಲಿ ಯಾವುದೇ ರೋಗವಿಲ್ಲ

Team Udayavani, Nov 4, 2020, 3:55 PM IST

ಉತ್ತಮ ಮಳೆಯಿಂದ ಭತ್ತದ ಬೆಳೆ ಸಮೃದ್ಧ

ಶ್ರೀರಂಗಪಟ್ಟಣ: ವಾಡಿಕೆಯಂತೆ ಸೆಪ್ಟೆಂಬರ್‌, ಅಕ್ಟೋ ಬರ್‌ ತಿಂಗಳು ಶ್ರೀರಂಗಪಟ್ಟಣದಲ್ಲಿ ಉತ್ತಮ ಮಳೆಯಾ ಗಿದ್ದು, ರೈತರಿಗೆ ಒಂದು ರೀತಿಯಲ್ಲಿ ಹರ್ಷ ತಂದಿದೆ.

ಉತ್ತಮ ಮಳೆಯಿಂದ ಕೆಆರ್‌ಎಸ್‌ ಜಲಾಶಯ ಸಂಪೂರ್ಣ ಭರ್ತಿಯಾಗಿ ಸರಿಯಾದ ಸಮಯಕ್ಕೆ ನಾಲೆಗಳಿಗೆ ನೀರು ನೀಡಿ, ಮುಂಗಾರು ಭತ್ತ ಬಿತ್ತನೆ ಕಾರ್ಯ ನಡೆಸಿ, ನಾಟಿ ಮಾಡಿ ಪೈರು ಬೆಳೆಯುವರೆಗೂ ರೈತರು ಉತ್ತಮ ಬೇಸಾಯ ಮಾಡಿದ್ದರು.

ಯಾವುದೇ ರೋಗವಿಲ್ಲ: ಭತ್ತದಲ್ಲಿನ ಕಳೆಕಿತ್ತು ಉತ್ತಮ ಪೋಷಕಾಂಶದ ಗೊಬ್ಬರ ಹಾಕಿ, ಬೆಳೆಗೆ ಸಮೃದ್ಧ ನೀರು ನೀಡಿದ್ದರಿಂದ ಭತ್ತ ನಾಟಿ ಮಾಡಿರುವ ಜಮೀನುಗಳಲ್ಲಿ ಯಾವುದೇ ರೋಗವಿಲ್ಲದೆ ಉತ್ತಮ ಬೆಳೆಯಾಗುವ ಸಂಭವ ಹೆಚ್ಚಾಗಿದೆ. ಕೆಲವು ಭಾಗದ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ನೀರಾವರಿ ಪ್ರದೇಶದ ಜಮೀನುಗಳಿಗೆ ಒಂದೆಡೆ ಭತ್ತ ನಾಟಿ ಮಾಡಿ, ಮಳೆಯಾಶ್ರಿತ ಪ್ರದೇಶದ ಕೆಲವು ಭಾಗದಲ್ಲಿ ಹೂವು ಬೆಳೆ, ಕಾಳುಗಳ ಬಿತ್ತನೆಯಾಗಿ ಫ‌ಸಲು ಬರುವ ಸಾಧ್ಯತೆಗಳಿವೆ. ಇನ್ನು ಕೆಲವು ಭಾಗಗಳಲ್ಲಿ ಉರುಳಿ ಚೆಲ್ಲುವ ಕಾರ್ಯ ನಡೆಯುತ್ತಿದೆ.

ರೋಗ ಕಡಿಮೆ: ಆಗಷ್ಟ್ ಹಾಗೂ ಸೆಪ್ಟಂಬರ್‌ ತಿಂಗಳಲ್ಲಿ ನಿರಂತರ ಮಳೆಯಿಂದ ಭತ್ತದ ಕಾಂಡ ಕೊರೆಯವ ಹುಳು, ಬೆಂಕಿ ರೋಗ, ಗರಿಸುತ್ತುವ ರೋಗ ಇವೆಲ್ಲವೂ ಕಡಿಮೆಯಾಗಿ ಭತ್ತದ ಬೆಳೆ ಬಿದ್ದ ಮಳೆಗೆ ನಳನಳಿಸಿ, ಈಗ ಉತ್ತಮ ಫ‌ಸಲು ಬರುವ ಸಾಧ್ಯತೆ ಹೆಚ್ಚಾಗಿದೆ. ಮಳೆ ಬಿದ್ದ ಪರಿಣಾಮ ಈ ಬಾರಿ ರೋಗ ಬೆಳೆಗೆ ತಗುಲಿಲ್ಲ. ಬೆಳೆಯು ಅಷ್ಟೇ ಪ್ರಮಾಣದಲ್ಲಿ ಚೆನ್ನಾಗಿ ಬೆಳೆದಿದೆ. ಇನ್ನೇನು ಭತ್ತದ ಗೊನೆ ಹೊರ ಚಾಚಿ ಹಾಲು ತುಂಬಿ ಕಾಯಿಯಾಗಿದೆ.

