ಜಿಲ್ಲೆಯಲ್ಲಿ ಬಿರುಸುಗೊಂಡ ಚುನಾವಣೆ ಕಾವು


Team Udayavani, Dec 12, 2020, 4:16 PM IST

ಜಿಲ್ಲೆಯಲ್ಲಿ ಬಿರುಸುಗೊಂಡ ಚುನಾವಣೆ ಕಾವು

ಸಾಂದರ್ಭಿಕ ಚಿತ್ರ

ಮಂಡ್ಯ: ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಜೋರಾಗಿದ್ದು, ಮೊದಲ ಹಂತದ ನಾಮಪತ್ರ ಸಲ್ಲಿಕೆ ಶುಕ್ರವಾರ ಮುಕ್ತಾಯಗೊಂಡಿದ್ದು, ಅದರಂತೆ 2ನೇ ಹಂತದ ಉಮೇದುವಾರಿಕೆ ಸಲ್ಲಿಕೆ ಪ್ರಾರಂಭಗೊಂಡಿದೆ.

ಮಂಡ್ಯ, ಮದ್ದೂರು ಹಾಗೂ ಮಳವಳ್ಳಿ ತಾಲೂಕುಗಳ 126 ಗ್ರಾಪಂಗಳ2011 ಸದಸ್ಯ ಸ್ಥಾನಗಳಿಗೆ ಮೊದಲ ಹಂತದ ಚುನಾ ವಣೆ ನಡೆಯುತ್ತಿದ್ದು, ಉಮೇದುವಾರಿಕೆ ಸಲ್ಲಿಕೆ ಮುಕ್ತಾಯಗೊಂಡಿದೆ.ಇದುವರೆಗೂಒಟ್ಟಾರೆ2067ಮಂದಿಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

2ನೇ ಹಂತಕ್ಕೆ ಅಧಿಸೂಚನೆ ಪ್ರಕಟ: ಎರಡನೇ ಹಂತದಲ್ಲಿ ಶ್ರೀರಂಗಪಟ್ಟಣ, ಪಾಂಡವಪುರ, ನಾಗಮಂಗಲ ಹಾಗೂ ಕೆ.ಆರ್‌.ಪೇಟೆ ತಾಲೂಕುಗಳ 104 ಗ್ರಾಪಂಗಳ 1786 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಅವರು ಚುನಾವಣಾಅಧಿಸೂಚನೆ ಹೊರಡಿಸಿದ್ದು, ಶುಕ್ರವಾರದಿಂದ ಉಮೇದುವಾರಿಕೆ ಸಲ್ಲಿಕೆ ಆರಂಭಗೊಂಡಿದೆ. ಶುಕ್ರವಾರ 100 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಅವಿರೋಧ ಆಯ್ಕೆಗೆ ಕಸರತ್ತು: ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮುಗಿದಿರುವುದರಿಂದ ಅವಿರೋಧ ಆಯ್ಕೆ ಹಾಗೂ ನಾಮಪತ್ರ ವಾಪಸ್‌ ಪಡೆಯುವ ಕುರಿತು ಚರ್ಚೆ, ಕಸರತ್ತುಗಳು ಆರಂಭಗೊಂಡಿವೆ. ಡಿ.14ರಂದು ನಾಮಪತ್ರ ವಾಪಸ್‌ ಪಡೆಯಲುಕೊನೆ ದಿನವಾಗಿದೆ. ಆದ್ದರಿಂದ ಪ್ರತಿ ಸ್ಪರ್ಧಿಯಿಂದನಾಮಪತ್ರ ವಾಪಸ್‌ ಪಡೆಯುವಂತೆ ಆಮಿಷ ಗಳು ಜೋರಾಗಿಯೇ ನಡೆಯುತ್ತಿದೆ. ಅಲ್ಲದೆ, ಅವಿರೋಧ ಆಯ್ಕೆಗೆ ಇನ್ನಿಲ್ಲದ ಸರ್ಕಸ್‌ಗಳು ನಡೆಸಲಾಗುತ್ತಿದೆ. ಬಹುತೇಕ ಮಂದಿಗೆ ಚುನಾವಣೆ ನಡೆಯುವುದು ಇಷ್ಟವಿಲ್ಲ. ಹಣ ನೀಡಿ ಅವಿರೋಧ ಆಯ್ಕೆ, ನಾಮಪತ್ರ ವಾಪಸ್‌ ತೆಗೆಸಲು ಮುಂದಾಗಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಕೋವಿಡ್ ಅಡ್ಡಿ: ಮೊದಲ ಹಂತದ ಮಂಡ್ಯ, ಮದ್ದೂರು, ಮಳವಳ್ಳಿ ತಾಲೂಕುಗಳ ಗ್ರಾಪಂಗಳಿಗೆನಾಮಪತ್ರ ಸಲ್ಲಿಕೆ ಮುಕ್ತಾಯಗೊಂಡಿದ್ದರಿಂದ ಬಹಿರಂಗಪ್ರಚಾರ ಇಂದಿನಿಂದ ಪ್ರಾರಂಭವಾಗಲಿದೆ. ಆದರೆ,ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಪ್ರಚಾರದಲ್ಲಿ ಕೇವಲ 5 ಮಂದಿಗೆ ಮಾತ್ರ ಅವಕಾಶನೀಡಿದೆ. ಪ್ರಚಾರದಲ್ಲಿ ಹೆಚ್ಚು ಜನರನ್ನುಸೇರಿಸುವಂತಿಲ್ಲ ಎಂದು ಹೇಳಿದೆ.

