ಸರ್ಕಾರ ಉರುಳಿಸೋರಿಗೆ ಉರುಳು: ಸಿ.ಎಸ್.ಪುಟ್ಟರಾಜು
Team Udayavani, Sep 13, 2018, 6:20 AM IST
ಮಂಡ್ಯ: “ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಉರುಳಿಸುತ್ತೇವೆ ಎನ್ನುವವರಿಗೇ ನಾವು ಉರುಳು ಹಾಕುತ್ತೇವೆ’ ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಖಡಕ್ಕಾಗಿ ಹೇಳಿದರು.
ಮದ್ದೂರು ತಾಲೂಕು ಕೊಪ್ಪ ಹೋಬಳಿಯ ಮಾರನಕೆಬ್ಬಹಳ್ಳಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಜನರಿಗೆ ಉತ್ತಮ ಆಡಳಿತ ನೀಡಲು ನಿರ್ಧರಿಸಿದ್ದೇವೆ. ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನೂ ನಡೆಸುತ್ತಿದ್ದೇವೆ. ಆದರೆ, ಸರ್ಕಾರದ ಅಸ್ತಿತ್ವದ ಬಗ್ಗೆ ಬಿಜೆಪಿ ಗೊಂದಲಗಳನ್ನು ಸೃಷ್ಟಿಸುತ್ತಾ ತಪ್ಪು ಮಾಹಿತಿಯನ್ನು ಜನರಿಗೆ ತಲುಪಿಸುತ್ತಿದೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರೋಲ್ಲ ಎಂದರು. ಬಿಜೆಪಿ ಶಾಸಕರಿಂದ ರಾಜೀನಾಮೆ ಕೊಡಿಸುವ ಪ್ರಕ್ರಿಯೆಗೆ ನಾವು ಕೈ ಹಾಕಬಾರದು ಎಂದುಕೊಂಡಿದ್ದೆವು. ಜನರಿಗೆ ತಪ್ಪು ಸಂದೇಶ ರವಾನಿಸುತ್ತಿರುವ ಬಿಜೆಪಿಯವರಿಗೆ ನಿಜ ಮಾಹಿತಿಯನ್ನು ಕೊಡಲು ನಾವೂ ನಿಂತಿದ್ದೇವೆ. ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಂದು ದೇಶ ಒಂದು ಚುನಾವಣೆ ಚರ್ಚೆಗೆ ಕಾಂಗ್ರೆಸ್ ವಿರೋಧ: ಪರಿಷತ್ ಬಾವಿಗಿಳಿದು ಪ್ರತಿಭಟನೆ
ರಮೇಶ್ ಯಾರ ಮಾತು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ : ಸತೀಶ ಜಾರಕಿಹೊಳಿ
ಒಂದು ವಾರ ಸದನದಿಂದ ಸಂಗಮೇಶ್ ಅಮಾನತು: ನಾನು ಯಾವುದಕ್ಕೂ ಹೆದರುವುದಿಲ್ಲಎಂದ ಶಾಸಕ
ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಾಗ ಕಣ್ಣೀರು ಹಾಕಿದ್ದೆ : ರೇಣುಕಾಚಾರ್ಯ
ಜಾರಕಿಹೊಳಿ ಸಿಡಿ ಪ್ರಕರಣ : ಪ್ರಭಾವಿಗಳ ಕೈವಾಡವಿದೆ ಎಂದ ಶಾಸಕ ರಾಜುಗೌಡ!