Udayavni Special

ಕಾಲಯಮನ ಗರ್ಭಕ್ಕೆ ಸೇರುತ್ತಿರುವ ಜನಾರ್ದನ ದೇಗುಲ


Team Udayavani, Feb 26, 2021, 9:36 PM IST

Mandya Temple

ಕಿಕ್ಕೇರಿ: ಹೊಯ್ಸಳರ ಕಾಲದ ಕಿಕ್ಕೇರಿಯ ಜನಾರ್ದನ ದೇಗುಲ ಕುಸಿಯುವ ಹಂತದಲ್ಲಿದ್ದು ಜೀರ್ಣೋದ್ಧಾರಕ್ಕೆ ಕೈ ಬೀಸಿ ಕರೆಯುವಂತಿದೆ. ದೇಗುಲದ ಒಳಗಡೆ, ಹೊರಗಡೆ ಎನ್ನದೆ ಗಿಡಗಂಟಿ, ಕಲ್ಲುಹೂವು ಬೆಳೆದು ಒಂದೊಂದಾಗಿ ಕಲ್ಲುಗಳು ಸಡಿಲವಾಗಿ ಕಳಚುತ್ತಿವೆ. ಒಂದೆಡೆ ಒತ್ತುವರಿ ಕಾಟದಿಂದ ದೇಗುಲ ನಲುಗಿದರೆ ಮತ್ತೂಂದೆಡೆ ದೇಗು ಲದ ಸುತ್ತ ವಿಷಜಂತುಗಳಿಗೆ ಕೊರತೆ ಇಲ್ಲದಂತೆ ಕಾಡುತ್ತಿದೆ.

ನ್ಯೂಯಾರ್ಕ್‌ ಮ್ಯೂಸಿಯಂನಲ್ಲಿದೆ: ಮುಖಮಂಟಪ ಕುಸಿದು ಪ್ರವೇಶ ದ್ವಾರಸ್ತಂಭ ಉಳಿದಿದೆ. ನವರಂಗ ಜೀರ್ಣಾವಸ್ಥೆ ತಲುಪಿದರೆ, ಗರ್ಭಗೃಹ, ನವ ರಂಗ ಸುಸ್ಥಿತಿಯಲ್ಲಿದೆ. ನವ ರಂಗ ದಲ್ಲಿನ 4ಹೊಯ್ಸಳ ಶೈಲಿಯ ದುಂಡಾದ ಚುರುಕಿ ಕಂಬ, ಭುವನೇ ಶ್ವರಿಯ ಅಷ್ಟಧಿಕಾ³ಲಕರು, ಸುಖನಾಸಿಯ ಪ್ರವೇಶದ್ವಾರದ ವೈಷ್ಣವ ದ್ವಾರಪಾಲಕರು ಕಣ್ಣರಳಿಸಿ ನೋಡುವಂತಿವೆ. ಇಲ್ಲಿನ ಮೂಲವಿಗ್ರಹ ಜನಾರ್ಧನಮೂರ್ತಿ ನ್ಯೂಯಾರ್ಕ್‌ನ ಮ್ಯೂ ಸಿಯಂ ನಲ್ಲಿದೆ ಎಂದು ಇತಿಹಾಸ ತಜ್ಞರು, ವಿದ್ವಾಂ ಸರು ಹೇಳುತ್ತಾರೆ.

ಸ್ಮಾರಕ, ಕೋಟೆ ಕೊತ್ತಲು, ಗುಡಿ ಗೋಪುರ ನಾಡಿನ ಸಂಸ್ಕೃತಿಯ ಸಂಕೇ ತ ವಾಗಿದ್ದು, ಜತನವಾಗದಿ ದ್ದಲ್ಲಿ ಮುಂದಿನ ಪೀಳಿಗೆಗೆ ಸಿಗುವುದು ಚಿತ್ರ ಪಟ ದಲ್ಲಿ ಎನ್ನುವಂತೆ ಗ್ರಾಮದ ಸುಂದರ ಜನಾರ್ದನ ದೇಗುಲದ ಜನಾರ್ಧನ ಮೂರ್ತಿ ನ್ಯೂ ಯಾರ್ಕ್‌ನ ಮ್ಯೂಸಿಯಂನಲ್ಲಿರುವುದೇ ಸಾಕ್ಷಿಯಾಗಿದೆ.

