ಕೂಳಗೆರೆ ಏತ ನೀರಾವರಿ: 17 ಕೆರೆಗೆ ನೀರು


Team Udayavani, Jan 26, 2022, 1:50 PM IST

ಕೂಳಗೆರೆ ಏತ ನೀರಾವರಿ: 17 ಕೆರೆಗೆ ನೀರು

ಭಾರತೀನಗರ: ರೈತರ ಕೃಷಿ ಜಮೀನುಗಳಿಗೆ ನೀರು ಒದಗಿಸಲು ಜಲಕ್ರಾಂತಿಗೆ ಮುಂದಾಗಿರುವ ಶಾಸಕ ಡಿ.ಸಿ.ತಮ್ಮಣ್ಣನವರು ಏತನೀರಾವರಿ ಪುನಶ್ಚೇತನ ಹಾಗೂ ಹೊಸ ಘಟಕ ನಿರ್ಮಾಣಮಾಡಲು ಶ್ರಮಿಸುತ್ತಿರುವುದು ಈಭಾಗದ ರೈತರ ಸಂತಸಕ್ಕೆ ಕಾರಣವಾಗಿದೆ.

ಮದ್ದೂರು ತಾಲೂಕು ಕಸಬಾ ಹೋಬಳಿಯ ಹಲವಾರು ಗ್ರಾಮಗಳಮಳೆಯಾಶ್ರಿತ ಪ್ರದೇಶಗಳಾ ಗಿದ್ದು,ನೀರಾವರಿಯಿಂದ ಸಂಪೂರ್ಣ ವಂಚಿತವಾಗಿದ್ದವು. ಇದೀಗ ಪ್ರಗತಿಯ ಹಂತದಲ್ಲಿರುವ ಕೂಳ ಗೆರೆ ಏತನೀರಾವರಿ ಯೋಜನೆಯಿಂದ 17 ಕೆರೆಗಳಿಗೆನೀರಿನ ಆಸರೆ ದೊರಕಲಿದೆ. ಈ ಮಹತ್ವಾಕಾಂಕ್ಷೆಯೋಜನೆ ಮೇ ಅಥವಾ ಜೂನ್‌ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಗಳಿವೆ.

17 ಕೆರೆಗಳಿಗೆ ನೀರು: ಇಗ್ಗಲೂರು ಬ್ಯಾರೇಜ್‌ ಹಿನ್ನೀರಿನಲ್ಲಿ ದೊರೆಯಬಹುದಾದ 574 ಎಂಸಿಎಫ್ಟಿನೀರನ್ನು ಬಳಸಿಕೊಂಡು 77 ಕೋಟಿ ವೆಚ್ಚದಲ್ಲಿಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇಲ್ಲಿದ್ದ73 ಕ್ಯುಸೆಕ್‌ ನೀರನ್ನು ಮೇಲೆತ್ತಿ 17 ಕೆರೆಗಳಿಗೆ ನೀರುಹರಿಸುವಂತೆ ರೂಪಿಸಲಾಗಿದೆ.

ಚಿಕ್ಕರಸಿನಕೆರೆ ಹೋಬಳಿಯ ತಿಟ್ಟಮಾರನಹಳ್ಳಿಏತನೀರಾವರಿಗೆ 44 ಕೋಟಿ, ಚಿಕ್ಕರಸಿನಕೆರೆ ಏತನೀರಾವರಿಗೆ 17.5 ಕೋಟಿ, ಕ್ಯಾತಘಟ್ಟ ಏತನೀರಾವರಿಪುನಶ್ಚೇತನ ಕಾಮಗಾರಿಗೆ 4.97 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಪ್ರಗತಿ ಹಂತದಲ್ಲಿ ಸಾಗುತ್ತಿದೆ.