ಯಾವುದೇ ಅಡೆತಡೆಗಳಿಲ್ಲ: ಪ್ರತಿ ವರ್ಷ ಸೆಪ್ಟೆಂಬರ್‌ ವೇಳೆಗೆ ಮಳೆ ಇಲ್ಲದೆ, ನೀರಾವರಿ ಪ್ರದೇಶದಲ್ಲಿನ ಭತ್ತದ ಪೈರುಗಳಿಗೆ ಸೈನಿಕ ಹುಳುಗಳು ಬಾಧೆ ಜಮೀನುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು. ಆದರೆ, ಈ ವರ್ಷ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಮಳೆ ಬಿದ್ದಿದ್ದರಿಂದ ಕಾಂಡ ಕೊರೆವ ಹುಳುಗಳ ಬಾಧೆಯಿಂದ ಮುಕ್ತವಾಗಿದೆ. ಬೆಳೆಗಳು ಯಾವುದೇ ಅಡೆತಡೆ ಇಲ್ಲದೆ ಬೆಳೆಯ ಇಳುವರಿ ಹೆಚ್ಚಾಗಿದ್ದು, ಖುಷಿಯಲ್ಲಿದ್ದಾರೆ ರೈತರು.

ಖರೀದಿ ಕೇಂದ್ರಕ್ಕೆ ಆಗ್ರಹ : ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಭತ್ತ ಹೆಚ್ಚಾಗುವ ಸೂಚನೆಗಳು ಕಾಣುತ್ತಿದೆ. ಭತ್ತಕ್ಕೆ ಸರ್ಕಾರ ಮುಂದಾಗಿ ಬೆಂಬಲ ಬೆಲೆ ಘೋಷಣೆ ಮಾಡಿ, ಭತ್ತ ಬೆಳೆದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಭತ್ತದ ಫ‌ಸಲು ಬಂದ ನಂತರ ರೈತರಿಂದ ಭತ್ತದ ಖರೀದಿ ಕೇಂದ್ರ ತೆರೆಯುವಂತೆ ಒತ್ತಾಯಿಸುವ ಬದಲು, ಸರ್ಕಾರ ಈಗಿನಿಂದಲೇ ಭತ್ತದ ಖರೀದಿ ಕೇಂದ್ರ ತೆರೆಯಬೇಕು ಎಂದು ಬೆಳಗೊಳದ ರೈತ ಸುನೀಲ್‌ ಆಗ್ರಹಿಸಿದ್ದಾರೆ.

ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸಿ :  ನೀರಾವರಿ ಪ್ರದೇಶಕ್ಕೆ ಸರಿಯಾದ ಸಮಯಕ್ಕೆ ನಾಲೆಗಳ ಮೂಲಕ ನೀರು ಹರಿಸಲಾಗಿದೆ. ಇದರಿಂದ ಮುಂಗಾರು ಬಿತ್ತನೆ ಕಾರ್ಯ ನಡೆದು ಭತ್ತದ ಪೈರು ಬೆಳವಣಿಗೆ ಸಮಯಕ್ಕೆ ಕಳೆ ಕಿತ್ತು ಗೊಬ್ಬರ ಹಾಕಿದ ನಂತರ ಸರಿ ಸಮಯಕ್ಕೆ ಮಳೆ ಆಶ್ರಯ ಚೆನ್ನಾಗಿ ಬಿದ್ದಿದೆ. ಇದರಿಂದ ಯಾವುದೇ ರೋಗಗಳು ಭತ್ತದ ಬೆಳೆಯಲ್ಲಿ ಕಾಣಿಸಿಕೊಂಡಿಲ್ಲ. ಇದರಿಂದ ಉತ್ತಮ ಬೆಳೆ ಬರುವ ಸಾಧ್ಯತೆ ಇದೆ. ಆದರೆ, ಭತ್ತದ ಪೈರು ಹೂಚೆಲ್ಲಿ, ಹಾಲುದುಂಬಿ ಕಟಾವಿನ ಅಂಚಿನವರಿಗೂ ಕುತ್ತಿಗೆ ರೋಗ ತಡೆಯಲು ರೈತರು ಔಷಧವನ್ನು ಸಿಂಪಡಿಸ ಬೇಕು ಎಂದು ಕೃಷಿ ಸಹಾಯಕ ನಿರ್ದೇಶಕ ಅಧಿಕಾರಿ ನಿಶಾಂತ್‌ ಕೀಲಾರ ತಿಳಿಸಿದ್ದಾರೆ.

 

-ಗಂಜಾಂ ಮಂಜು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಎಚ್ಚರ!…ಸಾರ್ವಜನಿಕ ಸೆಂಟರ್‌ನಲ್ಲಿ ಮೊಬೈಲ್‌ ಚಾರ್ಜ್ ಮಾಡುವ ಮುನ್ನ ಇರಲಿ ಎಚ್ಚರ

ಎಚ್ಚರ!…ಸಾರ್ವಜನಿಕ ಸೆಂಟರ್‌ನಲ್ಲಿ ಮೊಬೈಲ್‌ ಚಾರ್ಜ್ ಮಾಡುವುದು ಎಷ್ಟು ಸುರಕ್ಷಿತ?

