ಭಾರೀ ಮಳೆ: ಅವಾಂತರ

Team Udayavani, Oct 12, 2021, 6:14 PM IST

ಭಾರೀ ಮಳೆ- ಅವಾಂತರ

ಕೆ.ಆರ್‌.ಪೇಟೆ: ತಾಲೂಕಿನಲ್ಲಿ ಸುರಿದ ಭಾರೀ ಮಳೆಯು ಅವಾಂತರಗಳನ್ನು ಸೃಷ್ಟಿ ಮಾಡಿದೆ. ಕೆ.ಆರ್‌. ಪೇಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಆಯುಧ ಪೂಜೆ ಪ್ರಯುಕ್ತ ಮಾರಾಟ ಮಾಡಲು ತಂದಿದ್ದ ಬೂದು ಗುಂಬಳ ಕಾಯಿಯು ಮಳೆಯ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ರೈತನಿಗೆ ಸಾವಿರಾರು ರೂ.ನಷ್ಟ ಸಂಭವಿಸಿದೆ.

ಲಕ್ಷಾಂತರ ರೂ. ನಷ್ಟ: ತಾಲೂಕಿನ ಕಸಬಾ ಹೋಬಳಿಯ ಕೊಮ್ಮೇನಹಳ್ಳಿ ಬಳಿ ನೇರಳೆ ಕಟ್ಟೆಗೆ ಪ್ರವಾಹದಂತೆ ನುಗ್ಗಿದ ನೀರು ಗ್ರಾಮದ ಹನುಮಂತೇಗೌಡ, ಬೋರೇಗೌಡ, ಹರೀಶ್‌, ಉದಯ್‌ಕುಮಾರ್‌, ಬಾಬು, ಷಣ್ಮುಖ, ದಿಲೀಪ್‌, ಮಹೇಂದ್ರ, ತೊಳಸಿ, ಮುಂತಾದ ರೈತರ ಜಮೀನುಗಳು ಹಾಗೂ ತೋಟಗಳಿಗೆ ನುಗ್ಗಿ ಬಾಳೆ, ಕಬ್ಬು, ತೆಂಗು, ಅಡಿಕೆ, ಅವರೆ, ಸಿಹಿಗುಂಬಳ, ಬೂದಗುಂಬಳ, ಮುಸುಕಿನ ಜೋಳ ಸೇರಿದಂತೆ ವಿವಿಧ ಬೆಳೆಗಳು ಮಳೆಯ ನೀರಿನಿಂದ ಕೊಚ್ಚಿ ಹೋಗಿದ್ದು, ಲಕ್ಷಾಂತರ ರೂ.ನಷ್ಟ ಸಂಭವಿಸಿದೆ.

ಇದನ್ನೂ ಓದಿ;- ಯಾವುದೇ ನಿರ್ಬಂಧ ಇಲ್ಲ…ಅ.18ರಿಂದ ಎಲ್ಲಾ ದೇಶೀಯ ವಿಮಾನ ಸಂಚಾರಕ್ಕೆ ಕೇಂದ್ರದ ಅನುಮತಿ

ತೋಟಗಳು ಜಲಾವೃತ: ಕೊಮ್ಮೇನಹಳ್ಳಿ ಗ್ರಾಮದ ಶೇ.90ರಷ್ಟು ತೋಟಗಳು ಮಳೆಯ ನೀರಿನ ರಭಸಕ್ಕೆ ಸಿಲುಕಿ ಭಾರೀ ಪ್ರಮಾಣದ ಕೊರಕಲು ನಿರ್ಮಾಣವಾಗಿ ರೈತರಿಗೆ ಭಾರೀ ಸಂಕಷ್ಟ ಉಂಟಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ನಿಗಮವು ಕೆಶಿಪ್‌ ಯೋಜನೆಯಡಿಯಲ್ಲಿ ಅವೈಜ್ಙಾನಿಕವಾಗಿ ನೇರಳೆಕಟ್ಟೆ ಯನ್ನು ದುರಸ್ತಿ ಮಾಡಿ ಕಟ್ಟೆಯ ಕೋಡಿಯನ್ನು ಎತ್ತರಿಸದ ಕಾರಣ ಭಾರೀ ಪ್ರಮಾಣದ ನೀರು ತೋಟಗಳಿಗೆ ನುಗ್ಗಿ ಅಪಾರ ನಷ್ಟವುಂಟಾಗಿದೆ ಎಂದು ಗ್ರಾಮದ ಪ್ರಗತಿಪರ ರೈತ ಹರೀಶ್‌ ಆರೋಪಿಸಿದ್ದಾರೆ.