ಮದ್ದೂರಿನ 4, ಮಳವಳ್ಳಿಯ 12 ಕೆರೆಗೆ ನೀರು: ಸೂಳೆಕೆರೆ ಕೋಡಿಯಿಂದ ಹಾಗೂ ವಿಸಿ ನಾಲಾ ಜಾಲದಅಚ್ಚುಕಟ್ಟು ಪ್ರದೇಶಗಳಿಂದ ಬರುವ ಹೆಚ್ಚುವರಿನೀರನ್ನು ಸಂಗ್ರಹ ಮಾಡಿ ತಿಟ್ಟಮಾರನಹಳ್ಳಿ ಏತನೀರಾವರಿ ಯೋಜನೆಯಿಂದ ಹೆಬ್ಟಾಳ ಚೆನ್ನಯ್ಯನಾಲೆಯ ಬಾದಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಯೋಜನೆಯಾಗಿದೆ. ಇದರಿಂದ ಮದ್ದೂರುಕ್ಷೇತ್ರದ 4 ಕೆರೆ, ಮಳವಳ್ಳಿ ಕ್ಷೇತ್ರದ 12 ಕೆರೆಗಳಿಗೆ ನೀರುತುಂಬಿಸಲಾಗುವುದು.

ಬರಗಾಲದ ಬವಣೆಗೆ ಗ್ರಾಮಗಳು: ಮದ್ದೂರು ತಾಲೂಕು ಕಸಬಾ ಮತ್ತು ಆತಗೂರು ಹೋಬಳಿಯಲ್ಲಿರುವ ಹಳ್ಳಿಗಳು ಪೂರ್ಣ ಮಳೆಯಾಶ್ರಿತ ಪ್ರದೇಶವಾಗಿದ್ದವು. ಸುಮಾರು 20 ವರ್ಷಗಳಿಂದ ಈ ಪ್ರದೇಶದಲ್ಲಿ ಮಳೆ ಬಾರದೆ, ಮಳೆಯ ಪ್ರಮಾಣ ಕ್ಷೀಣಿಸುತ್ತಿದ್ದರಿಂದಈ ಭಾಗದ ಕೆರೆ-ಕಟ್ಟೆಗಳು ನೀರು ತುಂಬದೆ ಬರಗಾಲದ ಬವಣೆಗೆ ಸಿಲುಕಿದ್ದವು.

ಈ ಭಾಗದಲ್ಲಿ ಅಂತರ್ಜಲ ಮಟ್ಟವೂ ಪೂರ್ಣ ಪ್ರಮಾಣದಲ್ಲಿ ಕುಸಿದಿತ್ತು. ಸಾವಿರ ಅಡಿ ಆಳಕ್ಕೆ ಕೊರೆಸಿ ದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿರಲಿಲ್ಲ.ಕೆಲವೆಡೆ ನೀರು ಸಿಕ್ಕರೂ ಅದರಲ್ಲಿ ಫ್ಲೋರೈಡ್‌, ನೈಟ್ರೆçಟ್‌ ಅಂಶ ಹೆಚ್ಚಾಗಿತ್ತು. ಇದರಿಂದ ಜನ-ಜಾನುವಾರುಗಳಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿತ್ತು. ಕೆಸ್ತೂರು ಸಮೀಪದ ಮಳೆಯ ಮಾಪನ ಕೇಂದ್ರದವಿವರಗಳನ್ನು ಗಮನಿಸಿದಾಗ ಮಳೆಯ ಸರಾಸರಿ 676.14 ಎಂಎಂ ಇತ್ತು. ಇದರಿಂದ ಕುಡಿಯುವನೀರಿಗೆ ಹಾಹಾಕಾರ ಸೃಷ್ಟಿಯಾಗಿ, ಅಂತರ್ಜಲ ಮಟ್ಟ ಪಾತಾಳ ಸೇರಿಕೊಂಡಿತ್ತು. ಹಾಗಾಗಿ ಈ ಏತನೀರಾವರಿಯೋಜನೆ ನಿರ್ಮಾಣಕ್ಕೆ ಮುಂದಾಗಿದ್ದೇನೆಂದು ಶಾಸಕ ಡಿ.ಸಿ.ತಮ್ಮಣ್ಣ ವಿವರಿಸಿದ್ದಾರೆ.

