Udayavni Special

ಕೈಗಾರಿಕೆ ಉನ್ನತೀಕರಣಕ್ಕಾಗಿ ಪರಿಶೀಲನೆ


Team Udayavani, Mar 3, 2021, 3:26 PM IST

ಕೈಗಾರಿಕೆ ಉನ್ನತೀಕರಣಕ್ಕಾಗಿ ಪರಿಶೀಲನೆ

ಮದ್ದೂರು: ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳ ಪ್ರವಾಸದ ವೇಳೆ ಕೈಗಾರಿಕಾ ಪ್ರದೇಶಗಳಿಗೆ ಭೇಟಿ ನೀಡಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಉನ್ನತೀಕರಣ ಕಾಮಗಾರಿಗಳ ಸಂಬಂಧ ಪರಿಶೀಲಿಸಿದ್ದೇವೆ ಎಂದು ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದರು.

ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ವಲಯದ ವಿವಿಧ ಕಾರ್ಖಾನೆಗಳಿಗೆ ಭೇಟಿನೀಡಿ, ಆಡಳಿತ ಮಂಡಳಿ ಅಧಿಕಾರಿಗಳೊಂದಿಗೆಚರ್ಚಿಸಿದರು. ಈ ವೇಳೆ ಮಾತನಾಡಿ,ರಾಜ್ಯದ ಗಾರ್ಮೆಂಟ್ಸ್‌ಗಳ ನೌಕರರ ಹಿತ ಕಾಪಾಡುವ ಜತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುವಕುರಿತಾಗಿ ಕಾರ್ಖಾನೆ ಮತ್ತು ಕೈಗಾರಿಕಾ ಇಲಾಖೆಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಅಗತ್ಯಸೌಲಭ್ಯಗಳ ಕುರಿತಾಗಿ ಸಿಬ್ಬಂದಿ ನೀಡಿರುವಮನವಿಯನ್ನು ಪರಿಗಣಿಸುತ್ತೇವೆ ಎಂದು ಭರವಸೆ ನೀಡಿದರು.

ಜನರ ಹಿತ ಕಾಪಾಡುವ ಭರವಸೆ: ಸಚಿವಕೆ.ಸಿ.ನಾರಾಯಣಗೌಡ ಮಾತನಾಡಿ, ಪಾಂಡವಪುರ ಸಕ್ಕರೆ ಕಾರ್ಖಾನೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಈಗಾಗಲೇ ಚಾಲನೆಗೊಳಿಸಿದ್ದು, ಮೈಷುಗರ್‌ ಆರಂಭದ ವಿಚಾರದಲ್ಲಿ ಸ್ಥಳೀಯರ ಪ್ರತಿರೋಧದ ಹಿನ್ನೆಲೆಯಲ್ಲಿ ಉದ್ಯಮಿಗಳು ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯ ಕೈಗಾರಿಕೆಗಳೂ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಕ್ಕೆ ಮುಂದಿನ ಬಜೆಟ್‌ನಲ್ಲಿಅನುದಾನ ಪ್ರಕಟಿಸುವ ನಿರೀಕ್ಷೆಯಿದೆ. ಈ ಕುರಿತು ಸಿಎಂ ಜಿಲ್ಲೆಯ ಜನರ ಹಿತ ಕಾಪಾಡುವ ಭರವಸೆ ಇದೆ ಎಂದರು.

ಸಚಿವರ ಭೇಟಿ ವೇಳೆ ಗೆಜ್ಜಲಗೆರೆ ಕೈಗಾರಿಕಾ ವಲಯದಲ್ಲಿ ಸಾವಿರಾರು ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿರುವ ಸಾಯಿ ಸಿದ್ಧ ಉಡುಪು ಕಾರ್ಖಾನೆ ಆಡಳಿತ ಮಂಡಳಿ, ಮಾಧ್ಯಮ,ಸ್ಥಳೀಯ ಮುಖಂಡರನ್ನು ಸಚಿವರ ಸಮ್ಮುಖದಲ್ಲೇ ಹೊರಗಿಡುವ ಹುನ್ನಾರಕ್ಕೆ ಮುಂದಾದವೇಳೆ ವೃತ್ತ ನಿರೀಕ್ಷಕ ಕೆ.ಆರ್‌. ಪ್ರಸಾದ್‌ ಮಧ್ಯಪ್ರವೇಶಿಸಿ, ಕಾರ್ಖಾನೆ ಒಳ ಆವರಣ ಪ್ರವೇಶಿಸಲು ಅನುವು ಮಾಡಿಕೊಟ್ಟರು.

ಅನುದಾನ ಬಿಡುಗಡೆಗೆ ಮನವಿ: ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿದ ಸಚಿವ ರನ್ನು ಶಾಸಕ ಡಿ.ಸಿ. ತಮ್ಮಣ್ಣ ಅಭಿನಂದಿಸಿ,ಗೆಜ್ಜಲಗೆರೆ, ಸೋಮನಹಳ್ಳಿ ಕೈಗಾರಿಕಾ ಪ್ರದೇಶ ಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಜತೆಗೆ ಕಾರ್ಮಿಕರಿಗೆ ಬಸ್‌ ವ್ಯವಸ್ಥೆ ಹಾಗೂ ಇನ್ನಿತರೆಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬಿಡುಗಡೆಗೊಳಿಸುವಂತೆ ಸಚಿವ ಜಗದೀಶ್‌ ಶೆಟ್ಟರ್‌ ಅವರಿಗೆ ಮನವಿ ಮಾಡಿದರು.