ಹೋಟೆಲ್‌, ಮದ್ಯದಂಗಡಿಗಳಲ್ಲಿ ಖಾತೆ ಓಪನ್‌: ಪ್ರಚಾರ ಕ್ಕಾಗಿ ಈಗಾಗಲೇ ಅಭ್ಯರ್ಥಿಗಳು ತಯಾರಿ ನಡೆಸಿದ್ದು, ತಮ್ಮ ಗ್ರಾಮಗಳಲ್ಲಿರುವ ಹೋಟೆಲ್‌ ಹಾಗೂ ಮದ್ಯದಂಗಡಿ ಗಳಲ್ಲಿ ಸಾಲದ ಖಾತೆ ಅಥವಾ ಮುಂಗಡ ಹಣ ನೀಡಿ ಊಟ, ತಿಂಡಿ ಹಾಗೂ ಮದ್ಯ ನೀಡುವಂತೆ ಅಭ್ಯರ್ಥಿಗಳು ಬುಕ್ಕಿಂಗ್‌ ಮಾಡಿ ದ್ದಾರೆ. ಕಾರ್ಯಕರ್ತರು, ಪ್ರಚಾರಕ್ಕೆ ಬರುವವರು ಹಾಗೂ ಮತದಾರರಿಗೆ ಕೇಳಿದ ಸಂದರ್ಭದಲ್ಲಿ ಊಟ, ತಿಂಡಿ ಹಾಗೂ ಮದ್ಯ ನೀಡುವಂತೆ ಮಾತುಕತೆಗಳು ನಡೆಯುತ್ತಿವೆ.

ಕಾಂಚಾಣ: ಸ್ಪರ್ಧೆಗೆ ಮಾಜಿ ಸದಸ್ಯರಹಿಂದೇಟು : ಪ್ರಸ್ತುತ ನಡೆಯುತ್ತಿರುವ ಗ್ರಾಪಂ ಚುನಾವಣೆ ಸದಸ್ಯ ಸ್ಥಾನಗಳಿಗೆ ಬೇಡಿಕೆ ಹೆಚ್ಚಿದ್ದು, ಲಕ್ಷ ಲಕ್ಷ ಹಣದ ವಹಿವಾಟುಗಳು ನಡೆಯುತ್ತಿರುವುದರಿಂದ ಕಳೆದ ಬಾರಿ ಗೆದ್ದಿದ್ದ ಬಹುತೇಕ ಮಾಜಿ ಸದಸ್ಯರು ಈ ಬಾರಿಯ ಚುನಾವಣೆ ಸ್ಪರ್ಧೆಯಿಂದ ಹಿಂದುಳಿದಿದ್ದಾರೆ. ಇನ್ನೂ ಕೆಲವರು ನಾವು ಹಣ ಖರ್ಚು ಮಾಡದಿದ್ದರೂ ಮತ ನೀಡಲಿದ್ದಾರೆ ಎಂಬ ಭರವಸೆ ಮೇಲೆ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಈ ಬಾರಿಯ ಚುನಾವಣೆಗೆ ಗೆಲ್ಲಬೇಕಾದರೆ ಲಕ್ಷಾಂತರ ರೂ. ಹಣ ಖರ್ಚು ಮಾಡಬೇಕು. ಹಣ ಇರುವವರು ಚುನಾವಣೆ ಮಾಡುತ್ತಾರೆ. ನಮಲ್ಲಿ ಅಷ್ಟೊಂದು ಹಣವಿಲ್ಲ. ಚುನಾವಣೆ ಬೇಡವೇ ಬೇಡ ಎಂದು ಗ್ರಾಪಂ ಮಾಜಿ ಸದಸ್ಯರೊಬ್ಬರು ಹೇಳಿದರು.