7 ವರ್ಷಗಳ ನಿರಂತರ ಪ್ರಯತ್ನ: ಕಸಬಾ ಮತ್ತು ಆತಗೂರು ಹೋಬಳಿ ವ್ಯಾಪ್ತಿಯ ಗ್ರಾಮಗಳ ಸ್ಥಿತಿ ಅರಿತ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಅವರು, ಸತತ 7 ವರ್ಷಗಳ ಭಗೀರಥ ಯತ್ನದ ಫ‌ಲವಾಗಿ ಮಳೆಯನ್ನೇ ನಂಬಿದ್ದ ಗ್ರಾಮಗಳು ಜೀವಜಲವನ್ನು ಕಾಣುವಂತಾಯಿತು.

2013 ರಿಂದ ಇಲ್ಲಿಯವರೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಯೋಜನೆಯ ಬಗ್ಗೆ ಚರ್ಚಿಸಿ, ಜನರು ಅನುಭವಿಸುತ್ತಿರುವ ನೀರಿನ ಬವಣೆ ನಿವಾರಿಸುವ ದೃಷ್ಟಿಯಿಂದ ಸರ್ಕಾರದ ಮಟ್ಟದಲ್ಲೂ ಚರ್ಚಿಸಿ ಈ ಭಾಗಗಳಲ್ಲಿ ಬರುವ ಕೆರೆಗಳಿಗೆ ಶಿಂಷಾ ನದಿಯಿಂದ ಏತ ನೀರಾವರಿ ಯೋಜನೆಯ ಮೂಲಕ ನೀರು ತುಂಬಿಸಿದರೆ ಅಂತರ್ಜಲ ಮಟ್ಟ ವೃದ್ಧಿಯಾಗಿ ಕೊಳವೆ ಬಾವಿಗಳಿಗೆ ನೀರು ಲಭ್ಯವಾಗಲಿದೆ ಎಂಬುವುದನ್ನು ಅರ್ಥೈಸಿಕೊಟ್ಟರು. ಸರ್ಕಾರ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ನುರಿತ ಅನುಭವವುಗಳ್ಳ ತಜ್ಞರಿಂದ ವರದಿ ಪಡೆಯಿತು. ಅಂತಿಮವಾಗಿ 77 ಕೋಟಿ ರೂ.ಗಳಿಗೆ 2018 ರಲ್ಲಿ ತಾಂತ್ರಿಕ ಮಂಜೂರಾತಿ ನೀಡಿ 13 ಜೂನ್‌ 2019 ರಲ್ಲಿ ಹೈದರಾಬಾದ್‌ ಮೂಲದ ಕೋಯಾ ಅಂಡ್‌ ಕಂಪನಿ ಕನ್‌ಸ್ಟ್ರಕ್ಷನ್‌ ಕಂಪನಿಗೆ ಕಾಮಗಾರಿ ವಹಿಸಿತು.

ನೀರಿನ ಮೂಲ ಯಾವುದು? :  ಶಿಂಷಾ ನದಿ ಸದಾಕಾಲ ನೀರು ಹರಿಯುವ ನದಿಯಲ್ಲ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ನದಿ. ಕೃಷ್ಣರಾಜಸಾಗರ ಜಲಾಶಯದಿಂದ ವಿಶ್ವೇಶ್ವರಯ್ಯ ನಾಲೆಗಳಿಗೆ ನಿರು ಹರಿಸಿದಾಗ ಅಚ್ಚುಕಚ್ಚು ಪ್ರದೇಶಗಳ ಬಸಿ ನೀರು ಹಳ್ಳ-ಕೊಳ್ಳಗಳಲ್ಲಿ ಹರಿದುಬಂದು ಕೊಪ್ಪ ಕೆರೆ, ಮದ್ದೂರು ಕೆರೆ ಮತ್ತು ಸೂಳೆಕೆರೆ ತುಂಬಿ ಹೆಚ್ಚುವರಿ ನೀರು ಹರಿದುಬಂದು ಶಿಂಷಾ ನದಿ ಸೇರುತ್ತಿದೆ. ಸೂಳೆಕೆರೆಯಿಂದ ಬರುವ ಹೆಚ್ಚಿನ ನೀರು ಹೆಬ್ಟಾಳದ ಮೂಲಕ ಹರಿದುಬಂದು ಬನ್ನಹಳ್ಳಿ-ಕೂಳಗೆರೆ ಹತ್ತಿರವಿರುವ ಶಿಂಷಾ ನದಿ ಸೇರುತ್ತಿದೆ. ಈ ಸ್ಥಳದಲ್ಲಿ ಯೋಜನೆಗೆ ಸಾಕಾಗುವಷ್ಟು ನೀರು ಲಭ್ಯವಾಗುವುದರಿಂದ ಸದರಿ ಸ್ಥಳದಿಂದ ಬನ್ನಹಳ್ಳಿ ಮತ್ತು ಕೂಳಗೆರೆ ಗ್ರಾಮಗಳ ಮಧ್ಯಭಾಗದ ನದಿ ತೀರದಲ್ಲಿ ನೀರೆತ್ತುವ ಯೋಜನೆ ರೂಪುಗೊಂಡಿದೆ.