ಕಲೆಯ ಬೀಡು: ಕಿಕ್ಕೇರಿ ಹೋಬಳಿ ಹೊಯ್ಸಳರ ಕಲೆಯ ಬೀಡಾಗಿದೆ. ಗ್ರಾಮ ಹೊಯ್ಸಳರ ಉಪ ರಾಜಧಾನಿ ಯಾಗಿತ್ತು. ಗ್ರಾಮದ ಹೊಯ್ಸ ಳರ ವಿನಯಾದಿತ್ಯನ ಕಾಲದ (1095) ಮೂಲ ಬ್ರಹೆ¾àಶ್ವರ(ಕಾಡು ಮಲ್ಲೇಶ್ವರ), ಒಂದನೇ ನರಸಿಂಹನ ಕಾಲದ(1171) ಬ್ರಹೆ¾àಶ್ವರ, ಮೂರನೇ ನರಸಿಂಹನ ಕಾಲದ(1260) ಜನಾರ್ಧನ, ಮೂರನೇ ಬಲ್ಲಾಳನ ಕಾಲದ(1330) ಸುಂದರ ಯೋಗಾನರಸಿಂಹ ಸ್ವಾಮಿ ದೇಗುಲ, ವಿಜಯನಗರದ ಕಾಲದ ಗ್ರಾಮ ದೇವತೆ ಕಿಕ್ಕೇರಮ್ಮ ಪುರಾತನ ಕಾಲದ ಅಪ ರೂಪದ ಸ್ಮಾರಕಗಳಾಗಿರುವ ಉಲ್ಲೇಖವಿದೆ.

ಕಾಲಯಮನಿಗೆ ಸಿಲುಕಿದ ದೇಗುಲ: ಪ್ರೇಮಕವಿ ಕೆ.ಎಸ್‌. ನರ ಸಿಂಹಸ್ವಾಮಿ ಹುಟ್ಟಿ ಬೆಳೆದು ಕಾವ್ಯಸ್ಪೂರ್ತಿಯಾದ ಇಲ್ಲಿನ ಸಿರಿಗೆರೆ (ಅಮಾನಿಕೆರೆ)ಯ ತಟದಲ್ಲಿ ಪೂರ್ವಾಭಿಮುಖವಾಗಿ 4ಅಡಿ ಎತ್ತರದ ವೇದಿಕೆಯಲ್ಲಿ ಹೊಯ್ಸಳರ ಸುಂದರ ವಾಸ್ತು ಶೈಲಿ ಯಲ್ಲಿ ಜನಾರ್ದನ ದೇಗುಲ ಮೂಡಿದೆ. ದೇಗುಲ ವೇದಿಕೆ ಮೇಲೆ 4ಹಂತದ ಕಪೋತಬಂಧ ಅಧಿಷ್ಠಾನ, ತಳಪಾದಿಯ ಮೇಲೆ ಗರ್ಭಗೃಹ, ಸುಖನಾಸಿ, ನವರಂಗ, ಮುಖಮಂಟಪವಿದೆ. ಅಧಿಷ್ಠಾನದ ಮೇಲೆ ದೇಗುಲ ಭಿತ್ತಿಗೆ ಸೇರಿದಂತೆ ಊಧ್ವìಕಂಪವು 3 ಪಟ್ಟಿಗೆ ಗಳಿಂದ ಕೂಡಿದ್ದು ಸುತ್ತಲೂ ಸುಂದರ ಶಿಲಾಬಾಲಿಕೆಯರ, ದೇವಾನು ದೇವತೆಗಳ ಮೂರ್ತಿಗಳು ಜೀವತಳಿದಂತೆ ಕಲ್ಲಿನಲ್ಲಿ ಅರಳಿವೆ. ದೇಗುಲಕ್ಕೆ 4ಹಂತದ ಸುಂದರ ಗೋಪುರವಿದ್ದು, ಪ್ರಸ್ತರ, ಗ್ರೀವ, ಶಿಖರ, ಸ್ಥೂಪಿ ಗಳಿದ್ದು, ದೇಗುಲ ಹೊಂಬಣ್ಣದ ಗ್ರಾನೈಟ್‌ ಶಿಲೆ ಯಿಂದ ನಿರ್ಮಿತ ವಾದಂತಿದೆ. ಹೊಯ್ಸಳ ಶೈಲಿಯ 4 ಹಂತದ ಸುಂದರವಾದ ಗೋಪು ರವಿದ್ದು, ಪ್ರಸ್ತರ, ಗ್ರೀವ, ಶಿಖರ ಮತ್ತು ಸ್ಥೂಪಿಗಳಿಂದ ಕೂಡಿದೆ.

