ಆಸ್ತಿ,ಅಧಿಕಾರಕ್ಕಿಂತ ಆರೋಗ್ಯ ದೊಡ್ಡದು

Team Udayavani, Jan 20, 2020, 6:12 PM IST

ಮಂಡ್ಯ: ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆಸ್ತಿ-ಅಧಿಕಾರಕ್ಕಿಂತ, ಆರೋಗ್ಯವೇ ಅತ್ಯಮೂಲ್ಯ. ಎಲ್ಲವನ್ನೂಸಂಪಾದನೆ ಮಾಡಬಹುದು. ಆರೋಗ್ಯ ಖರೀದಿಸಲು ಮಾತ್ರ ಸಾಧ್ಯವಿಲ್ಲ. ಉತ್ತಮ ಆರೋಗ್ಯವಿದ್ದರೆ ಆಯುಸ್ಸು ಹೆಚ್ಚುತ್ತದೆ ಎಂದು ಎಂ ಶ್ರೀನಿವಾಸ್‌ ಹೇಳಿದರು.

ನಗರದ ಹೌಸಿಂಗ್‌ ಬೋರ್ಡ್‌ನ ಉದ್ಯಾನವನದಲ್ಲಿ ಭಾನುವಾರ ಜಿಲ್ಲಾ ನಾಗರಿಕರ ಹಿತರಕ್ಷಣೆ ವೇದಿಕೆ ಆಯೋಜಿಸಿದ್ದ ಉಚಿತ ಆರೋಗ್ಯ ಕಾರ್ಯಾಗಾರ ಮತ್ತು ಅಭಿನಂದನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮನುಷ್ಯ ಹುಟ್ಟು-ಸಾವುಗಳ ನಡುವೆ ಜೀವನ ನಡೆಸುವಾಗ ಸಮಾಜಮುಖೀಯಾಗಿ ಸಾಧನೆ ಮಾಡಿದರೆ ಸತ್ತ ನಂತರವೂ ಜೀವಂತವಾಗಿ ರುತ್ತಾರೆ.

ವಾರ್ಡಿನ ನಾಗರಿಕರು ಆರೋಗ್ಯ ಕಾಡಿಕೊಳ್ಳಲು ಸ್ವತ್ಛತೆ, ಉತ್ತಮ ಪರಿಸರ, ಪೌಷ್ಟಿಕ ಆಹಾರ, ವ್ಯಾಯಾಮ ಅತ್ಯವಶ್ಯಕ. ವೈದ್ಯರ ಸಲಹೆ ಅನುಸರಿಸಿದರೆ ಆನಾರೋಗ್ಯವಂತರು ಆರೋಗ್ಯ ವಂತರಾಗಿ ಜೀವನ ನಡೆಸಬಹುದು ಎಂದರು.ಸಾಂಜೋ ಆಸ್ಪತ್ರೆಯ ಎಲ್ಲಾ ವಿಭಾಗದ ವೈದ್ಯರು ಮತ್ತು ಸಿಬ್ಬಂದಿ ನಾಗರಿಕರ ಆರೋಗ್ಯ ತಪಾಸಣೆ ನಡೆಸಿ, ಔಷಧ ವಿತರಿಸಿ, ಆರೋಗ್ಯದ ಸಲಹೆ ಸೂಚನೆನೀಡಿದರು. ನಂತರ ವಿವಿಧ ಕ್ಷೇತ್ರಗಳ ಸಾಧಕರಾದ ಮಾಜಿ ಯೋಧರು,ರಾಷ್ಟ್ರೀಯ ಕ್ರೀಡಾಪಟು ಮತ್ತು ಸಮಾಜ ಸೇವಕರನ್ನು ಅಭಿನಂದಿಸಿ ಗೌರವಿಸಿದರು.

ನಗರಸಭೆ ಮಾಜಿ ಸದಸ್ಯೆ ಗೌರಮ್ಮ ವೆಂಕಟೇಶಯ್ಯ, ಸಾಂಜೋ ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್‌ ನಿರ್ಮಲಾ, ಪಿಆರ್‌ಒ ಸೋಲೂಮನ್‌, ನಾಗರಿಕರ ಹಿತರಕ್ಷಣೆ ವೇದಿಕೆ ಅಧ್ಯಕ್ಷ ಲಿಂಗೇಗೌಡ, ನಗರಸಭೆ ಮಾಜಿ ಸದಸ್ಯ ಪ್ರಕಾಶ್‌, ಸಾಹಿತಿ ಡಾ.ಮುದ್ದೇಗೌಡ, ನಗರಸಭಾಸದಸ್ಯ ಎಚ್‌.ಎಸ್‌. ಮಂಜುನಾಥ್‌, ಮಾಜಿ ಸದಸ್ಯ ಕೆ.ಎಲ್‌.ನಾಗೇಂದ್ರ, ಲಯನ್ಸ್‌ ಸಂಸ್ಥೆಯ ಪ್ರಧಾನ ಪೋಷಕ ಬಿ.ಎಂ. ಅಪ್ಪಾಜಪ್ಪ, ಪೊ›.ಮರಿಯಯ್ಯ, ವಿಕ್ಕೆರೆ ವೆಂಕಟೇಶ್‌, ವಿವೇಕ್‌, ಕೃಷ್ಣಮೂರ್ತಿ ಮತ್ತಿತರರು ಕಾರ್ಯ ಕ್ರಮದಲ್ಲಿ ಹಾಜರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಂಡ್ಯ: ಸಾರ್ವಜನಿಕ ರಸ್ತೆ ಅತಿಕ್ರಮಿಸಿದ್ದಲ್ಲದೆ, ಪ್ರಶ್ನಿಸಿದ್ದಕ್ಕೆ ಜಾತಿನಿಂದನೆ ಪ್ರಕರಣ ದಾಖಲು ಮಾಡುವುದಾಗಿ ಬೆದರಿಕೆ ಹಾಕಿರುವವರ ವಿರುದ್ಧ ಕ್ರಮಕ್ಕೆ...

  • ಮದ್ದೂರು: ಕೇಂದ್ರ -ರಾಜ್ಯ ಸರ್ಕಾರಗಳು ಗ್ರಾಪಂ ನೌಕರರ ಬೇಡಿಕೆ ಈಡೇರಿಸಲು ಕ್ರಮ ವಹಿಸಿ ನೌಕರರ ಹಿತ ಕಾಯಬೇಕೆಂದು ಪ್ರಾಂತ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ...

  • ಮಳವಳ್ಳಿ: ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಸಂದರ್ಭದಲ್ಲಿ ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಸಂಸದರು, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ...

  • ಮಳವಳ್ಳಿ: ತಾಲೂಕು ಮಡಿವಾಳ ಮಾಚಿದೇವರ ಸಂಘದ ವತಿಯಿಂದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಕಾರ್ಯಕ್ರಮವು ಫೆ.25ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಅಂಬೇಡ್ಕರ್‌ ಭವನದಲ್ಲಿ...

  • ಮೇಲುಕೋಟೆ: ಇಲ್ಲಿನ ಶ್ರೀ ಚೆಲುವನಾರಾಯಣ ಸ್ವಾಮಿ ವಾಹನೋತ್ಸವ ಮಂಟಪದಲ್ಲಿ ಕಸದರಾಶಿ ತುಂಬಿದ್ದು, ಭಾರತ ಸರ್ಕಾರದ ಸ್ವಚ್ಛಭಾರತ್‌, ಮುಜರಾಯಿ ಇಲಾಖೆಯ ಸ್ವಚ್ಛದೇಗುಲ...

ಹೊಸ ಸೇರ್ಪಡೆ