ಯಾವ್ಯಾವ ಕೆರೆಗಳಿಗೆ ಬರುತ್ತೇ ನೀರು? :

ಮದ್ದೂರು ತಾಲೂಕು ಕಸಬಾ ಹೋಬಳಿ ಶಿಂಷಾ ಎಡದಂಡೆಯಲ್ಲಿ ಬರುವ ತಿಪ್ಪೂರು ಕೆರೆ, ಕೊಕ್ಕರೆ ಬೆಳ್ಳೂರು, ಅಂಕೇದೊಡ್ಡಿ, ಹಳ್ಳಿಕೆರೆ, ಹಾಗಲಹಳ್ಳಿ, ಕಬ್ಟಾರೆ, ಕೆ.ಹೊನ್ನಲಗೆರೆಯ ಚಿಕ್ಕ ಮತ್ತು ದೊಡ್ಡಕೆರೆ, ಭೀಮನಕೆರೆ, ಬ್ಯಾಡರಹಳ್ಳಿ, ಬಾಣೋಜಿಪಂತ್‌, ರಾಜೇಗೌಡನದೊಡ್ಡಿ, ಮಾದನಾಯಕನಹಳ್ಳಿ, ತೈಲೂರು, ಆಲೂರು, ನೀಲಕಂಠನಹಳ್ಳಿ, ಅರೆಕಲ್ಲುದೊಡ್ಡಿ ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ. ಇವುಗಳಲ್ಲದೆ ಈ ವ್ಯಾಪ್ತಿಯ ಗ್ರಾಮಗಳಲ್ಲಿ ಕೆಲವೊಂದು ಕಟ್ಟೆಗಳು ಬರಲಿದ್ದು, ಅವುಗಳಿಗೂ ನೀರು  ತುಂಬಿಸಲು ಪೈಪ್‌ಲೈನ್‌ ಅಳವಡಿಸಲಾಗಿದೆ.

ನಮ್ಮ ನೀರು ನಮ್ಮಲ್ಲೇ ಉಳಿಯಬೇಕೆಂದು ಕೂಳಗೆರೆ ಏತನೀರಾವರಿ ಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ. ಮೇ ಅಥವಾ ಜೂನ್‌ ತಿಂಗಳಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮಳೆಯನ್ನೇ ನಂಬಿದ್ದ 17 ಕೆರೆಗಳಿಗೆ ನೀರು ದೊರಕಿದಂತಾಗಲಿದೆ. ಪೈಪ್‌ಲೈನ್‌ ಹಾದು ಹೋಗುವ ಮಾರ್ಗದಲ್ಲಿ ಬರುವ ಕೆರೆಕಟ್ಟೆಗಳನ್ನು ತುಂಬಿಸುವುದಕ್ಕೂ ಪ್ರಾಮುಖ್ಯತೆ ನೀಡಿದ್ದೇನೆ. ಯೋಜನೆಯಿಂದ ಸಾವಿರಾರು ಎಕರೆ ಕೃಷಿ ಪ್ರದೇಶಕ್ಕೂ ನೀರು ದೊರೆಯಲಿದೆ -ಡಿ.ಸಿ.ತಮ್ಮಣ್ಣ, ಶಾಸಕರು. ಮದ್ದೂರು ಕ್ಷೇತ್ರ

 

-ಅಣ್ಣೂರು ಸತೀಶ್‌

ಟಾಪ್ ನ್ಯೂಸ್

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

astrology

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

4 ತಿಂಗಳ ಗಾಢ ಕತ್ತಲೆಯಲ್ಲಿ ವಿಜ್ಞಾನಿಗಳ ವಾಸ!