 

ಎಚ್‌.ಶಿವರಾಜು

ಟಾಪ್ ನ್ಯೂಸ್

HDK

ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಕೊಕ್; ಹೆಚ್ ಡಿಕೆ ಖಂಡನೆ

ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

araga

ಪಿಎಫ್ ಐ ನಿಷೇಧ; ರಾಜ್ಯಗಳಿಗೆ ಅಧಿಕಾರ ನೀಡಿದ ಕೇಂದ್ರ: ಆರಗ ಜ್ಞಾನೇಂದ್ರ

yatnal

ಮತ್ತೆಂದೂ ತಲೆ ಎತ್ತದಂತೆ ಪಿಎಫ್ಐ ನಿಷೇಧಿಸಬೇಕು: ಯತ್ನಾಳ್

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಸಿಇಟಿ ಪರಿಷ್ಕೃತ ರ್‍ಯಾಂಕ್‌ ಪಟ್ಟಿ ಅ.1ರಂದು ಪ್ರಕಟ

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ 

ಉಡುಪಿ: ಅ.1ರಿಂದ ಇಂದ್ರಾಳಿ ಸೇತುವೆ ರಸ್ತೆ ಕಾಮಗಾರಿ; ಘನ ವಾಹನಗಳಿಗೆ ಬದಲಿ ಮಾರ್ಗ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-13

ಪೇಸಿಎಂ ಪೋಸ್ಟರ್‌ ಅಂಟಿಸಿ ಕೈ ಪ್ರತಿಭಟನೆ

ಅಪಘಾತದ ಹೆದ್ದಾರಿಯಾದ ಹಲಗೂರು ರಸ್ತೆ

ಅಪಘಾತದ ಹೆದ್ದಾರಿಯಾದ ಹಲಗೂರು ರಸ್ತೆ

ಪಾದಯಾತ್ರೆಗೆ ಆಗಮಿಸಿ “ಕೈ’ ಬಲಪಡಿಸಿ

ಪಾದಯಾತ್ರೆಗೆ ಆಗಮಿಸಿ “ಕೈ’ ಬಲಪಡಿಸಿ

ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಸಚಿವರು ನಿರ್ಲಕ್ಷ್ಯ

ರಸ್ತೆಗಳಲ್ಲಿನ ಗುಂಡಿ ಮುಚ್ಚಲು ಸಚಿವರು ನಿರ್ಲಕ್ಷ್ಯ

20-death

ಮಗಳ ಪ್ರೇಮ ವಿವಾಹ: ಮನನೊಂದು ತಂದೆ ಆತ್ಮಹತ್ಯೆ

MUST WATCH

udayavani youtube

ಮಂಗಳೂರು ಶ್ರೀ ಶಾರದಾ ಮಹೋತ್ಸವ – 100 ವರ್ಷಗಳ ಪಯಣ ಹೇಗಿತ್ತು ?

udayavani youtube

ದಸರಾ ಆನೆಗಳ ತೂಕವನ್ನು ಹೆಚ್ಚಿಸಲು ಏನೆಲ್ಲಾ ತಿನ್ನಿಸುತ್ತಾರೆ ನೋಡಿ !

udayavani youtube

ಬಿಜೆಪಿ ಸರಕಾರ ಇರೋವರೆಗೆ ದೇಶ ದ್ರೋಹಿಗಳಿಗೆ ವಿಜೃಂಭಿಸಲು ಅವಕಾಶವಿಲ್ಲ

udayavani youtube

ಉಚ್ಚಿಲ ದಸರಾ ವೈಭವಕ್ಕೆ ಅದ್ದೂರಿಯ ಚಾಲನೆ

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

ಹೊಸ ಸೇರ್ಪಡೆ

HDK

ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಕೊಕ್; ಹೆಚ್ ಡಿಕೆ ಖಂಡನೆ

ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್‌ ಮಧ್ಯಾಂತರ ತಡೆ

araga

ಪಿಎಫ್ ಐ ನಿಷೇಧ; ರಾಜ್ಯಗಳಿಗೆ ಅಧಿಕಾರ ನೀಡಿದ ಕೇಂದ್ರ: ಆರಗ ಜ್ಞಾನೇಂದ್ರ

yatnal

ಮತ್ತೆಂದೂ ತಲೆ ಎತ್ತದಂತೆ ಪಿಎಫ್ಐ ನಿಷೇಧಿಸಬೇಕು: ಯತ್ನಾಳ್

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

ಅಯೋಧ್ಯೆಯಲ್ಲಿ ಲತಾ ಮಂಗೇಶ್ಕರ್‌ ವೃತ್ತ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.