 ಹೂವು ನೀರುಪಾಲು: ಕೆ.ಆರ್‌.ಪೇಟೆ ಪಟ್ಟಣದಲ್ಲಿಯೂ ಮಳೆಯ ನೀರು ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿದ್ದು, ಬಸ್‌ ನಿಲ್ದಾಣಕ್ಕೆ ನುಗ್ಗಿರುವ ನೀರು ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ರಸ್ತೆ ಬದಿಯ ವ್ಯಾಪಾರಿಗಳು ಹಾಗೂ ಆಯುಧ ಪೂಜೆ ಅಂಗವಾಗಿ ರೈತರು ತಂದಿದ್ದ ಹತ್ತಾರು ಲಾರಿ ಲೋಡ್‌ ಭೂದಗುಂಬಳ ಕಾಯಿಗಳು, ಸೇವಂತಿಗೆ ಹೂವಿನ ಪಿಂಡಿಗಳು ಮಳೆ ನೀರು ಪಾಲಾಗಿವೆ.

ಪರಿಹಾರ ನೀಡಲು ಆಗ್ರಹ ಭಾರೀ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ರಾಜ್ಯ ಸರ್ಕಾರವು ಕೂಡಲೇ ಪ್ರಕೃತಿ ವಿಕೋಪ ಅನುದಾನದ ಅಡಿಯಲ್ಲಿ ತಕ್ಷಣವೇ ನಷ್ಟ ಉಂಟಾಗಿರುವ ರೈತರಿಗೆ ಪರಿಹಾರ ನೀಡಿ ನೆರವಿಗೆ ಧಾವಿಸಬೇಕು ಎಂದು ಪ್ರಗತಿಪರ ರೈತರಾದ ಬೊಮ್ಮೇ ನಹಳ್ಳಿ ಬಿ.ಸಿ.ಹರ್ಷ, ಅಗ್ರಹಾರಬಾ ಚಹಳ್ಳಿ ಆರ್‌.ಜಗದೀಶ್‌ ಮತ್ತು ಕೊಮ್ಮೇನಹಳ್ಳಿ ಜಗದೀಶ್‌ ತಾಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ವೃದ್ಧರೇ ಅಂತರಾಷ್ಟ್ರೀಯ ಪ್ರಯಾಣ ಮುಂದೂಡಿ : ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಎಚ್ಚರಿಕೆ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರ

ಬಿಹಾರದ ದೇಗುಲಗಳಿಗೆ ಶೇ. 4 ತೆರಿಗೆ! ರಾಜ್ಯ ಸರ್ಕಾರದ ನಿರ್ಧಾರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಂದಿಗಳ ಹಾವಳಿ

ಹಂದಿಗಳ ಹಾವಳಿ ನಿಯಂತ್ರಣಕ್ಕೆ ಆಗ್ರಹ

ಕೃಷಿ ಮೇಳ

ನಾಳೆ, ನಾಡಿದ್ದು ಕೃಷಿ ಮೇಳ

ಶ್ರೀರಂಗಪಟ್ಟಣ ದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣದಲ್ಲಿ ಅಪ್ಪು ಪುಣ್ಯ ಸ್ಮರಣೆ

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

ಶ್ರೀರಂಗಪಟ್ಟಣ : ಹಿರಿದೇವಿ ಅಮ್ಮನ ಜಾತ್ರಾ ಮಹೋತ್ಸವದಲ್ಲಿ ಮನರಂಜಿಸಿದ ನಾಡಕುಸ್ತಿ ಪಂದ್ಯಾವಳಿ

ಅಕ್ರಮ ಪಡಿತರ ಅಕ್ಕಿ- ಕ್ಯಾಂಟರ್‌ ವಶ

ಅಕ್ರಮ ಪಡಿತರ ಅಕ್ಕಿ: ಕ್ಯಾಂಟರ್‌ ವಶ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ವಿಶ್ವ ಚಾಂಪಿಯನ್‌ಶಿಪ್‌: ಮೊದಲ ಬಾರಿ ಸೈನಾ ನೆಹ್ವಾಲ್‌ ಗೈರು

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತ ಸೆಮಿಫೈನಲ್‌ಗೆ ಲಗ್ಗೆ

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ನವೆಂಬರ್‌ ಜಿಎಸ್‌ಟಿ ಸಂಗ್ರಹ 1.31 ಲಕ್ಷ ಕೋ.ರೂ.

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌100 ರೂ. ಏರಿಕೆ

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.