ಕೋವಿಡ್ ಸೋಂಕಿನಿಂದ ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿಧನ

ಕೋವಿಡ್ ಸೋಂಕಿನಿಂದ ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿಧನ

n-9

ಟ್ರೋಲ್‌ಗ‌ಳು ಸಾಮಾನ್ಯವೇ ತಾನೆ?…ಐ ಲವ್‌ ಮೇಕಪ್‌

ಅಂತಿಮ ಏಕದಿನ, ಟಿ 20 ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್

ಅಂತಿಮ ಏಕದಿನ, ಟಿ 20 ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್

ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ  ಜನತೆಯ ಆಕ್ರೋಶ

ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಜನತೆಯ ಆಕ್ರೋಶ

ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ ಮಾಡಿ: ಎಂಟಿಬಿ, ವಿಶ್ವನಾಥ್, ಶಂಕರ್ ಬೇಡಿಕೆ

ಅಧಿವೇಶನಕ್ಕೆ ಮುನ್ನ ಸಂಪುಟ ವಿಸ್ತರಣೆ ಮಾಡಿ: ಎಂಟಿಬಿ, ವಿಶ್ವನಾಥ್, ಶಂಕರ್ ಬೇಡಿಕೆ

ಪಂಚಭೂತಗಳೊಂದಿಗೆ ಒಡನಾಡುವ ವಾನಪ್ರಸ್ಥ

ಪಂಚಭೂತಗಳೊಂದಿಗೆ ಒಡನಾಡುವ ವಾನಪ್ರಸ್ಥ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mandya

ಮoಡ್ಯ: ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ನಿಗಮ,ನಾಮ ನಿರ್ದೇಶನಕ್ಕೆ ಆಕಾಂಕ್ಷಿಗಳ ದಂಡು

ನಿಗಮ,ನಾಮ ನಿರ್ದೇಶನಕ್ಕೆ ಆಕಾಂಕ್ಷಿಗಳ ದಂಡು

ರೈತರ ಬಿಡುಗಡೆಗೆ ಆಗ್ರಹಿಸಿ‌ ಪ್ರತಿಭಟನೆ

ರೈತರ ಬಿಡುಗಡೆಗೆ ಆಗ್ರಹಿಸಿ‌ ಪ್ರತಿಭಟನೆ

mandya-tdy-1

ಅನ್ಯ ಭಾಷೆಯಿಂದ ಕನ್ನಡಕ್ಕೆ ಕುತ್ತು

ಸಕಾಲ ಪರಿಣಾಮಕಾರಿ ಜಾರಿಗೆ ಕ್ರಮ

ಸಕಾಲ ಪರಿಣಾಮಕಾರಿ ಜಾರಿಗೆ ಕ್ರಮ

MUST WATCH

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

ಹೊಸ ಸೇರ್ಪಡೆ

ಎಚ್ಚರ!…ಸಾರ್ವಜನಿಕ ಸೆಂಟರ್‌ನಲ್ಲಿ ಮೊಬೈಲ್‌ ಚಾರ್ಜ್ ಮಾಡುವ ಮುನ್ನ ಇರಲಿ ಎಚ್ಚರ

ಎಚ್ಚರ!…ಸಾರ್ವಜನಿಕ ಸೆಂಟರ್‌ನಲ್ಲಿ ಮೊಬೈಲ್‌ ಚಾರ್ಜ್ ಮಾಡುವುದು ಎಷ್ಟು ಸುರಕ್ಷಿತ?

12 ಕಾರಿಡಾರ್ ‌ಕೆಆರ್‌ಡಿಸಿಎಲ್‌ಗೆ

12 ಕಾರಿಡಾರ್ ‌ಕೆಆರ್‌ಡಿಸಿಎಲ್‌ಗೆ

ನಿರೀಕ್ಷಿತ ಪ್ರಗತಿ ಕಾಣದ ಸ್ಮಾರ್ಟ್‌ಸಿಟಿ

ನಿರೀಕ್ಷಿತ ಪ್ರಗತಿ ಕಾಣದ ಸ್ಮಾರ್ಟ್‌ಸಿಟಿ

ಕೋವಿಡ್ ಸೋಂಕಿನಿಂದ ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿಧನ

ಕೋವಿಡ್ ಸೋಂಕಿನಿಂದ ರಾಜಸ್ಥಾನದ ಬಿಜೆಪಿ ಶಾಸಕಿ ಕಿರಣ್ ಮಹೇಶ್ವರಿ ನಿಧನ

ಪೂಜೆಯಲ್ಲಿ ತುಳಸಿಯ ಮಹತ್ವ ಅನನ್ಯ: ಧರ್ಮದರ್ಶಿ ಅಶೋಕ ದಾಸು ಶೆಟ್ಟಿ

ಪೂಜೆಯಲ್ಲಿ ತುಳಸಿಯ ಮಹತ್ವ ಅನನ್ಯ: ಧರ್ಮದರ್ಶಿ ಅಶೋಕ ದಾಸು ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.