ಕಿಡಿಗೇಡಿಗಳ ಪಾಲು: ಸ್ಥಳೀಯ ಗಣ್ಯಶ್ರೇಷ್ಠರ, ಪ್ರಾಚ್ಯವಸ್ತು ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದ ದೇಗುಲದ ಸುತ್ತ ಗಿಡಗಂಟಿ ಹೆಮ್ಮರ ವಾಗಿ ಬೆಳೆದರೆ, ದೇಗುಲದ ಕಲ್ಲುಗಳು ಬಹುತೇಕ ಕಿಡಿಗೇಡಿಗಳ ಪಾಲಾಗು ತ್ತಿವೆ. ಭೂ ಒತ್ತು ವರಿ ಯಾ ಗಿದ್ದು, ಅಳಿದುಳಿದ ದೇಗುಲ ವನ್ನು ಉಳಿಸುವ ಜೀರ್ಣೋದ್ದಾರಕ್ಕೆ ಸಮಾನ ಮನಸ್ಸುಗಳು ಮುಂದಾಗಬೇಕಿದೆ.

ಟಾಪ್ ನ್ಯೂಸ್

ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಏರಿಕೆ

ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಏರಿಕೆ, 14,617ರ ಗಡಿ ತಲುಪಿದ ನಿಫ್ಟಿ

lkjhgtfrdesw

ಬಿಗ್ ಬಾಸ್ : ಈ ವೀಕೆಂಡ್ ಎಪಿಸೋಡ್ ಬಗ್ಗೆ ಸುಳಿವು ಕೊಟ್ಟ ಪರಮೇಶ್ವರ್‌ ಗುಂಡ್ಕಲ್‌!

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

ಕ,ಜಹಗ್ರೆ

ಗಿನ್ನೆಸ್ ದಾಖಲೆ ಬರೆದ ಮೊಲ ಕಳ್ಳತನ : ಹುಡುಕಿ ಕೊಟ್ಟವರಿಗೆ ಸಿಗುತ್ತೆ 2 ಲಕ್ಷ ಬಹುಮಾನ!

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ

ಗಹಜಕಜುಹಯತ

ಭಾನುವಾರ ಉತ್ತರ ಪ್ರದೇಶ ಲಾಕ್ ಡೌನ್ : ಮಾಸ್ಕ್ ಹಾಕದಿದ್ದರೆ 10,000 ದಂಡ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16-6–actuval

ಸ್ವ ಇಚ್ಛೆಯಿಂದ ಲಸಿಕೆ ಹಾಕಿಸಕೊಳ್ಳಿ

Let communities cooperate in the prevention of covid

ಕೋವಿಡ್‌ ತಡೆಗೆ ಸಮುದಾಯಗಳು ಸಹಕರಿಸಲಿ

Request for vaccination

ಲಸಿಕೆ ಹಾಕಿಸಿಕೊಳ್ಳಲು ಮನವಿ

The disappearance of the rules

ನಾಮಪತ್ರ ಸಲ್ಲಿಕೆಗೆ ತೆರೆ:ನಿಯಮಾವಳಿ ಕಣ್ಮರೆ

Ranked in the “Golden Book of World Records”

“ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್ ರೆಕಾರ್ಡ್ಸ್‌’ ನಲ್ಲಿ ಸ್ಥಾನ

MUST WATCH

udayavani youtube

ಮಂಗಳೂರು: ಬೊಟ್ ದುರಂತ ಪ್ರಕರಣ; ಮೂರು ದಿನಗಳಾದರೂ ಪತ್ತೆಯಾಗದ ಮೀನುಗಾರರು

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

ಹೊಸ ಸೇರ್ಪಡೆ

16-6–actuval

ಸ್ವ ಇಚ್ಛೆಯಿಂದ ಲಸಿಕೆ ಹಾಕಿಸಕೊಳ್ಳಿ

ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಏರಿಕೆ

ಕೋವಿಡ್ ಆತಂಕ; ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಅಲ್ಪ ಏರಿಕೆ, 14,617ರ ಗಡಿ ತಲುಪಿದ ನಿಫ್ಟಿ

lkjhgtfrdesw

ಬಿಗ್ ಬಾಸ್ : ಈ ವೀಕೆಂಡ್ ಎಪಿಸೋಡ್ ಬಗ್ಗೆ ಸುಳಿವು ಕೊಟ್ಟ ಪರಮೇಶ್ವರ್‌ ಗುಂಡ್ಕಲ್‌!

Let communities cooperate in the prevention of covid

ಕೋವಿಡ್‌ ತಡೆಗೆ ಸಮುದಾಯಗಳು ಸಹಕರಿಸಲಿ

Request for vaccination

ಲಸಿಕೆ ಹಾಕಿಸಿಕೊಳ್ಳಲು ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.