ಶಾಸಕ ಅಪ್ಪಾಜೀಗೌಡ, ಜಿಲ್ಲಾಧಿಕಾರಿ ಡಾ.ಅಶ್ವಥಿ, ಮಂಡ್ಯ ಉಪವಿಭಾಗಾಧಿಕಾರಿಶಿವಾನಂದಮೂರ್ತಿ, ತಹಶೀಲ್ದಾರ್‌ ವಿಜಯಕುಮಾರ್‌, ಕೆಐಡಿಬಿಎಲ್‌ ಅಧಿಕಾರಿ ಶಿವಲಿಂಗಯ್ಯ, ಎಪಿಎಂಸಿ ಅಧ್ಯಕ್ಷ ಜಿ.ಸಿ.ಮಹೇಂದ್ರ, ಗೆಜ್ಜಲಗೆರೆ ಗ್ರಾಪಂ ಅಧ್ಯಕ್ಷ ಹರೀಶ್‌, ಬಿಜೆಪಿಜಿಲ್ಲಾಧ್ಯಕ್ಷ ವಿಜಯಕುಮಾರ್‌, ತಾಲೂಕು ಘಟಕದ ಅಧ್ಯಕ್ಷ ಪಣ್ಣೇದೊಡ್ಡಿ ರಘು ಹಾಗೂ ಪದಾಧಿಕಾರಿಗಳು ಹಾಜರಿದ್ದರು.

ಟಾಪ್ ನ್ಯೂಸ್

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

/wearing-mask-in-public-space-to-avoid-covid-19-is-no-more-compulsory-says-israel

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

ಕೋವಿಡ್ 2ನೇ ಅಲೆ: ಭಾರತದಲ್ಲಿ 24 ಗಂಟೆಗಳಲ್ಲಿ 2.73 ಲಕ್ಷ ಪ್ರಕರಣ ಪತ್ತೆ

upendra

ಉಪ್ಪಿ ‘ಲಗಾಮ್‌’ಗೆ ಇಂದು ಮುಹೂರ್ತ

government-has-no-plan-to-impose-nationwide-lockdown-says-nirmala-sitharaman

ದೇಶದಾದ್ಯಂತ ಮತ್ತೆ ಲಾಕ್ ಡೌನ್ ಹೇರುವ ಮಾತೇ ಇಲ್ಲ : ನಿರ್ಮಲಾ ಸೀತಾರಾಮನ್

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟ

ಕೋವಿಡ್ ಆತಂಕ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1000 ಅಂಕ ಕುಸಿತ, ಹೂಡಿಕೆದಾರರಿಗೆ ನಷ್ಟಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಡ್ಯ : ಒಂದೇ ದಿನ ಮುನ್ನೂರರ ಗಡಿ ದಾಟಿದ ಕೋವಿಡ್ ಪಾಸಿಟಿವ್ ಪ್ರಕರಣ, ಓರ್ವ ಸಾವು

ಮಂಡ್ಯ : ಒಂದೇ ದಿನ 300ಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ, ಓರ್ವ ಸಾವು

Follow fire safety measures

ಅಗ್ನಿ ಸುರಕ್ಷಾ ಕ್ರಮ ಅನುಸರಿಸಿ: ಶಿವಕುಮಾರ್‌

Temple Band

ಮೇ 15ರವರೆಗೆ ಪ್ರವಾಸಿ ತಾಣ, ದೇವಾಲಯ ಬಂದ್‌

The need to provide the necessary facilities

ಈ-ಸಮೀಕ್ಷೆ ನಡೆಸಲು ಅಗತ್ಯ ಸೌಲಭ್ಯ ನೀಡಲು ಆಗ್ರಹ

Loss of sugarcane, tomato, chilli crop to rain

ಮಳೆಗೆ ಕಬ್ಬು, ಟೊಮೆಟೋ, ಮೆಣಸಿನಕಾಯಿ ಬೆಳೆ ನಷ್ಟ

MUST WATCH

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

udayavani youtube

ಮಾಸ್ಕ್ ಹಾಕದೆ ವಾಗ್ವಾದ ಮಾಡಿದ ವ್ಯಾಪಾರಿಗೆ ಕಪಾಳಮೋಕ್ಷ

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

ಹೊಸ ಸೇರ್ಪಡೆ

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

ನಿಷೇಧದ ಮಧ್ಯೆ ಜಾತ್ರೆ: ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲು

Mallikarjuna Temple

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ: ದೇವರ ದೊಡ್ಡ ದರ್ಶನ ಬಲಿ ಉತ್ಸವ

/wearing-mask-in-public-space-to-avoid-covid-19-is-no-more-compulsory-says-israel

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯವಿಲ್ಲ : ಅಚ್ಚರಿಯ ನಿರ್ಣಯ ಕೈಗೊಂಡ ಈ ದೇಶ..!

“All cooperation for village development”

“ಗ್ರಾಮದ ಅಭಿವೃದ್ಧಿಗೆ ಸರ್ವ ಸಹಕಾರ’

ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

ಮಿತಿಮೀರಿ ಹೆಚ್ಚಳವಾಗುತ್ತಿರುವ ಕೋವಿಡ್: ಪರಿಸ್ಥಿತಿ ನಿಭಾಯಿಸಲು ಸಭೆ ಕರೆದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.