3 ಹುಲಿ ಮರಿಗಳಿಗೆ ತಾಯಿಯಾದ ನಾಯಿ-ವಿಡಿಯೋ ವೈರಲ್

ಈ 3 ಹುಲಿ ಮರಿಗಳಿಗೆ ನಾಯಿಯೇ “ತಾಯಿ’!-ವಿಡಿಯೋ ವೈರಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM ಯೋಗಿ ಆದೇಶದ ಬೆನ್ನಲ್ಲೇ 17,000 ಧಾರ್ಮಿಕ ಕೇಂದ್ರಗಳ ಲೌಡ್ ಸ್ಪೀಕರ್ ಶಬ್ದದ ಪ್ರಮಾಣ ಇಳಿಕೆ

ಹಿಜಾಬ್‌ ವಿವಾದ ಹಿಂದೆ ಕಾಂಗ್ರೆಸ್‌: ಸಿಎಂ ಬಸವರಾಜ ಬೊಮ್ಮಾಯಿ

ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ : ಶಿಕ್ಷಕರ ಸಂಘದ ಉಪಾಧ್ಯಕ್ಷ  ಪಾರು

ಮಂಡ್ಯ : ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿ ಬಿದ್ದ ಮರ ; ಶಿಕ್ಷಕರ ಸಂಘದ ಉಪಾಧ್ಯಕ್ಷ ಪಾರು

ಈ ಶಾಲೆಗೆ ಸೇರಿದರೆ ಮಕ್ಕಳಿಗೆ ಬೆಳ್ಳಿ ನಾಣ್ಯ ಕೊಡುಗೆ:  ಹಾಜರಾತಿ ಹೆಚ್ಚಿಸಲು ವಿವಿಧ ಸೌಲಭ್ಯ

ಈ ಶಾಲೆಗೆ ಸೇರಿದರೆ ಮಕ್ಕಳಿಗೆ ಬೆಳ್ಳಿ ನಾಣ್ಯ ಕೊಡುಗೆ: ಹಾಜರಾತಿ ಹೆಚ್ಚಿಸಲು ವಿವಿಧ ಸೌಲಭ್ಯ

1-sadaadds

ಡಿಕೆಶಿ ಹುಟ್ಟುಹಬ್ಬ: ಮೈಷುಗರ್ ಕಾರ್ಖಾನೆಯ ಆವರಣದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ

6women

ಮಹಿಳೆಗೆ ಹಾರೆಯಿಂದ ಹೊಡೆಯಿರಿ ಎಂದ ಸರ್ವೆಯರ್‌ಗೆ ತರಾಟೆ: ವಿಡಿಯೋ ವೈರಲ್‌   

MUST WATCH

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

udayavani youtube

ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ

udayavani youtube

ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ

udayavani youtube

ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

ಹೊಸ ಸೇರ್ಪಡೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ರಾಜ್ಯ ವಿಪತ್ತು ಸ್ಪಂದನ ದಳಕ್ಕೆ ಮಾಜಿ ಸೈನಿಕರೇ ಗತಿ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

ಭೂಮಿ ಗುತ್ತಿಗೆಗೆ ಅನ್ನದಾತರ ಅಪಸ್ವರ; ಒತ್ತುವರಿ ಭೂಮಿ ಹಂಚಿಕೆಗೆ ಹರ್ಷ

astrology

ಮಂಗಳವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

ಮೂರು ತಿಂಗಳು ಸಮವಸ್ತ್ರ ಸಿಗದು; ಸಮವಸ್ತ್ರಕ್ಕೆ ಇನ್ನೂ ಟೆಂಡರ್‌ ಪ್ರಕ್ರಿಯೆ ಆರಂಭವಾಗಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.